October 20, 2009

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ದೀಪಾವಳಿಯ ದಿನ ಶ್ರೀಕಾಂತ್ sudden ಪ್ಲಾನ್ ಹಾಕಿ ಬಿಟ್ಟರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ತುಂಬ ಕೇಳಿದ್ದೇನೆ. ಅಲ್ಲಿಗೆ ಹೋದರೆ ಹೇಗೆ? ಮಕ್ಕಳು ಕೂಡಲೇ alert. ದೊಡ್ಡ ಮಗಳಿಗೆ ಆ ದಿನ ಅವಳ ವಾರದ ರಜೆ ಸಿಕ್ಕಿತು. ಅವಳು ಹೋಟಲ್ ಮ್ಯಾನೆಜ್ ಮೆಂಟ್ course ಮಾಡುವುದರಿಂದ, ಅವಳಿಗೆ ರಜೆ ಕಡಿಮೆ.
ದೀಪಾವಳಿಯ ಎಣ್ಣೆ ಅಭ್ಯಂಜನ, ಪೂಜೆ ಮುಗಿಸಿ, ಉದ್ದಿನ ದೋಸೆ, ಪಲ್ಯ, ಚಟ್ನೀ ಪುಡಿ, ಪುಳಿಯೊಗರೆ ಹಾಗೂ ಹಬ್ಬಕ್ಕೆ ಮಾಡಿದ ಕುರುಕಲು ತಿಂಡಿ ಮತ್ತು ಹಣ್ಣುಗಳನ್ನು pack ಮಾಡಿ ಕೊಂಡು ನಮ್ಮ ಕಾರ್ ಬೆಂಗಳೂರಿನಿಂದ ಹೊರಟಿತು.

ಬೆಂಗಳೂರಿಂದ ಮೈಸೂರು, ಅಲ್ಲಿಂದ ಗುಂಡ್ಲುಪೇಟೆ. ಗುಂಡ್ಲು ಪೇಟೆ ಯಿಂದ ಗೋಪಾಲಸ್ವಾಮಿ ಬೆಟ್ಟ ೧೫ ಕಿ.ಮಿ. ಶಿಖರವನ್ನೇರಲು 5 ಕಿ.ಮಿ ಅಷ್ಟು ಮಾರ್ಗ ಮೇಲೇರಬೇಕಾಗುತ್ತದೆ. ಸಮುದ್ರ ಮಟ್ಟದಿಂದ 1446 ಮೀ ಎತ್ತರದಲ್ಲಿರುವ ಈ ಬೆಟ್ಟ ಅತೀ ಸುಂದರವಾದ ಹಸಿರು ತಾಣ ಹೊಂದಿದೆ. ಬೆಟ್ಟದ ಬುಡದಲ್ಲಿನ ಚೆಕ್ ಪೋಸ್ಟ್ ನವರು ಪ್ಲ್ಯಾಸ್ಟಿಕ್ ಅಥವಾ ಪ್ರಾಣಿಗಳಿಗೆ ಹಾನಿ ಉಂಟು ಮಾಡುವಂತಹ ವಸ್ತುಗಳನ್ನು ತೆಗೆದು ಕೊಂಡು ಹೋಗಲು ಬಿಡುವುದಿಲ್ಲ.
ಅಲ್ಲಿನ ದೇವಸ್ಥಾನದಲ್ಲಿರುವ ದೇವರು ವೇಣುಗೋಪಾಲಸ್ವಾಮಿ. ಅನೇಕ ನೀರ ಬುಗ್ಗೆ ಗಳಿಂದ ಹಾಗೂ ಉತ್ತಮ ಮಣ್ಣಿನಿಂದ ಈ ಬೆಟ್ಟ ಸದಾ ಹಸಿರುಮಯವಾಗಿರುತ್ತದೆ.. ವರ್ಷದ ಬಹುಪಾಲು ಮಂಜು ಮೋಡ ಮುಸುಕಿರುವುದರಿಂದ ಈ ಬೆಟ್ಟಕ್ಕೆ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಹೆಸರು.. ನಾವು ಹೋದಾಗ ಸ್ವಲ್ಪ ಲೇಟ್ ಆದ್ದರಿಂದ ಬಿಸಿಲು ಏರಿದ್ದು, ನಮಗೆ ವೈನಾಡಿನ ಹಸಿರು ಕಾಡು ಕಾಣ ಸಿಕ್ಕಿತು.

ಹಳೆಯ ಕೋಟೆಯೊಂದರ ಒಳಗೆ ಈ ದೇವಸ್ಥಾನ ಸ್ಥಿತ ವಾಗಿದೆ. ಈಗ ಕೋಟೆ ಹೋಗಿ ಸಿಮೆಂಟ್ ನಿಂದ ಮಾಡಿದ ಕಾಂಪೌಂಡ್ ಒಳಗಿದೆ ಈ ದೇವಸ್ಥಾನ. ದೇವರ ಮೂರ್ತಿ ತುಂಬಾ ಚೆನ್ನಾಗಿದೆ. ದೇವಾಲಯದ ಎಡ ಬದಿಗೆ ಹೋದಾಗ airtel ನ ’ತಮಿಳುನಾಡಿಗೆ ಸ್ವಾಗತ’ ಎಂಬ ಎಸ್.ಎಮ್.ಎಸ್ ಬಂತು. ದೇವಸ್ಥಾನ ಬಲಬದಿಗೆ, ಅಂದರೆ ಸ್ವಲ್ಪ ತಗ್ಗಿನ ಪ್ರದೇಶಕ್ಕೆ ಹೋದಾಗ welcome to Kerala ಅನ್ನುವ ಅವರ ಎಸ್.ಎಮ್.ಎಸ್. ಬಂಡಿಪುರ್ ಅರಣ್ಯದಲ್ಲಿರುವ ಈ ಬೆಟ್ಟದಲ್ಲಿ , ಅಲ್ಲೆಲ್ಲ ಆನೆ ಓಡಾಡುತ್ತಿರುವ ಸಂಕೇತವಾಗಿ ಆನೆ ಲದ್ದಿ ಕಂಡೆವು.



ಊಟದ ಸಮಯದಲ್ಲಿ ನೋಡಿದರೆ ತಟ್ಟೆಗಳನ್ನೆ ತಂದಿರಲಿಲ್ಲ ನಾನು. ಡಬ್ಬಿಯ ಮುಚ್ಚಳಗಳನ್ನೆ ಉಪಯೋಗಿಸಬೇಕಾಯ್ತು. ಹಾಗೂ ಅಲ್ಲಿ ಊಟ/ತಿಂಡಿ/ ಕುಡಿಯುವ ನೀರು ಸಿಗುವುದಿಲ್ಲ. ಇದೂ ಒಂದು ತರಹ ಒಳ್ಳೆಯದೇ, ಯಾಕೆಂದರೆ ಜನರು ಇನ್ನಷ್ಟು ಜಾಗ ಗಲೀಜು ಮಾಡಿ ಬಿಡ್ತಾರೆ. ಆದರೂ ಕೆಲವು ಕಡೆ cigarette pack, ಬೀರ್ ಕ್ಯಾನ್ , ಪ್ಲ್ಯಾಸ್ಟಿಕ್ ಚೀಲಗಳು ಹಾರಾಡುತ್ತಿದ್ದವು. but ಬೆಟ್ಟದಲ್ಲಿ ಹೆಂಗಸರಿಗಾಗಿ toilet ಸೌಲಭ್ಯ ಇಲ್ಲದೇ ಸ್ವಲ್ಪ ತೊಂದರೆಯಾಯಿತು. ದೇವರ ದರ್ಶನಕ್ಕೆ ಆ ದಿನ ತುಂಬ ಜನರಿದ್ದರು. ಕ್ಯೂ ಸಿಸ್ಟಮ್ ಇದ್ದುದರಿಂದ ಎಲ್ಲರಿಗೂ ಗರ್ಭಗುಡಿಯಲ್ಲಿ ಎರಡೆರಡು ನಿಮಿಷ time ಕೊಡಲಾಯಿತು. ತುಲಸಿ ಹಾಗೂ ಹೂವಿನ ಅಲಂಕಾರದಿಂದ ದೇವರ ಮೂರ್ತಿ ಕಾಣ್ತಿರಲಿಲ್ಲ. ಆದರೂ ಪುರೋಹಿತರು, ಮಾಲೆಗಳನ್ನು ಎತ್ತಿ ದೇವರ ಮಸ್ತಕ, ಕೊಳಲು, ದೇವರ ಪಾದದ ಬಳಿಯಿರುವ ವಿಗ್ರಹಗಳನ್ನು ತೋರಿಸಿ, ಗರ್ಭಗುಡಿಯ ಬಾಗಿಲ ಮೇಲಿಂದ ಒಸರುತ್ತಿದ್ದ ಹಿಮ/mist ನ್ನು ಮುಟ್ಟಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಸ್ವಲ್ಪ ನೀರನ್ನು ಭಕ್ತರ ಮೇಲೆ ಸಿಂಪಡಿಸಿದರು. ISKCON ನಿಂದ ಬಂದ ಗುಂಪು ಕೃಷ್ಣನ ಕೆಲವು ಗೀತೆಗಳನ್ನು ಸುಶ್ಯ್ರಾವ್ಯವಾಗಿ ಹಾಡಿತು.
ಬಿಸಿಲು ನೆರಳಿನಾಟದಲ್ಲಿ ಗುಡ್ಡದ ಬಣ್ಣವು change ಆಗ್ತಾ ಇದ್ದದ್ದು ನೋಡುವುದೇ ಒಂದು ಆಹ್ಲಾದಕರವಾದ ಅನುಭವ. ಎಷ್ಟೋ ಹೊತ್ತು ಅದನ್ನು ನೋಡುತ್ತ ಕುತಿದ್ದೆವು. ಇನ್ನೊಮ್ಮೆ ನಾವು ದೊಡ್ಡ ಗುಂಪುನ್ನು ಮಾಡಿ ಅಲ್ಲಿಗೆ ಹೋಗುವ plan ಹಾಕ್ಕೊಂಡಿದ್ದೇವೆ. ನೀವು ಎಂದಾದರೊಮ್ಮೆ ಭೇಟಿ ನೀಡಲೇ ಬೇಕಾದ ತಾಣ.

ಈ ದಿನ ನನ್ನ ಹುಟ್ಟು ಹಬ್ಬ(according to ನಮ್ಮ ಪಂಚಾಂಗ) ಕೂಡ ಇತ್ತು. ಮಕ್ಕಳು ಅಲ್ಲಿ ಸಿಕ್ಕ ಬೆಟ್ಟದಲ್ಲಿನ ಹೂಗಳಿಂದ ನನಗೋಸ್ಕರ ಒಂದು ಹೂಗುಚ್ಛ ಮಾಡಿ ಕೊಟ್ಟರು.


ಅಲ್ಲಿಂದ ಮೈಸೂರಿಗೆ ಬಂದು ದಸರಾ ಕರಕುಶಲ ಮೇಳಕ್ಕೆ ಹೋದೆವು. 200 ಕ್ಕಿಂತ ಹೆಚ್ಚು ಕರಕುಶಲ, ಬಟ್ಟೆ, ಪಾತ್ರೆ, ಆಟ, ತಿಂಡಿಗಳ ಮಳಿಗೆಗಳಿದ್ದವು. ಈ ವರ್ಷದ ವಿಶೇಷ ಆಕರ್ಷಣೆ ’snow ball’ ಅನ್ನುವ ಮಳಿಗೆ. ಸಂಜೆ ಅರಮನೆ ದೀಪಾಲಂಕೃತಗೊಂಡು ಮನಮೋಹಕ ದೃಶ್ಯ ಒದಗಿಸಿಕೊಟ್ಟಿತು. ದಸರಾ ಉತ್ಸವಕ್ಕೆ ಹೋದಾಗ ನಾವು ಇದನ್ನು ಮಿಸ್ ಮಾಡ್ಕೊಂಡಿದ್ದೆವು. ಡಿಸೆಂಬರ್ ತನಕ ನಡೆಯುತ್ತದೆ ಈ ಮೇಳ. ವಿವಿಧ ಆಟದಲ್ಲಿ ತಲ್ಲಿನ ಮಕ್ಕಳು ಹಾಗು ದೊಡ್ಡವರನ್ನು ನೋಡುವುದೂ ಮಜವಾಗಿತ್ತು.

as usual ನಮ್ಮ ಕ್ಯಾಮರಾ ಕೈ ಕೊಟ್ಟು, ಇಲ್ಲಿ ಹಾಕಿರುವ ಚಿತ್ರಗಳೆಲ್ಲ cell phone ನಿಂದ ತೆಗೆದದ್ದು.

10 comments:

ಸವಿಗನಸು said...

ಮಾಲತಿ,
ಸುಂದರ ತಾಣ....ಸೊಗಸಾದ ಚಿತ್ರಗಳು(ಕ್ಯಾಮೆರಾ ಸರಿ ಇದಿದ್ರೆ ಇನ್ನು ಚೆನ್ನಾಗಿರುತ್ತಿತ್ತು).....ಒಳ್ಳೆ ನಿರೂಪಣೆಯೊಂದಿಗೆ ಉಣಬಡಿಸಿದಿರಿ....
"ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಈ ಜಾಗದ ಬಗೆ ಕೇಳಿದ್ದೆ...ನೋಡಿರಲಿಲ್ಲ.....ಮುಂದೆ ಅವಕಾಶ ಸಿಕ್ಕಾಗ ನೋಡುವೆ...
ಪರಿಚಯಿಸಿದ್ದಕ್ಕೆ ಧನ್ಯವಾದಗಳು.....
ಮಹೇಶ್!

Anonymous said...

Dear Mahesh !!!!

thank you. most of the time u r the first one to comment.
ಕ್ಯಾಮರ ಸರಿ ಇದ್ದಿದ್ದ್ರೆ ಚಿತ್ರಗಳು ಇನ್ನೂ ಚೆನ್ನಾಗಿರುತ್ತಿತ್ತು- ಅನ್ನುವುದು ಒಂದು myth. ನನಗೆ ನಿಜಕ್ಕೂ ಫೋಟೊ ತೆಗೆಯಲು ಬರುವುದಿಲ್ಲ, :-)
But certainly you should visit that spot!

ಮಾಲತಿ ಎಸ್.

L'Étranger said...

Very good write-up! The pictures are also very nice though they are kind of small. ಹೀಗೇ sudden plans ಹಾಕ್ತಾ ಇರಿ ಅಂತ ಶ್ರೀಕಾಂತ್ ಅವರಿಗೆ ಹೇಳಬೇಕು -- ನೀವೆಲ್ಲಾ ಹೋಗಿ ನೋಡಿ ಸಂತೋಷ ಪಡುವುದರ ಜೊತೆಗೆ ನಿಮ್ಮ ಬರವಣಿಗೆಯ ಮೂಲಕ ನಮಗೂ ಆ ಅನುಭವ ಹೀಗೆ ಪ್ರಾಪ್ತವಾಗತ್ತೆ. :-)

ಹರೀಶ ಮಾಂಬಾಡಿ said...

mahiti chennagide

ಮನಸು said...

ಮಾಲತಿಯವರೆ,
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಜೊತೆಗೆ ನಾವು ಒಮ್ಮೆ ನೋಡಬೇಕೆನಿಸುತ್ತದೆ.
ಧನ್ಯವಾದಗಳು

nenapina sanchy inda said...

thank you Srikanth B, harish and manasu
:-)
malathi S

ಜಲನಯನ said...

Malti, sorry for not coming for long to your blog.
Olleya photos (cell nalli tegedaddu anta gottagolla..).
nimage samaya siguttalla suttadoke ..Hats off Shrikanth.
nimma modala chitra..hege tegedaddu? chennagide effectu...

Raghu said...

ಚೆನ್ನಾಗಿ ಬರೆದಿದ್ದೀರಿ..ಧನ್ಯವಾದಗಳು...
ನಿಮ್ಮವ,
ರಾಘು.

Anomalyka said...

ಚೆನ್ನಾಗಿದೆ
ನಾವು ಒಮ್ಮೆ ನೋಡಬೇಕೆನಿಸುತ್ತದೆ

nenapina sanchy inda said...

Dear Shree kar
u should visit this spot...i have not done great justice to it in my write up...u should reach there before 5 am
thank u for reading
:-)
ms