ನಾನು ಮುಂಬೈನಲ್ಲಿ ಹುಟ್ಟಿ ಬೆಳೆದರು ಏಕಾಂತ ಬಯಸುವವಳು. ಬೆಂಗಳೂರು ನನಗಿಷ್ಟ ಆದರೂ ಆಗಾಗ ಬೆಂಗಳೂರಿನಿಂದ ಎಲ್ಲಾದರೂ ಹೊರಗೆ ಹೋಗಲು ಬಯಸುತ್ತೇನೆ.
ಹಿಂದಿನ ತಿಂಗಳು ನಿಹಾರಿಕಾಗೆ ಕೇರಳದ ಸುಲ್ತಾನ್ ಬತ್ತೇರಿಯ ಹೊಸ ಹೊಲಿಡೇ ಹೋಮ್ ನ ಫೋಟೋ ಶೂಟ್ ಒಂದರಲ್ಲಿ ಅಸ್ಸಿಸ್ಟ೦ಟ್ ಆಗಿ ಬರಲು ಆಹ್ವಾನವಿತ್ತು. ಕೊನೆ ಕ್ಷಣದಲ್ಲಿ 'ಅಮ್ಮ ನೀನು ಬರುತ್ತೀಯಾ' ಸುಮ್ಮನೆ ಕೂತು ಓದಬಬಹುದು ಎಂದಳು. ಯಾಕಾಗಬಾರದು ಎಂದು ಕೂಡಲೇ ಬಟ್ಟೆ ಬರೇ ತಿನಿಸುಗಳನ್ನು ಪ್ಯಾಕ್ ಮಾಡಿದೆ. ಮಧ್ಯಾಹ್ನ ಸರಿಯಾಗಿ ೩. ೩೦ ಗೆ ಬಸ್ ಕೆಂಗೇರಿ ಬಸ್ ನಿಲ್ದಾಣದಿಂದ ಹೊರಟಿತು. ಮೈಸೂರಿನಲ್ಲಿ ಒಂದು ಸ್ಟಾಪ್ ಬಿಟ್ಟರೆ ಸೀದಾ ಗುಂಡ್ಲುಪೇಟೆ ಗೆ ಸಂಜೆಯ ಚಹಾ ಗೆ ನಿಲ್ಲಿಸಿದರು. ಕತ್ತಲೆ ಯಲ್ಲಿ ಅರಣ್ಯದ ರಸ್ತೆಯಲ್ಲಿ ಹಜ್ಜೆಗೊಂದರಂತೆ ಸ್ಪೀಡ್ ಬ್ರೇಕರ್ ಗಳು. ಒಂದು ಆನೆಯ ಹಿಂಡು ನಮಗೆ ಕಾಣ ಸಿಕ್ಕಿತು. ಸಣ್ಣಕ್ಕೆ ಮಳೆ ಹನಿತಾ ಇದ್ದದರಿಂದ ವಾತಾವರಣ ತಂಪಾಗಿತ್ತು. ರಾತ್ರಿ ೮.೩೦ ಗೆ ನಾವು ಸುಲ್ತಾನ ಬತ್ತೇರಿ ತಲುಪಿದೆವು. ಹೊಲಿಡೇ ಹೋಮ್ ನ ಮ್ಯಾನೇಜರ್ ಅಜೀಶ್ ನಮ್ಮನ್ನು ಕರೆದೊಯ್ಯಲು ಬಂದಿದ್ದರು. ಕಾರ್ ನಲ್ಲಿ ಸುಮಾರು ಹೊತ್ತು ಪ್ರಯಾಣ ಮಾಡಿದ ಹಾಗಾಯಿತು. ಏನಪ್ಪಾ ಇಷ್ಟು ಕತ್ತಲು ಹತ್ತಿರದಲ್ಲಿ ಯಾವ ಮನೆ ಬಿಡಿ, ಮನುಷ್ಯರು ಕಾಣ ಸಿಗಲಿಲ್ಲ.
ಚಿಕ್ಕ ಚೊಕ್ಕದಾದ ತ್ರೀ ರೂಟ್ ಸ್ ಹೋಲಿಡೇ ಹೋಮ ತಲುಪಿದೆವು. ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಬೇಗ ಬೇಗನೆ ಒಂದು ಸುತ್ತು ಇಡೀ ಹೋಮ್ ನ ನೋಡಿ ಬಂದೆವು. ಬಿಸಿ ಬಿಸಿ ಅನ್ನ ಸಾಂಬಾರ್ , ಹಪ್ಪಳ ಉಪ್ಪಿನಕಾಯಿಯ ಊಟ ತುಂಬಾನೇ ಚೆನ್ನಾಗಿತ್ತು. ರಾತ್ರಿ ಮೆತ್ತನೆಯ ಹಾಸಿನ ಮೇಲೆ ಮಲಗಿದ್ದೆ, ನಿದ್ದೆ, ಬೆಳಿಗ್ಗೆ ಹಕ್ಕಿಗಳ ಕಲರವಕ್ಕೆ ಎಚ್ಚರವಾಯಿತು. ನಿಹಾ ಫೋಟೋ ಶೂಟ್ ಗೆ ತಯಾರು ಮಾಡುತ್ತಿದ್ದ ಹಾಗೆ ನಾನು ಒಂದು ರೌಂಡ್ ವಾಕ್ ಅಂತ ಹೊರಟೆ. ಐದೇ ನಿಮಿಷದಲ್ಲಿ ನಾವು ಹಿಂದಿನ ದಿನ ರಾತ್ರಿ ಇಳಿದ ಬಸ್ ಸ್ತ್ಯಾಂಡ್ ಸಿಕ್ಕಿತು. ಅಲ್ಲಿಂದ ಮುಂದೆ ಪೇಟೆ. ಅಷ್ಟೇ ಅಲ್ಲ ಅಲ್ಲೆಲ್ಲ ಹಲವಾರು ಮನೆಗಳಿದ್ದವು. ನಗು ಮುಖದ ಹಲವು ಜನರು ಸಿಕ್ಕಿದರು. ಹಾಲಿನವ, ಮೀನು ಮಾರುವವ, ಇತ್ಯಾದಿ.
ಹಸಿರಿನಿಂದ ಕುಡಿದ ಸುಲ್ತಾನ ಬತ್ತೇರಿ ನಿಜಕ್ಕೂ ಒಂದು ಸುಂದರ ಆಹ್ಲಾದಕರ ವಾತಾವರಣದ ತಾಣ. ಜಿಂಕೆ ಗಳು ಭಯ ಭೀತಿಯಿಲ್ಲದೇ ನಮಗೆ ಸೊಪ್ಪು ಹಾಕದೆ ತಮ್ಮದೇ ಲೋಕದಲ್ಲಿ ಇರುತ್ತಾರೆ.
ಕೇರಳದ ವಿಶೇಷ ತಿಂಡಿ ಪುಟ್ಟು ಮತ್ತು ಕಡಲ್ ಕರಿ, ಪುರಿ , ಅವಿಯಲ್ ಮುಂತಾದ ಅಡಿಗೆಗಳನ್ನು ತಂಗಮ್ಮ ಅವರು ಮಾಡಿ ಬಡಿಸಿ ನಾವು ಸವಿಯುವ ಅವಕಾಶವಾಯಿತು
ನೀವು ಏಕಾಂತ ಬಯಸುವವರಾದರೆ, ಅಥವಾ ಏಕಾಂತದಲ್ಲಿ ಓದು ಬರಹ ಮಾಡುವುದಾದರೆ, ಹನಿಮೂನ್ ಗೆ ಈ ಹೋಲಿಡೆ ಹೋಮ್ ಪ್ರಶಸ್ತವಾಗಿದೆ.
ಇಲ್ಲಿವೆ ಕೆಲವು ಸುಂದರ ಚಿತ್ರಗಳು. ಈ ಚಿತ್ರಗಳನ್ನು ಬ್ಲಾಗ್ ಬರಹಗಾರರ ಅನುಮತಿಯ ಮೇರೆಗೆ ನನ್ನ ಬ್ಲಾಗ್ ನಲ್ಲಿ ಬಳಸಿಕೊಂಡಿದ್ದೇನೆ. . ಹಾಗೆಯೇ ಅವರ ಬ್ಲಾಗ್ ಕೊಂಡಿಯನ್ನು ನೀಡುತ್ತೇನೆ.
LOYSNOISE
LOYSNOISE
ಸೋ ಬೆಂಗಳೂರಿನಿಂದ ಬ್ರೇಕ್ ಬೇಕೆನಿಸಿದರೆ ತ್ರೀ ರೂಟ್ಸ್ ಹೋಲಿಡೇ ಹೋಮ್ ಸಂಪರ್ಕಿಸಿ.
Three roots: contact person Ajeesh/Sandhya
+91 9947697651
+91 9946 225455
Email: threerootsstay@gmail.com
Three roots: contact person Ajeesh/Sandhya
+91 9947697651
+91 9946 225455
Email: threerootsstay@gmail.com
ಕೇರಳದ ವಾಯ್ನಾಡ್ ನ ಸುಲ್ತಾನ್ ಬತ್ತೇರಿ






No comments:
Post a Comment