April 4, 2020

Lock Down Day 12...ನೆನಪು

ರಸ್ತೆ ಕಡೆ ನೋಡ್ತಾ ಇದ್ದೆ. ಕೆಲ ವಾಹನಗಳ ಸಂಚಾರ ಬಿಟ್ರೆ ರಸ್ತೆ ಖಾಲಿ . ಉಳಿದ ಸಮಯದಲ್ಲಿ ವಾಹನಗಳ ಚಲಿಸುವಿಕೆ, ಹಾರ್ನ, ಸ್ಕ್ರೀಚ್, ರ್ಅಂಬುಲನ್ಸ್, ಸಿಗ್ನಲ್ ಬೀಪ್, ಸಿಗ್ನಲ್ ನಲ್ಲಿ ಪೆನ್ಸಿಲ್, ಪೆನ್, ಬಲೂನ್, ಕೀಚೈನ್ ಎಲ್ಲ ಮಾರುವವರು (ಹೆಚ್ಚಿನವರು ರಾಜಸ್ಥಾನದವರು) ನಾಪತ್ತೇ. ಇವರೆಲ್ಲ ಈಗ ಎಲ್ಲಿದ್ದಾರೋ ಪಾಪ....
ಅವರ ಬಗ್ಗೆ ಆಲೋಚಿಸುವಾಗ ಈ ಘಟನೆ ನೆನಪಾಯ್ತು
ಬೆಳ್ಳಂದೂರಿನ ಸಾವಯವ ಮೇಳ ಕ್ಕೆ ಹೋಗಿದ್ವಿ. ಮೇಳದಲ್ಲಿ ಸುತ್ತಾಡಿ ಅಲ್ಲೇ ರೊಟ್ಟಿ ಮಿಲ್ಲೆಟ್ಸ್ ಮುಂತಾದ್ದು ತಿಂಡಿದ್ದಾಯ್ತು. ಕೊನೆಗೆ entry ಗೇಟ್ ಹತ್ತಿರ ಬೆಲ್ಲದಿಂದ ಮಾಡಿದ ಸ್ವೀಟ್ಸ್ ಮಾರುವ ಗಾಡಿ ನೋಡಿದ್ವಿ. ನೋಡಲಿಕ್ಕೆ ಚೆನ್ನಾಗಿದ್ದವು. ಆದರೆ ಹಸಿವಿರಲಿಲ್ಲ. ಮನೆಗೆ ತಂದು ತಿನ್ನುವ ಅಂದ್ರೆ parcel ಮಾಡಲು ಅವರ ಬಳಿ ಸಾಮಗ್ರಿ ಇರಲಿಲ್ಲ. ಕೊನೆಗೆ ಒಂದು ಬಾಳೆಎಲೆ ದೊನ್ನೆಯಲ್ಲಿ ಹಾಕಿಸಿಕೊಂಡು ಅದರ ಮೇಲೆ ಇನ್ನೊಂದು ದೊನ್ನೆ ಮಗುಚಿ ಇಟ್ಟು ಮನೆಗೆ ಅಂತ ರೀಕ್ಷದಲ್ಲಿ ಹೊರಟ್ವಿ. ಅರ್ಧ ದಾರಿ ಗೆ ಜೋರು ಗಾಳಿ ಬೀಸಿ, ಮಗುಚಿದ ದೊನ್ನೆ ಹಾರಿ ಹೋಯ್ತು 😊
ಮನೆ ಹತ್ತಿರ ರಿಕ್ಷಾ ನಿಲ್ಲಿಸಿ, ನಾನು ರಿಕ್ಷಾದವನಿಗೆ ದುಡ್ಡು ಪವತಿಸ ಬೇಕಾದ್ರೆ..ಎಲ್ಲಿದ್ದರೋ ಸುಮಾರು ರಸ್ತೆ ಬದಿ ಚಿಕ್ಕ ಪುಟ್ಟ ಸಾಮಾನು ಮಾರುವವರು ನಿಹಾ ಗೆ ಸುತ್ತು ವರೆದರು...ಅದರಲ್ಲೊಬ್ಬ ಹುಡುಗಿ cool ಆಗಿ ನಿಹಾ ಕೈನಿಂದ ರಸಗುಲ್ಲದ ದೊನ್ನೆ ಕಸಿದುಕೊಂಡು ತಿನ್ನಲು ಶುರು ಮಾಡಿದಳು...ನನಗೆ ಅಕ್ಕನಿಗೆ ತಕ್ಷಣಕ್ಕೆ ಸಿಟ್ಟು ಬಂತ್ತು... ಆದರೆ ನಿಹಾ ಮಾತ್ರ ವಿಚಲಿತಳಾಗದೆ, ' ಹಾಗೆಲ್ಲ ಮಾಡಬಾರದಲ್ಲವ ಅಂತ ಹೇಳಿ ಅವಳ ಬಳಿಯಿರುವ apple. Orange ಎಲ್ಲ ಕೊಟ್ಟು...ಎಲ್ಲರೂ ಹಂಚಿಕೊಂಡು ತಿನ್ನಬೇಕು ಆಯ್ತಾ ಅಂತ ನಕ್ಕು ಹೇಳಿ, ನಾವು ರಸ್ತೆ ಕ್ರಾಸ್ ಮಾಡಿ ಮನೆ ತಲುಪಿದೆವು
ಆ ಹುಡುಗಿಯ ಕಾಂಫಿಡೆನ್ಸ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ 😊

No comments: