ನಮ್ಮ ಸಂಸ್ಥೆಯ honorary ಅಧ್ಯಕ್ಷರಾದ ಶ್ರೀ ಕೆ. ಎಸ್. ಪ್ರಕಾಶ ರಾವ್ ಮಾಮನವರ ಪತ್ನಿ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು, ತಲೆಗೆ ತೀವೃ ಏಟಾಗಿ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದರು. ಅವರ 13 ನೇ ದಿನದ ವೈಕುಂಠಕ್ಕೆ ನಾವು ಮಲ್ಲೇಶ್ವರಂ ನ ಚಿತ್ರಾಪುರ ಮಠಕ್ಕೆ ಹೋಗಿದ್ದೆವು. ಊಟಕ್ಕೆ ಏರ್ಪಾಡು ಕೆಳಗಡೆ ನಡೆದಿತ್ತು. ಊಟ ಮುಗಿಸಿ, ಪ್ರಾಕಾಶ ರಾವ್ ಮಾಮನವರಿಗೆ ಪುನಃ ಮಾತನಾಡಿಸಿ ಹೊರಡುವ ಅಂತ ಮೇಲಕ್ಕೆ ನಡೀತಾ ಇದ್ವಿ.
ಒಬ್ಬರು ತೆಳ್ಳನೆಯ ಉದ್ದದ ಹಿರಿಯರು ಯಾರೊಂದಿಗೋ ಮಾತಾಡ್ತಾ ಮಾತಾಡ್ತಾ ಹಿಮ್ಮುಖವಾಗಿ ಚಲಿಸುತ್ತಿರುವುದನ್ನು ನೋಡಿದೆ. ಇನ್ನೇನೂ ಮೆಟ್ಟಿಲಿನ ತುದಿಗೆ ತಲುಪ್ತಾ ಇದ್ದರು. ನಾನು ಮೇಲಕ್ಕೆ ಓಡಿ ಹೋಗಿ, ಅವರು ಮೆಟ್ಟಿಲು ತುದಿಗೆ ಬರುವಷ್ಟರಲ್ಲಿ ಅವರ ಬೆನ್ನಿಗೆ ನನ್ನ ಕೈಯಾನಿಸಿದ್ದೆ. ’ಮಾಮ, be careful, ಮೆಟ್ಟಿಲು ಅಂದೆ’ . ಅವರು ನನ್ನನ್ನು ನೋಡಿ, ’ನೀನಾ’?? ತಡಿ ತಡಿ...ಅಂತ ಅವರ ಹೆಂಡತಿಯನ್ನು ಕರೆದು, ’ಆವಾಗ್ಲಿಂದ ನಿನ್ನನ್ನು observe ಮಾಡ್ತಿದ್ದಾಳೆ ನನ್ನ ಹೆಂಡತಿ, ’ಯಾರು ಈ ನಗು ಮುಖದ ಹೆಂಗಸು ಅಂತ’, ನೀನೆ ಹತ್ತಿರ ಬಂದಿದ್ದಿ, ಒಳ್ಳೆದಾಯ್ತು. ಅವರ ಹೆಂಡತಿ ನಮ್ಮ ಬಳಿ ಬಂದಾಗ, ’ನಾನು ಈಗ ಬೀಳುತ್ತಿದ್ದೆ, ಇವರು ತಡೆದರು’ ಅಂದ್ರು.ಅಷ್ಟರಲ್ಲಿ ಶ್ರೀಕಾಂತ ಮತ್ತು ನನ್ನ office ನವರೆಲ್ಲ ಮೇಲೆ ತಲುಪಿ, ಹಲ್ಲೋ ಗುಲ್ವಾಡಿ ಸರ್, ಅಂತ ಮಾತಾಡಿಸ್ತಾ,(ಬೇರೆ ಮಾತಿನ ನಂತರ) ನಮ್ಮ ಸಂಸ್ಥೆಯ ಬಗ್ಗೆ ಹೇಳಲಿಕ್ಕೆ ಶುರು ಮಾಡಿದರು. ನಾನು ಮಾಮಿಯ ಜತೆ ಒಂದೆರಡು ಕುಶಲೋಪರಿ ಮಾತನಾಡಿ, ಪ್ರಕಾಶ ರಾವ್ ಮಾಮನ ಸೊಸೆಯನ್ನು ಮಾತನಾಡಿಸಿ ಬಂದೆ. ಆಗ ಗುಲ್ವಾಡಿಯವರನ್ನು ವಾಪಸ್ ಕರೆದುಕೊಂಡು ಹೋಗುವವರು ಹೊರಡಲಿಕ್ಕೆ ಅವಸರ ಪಡಿಸ್ತಾ ಇದ್ದರು. ಅವರು ಬೇರೊಂದು ಕಾರ್ಯಕ್ರಮಕ್ಕೆ ಹೊರಡಬೇಕಿತ್ತು.ಅವರ ಇನ್ನೊಂದು ಚಪ್ಪಲಿ ಸಿಗ್ತಾ ಇರಲಿಲ್ಲ. ನಾನು ಹುಡುಕಿ ಕೊಟ್ಟಾಗ, ನನ್ನ ತಲೆ ಮೇಲೆ ಕೈಯಿಟ್ಟು, ಹೋಗಿ ಬರ್ತೆನೆ ಅಂದ್ರು.

ಆಮೇಲೆ ನಾವೂ office ಕೆಲಸದ ಮೇಲೆ ಒಬ್ಬ ಸರಕಾರಿ ಅಧಿಕಾರಿಯನ್ನು ಭೇಟಿ ಮಾಡಲು ಹೋಗ ಬೇಕಿತ್ತು.ದಾರಿಯಲ್ಲಿ ನಮ್ಮ ಅಫೀಸ್ ನವರು- ಗುಲ್ವಾಡಿಯವರು, ತರಂಗ ಹಾಗೂ ಅವರ ಬರಹದ ಬಗ್ಗೆ ಮಾತಾಡ್ತಾ ಇದ್ದರು. ಆವಾಗಲೇ ಅವರು ಯಾರು ಅಂತ ನನಗೆ ಗೊತ್ತಾಗಿದ್ದು. ಯಾಕೋ ತುಂಬ ಒಳ್ಳೆಯವರು, gentle human being ಅನ್ನಿಸಿತ್ತು. ಇವತ್ತು ಪೇಪರ್ ನೋಡಿದಾಗ ಮೇಲಿನ ನೆನಪು ಬಂತು
ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ..........
5 comments:
avara aatmakke shantiyannu korona,
avarobba mahaan vyakti
ಮಾಲತಿ ಮೇಡಮ್, ಗುಲ್ವಾಡಿ ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು ಎಂಬುದರಲ್ಲಿ ಎರಡ್ನೇ ಅಭಿಪ್ರಾಯವಿಲ್ಲ. ನೆನಪು ಮರುಕಳಿಸುತ್ತಿದೆ.
ನಿಜ ಮಾಲತಿ ಮೇಡ೦, ನನಗೂ ಅವರ ಪರಿಚಯ ಮತ್ತು ಸ್ನೇಹ, ಬೆ೦ಗಳೂರು - ಶಿವಮೊಗ್ಗ ರೈಲಿನಲ್ಲಿ ಪ್ರವಾಸ ಮಾಡುವಾಗ ಆಗಿತ್ತು. ಸಹೃದಯ ಜೀವಕ್ಕೆ ತು೦ಬುಹೃದಯದ ಶ್ರದ್ಧಾ೦ಜಲಿಗಳು.
ಅನ೦ತ್
May his soul rest in peace.
-Shreekar
ಓದಿ ಸಂತೋಷ ಆಯ್ತು
Post a Comment