ಸದ್ದು ಆಡಗಿ ಸುಮಾರು ಹೊತ್ತಾದರೂ ಅದು ಇನ್ನೂ ಗಾಳಿಯ್ಲಲಿ ತೇಲುತ್ತಿರುವ ಭಾಸ. ಎರಡು ಕಾಲಿನ ನರ ಪ್ರಾಣಿಯ ದನಿ ಕಡಿಮೆಯಾಗುತ್ತಾ ಹೋಯಿತು ಹಾಗೆಯೇ ಅಡವಿಯ ರಾತ್ರಿಯ ಸಮಾಧಾನಕರ ಸದ್ದುಗಳು ಶುರುವಾದವು. ಸ್ವಲ್ಪ ಹೊತ್ತು ನಿಂತೆ. ಘಿಳಿಡುವ ಡುವ ಆಸೆಯನ್ನು ಅದುಮಿಕೊಂಡೆ. ಹಿರಿಯರು ಹೇಳಿದ ಮಾತು ನೆನಪಾಯಿತು. ಎರಡು ಕಾಲಿನ ಪ್ರಾಣಿ ಬಳಿಯಿದ್ದಾಗ ಸದ್ದು ಮಾಡದೆ ಅಡಗಿಕೊಂಡಿರು . ನಿಧಾನವಾಗಿ ಭಯ ಕರಗಲು ಆರಂಭವಾಯಿತು. ತಲೆಯಲ್ಲಿ ರಿಂಗಣಿಸುತ್ತಿರುವ ಸದ್ದುಗಳನ್ನು ಕೊಡವಿಕೊಳ್ಳಲು ಕಿವಿಯನ್ನು ಅಲ್ಲಾಡಿಸಿದೆ. ದೀರ್ಘವಾಗಿ ಉಸಿರೆಳೆದುಕೊಂಡೆ. ಮನೆಗೆ ಹೋಗಬೇಕೆನಿಸಿತು. ತನ್ನ ಹೊಲದ ಸುತ್ತ ಮುಳ್ಳು ತಂತಿಯ ಬೇಲಿ ಹಾಕಿ ನಮ್ಮ ಚರ್ಮ ಸುಡುವಂತೆ ಮಾಡುವ ನರಪ್ರಾಣಿಯ ಸಹವಾಸವೇ ಬೇಡವೆನಿಸಿತು. ಆದರೆ ಅಡವಿಯೆಲ್ಲ ನಾಶವಾಗಿ ನಮಗೆ ತಿನ್ನಲು ಏನೂ ಇಲ್ಲವಾಗಿದೆ.
ಕಣ್ಣು ಮುಚ್ಚಿ ಮುಳ್ಳು ತಂತಿಯನ್ನು ಎಳೆದು ಬಿಸಾಕಿದೆ. ನಿಧಾನವಾಗಿ ಬಿದ್ದ ತಂತಿ ದಾಟಿದೆ. ಒಳಗಡೆ ಅಡಗಿಕೊಳ್ಳಲು ಪ್ರಶಸ್ತ ಜಾಗ ಸಿಕ್ಕಿತು ಮಾತ್ರವಲ್ಲದೆ ರುಚಿಕರವಾದ ಹಲಸಿನ ಗೆಲ್ಲು ಸಿಕ್ಕಿದೆ. ರಾತ್ರಿಯಾದುದರಿಂದ ನರಪ್ರಾಣಿಯೆಲ್ಲ ಮಲಗಿ ನನಗೆ ಅಷ್ಟು ಭಯ ಅನ್ನಿಸಲಿಲ್ಲ. ನನಗೆ ಬೇಕಾದಷ್ಟು ಹೊಟ್ಟೆ ತುಂಬಾ ತಿಂದೆ.
ಅದೇ ಹಳ್ಳಿಯಲ್ಲಿ ಕಾಂತನೆಂಬ ರೈತ ರಾತ್ರಿ ಇಡೀ ಎಚ್ಚರ ವಾಗಿದ್ದ. ಮುದಿ ತಂದೆಯ ಹದೆಗೆಡುತ್ತಿರುವ ಆರೋಗ್ಯ ಹಾಗು ಮಗಳ ಮದುವೆಗೆ ದುಡ್ಡು ಒಟ್ಟುಗೊಳಿಸುವ ಚಿಂತೆ ಅವನನ್ನು ಬಾಧಿಸಿದೆ . ಮತ್ತು ಈ ಆನೆಗಳ ಕಾಟ. ಆನೆಗಳನ್ನು ನೆನ್ನೆಸಿ ಅವನಿಗೆ ಸಿಟ್ಟೇರಿತು. ಅವನ ಅಕ್ಕಪಕ್ಕದ ರೈತರ ಹೊಲಗಳನ್ನೆಲ್ಲ ಆನೆಗಳು ತಿಂದು ದ್ವ೦ವ್ಸ ಮಾಡಿದ್ದವು. ಇಷ್ಟು ದಿನ ಅವನು ರಾತ್ರಿ ಹೊಲ ಕಾಯುತ್ತಿದ್ದ. ಆನೆಗಳನ್ನು ಹೆದರಿಸಲು ಆವಾಗಾವಾಗ ಸುಡುಮದ್ದುಗಳನ್ನು ಉರಿಸುತ್ತಿದ್ದ. ಅದಲ್ಲದೆ ಕರೆಂಟು ತಾಗುವ ಮುಳ್ಳು ತಂತಿ ಹಾಕಿದ ಹೊಲಗಳಲ್ಲಿ ಇವನದ್ದು ಒಂದಾಗಿತ್ತು. ಇಷ್ಟು ದಿನ ಅವನು ತನ್ನ ಹೊಲವನ್ನು ಆನೆಗಳಿಂದ ಉಳಿಸಲು ಸಾಧ್ಯವಾಗಿತ್ತು. ಚಿಂತೆ ಮತ್ತು ನಿದ್ದೆಗೆಟ್ಟಿದ್ದರಿಂದ ಅವನ ಮುಖವೆಲ್ಲ ಸುಕ್ಕುಗಟ್ಟಿದೆ.
ಇವತ್ತು ಕಾಂತ ಬೇಗನೆಎದ್ದಿದ್ದಾನೆ. ಹಾಲು ಕರೆಯುವ ಹುಡುಗ ತನ್ನ ಕೆಲಸ ಮಾಡುವುದನ್ನು ನೋಡಲು ಉಪೇಕ್ಷಿಸುತ್ತಾನೆ. ಆದರೆ ಆ ಹುಡುಗ ಇನ್ನು ಬಂದಿಲ್ಲ. ಅವನು ಬರುವ ತನಕ ಕಾಯಲು ಕುಳಿತ.
ಹೊರಗಡೆ ಇನ್ನು ಕತ್ತಲಿತ್ತು .ಆದರೂ ಕಾಂತ ಯಾವುದೇ ತೊಡಕಿಲ್ಲದೆ ನಡೆದ. ಅವನ ಹೊಲದ ಏರಿಳಿತದ ಹಾದಿ ಅವನಿಗೆ ತನ್ನ ಕೈರೇಖೆಯಷ್ಟು ಪರಿಚಿತ. ಸ್ವಲ್ಪ ದೂರ ಹಾದಿ ಕ್ರಮಿಸಿದೊಡನೆ ಯಾಕೋ ಏನೋ ಸರಿಯಿಲ್ಲ ಎಂಬ ಭಾವನೆ ಶುರುವಾಯಿತು. . ಹಾದಿಯಳ್ಳಿ ತುಂಡಾಗಿ ಬಿದ್ದ ಮುಳ್ಳು ತಂತಿ. ಮತ್ತು ಹೊಲದ ಮದ್ಯೆ ಏನೋ ಕಪ್ಪನೆಯ ಆಕಾರ. ಕಾಂತ ನಿಧಾನಕ್ಕೆ ಹಿಮ್ಮಡಿಯಿಟ್ಟ, ಕಾಲ ಬುಡದಲ್ಲಿ ಒಣಗಿದ ಮರದ ತುಂಡೊಂದು ಕಟಕ್ ಅಂತ ಸದ್ದು ಮಾಡಿತು. ಆನೆಗೆ ಕೇಳಿಸಿತೋ ಎಂಬಂತೆ ಕಾಂತ ಹೆದರಿದ , ಆದರೆ ಆನೆ ಸುಮ್ಮನೆ ನಿಂತಿತ್ತು. ನಿಧಾನಕ್ಕೆ ಕಾಂತ ಅಲ್ಲಿಂದ ಜಾಗ ಖಾಲಿ ಮಾಡಿದೆ. ದನದ ಹಟ್ಟಿಯ ಬಳಿ ಹಾಲು ಕರೆಯುವವ ನಿದ್ದೆ ಗಣ್ಣಲ್ಲಿ ಹಾಲಿನ ಬಕೀಟನ್ನು ನೀಟಾಗಿ ಜೋಡಿಸುತ್ತಿದ.
"ಬೇಗ ಹೊರಡು, ನೆರೆಹೊರೆಯ ರೈತರಿಗೆ ಹೊಲದಲ್ಲಿ ಆನೆ ಬಂದಿದೆಎಂದು ಹೇಳು" ಓಡು !!
ಕಾಂತ ಹೇಳಿದಂತೆ ಮಾಡಲು ಹಾಲುಕರೆಯುವವ ಓಡಿದ . ಸಿಟ್ಟಿಗೆದ್ದ ರೈತರು ಆನೆಯನ್ನು ಓಡಿಸಲು ಬೆಳಕಿನ ದೊಂದಿ ಹಾಗು ಸುಡುಮದ್ದುಗಳೊಂದಿಗೆ ಸಜ್ಜಾಗಿ ಬಂದರು. ಹೆಣ್ಣು ಮಕ್ಕಳು ಮತ್ತು ಮಕ್ಕಳು ತಮ್ಮ ತಂದೆ , ಗಂಡ ಎಲ್ಲ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ರೈತರೆಲ್ಲ ಮರಳುವಷ್ಟರಲ್ಲಿ ಹೊತ್ತು ಕಂದಿತು. ಎಷ್ಟು ನಷ್ಟವಾಗಿದೆ ಎಂದು ತಿಳಿದು ಕಾಂತ ಹಳಹಳಿಸಿದ. ಹಣದ ಋಣ ತೀರಿಸುವ ಬಗ್ಗೆ ಚಿಂತಾಕ್ರಾಂತನಾದ. ಹೊಲದಲ್ಲಿ ಆನೆಯ ಸುಳಿವಿರಲಿಲ್ಲ. ಆದರೆ ತಂತಿಯಲ್ ಬಳಿ ಬಿದ್ದ ರಕ್ತದ ಕಲೆಯಿಂದಾಗಿ ಆನೆಗೆ ಏಟಾಗಿದೆ ಎಂದು ತಿಳಿಯಿತು.
ಕಾ೦ತಾನ ಮನೆಯಲ್ಲಿ ಕೆಲವು ದಿನ ತುಂಬಾ ದುಃಖ ಮಡುಗಟ್ಟಿತ್ತು. ಕಾಂತ ತುಂಬಾ ಸೋತುಹೋಗಿದಂತೆ ಕಾಣುತ್ತಿದ್ದ. ಇದೆಲ್ಲವನ್ನು ಕೆಲವು ದಿನಗಳಿಂದ ಕಾಂತನ ಅಜ್ಜ ಗಮನಿಸುತ್ತಿದ್ದ. ಒಂದು ದಿನ ಅವನನ್ನು ಬಳಿಗೆ ಕರೆದು 'ನೋಡು ' ಅಂತ ಅಲ್ಲೇ ಬಿದ್ದ ಆನೆಯ ಒಣಗಿದ ಲದ್ದಿಯ ಬಳಿ ಕೂತು ಬೆರಳು ತೋರಿಸಿದ. 'ಕಾಣಿಸುತ್ತಿದೆಯಾ?
ಕಾಂತ ಹತ್ತಿರಕ್ಕೆ ಹೋಗಿ ಗಮನಿಸಿದ. ಆನೆಯ ಲದ್ದಿಯಲ್ಲಿ ಅಂಜೂರದ ಬೀಜ ಮೊಳಕೆಯೊಡೆದಿತ್ತು. ಅವನ ಅಜ್ಜ ಅಲ್ಲಿಂದ ತೋಟದ ಕಡೆ ಹೋರಡಲು ಅನುವಾದ. 'ಇಲ್ಲಿ ಬಾ ಅಂತ ಕ್ಷೀಣವಾದ ದನಿ ಹೊರಡಿಸಿದ. ಕಾಂತನಿಗೆ ತನ್ನ ತಾತನ ಆರೋಗ್ಯದ ಬಗ್ಗೆ ಕಾಳಜಿಯಾಯಿತು. ಹೀಗೆ ಎಲ್ಲೆಂದರಲ್ಲೂ ನಡೆಯುವುದನ್ನು ಬಿಟ್ಟು ಮಲಗಿದೆಡೆಯಿರಬೇಕಿತ್ತು ಅಂದುಕೊಂಡ. ಅಜ್ಜನ ಕಡೆಗೆ ಸಾಗಿದ. ಅಜ್ಜ ಈಗ ದಾಸವಾಳದ ಗಿಡ ಬಳಿಯಲ್ಲಿ ಬಗ್ಗಿ ಕುಳಿತಿಟ್ಟದ್ದ, ಅಲ್ಲಿ ಆನೆಯ ಲದ್ದಿಯಿಂದ ಒಂದು ಹುಣಸೆಹುಳಿಯ ಗಿಡ ಬೆಳೆಯುತ್ತಿತ್ತು. ಅಜ್ಜ ಯಾಕಾಗಿ ಇದನ್ನೆಲ್ಲಾ ತೋರಿಸುತ್ತಿದ್ದಾನೆ ಅಂತ ಕಾಂತನಿಗೆ ಸಿಟ್ಟು ಬಂತು.
'ಈಗ ಅಲ್ಲಿ ನೋಡು " ಅಂತ ದೊಡ್ಡ ಮತ್ತುಊರಲೆಲ್ಲಾ ಖ್ಯಾತ ಹಲಸಿನ ಮರದ ಕಡೆ ಬೊಟ್ಟು ಮಾಡಿ ತೋರಿಸಿದ. ಹತ್ತಿರ ಹಳ್ಳಿ ಮತ್ತು ಪಟ್ಟಣದಲ್ಲೆಲ್ಲ ಈ ಹಲಸಿನ ಮರದ ಹಣ್ಣು ತನ್ನ ಸಿಹಿಗಾಗಿ ಖ್ಯಾತ ವೆನಿಸಿತ್ತು.
"ನೆನಪಿದೆಯಾ ನಿನಗೆ, ಊರಲಿ ಕ್ಷಾಮವಾದಾಗ ಈ ಮರ ನಮ್ಮೆಲ್ಲರ ಹಸಿವೆ ನೀಗಿಸಿತ್ತು. ಎಲ್ಲ ಬೆಳೆಗಳು ಒಣಗೆ, ಹಸುಗಳು ಹೊಟ್ಟೆಗಿಲ್ಲಕ್ಕಿದೆ ಇದ್ದಾಗ ಈ ಹಲಸಿನ ಮರ ಮಾತ್ರ ನಳನಳಿಸಿತ್ತಾ ಇತ್ತು. ನೀನು ಆಗ ಚಿಕ್ಕ ಹುಡುಗ.
ಕಾಂತನಿಗೆ ನೆನಪಾಯಿತು. ಊರಿನ ಉಗ್ರಾಣದಲ್ಲಿ ಒಂದು ಹಿಡಿ ಸಿರಿಧಾನ್ಯ , ಅದೂ ಕೆಲವು ದಿನಗಳಲ್ಲಿ ಖಾಲಿಯಾದಾಗ ಈ ಹಲಸಿನ ಮರದಲ್ಲೆಲ್ಲ ತುಂಬಾ ಹಣ್ಣುಗಳು ಕಾಣಸಿಕ್ಕಿದವು. ಕೆಂಪು ಜಾತಿಯ ಅಪರೂಪದ ತಳಿಯ ರುಚಿಕರವಾದ ಹಲಸಿನ ಹಣ್ಣು. 'ಈ ಹಲಸಿನ ಮರವನ್ನು ಆನೆ ನೆಟ್ಟಿದ್ದು ' ಪ್ರೀತಿಯಿಂದ ಹೇಳಿದರು ಅಜ್ಜ.
ಎಲ್ಲ ಮರಗಿಡಗಳು ಕ್ಷಾಮದಲ್ಲಿ ಒಣಗಿದಾಗ ಈ ಮರ ಮಾತ್ರ ಗಟ್ಟಿಮುಟ್ಟಾಗಿತ್ತು. ಈಗ ಅದನ್ನು ನೋಡು , ನನ್ನಷ್ಟೇ ವಯಸ್ಸು ಆದರೂ ಈಗಲೂ ಹೇಗೆ ನಳಿನಳಿಸುತ್ತಾ ಇದೆ ಎಂದು ನಕ್ಕರು.
ಕಾಂತನ ಹೆಗಲ ಮೇಲೆ ಕೈಯಿಟ್ಟು " ಆನೆ ನಮ್ಮಿಂದ ಪಡೆಯುವುದು ಮಾತ್ರವಲ್ಲ , ನಮಗೇನಾದ್ರು ಕೊಟ್ಟೆ ಹೋಗುತ್ತೆ. ನಾವು ಅದಕ್ಕೆ ಬೇಕಾದ ಅರಣ್ಯವನ್ನೆಲ್ಲಾ ಹೊಲಗಳನ್ನು ಮಾಡಿ ಜೀವನ ನಡೆಸುತ್ತೇವೆ , ಒಂದಷ್ಟು ಕಬ್ಬು ತಿಂದು ಹೋದರೆ ನಾವು ಅದಕ್ಕೆ ಆಕ್ಷೇಪ ಎತ್ತಬಾರದು.
ಕಾಂತ ತನ್ನ ಅಜ್ಜನ ಕಡೆ ನೋಡಿ ಹೌದೆಂಬಂತೆ ತಲೆಯಲ್ಲಾಡಿಸಿದ. ತಿಳಿವಳಿಕೆ ಮತ್ತು ಭರವಸೆಯಿಂದ ಅವನ ಮುಖ ಅರಳಿತು.
ಡೌನ್ ಟು ಅರ್ಥ್ ನ ಗೋಬರ್ ಟೈಮ್ಸ ಪುರವಣಿಯಲ್ಲಿ ಪ್ರಕಟವಾದ ನಿಹಾರಿಕಾ ಬರೆದ ಸಣ್ಣ ಕತೆಯ ತರ್ಜುಮೆ.

2 comments:
ಅಪರೂಪದ ಬರಹ. .ಭಾವಾನುವಾದವೂ ಸೊಗಸಾಗಿದೆ..
ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡು ಅವುಗಳಿಗೆ ಜೀವನ ನೆಡೆಸುವುದು ಕಷ್ಟ ಮಾಡಿ.. ಕಡೆಗೆ ಅವುಗಳು ಬಂದು ನಮ್ಮ ಸ್ಥಳವನ್ನು ಅತಿಕ್ರಮಣ ಮಾಡುತ್ತವೆ ಎಂದು ಹಲುಬುವ ಮನುಜನ ಜಾಣ್ಮೆಯನ್ನು ಎತ್ತಿ ಹಿಡಿದಿದೆ.
ಸುಂದರ ಲೇಖಾನುವಾದ ಮೇಡಂ
thank you Srikanth Manjunath 🙏🙏👍
Post a Comment