ಮೊನ್ನೆ ತೀರ್ಥಹಳ್ಳಿಗೆ ಹೋಗುವ ಮುನ್ನ ರಿಪ್ಪನಪೇಟೆ ದಾರಿಯಾಗಿ ಹೋದ್ವಿ. ಅಲ್ಲಿ ಶ್ರೀಕಾಂತ್ ಕಸಿನ್ ಅನಂತಮೂರ್ತಿ ಜವಳಿ ಯವರ ಅಂಕೂರ್ ಫಾರ್ಮ್ ಗೆ ಭೇಟಿ ನೀಡಲಿಕ್ಕಿತ್ತು. ಜವಳಿಯವರಿ0ದ 'ಥನಲ್' ಮಾಡುವ ಬಗೆ ಕಲಿಲಿಕ್ಕಿತ್ತು.
ಅಲ್ಲಿ ನಮಗೆ ಸಿಕ್ಕವರು ಜೋಕಿಮ್ ಅವರು. ಅವರು ಬುಲ್ಲೆಟ್ ಬೈಕ್ ನಲ್ಲಿ ದೇಶ ಸುತ್ತುತ್ತಾರೆ. 15 ದಿನದ ಸ್ಪೈತಿ ವ್ಯಾಲಿಯ ಟೂರ್ ಮುಗಿಸಿ ಭಟ್ಕಳ್ ದಾರಿ ಹೋಗುವಾಗ, ಅಂಕೂರ್ ಫಾರ್ಮ್ ದಾಟಿದ ಮೇಲೆ 'ಅರೆ ಇವರ ವಿಡಿಯೋ ಗಳನ್ನೆಲ್ಲ ನೋಡುತ್ತೇನಲ್ಲ, ಏನಾದರಾಗಲಿ ಭೇಟಿ ಮಾಡಿಕೊಂಡೆ ಹೋಗುವುದು ಅಂತ ಗಾಡಿ ತಿರುಗಿಸಿದರಂತೆ. ಅನಂತ ಮಾಮ ಮಧ್ಯಾನ್ಹದ ನಿದ್ದೆ ಮುಗಿಸುವಶರಲ್ಲಿ ಫಾರ್ಮ್ ನ ಉಸ್ತುವಾರಿಕೆ ನೋಡುವ ಬಾಯಮ್ಮನ ಜತೆ ತೋಟ ನೋಡಿಕೊಂಡು ಬಂದಿದ್ದರಷ್ಟೇ ನಾವು ತಲುಪುವಾಗ.
ಮಾಮಿ ಟಿ ಕಾಫಿ ಮಾಡುವಷ್ಟರಲ್ಲಿ ಅವರ ಟ್ರಾವೆಲ್ ನ ರೋಚಕ ಕತೆ ಹೇಳಿಕೊಂಡರು. ಹಿಮಪಾತಕ್ಕೆ ಸಿಲುಕಿದ್ದು, ಯಾರ ಸಹಾಯವೂ ಸಿಗದೆ, ಗಾಡಿಯಲ್ಲಿನ ಎಲ್ಲ ಸಾಮಾನು ತೆಗೆದು, ಬಿದ್ದ ಗಾಡಿಯನ್ನು ಹರಸಾಹಸದಿನ ಎತ್ತಿ ಸುರಕ್ಷಿತ ಜಾಗಕ್ಕೆ ಒಯ್ದು, ಪುನಃ ಎಲ್ಲ ಸಾಮಾನು ಗಳನ್ನು ...ಬಟ್ಟೆ ಬರೆ, ಬಕೀಟು, ಮಗ್ಗು, ಗ್ಯಾಸ್ ಸಿಲಿಂಡರ್, ತಿಂಡಿ ಪೊಟ್ಟಣಗಳು, ಟೆಂಟ್...ಬೈಕ್ ಮೇಲೆ ಹೇರಿಸಿ ಕೊಂಡಿದ್ಫು...ರಾತ್ರಿ ಅವರ ಟೆಂಟ್ ಬಳಿಯೇ mountain lion ಬಂದಿದ್ದು, ರಾತ್ರಿ ಇಡೀ ಎಚ್ಛೆತ್ತು ಗ್ಯಾಸ್ ಸಿಲಿಂಡರ್ ಹೊತ್ತಿಸಿಟ್ಟು ರಾತ್ರಿ ಕಳೆದಿದ್ದು, ಗ್ಯಾಸ್ ಸಿಲಿಂಡರ್ ಖಾಲಿ ಯಾಗಿದ್ದ ಕತೆಗಳನ್ನು ಶೇರ್ ಮಾಡಿ, ಕತ್ತಲಾಗುವ ಮುನ್ನ ಊರು ಸೇರಬೇಕೆಂದು ಹೊರಟರು. ಕೈ ಕಾಲಿಗೆ ಸುಮರೆಲ್ಲ ಊತ, ಗಾಯ ಗಳಾಗಿದ್ದವು
ಶ್ರೀಕಾಂತ್ ಥನಲ್ ಬಗ್ಗೆ ಮಾಹಿತಿ/ಪ್ರಾತ್ಯಕ್ಷಿಕತೆ ಪಡೆದುಕೊಳ್ಳುವಷ್ಟರಲ್ಲಿ ನಾನು ತೋಟದ ಒಂದು ರೌಂಡ್ ಹೋಗಿ ಬಂದೆ...ಕೆಳಗಿವೆ ಕೆಲ ಚಿತ್ರಗಳು
ಥನಲ್Nursery plants
ರಿಪ್ಪನಪೇಟೆ
pansi
variegated mosambi
cherries
water apples -white
cherry
water apples -red
mango - jackfruits graft
colourful coleus
joaquim.is the one in the middle in black coat
ಕಣ್ಮನ ತಣಿಸುವ ಹಸಿರು
















No comments:
Post a Comment