October 3, 2013

ಕೊಬ್ಬರಿ ಬರ್ಫಿ/ ಕೊಬ್ಬರಿ ಮಿಠಾಯಿ/ಸೊಯ್ಯೆ ಖಡಿ

ನಿನ್ನೆ ಗಾಂಧಿ ಜಯಂತಿಯಂದು ಹಾಗೂ ನನ್ನ ಬ್ಲಾಗ್ ಗೆ ಭೇಟಿ ನೀಡಿದವರ ಸಂಖ್ಯೆ 65000 ದಾಟಿದ್ದಕ್ಕೆ ಈ ಸ್ವೀಟ್ ಬ್ಲಾಗ್ ನಲ್ಲಿ  ಹಾಕುವಾ ಅಂತ ಇದ್ದೆ."ಸ್ವೀಟ್ ಕೆ ಲಿಯೆ ಕೊಯೀ ಭಿ ಬಹಾನಾ ಚಲೇಗಾ"  ಆದರೆ ಬೆಳಿಗ್ಗೆ ಮನೆಯಿಂದ ಹೊರಟಿದ್ದು ಬಂದಾಗ ರಾತ್ರಿ 10.00 ಗಂಟೆ ಆಗಿತ್ತು. ಬೆಳಿಗ್ಗೆ ನಾವು ಸರ್ಜಾಪುರ ರಸ್ತೆಯಲ್ಲಿರುವ ಭೂಮಿ ಸ್ಕೂಲ್ ಗೆ ಹೋಗಿದ್ವಿ. ಅಲ್ಲಿ ಆಯೋಜಿಸಲಾದ ಭೂಮಿ ಉತ್ಸವ ತುಂಬಾ ಚೆನ್ನಾಗಿತ್ತು. 300 ಹೆಚ್ಚು ಜನರು ಅಲ್ಲಿದ್ದರು. ಸಾವಯವ ಮಾದರಿಯಲ್ಲಿ ತಯಾರಿಸಿದ ಬಟ್ಟೆ ಬರೆ, ತಿಂಡಿ-ತಿನಿಸುಗಳು, ಹೂ ತರಕಾರಿಗಳ ಬೀಜ, ಮಳೆನೀರು ಸಂಗ್ರಹಣಾ ಪ್ರಾತ್ಯಕ್ಷಿಕೆ, ಗಾಂಧಿ ಜಯಂತಿ  ಪ್ರಯುಕ್ತ  ಖಾದಿ ಬಟ್ಟೆ/ಸಿದ್ದ ಉಡುಪುಗಳ ವೀಕ್ಷಣೆ ಮತ್ತು ಮಾರಾಟ, ಜಾನಪದ ಗೀತೆ, ಕುಂಬಾರಿಕೆ, ಪುಟ್ಟ ಮಕ್ಕಳಿಗೆ ಬಣ್ಣದ ಆಟ, ಬಿದಿರಿನ ವಾದ್ಯಗಳ orchestra. ಸಮಯ ಹೇಗೆ ಸರಿಯಿತು ಗೊತ್ತಾಗಲಿಲ್ಲ.
ಸಂಜೆ , ದು. ಸರಸ್ವತಿಯಯವರ ಆಹ್ವಾನದ ಮೇರೆಗೆ ಅವರ ನಾಟಕ 'ಮೆಕ್ಕಾ ದಾರಿ' ಯ ವೀಕ್ಷಣೆ. ಅದಕ್ಕಿಂತ ಮೊದಲು ದೇಸಿ ಕೊಡಮಾಡುವ ಕೈಮಗ್ಗ ಪ್ರಶಸ್ತಿ ಪ್ರಧಾನ ಸಮಾರಂಭ ಹೊಮ್ಮಿಕೊಂಡಿದ್ದರು. ಸಮಾರಂಭದ ಬ್ಯಾನರ್ ನನಗಿಷ್ಟ ವಾಗಿ ಅದರ ಒಂದು ಚಿತ್ರ ನಿಮಗಾಗಿ.ಚಾಪೆ ಯಿಂದ ಮಾಡಿದ ಬ್ಯಾನರ್. ದೇಸಿ ಸಂಸ್ಥೆಯ ಪ್ರಸನ್ನ ಅವರು ಭಾವಾನುವಾದ ಮಾಡಿದ ಕತೆ 'ಮೆಕ್ಕಾ ದಾರಿ'

ಗಾಂಧಿ ಜಯಂತಿ special doodles by Malavika and Niharika

ಈಗ ಕೊಬ್ಬರಿ ಮಿಠಾಯಿ ಮಾಡುವ ಬಗ್ಗೆ. ತುಂಬ ಸುಲಭದಲ್ಲಿ ಮಕ್ಕಳೂ ಕೂಡ ಇದನ್ನು ತಯಾರು ಮಾಡಬಹುದು. ಕೊಬ್ಬರಿ ತುರಿ ಅದರ ಸರಿಸಮಾನ ಅಳತೆಯ ಸಕ್ಕರೆ, ಅಂದರೆ ಒಂದು ಕಪ್ ಕಾಯಿ ತುರಿ ಗೆ ಒಂದು ಕಪ್ ಸಕ್ಕರೆಯ ಲೆಕ್ಕ, 8-10 ಗೇರುಬೀಜ. ಇವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ.ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಮೊದಲಿಗೆ ಮಿಶ್ರಣ ಮೆಲ್ಟ್ ಆಗುತ್ತೆ, ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗುತ್ತ ತಳ ಬಿಡುತ್ತ ಹೋಗುತ್ತೆ. ಆಗ ಏಲಕ್ಕಿ ಪುಡಿ ಬೆರೆಸಿ ತುಪ್ಪ ಹಚ್ಚಿದ ತಾಟಿಗೆ ಕೂಡಲೆ ಹಾಕಿ ಸುಟ್ಟುಗದಿಂದ ಸಮತಟ್ಟಾಗಿ ಹರಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿಡಿ. 


ಗೀತಾ ಶೆಣೈ ಸಂಪಾದಕತ್ವದಲ್ಲಿ ಹೊರ ತಂದ 'ಆಧುನಿಕ ಕೊಂಕಣಿ ಕತೆಗಳು' ಕೆಲವು ತುಂಬಾ ಚೆನ್ನಾಗಿವೆ.


ನನಗಿಷ್ಟವಾದ ಕೆಲ food related ಎಸ್ ಎಮ್ ಎಸ್ ಗಳು:
1  in life so many incidents cud happen dat wud make you weak. Bt, still thr r 3 things that make U stronger
Breakfast, Lunch and Dinner
No sentiments da!!Just facts
(by Ranjith Sathyaraj)

2  Cup ko honton sey lagakar thoda sa pee lena, cheeni kam hai iss coffee mein Zaykaa zaraa badaa dena: (wah 'Saahil' ji kya baat hai!!!)

ಸುಮ್ನೆ ಒಂದು potpourri post
:-)

6 comments:

Unknown said...

ಇದರಲ್ಲಿ ನನಗೆ ಇಷ್ಟವಾದದ್ದು ಚಾಪೆಯಿಂದ ಮಾಡಿದ ಬ್ಯಾನರ್ ಮತ್ತು special doodles. ಕೊಬ್ಬರಿ ಮಿಠಾಯಿ ಮಾಡುವ ಬಗ್ಗೆ ಹೇಳಿದ್ದೀರಿ. ನನ್ನ ಹೆಂಡತಿ ಇದನ್ನು ನೋಡಿದ್ರೆ ಗೇರು ಬೀಜದೊಂದಿಗೆ ಕೊಬ್ಬರಿ ತುರಿನೂ ಇವತ್ತು ನಾನು ರೆಡಿ ಮಾಡ್ ಬೇಕು ಅನಿಸುತ್ತೆ.

nenapina sanchy inda said...

ಡೂಡಲ್ಸ್ ಇಷ್ಟ ಆಗಿದ್ದಕ್ಕೆ ಧನ್ಯವಾದಗಳು
ಮತ್ತೆ ಕೊಬ್ಬರಿ ಮಿಠಾಯಿಬಗ್ಗೆ: ಯಾವಗಲೂ ನಿಮ್ಮ ಹೆಂಡತಿ ನಿಮಗೆ ಅಡಿಗೆ ತಿಂಡಿ ಮಾಡಿ ಕೊಡುತ್ತಾರಲ್ಲವಾ?? ಒಂದು ಸಲ ನೀವು ಮಾಡಿ ತಿನ್ನಿಸಿ :-) :-)

ಮಾಲತಿ ಎಸ್

Dileep Hegde said...

Potpourri ತುಂಬಾ ಇಷ್ಟವಾಯ್ತು..

nenapina sanchy inda said...

thank u Dileep Hegde.
:-)

ಮನಸು said...

ಕೊಬ್ಬರಿ ಮಿಠಾಯಿ ಮಾಡಬೇಕು ಅಂತಾನೇ ಇದ್ದೆ ಮನೆನಲ್ಲಿ ಕಾಯಿ ಎಷ್ಟೋಂದು ಇತ್ತು. ಒಳ್ಳೆ ಸಮಯಕ್ಕೆ ನಿಮ್ಮ ಬ್ಲಾಗ್ನಲ್ಲಿದೆ ಥಾಂಕ್ಸ್ ಅಕ್ಕಾ. ಎಷ್ಟು ಚೆಂದದ ಚಿತ್ರಗಳು, ಸಿಹಿಗೆ ಪೂರಕವಾಗಿ ಪುಸ್ತಕ ಪರಿಚಯ ಕೊಂಚ, ಕಾರ್ಯಕ್ರಮ ವಿವರ ಸೂಪರ್... ಆ ಛಾಪೆಯಲ್ಲಿನ ಬ್ಯಾನರ್ ಸಕ್ಕತ್ ಇಷ್ಟವಾಯ್ತು

nenapina sanchy inda said...

ಸುಗುಣಾ: ಟ್ರೈ ಮಾಡಿದ್ರಾ?? how was it? thanks for coming here
:-)
ಅಕ್ಕಾ