October 8, 2013

ಟಾಯ್ಲೆಟ್ ಪ್ರವರ

(ನಿನ್ನೆ ರಾಯರು ಗಟ್ಟಿ ಆವಾಜ್ ಹಾಕಿದರು: ನಿನ್ನಿಂದ ಸಿಸ್ಟಮ್ ಸ್ಲೋ ಆಗಿದೆ. ನಿನಗೆ ಬೇಡದಿದ್ದ ಫೈಲ್, ಫೋಟೊ, ಸಿನಿಮಾಗಳನೆಲ್ಲ ತೆಗೆದು ಹಾಕಿ, defrag ಮಾಡು ಅಂತ. ಸರಿ ಒಂದೊಂದಾಗಿ ನನ್ನ ಫೋಲ್ಡರ್ ಕ್ಲಿಯರ್ ಮಾಡಬೇಕಾದ್ರೆ ಈ ಹಳೆ ಬರಹ ಸಿಕ್ಕಿತು. ನಿಮಗೆ ಇಷ್ಟ ಆಗುತ್ತೋ ಇಲ್ಲವೋ ಇಲ್ಲಿ ಹಾಕ್ತಾ ಇದ್ದೀನಿ. ಯಾಕಂದರೆ ಆಗ ಈಗಿನಷ್ಟು ಸಲೀಸಾಗಿ ನನಗೆ ಕನ್ನಡದಲ್ಲಿ ಬರೀಲಿಕ್ಕೆ ಬರುತ್ತಿರಲಿಲ್ಲ.
ವಸುಧೇಂದ್ರರ ಬರಹ ಓದಿ ಅವರಿಗೆ ಎಸ್ ಎಮ್ ಎಸ್ ಮಾಡಿದ್ದು ನೆನಪಿದೆ, ಈ ಬರಹ ಕಳಿಸಿದ್ದು ನೆನಪಿಲ್ಲ. ಹಾಗೂ ಇದು Ansi format ನಲ್ಲಿದ್ದದ್ದು ನಾನೇ ಟ್ರೈ ಮಾಡಿ ಮಾಡಿ Unicode ಗೆ ಬದಲಾಯಿಸಿ ಪೋಸ್ಟಿಸಿದ್ದೇನೆ. of course i am proud of myself for figuring it out :-)ಈ ಕತೆ 'ರಕ್ಷಕ ಅನಾಥ' ಕತಾ ಸಂಕಲನದಲ್ಲಿ ಇದೆ ಅನ್ನಿಸುತ್ತೆ....ಫೈಂಡ್ ಔಟ್ ಮಾಡಿ ಹೇಳ್ತೇನೆ........  )
...................................................................................................................
ವಸುಧೇಂದ್ರರ ಸಣ್ಣ ಕತೆ ಮನೆ -’ಮಾರು’ ಓದ್ತಾ ಇರಬೇಕಾದ್ರೆ ನಮ್ಮಲ್ಲಿ ಶ್ರೀಕಾಂತ್ ಗೂ ಮಾಲವಿಕಾ ಗೂ toilet ಬಳಸಲು ಗಲಾಟೆ ನಡೀತಾ ಇತ್ತು
’ಅಪ್ಪ’ 20 ಕೌಂಟ್ ಮಾಡ್ತೇನೆ, ನೋಡು ಹೊರಗೆ ಬರಬೇಕು ಅಂತ ಬೇಗ ಬೇಗ 1 ರಿಂದ ಎಣಿಸಲು ಶುರು ಮಾಡಿದಳು.
ಅದಕ್ಕೆ ಇವರು ’ಹಾ ಹಾ ಅಷ್ಟು ಬೇಗ ಬೇಗ ಎಣಿಸಲಿಕ್ಕೆ ಇಲ್ಲ ಪ್ರತಿ ಸಂಖ್ಯೆ ಆದಮೇಲೂ ೨ ನಿಮಿಷದ ಗ್ಯಾಪ್ ಇರಬೇಕು’
ಕೂಡಲೇ ಅಮ್ಮ ಅಮ್ಮ ನೋಡಮ್ಮ ಅಪ್ಪನ್ನ್ ಅಂತ ನನ್ನ ಬಳಿ ಕಂಪ್ಲೈಂಟ್
ನಾನಂತು ಸುಮ್ಮನೆ ನಗ್ತಿರ್ತೇನೆ, ಅವರದ್ದು ಕೋಳಿ ಜಗಳ ಕೇಳ್ತಾ.
ಕೂಡಲೇ ವಸುಧೇಂದ್ರ ಅವರಿಗೆ ಎಸ್.ಎಮ್.ಎಸ್ ಮಾಡಿದೆ ’hopefully the tundu mane has equal number of toilets’ ಅಂತ.
(ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿ ಪುಟ: 6 , 20 ಸೆಪ್ಟೆಂಬರ್ 09)
ಅರ್ಜೆಂಟ್ ನಲ್ಲಿ ಈ ಮನೆ ಹುಡುಕಿದಾಗ ಇದರಲ್ಲಿರೋದೆ ಒಂದೇ toilet ಅಂತ ನಾವು ಅಷ್ಟು ಗಮನಿಸಿರಲಿಲ್ಲ. ಹೆಚ್ಚಿನಂಶ ಈಗೀನ ಎರಡು ಬೆಡ್ ರೂಮ್ ಬಾಡಿಗೆ ಮನೆಯಲ್ಲಿ ಒಂದು ಬೆಡ್ ರೂಮ್ ಗೆ ಒಂದು ಎಟ್ಯಾಚ್ಡ್ ಬಾತ್/toilet ಇರುತ್ತೆ. ನಾವಿರುವ ಬಾಡಿಗೆ ಮನೆ ೧೫ ವರ್ಷ ಹಳೆಯದು.
ಮುಂಬಯಿನಲ್ಲಿ ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಇದ್ದಿದ್ದು ಮೂರನೆ ಮಹಡಿಯಲ್ಲಿ. ಲಿಫ್ಟ್ ಇರಲಿಲ್ಲ. ಒಳ ಹೊಕ್ಕ ಕೂಡಲೇ ಒಂದು ದೊಡ್ಡ ಹಾಲ್ ಆಮೇಲೆ ಇನ್ನೂ ಒಳಗೆ ಇನ್ನೊಂದು ರೂಮ್. ಅದಕ್ಕೆ ಬಾಗಿಲು. ಅದು ಅಡಿಗೆ ಮನೆ cum ಬಾತ್ರೂಮ್
ಒಂದು floor  ನಲ್ಲಿ ಒಟ್ಟು ಆರು ಮನೆಗಳಿದ್ದವು. ಎರಡು ಮನೆಗೆ ಒಂದರಂತೆ staircase ಹತ್ತಿರ toilet . ನಾವೆಲ್ಲ ಆಗ ಸರದಿಯಲ್ಲಿ ನಿಲ್ಲ ಬೇಕಾಗುತ್ತಿತ್ತು. ಕೆಟ್ಟ ವಾಸನೆ ಬೇರೆ. ಫೆನಾಯಿಲ್ ಮುಂತಾದವುಗಳ ಬಳಕೆ almost nil . ಈಗೀಗ ಪರಿಸ್ಥಿತಿ improve ಆಗಿದೆ :-)
ತೀರ್ಥಹಳ್ಳಿಯಲ್ಲಿ ನಾವು ಮೂವತ್ತು ಮಂದಿಗೆ ಇದ್ದದ್ದು ಮೂರು toilet, ಅಲ್ಲೂ ಸರದಿ ಸಾಲು, ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಅರ್ಜೆಂಟ್. ಇನ್ನೊಂದು ಗಮ್ಮತ್ತಿನ ವಿಷಯ ಅಂದ್ರೆ ನಾವು ಹೆಣ್ಣು ಮಕ್ಕಳು toilet ಉಪಯೋಗಿಸುವಾಗ ನಮ್ಮ ಮಾತುಗಳು
ಶ್ರೀಕಾಂತ್ ಗೆ toilet ಗೆ ಹೋಗುವಾಗ ಪತ್ರಿಕೆ ಇರಲೇ ಬೇಕು. ಮದುವೆಯಾದ ಹೊಸದರಲ್ಲಿ ಯುಗಾದಿಗೆ ಮುಂಬೈ ಗೆ ಹೋದಾಗ, ಇವರು ಆಂಗ್ಲ ಪತ್ರಿಕೆ ಯೊಂದನ್ನು ಒಯ್ದು toilet ಗೆ ಹೋದರು. ಸುಮಾರು ಹೊತ್ತಾದರೂ ಹೊರಗೆ ಬರಲೆ ಇಲ್ಲ. ನನ್ನ ತಮ್ಮ ಅಂತೂ ’ಜಿಜಾಜಿ ಗೆ ಅಷ್ಟು ಹೊತ್ತು ಬೇಕಾ, ಏನು ಕಬ್ಬಿಣ ಬೀಳಿಸ್ತಾರಾ?’ ಅಂತ ಕೇಳಿದಾಗ ನನಗಂತೂ ಮುಜುಗರ. ಆಮೇಲೆ ನಿಧಾನಕ್ಕೆ ’ಅವರು ಪೇಪರ್ ತೆಗೆದು ಕೊಂಡು ಹೋಗಿದಾರೆ ಅಂದೆ’, ಅದಕ್ಕೆ ಅವನು ಗಟ್ಟಿಯಾಗಿ ಜೀಜಾಜಿ ನಮ್ಮಲ್ಲಿ ನೀರು ಸಾಕಷ್ಟು ಬರ್ತದೆ, ಪೇಪರ್ ಬಳಸುವ ಅಗತ್ಯವಿಲ್ಲ, ಅಷ್ಟೆ ಅಲ್ಲ ಸಮುದ್ರ ತುಂಬ ಹತ್ತಿರದಲ್ಲೇ ಇದೆ, ಎಂದಾಗ ಅವರಿಗೆಲ್ಲ ನಗು.್, ನನಗೋ ಮುಜುಗರ. :-(
ಇತ್ತೀಚಿಗಂತೂ ವಿಜಯ ಕರ್ನಾಟಕ ಪತ್ರಿಕೆ ಇಲ್ಲದಿದ್ದರೆ ಅವರಿಗೆ toilet ಗೆ ಹೋಗಲು ಕಷ್ಟವಾಗುತ್ತದೆ. ಆಕಸ್ಮಾತ್ ಆ ದಿನ ವಿ.ಕ ಬಂದಿರದಿದ್ದರೆ ಪೇಟೆಗೆ ಹೋಗಿ ಅದನ್ನು ಖರಿದಿ ಮಾಡಿ ಆಮೇಲೆ toilet ಗೆ ಎಂಟ್ರಿ.
ರಜೆ ಗಿಜೆ ಬಂದು ಆ ದಿನ ಪೇಪರ್ ಬಂದಿರದಿದ್ದರೆ ’ಛೆ! ಇವತ್ತು toilet ಸರಿ ಆಗ್ಲೆ ಇಲ್ಲ ಅಂತ’ ಕಾಲು ಸುಟ್ಟ ಬೆಕ್ಕಿನಂತೆ ಆ ಕಡೆ ಈ ಕಡೆ ಹೋಗ್ತಿರುತ್ತಾರೆ.
ಹ್ಮ್ ಈ ಪೋಸ್ಟ್ ಓದಿ ಮೂಗು ಮುರಿಯಬೇಡಿ. ಅಲ್ಲ ಮೂಗು ಏನಾದರೂ ನಿಜಕ್ಕೂ ಮುರಿದರೆ ಅದಕ್ಕೆ ಪ್ಲಾಸ್ಟರ್ ಹೇಗೆ ಹಾಕುತ್ತಾರೆ??ಗೂಗಲಿಸಿ ನೋಡುವಾ??

:-)


.

6 comments:

Radhika said...

LOL :-)

Sudeepa ಸುದೀಪ said...

Pacchi.... ;-)

ಮನದಾಳದಿಂದ............ said...

ಪಾಪ.... :(
ಅವರವರ ಕಷ್ಟ ಅವರಿಗೆ, ನಿಮಗೇನು ಗೊತ್ತು?

ಅದಕ್ಕೆ ನಮ್ಮೂರಲಿ ಸಮಸ್ಯೆ ಇಲ್ಲ,

ಮುಂದೆ ಹೊಳೆ ಹಿಂದೆ ಹಳ್ಳ
ವರ್ಷಪೂರ್ತಿ ನೀರಿರಲು
ಟಾಯ್ಲೆಟ್ ಯಾಕೋ ಎಂದ ಪ್ರವೀಣ :)

ಯಾರಾದರು ಮೂಗು ಮುರಿದವರು ಇದ್ದಾರೆ ಖಂಡಿತ ತಿಳಿಸುವಾ.....

Unknown said...

ನನಗೂ ಮೊನ್ನೆ ನನ್ನ ಮನೆಯಿಂದ ಫೋನ್ ಕಾಲ್ ಒಂದು ಬಂದಿತ್ತು. ತಾಯಿಯಿಂದ ನೀರ್ ಸರಿಯಾಗಿ ಹಾಕಲಿಲ್ಲ toilet ಗೆ ಲಾಸ್ಟ್ ಯಾರು ಹೋದದ್ದು ಎಂಬ ಪ್ರಶ್ನೆ. ನಾನ್ ಆಫೀಸ್ ನಲ್ಲಿ ಸ್ವಲ್ಪ ಬ್ಯುಸಿ ಇದ್ದುದರಿಂದ ಇನ್ನು ಮುಂದೆ toilet ಗೆ ಒಂದು ಕ್ಯಾಮರ ಹಾಕಿ ಬಿಡೋಣ ಎಂದೆ. ಅಮ್ಮ ಮರುಮಾತನಾಡದೆ ಜೋರಾಗಿ ನಗುತ್ತಾ ಫೋನ್ ಡಿಸ್ ಕನೆಕ್ಟ್ ಮಾಡಿದ್ರು.

nenapina sanchy inda said...

:-) thanks to all
Chandrashekar: maneyavarellara jate share maaDi nakke...:-)
ms

nenapina sanchy inda said...

praveen tamma: nimma chuTuku sooper.
Radhika and Munna :-)
ms