June 10, 2023
ಕೆಂಪು ಕಂಗಳ ಮೈನಾ ಹಕ್ಕಿ
ಭೋಪಾಲ್ ನಿಂದ ಒರ್ಚಾ ಗೆ ಹೋಗುವಾಗ, ಬ್ರೆಕ್ಫಾಸ್ಟ್ ಗೆ ಒಂದು ಹಳ್ಳಿಯಲ್ಲಿ ನಿಲ್ಲ8ಸಿದ್ದೆವು. ಪೊಹಾ, ಪೂರಿ, ಕಚೋರಿ , ನಮೋಸಾ ಚಹಾ ದ ಬಳಿಕ, ಯಾವತ್ತಿನ ಹಾಗೆ ಶೆಣೈ ಮಾಮ , ಸಂತೆ ಕಡೆ ಹೊರಟರು. ನಾನು ದುಡ್ಡು ಪಾವತಿಸಿ, ಹಾುಗೆ ಕಾಳು ತಿನ್ನುತ್ತಿರುವ ಮೈನಾ ಹಕ್ಕಿಗಳನ್ನು ನೋಡಿದೆ. ಏನೋ ವ್ಯತ್ಯಾಸ ಇದೆಯಲ್ಲವಾ ಅಂತ ಇನ್ನಷ್ಟು ಕೂತೂಹಲದಿಂದ ನೋಡಿದಾಗ ಗೊತ್ತಾಯ್ತು..ಮಾಮೂಲಿ ನಾನು ಬೆಂಗಳೂರು ಮತ್ತು ಇತರೆ ಕಡೆ ನೋಡಿದ ಮೈನಾ ಹಕ್ಕಿಗಳ ಕಣ್ಣ ಬಳಿ ಹಳದಿ ಗುರುತು ಇದ್ದರೆ, ಈ ಹಕ್ಕಿಗಳದ್ದು ಕೆಂಪು ಬಣ್ಣ ಇತ್ತು. ಕ್ಯಾಮೆರಾ ತೆಗೆದು ಫೋಟೋ ತೆಗೆಯುವ ಅಂದ್ರೆ ಸದ್ದು ಮಾಡುತ್ತಾ ಬಂದ ಕಾರಿನ ರಭಸಕ್ಕೆ, ಹಕ್ಕಿಗಳೆಲ್ಲವೂ ಹಾರಿ ಹೋದವು. ಸಂತೆ ಭೇಟಿ ನೀಡಿ ಬಾಳೆ ಹಣ್ಣು, ಕಿತ್ತಳೆ ಹಣ್ಣಿನ ಸಮೇತ ರಾಯರು ವಾಪಸ್ಸಾದರು. ನಮ್ಮ ಗಾಡಿ ಮುಂದಕ್ಕೆ ಹೊರಟಿತು. ಇವತ್ತು instagram ನಲ್ಲಿ ಕೆಂಪು ಕಣ್ಣಿನ ಮೈನಾ ಜೋಡಿ ಹಕ್ಕಿಯ ಚಿತ್ರ ನೋಡಿ ನೆನಪಾಯಿತು.
ಮೇಲಿನ ಚಿತ್ರ courtesey : the ಇಂಟರ್ನೆಟ್ ❤️❤️
Subscribe to:
Post Comments (Atom)

No comments:
Post a Comment