ನೀ ನನಗೆ ನೀಡಿದ ಪ್ರೀತಿಯನ್ನು
ನಿನಗೆ ಮರಳಿಸುತ್ತಿದ್ದೇನೆ
ನನ್ನನ್ನಿನ್ನು ದೂರಬೇಡ
ನಿನ್ನ ಜೀವನದಿಂದ ನಿರ್ಗಮಿಸುತ್ತಿದ್ದೇನೆ
ಯಾವ ಹಂತದಲ್ಲಿ ಹೃದಯ ತುಂಡರಿಸಿಬಿಟ್ಟೆ
ನನಗೆ ಕೊಂಚವೂ ಅರಿವಾಗಗೊಡಲಿಲ್ಲ
ನನಗೆ ಕೊಂಚವೂ ಅರಿವಾಗಗೊಡಲಿಲ್ಲ
ನಿನ್ನವನಾಗಿ ಇರಗೊಡುವುದಂತೂ ದೂರ
ಬೇರೆಯವರ ಪಾಲಿಗಾಗಲೂ ಬಿಡಲಿಲ್ಲ
ನಿನ್ನ ನಿಷ್ಠೆಯ ಬಗ್ಗೆ ಈಗ ಮಾತೇಕೆ
ನನ್ನ ನಂಬಿಕೆಗೆ ನಾನು ನಾಚಿಕೆ ಪಟ್ಟೆ
ಇನ್ನು ನಿನ್ನ ಹಿಂದೆ ಯಾರೂ ಬರುವುದಿಲ್ಲ
ಯಾರು ನಿನ್ನನ್ನು ಕರೆಯುವವರಿಲ್ಲ
ತಿರುತಿರುಗಿ ಯಾರನ್ನು ಅರೆಸುತ್ತೀಯಾ ಬಡ ಜೀವವೆ
ತಡೆದು ನಿಲ್ಲಿಸಲು ನಿನ್ನವರಿಲ್ಲಿ ಯಾರೂ ಇಲ್ಲ
ಜಗತ್ತಿನ ಎಲ್ಲಾ ಖುಶಿಗಳು ನಿನ್ನ ಪಾಲಿಗಿರಲಿ
ಸವೆಯುವುದು ನನ್ನ ಹಣೆ ಬರಹ, ಸವೆಯುತ್ತೇನಾನಿಲ್ಲಿ
:-) guess ಮಾಡಬಹುದಾ ಯಾವ ಹಾಡೆಂದು??
2 comments:
It's 'jo pyaar tune mujhko diya thaa...'
correct Geeta Nayak. thanks for the response. :-)
Post a Comment