ಬೆಳ್ಳಿಯ ಕಾಲ್ಗೆಜ್ಜೆ ಎಂಬ ನನ್ನದೊಂದು ಸಣ್ಣ ಲೇಖ ಬಂದಿತ್ತು ಕನ್ನಡಪ್ರಭದಲ್ಲಿ. ಅದರಲ್ಲಿ ಇದನ್ನು ಸೇರಿಸಬೇಕೆಂದಿದ್ದೆ , ಆದರೆ ಸಮಯಾವಕಾಶವಾಗಿರಲಿಲ್ಲ. ಅದಕ್ಕೆ ಒಂದು ಸೆಪೆರೇಟ್ ಪೋಸ್ಟ್.
ನಿಕಟ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಲಲು ಬೆಂಗಳೂರಿಗೆ ಬಂದಿದ್ದೆವು. ಆಗ ಆ ಮಾಮನ ಮನೆಯಲ್ಲಿ ಉಳಿದುಕೊಂಡೆವು. ಅವರಿಗೆ ಬಿನ್ನಿ ಮಿಲ್ಸ್ ನಲ್ಲಿ ಕೆಲಸವಿತ್ತು. ಆದರೆ ನಾವು ಹೋದಾಗ ಬಿನ್ನಿ ಮಿಲ್ಸ್ ಮುಷ್ಕರ ನಡೆಯುತಿತ್ತು. ಮಾಮಿ ಮಕ್ಕಳಿಗೆ ಟ್ಯೂಷನ್ಸ್ ಹೇಳಿಕೊಟ್ಟು ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದರು. ಶಾಲೆ/ಕಾಲೇಜಿಗೆ ಹೋಗುವ ಮಕ್ಕಳು. ಮನೆಯಲ್ಲಿ ಹಿರಿಯ ಜೀವ ಅವರ ತಾಯಿ . ಮತ್ತು ಬೆಂಗಳೂರು ಅಂದ್ರೆ ಖರ್ಚು ಏನು ಕಡಿಮೆಯೇ? ನಾವು ಶಾಪಿಂಗ್ ಅಂತ ಹೋಗುವಾಗ ಮಾಮಿ 'ಮಾಲವಿಕಳನ್ನು ಕರೆದುಕೊಂಡು ಹೋಗುವುದು ಬೇಡ. ಅವಳು ಇಲ್ಲೇ ಇರಲಿ' ಎಂದರು. ಮಾಲವಿಕ ಯಾರ ಜತೆನಾದ್ರು ಹೊಂದಿಕೊಂಡು ಹೋಗ್ತಿದ್ದಳು. ಹಾಗಾಗಿ ಅವಳನ್ನು ಬಿಟ್ಟು ನಿಹಾಳನ್ನು ಕರೆದುಕೊಂಡು ಹೋದೆವು. ನಾವು ಪುನಃ: ಮನೆಗೆ ತಲುಪುವಾಗ ಸಂಜೆಯಾಗಿತ್ತು . ನಾವು ತಲುಪಿದ ಕೂಡಲೇ ಮಾಲವಿಕ ಅವಳ ಕಾಲಿಗೆ ಮಾಮ ಕೊಡಿಸಿದ ಕಾಲ್ಗೆಜ್ಜೆ ತೋರಿಸಿದಳು. ಯಾವತ್ತೂ ಹಠ ಹಿಡಿಯದ ನಿಹಾರಿಕಾ ನನಗೂ ಗೆಜ್ಜೆ ಬೇಕೆಂದು ರಂಪ ಮಾಡಿದಳು. ಮಾಮ ಅವಳನ್ನು ಕರೆದುಕೊಂಡು ಹೊರಟರು. ನನಗೋ ಮುಜುಗರ. ಪಾಪ ಮೊದಲೇ ಆರ್ಥಿಕ ಸಂಕಷ್ಟ . ಅಂತದ್ದರಲ್ಲಿ ಮಾಳವಿಕಾ ಮಾತ್ರವಲ್ಲ ಈಗ ನಿಹಾಳಿಗೂ ಗೆಜ್ಜೆ ಅಂದರೆ??!! ಪಾಪ ಸಾಲ ಮಾಡಿ ಕೊಂಡಿರಬೇಕು ಅಂತ. ನೋಡ ನೋಡುತ್ತಿದ್ದಂತೆ ನಿಹಾ ಳಿಗೂ ಕೂಡ ಕಾಲಿಗೆ ಗೆಜ್ಜೆ.
ನಾನು ಮಾತ್ರ ಮನಸ್ಸು ತುಂಬಿ ಪ್ರಾರ್ಥನೆ ಮಾಡಿದೆ, 'ಬೇಗನೆ ಅವರ ಸಂಕಷ್ಟಗಳೆಲ್ಲ ಕೊನೆಗೊಳ್ಳಲಿ 'ಎಂದು. ಇದ್ದವರು ಕೊಡುವುದು ಬೇರೆ, ಸಂಕಷ್ಟದಲ್ಲಿದ್ದಾಗ ಅನ್ಯರಿಗೆ ಸಹಾಯ ಮಾಡುವವರೇ ದೊಡ್ಡವರು ನನ್ನ ಪ್ರಕಾರ. ಈಗ ಅವರ ಇಬ್ಬರು ಮಕ್ಕಳು ಹಾಗೆ ತುಂಬಾ ಒಳ್ಳೆಯವರು. ಯಾರಿಗಾದರೂ ಸಹಾಯ ಮಾಡಲು ಎತ್ತಿದ ಕೈ.
ಮೊನ್ನೆ ನನ್ನ ಇತ್ತೀಚಿಗಿನ ಬ್ಲಾಗ್ ಪೋಸ್ಟ್ ''ಭಯ' ನನ್ನ ಬ್ಲಾಗ್ ಅನ್ನು ಪರಿಚಯಿಸುವಾಗ ಕನ್ನಡಪ್ರಭ ದ ಸಹ್ಯಾದ್ರಿ ನಾಗರಾಜ ಅವರು ಹಾಕಿದ್ದಾರೆ. ಇಲ್ಲಿದೆ ಅದ್ರ ಜೆಪೆಗ್ :-) ಅವರಿಗೊಂದು ಥ್ಯಾಂಕ್ಸ್
ಮೊನ್ನೆ ನನ್ನ ಇತ್ತೀಚಿಗಿನ ಬ್ಲಾಗ್ ಪೋಸ್ಟ್ ''ಭಯ' ನನ್ನ ಬ್ಲಾಗ್ ಅನ್ನು ಪರಿಚಯಿಸುವಾಗ ಕನ್ನಡಪ್ರಭ ದ ಸಹ್ಯಾದ್ರಿ ನಾಗರಾಜ ಅವರು ಹಾಕಿದ್ದಾರೆ. ಇಲ್ಲಿದೆ ಅದ್ರ ಜೆಪೆಗ್ :-) ಅವರಿಗೊಂದು ಥ್ಯಾಂಕ್ಸ್

No comments:
Post a Comment