May 29, 2013

ಒಂದು feel good ಕತೆ (ಮಿನಿ ಕತೆ)

photo and effects : Niharika Shenoy
ಅವನು ಪ್ರೀತಿಸಿದ ಹುಡುಗಿಗೆ ಕಿವಿ ಸರಿಯಾಗಿ ಕೇಳಿಸದಿದ್ದರೂ ಅವನು ಮುಂದಾಗಿ ಅವಳನ್ನು ಮದುವೆಯಾದ. ಡಾಕ್ಟರ್ ಬಳಿ ಹೋದಾಗ, ಕಿವಿಗೆ ಒಂದು ಪುಟ್ಟ correctional ಶಸ್ತ್ರ ಚಿಕಿತ್ಸೆಯಿಂದ ಅದನ್ನು ಸರಿಪಡಿಸಬಹುದು ಅಂತ ಗೊತ್ತಾಯಿತು. ಆದರೆ ಅದಕ್ಕೆ ತಗಲುವ ವೆಚ್ಚ ಅಪಾರ. ಹುಡುಗ ಸ್ವಾಭಿಮಾನಿ. ಆಕೆಗೆ ಒಂದು ಸಣ್ಣ ಮೊತ್ತ ಸಂಪಾದನೆ ಬರುವ ಹಾಗೆ ಒಂದು ಕಾರಖಾನೆಯಲ್ಲಿ ಕೆಲಸ. ಅದರೊಟ್ಟಿಗೆ ಉನ್ನತ ಪದವಿಯ ಓದು. ಅವನದ್ದು ಕಿರಾಣಿ ಅಂಗಡಿ.
ಮದುವೆಯ ಆದ ದಿನದಿಂದಲೇ ಅವನು ಸ್ವ್ವಲ್ಪ ಹಣ ಆಕೆಯ ಶಸ್ತ್ರ ಚಿಕಿತ್ಸೆಗೆಂದು ತೆಗೆದಿಡಲಾರಂಭಿಸಿದ. ಅಂಗಡಿಯಲ್ಲಿ ತುಂಬ ಚೆನ್ನಾದ ವ್ಯಾಪಾರ ಆದ ದಿನ ಸ್ವಲ್ಪ ಹೆಚ್ಚೆ ಆ ಮೊತ್ತಕ್ಕೆ ಸೇರಿಸುತ್ತಿದ್ದ. ಮದುವೆಯ ವಾರ್ಷಿಕೋತ್ಸವಕ್ಕೆ ಒಂದು ವಾರ ಇದೆ ಯೆನ್ನುವಾಗ ಅವನು ಆ ದುಡ್ಡನ್ನು ಲೆಕ್ಕ ಹಾಕಿದ . ಅದರಲ್ಲಿ 50000 ರೂ ಜಮಾ ಆಗಿತ್ತು. ಸಂತಸದಿಂದ ಡಾಕ್ಟರ್ ಬಳಿ ಹೋದ. ತನ್ನ ಕತೆ ಹೇಳಿದ. ಡಾಕ್ಟರ್ ಶಸ್ತ್ರ್ರ ಚಿಕಿತ್ಸೆಗೆ 1 ಲಕ್ಷ ರೂ ಖರ್ಚಾಗುತ್ತದೆಯೆಂದು, ಅದೂ ಒಂದು ಕಿವಿಗೆ ಅಂತಂದು, ಸ್ವಲ್ಪ ಹೊತ್ತು ಆಲೋಚಿಸಿ 50000 ನಮ್ಮ ಆಸ್ಪ್ತ್ರತ್ರೆ ಫಂಡ್ ನಿಂದ ಹಾಕ್ತೀವಿ ಅಂದರು.
ಖುಶಿಯಲ್ಲಿ ಹುಡುಗ ಅವನ ಟಿ ವಿ ಎಸ್ ನಡೆಸುತ್ತಿದ್ದ. ಹೆಂಡತಿಯ ಕಿವಿ ಸರಿಹೋದ ಮೇಲೆ ಆಡ ಬೇಕಾದ ಮಾತುಗಳು, ಎಸ್ ಎಮ್ ಎಸ್ ಮೂಲಕ ರವಾನಿಸುವ ಸಂದೇಶಗಳನ್ನು ಈಗ ಆಕೆಯ ಕಿವಿಯಲ್ಲೇ ಉಸುರಬಹುದು, ತಾನು ಬರೆದ ಚುಟುಕುಗಳನ್ನು. ಕತೆಗಳನ್ನು ಓದಿ ಹೇಳಬಹುದು, ಅದರೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಮುಂತಾದ ಸಂತಸದ ಸಂಗತಿಗಳಿಂದ ಅವನ ತಲೆಯಲ್ಲಿ ಮೃದು-ಮಧುರ ಆಲೋಚನೆ ಹಾರಾಡತೊಡಗಿದವು. ಖುಶಿಯಿಂದ ಅವನು ಗಮನಿಸಲಿಲ್ಲವೋ, ಅಥವಾ ಆ ಕಡೆಯಿಂದ ಬರುತ್ತಿದ್ದ ಲಾರಿಯವನ ತಪ್ಪೋ, ಹುಡುಗನಿಗೆ ಬಿದ್ದದ್ದು ಮಾತ್ರ ಗೊತ್ತು. ಎಚ್ಚರವಾದಾಗ ಆಸ್ಪ್ತತ್ರೆಯಲ್ಲಿದ್ದ. ಜೀವಕ್ಕೇನೂ ಅಪಾಯವಿಲ್ಲದಿದ್ದರೂ ಕಾಲಿನ ಮೂಳೆ ಮೂರು ಕಡೆ ಫ್ರಾಕ್ಛರ್ ಆಗಿ ಅದನ್ನು ಸರಿಪಡಿಸಲು 50000 ಸಾವಿರ ರೂ ಆಗುತ್ತದೆ ಅಂತ ಆಸ್ಪತ್ರೆಯ ಸಿಬ್ಬಂಧಿ ತಿಳಿಸಿದರು.
ಈ ಕತೆಯನ್ನೆಲ್ಲ ಹುಡುಗ ತನ್ನ ಆಪ್ತ ಮಿತ್ರನಲ್ಲಿ ಹೇಳಿಕೊಳ್ಳುವಾಗ, ಪಕ್ಕದ ಬೆಡ್ ನಲ್ಲಿರುವ ಕೋಟ್ಯಾಧಿಪತಿಗೆ ಏನನ್ನಿಸಿತೋ ಡಾಕ್ಟರ್ ಅನ್ನು ಕರೆದು ಆ ಹುಡುಗನ ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ಆಕೆಯ ಕಿವಿಯ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ತಾನೇ ಭರಿಸಲು ಮುಂದಾದ. ತನ್ನ ಹೆಸರು ಮಾತ್ರ ಎಲ್ಲೂ ಹೇಳಕೂಡದು ಅಂತಂದು ಕೂಡಲೆ ಹಣದ ವ್ಯವಸ್ಥೆ ಮಾಡಿಸಿದರು. ಎರಡು ದಿನದ ನಂತರ ಆ ಕೋಟ್ಯಾಧಿಪತಿ ಕೊನೆಯುಸಿರೆಳೆದರು.
ಎರಡು ವರ್ಷಗಳ ನಂತರ....................
ಹುಡುಗನ ಕಾಲು ಸರಿಯಾಗಿದೆ, ಹುಡುಗಿಯ ಕಿವಿಗೆ ಒಂದು ಚಿಕ್ಕ ಹಿಯರಿಂಗ್ ಎಇಡ್ ಅಳವಡಿಸಿದ್ದಾರೆ. ಅದರ ಮೂಲಕ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲಳು, ಆಕೆಯ ಪುಟ್ಟ ಕಂದನ ತೊದಲು ಮಾತು ಕೂಡ. ಡಾಕ್ಟರನ್ನು ಕಾಡಿಸಿ ಪೀಡಿಸಿ ಆ ಕೋಟ್ಯಾಧಿಪತಿಯ ಹೆಸರನ್ನು ತಿಳಿದುಕೊಂಡು, ಪುಟ್ಟನಿಗೆ ಆ ಕೋಟ್ಯಾಧಿಪತಿಯ ಹೆಸರನ್ನೆ ಇಟ್ಟಿದ್ದಾರೆ. ಇಬ್ಬರೂ ಕಷ್ಟ ಪಟ್ಟು ದುಡಿದು ಸಮಾಧಾನದಿಂದಿದ್ದಾರೆ
all is well that ends well..
:-)

7 comments:

Badarinath Palavalli said...

ಮನ ಕುಳುಕುವ ಕಥೆ, ದುಡ್ಡಿರುವ ಕಡೇ ಮನಸ್ಸು ಕಲ್ಲಾಗಿರುತ್ತದೆ, ಇದು ನನ್ನದೇ ಬದುಕಿನ ನಿಜ ಪಾಠ. ಆದರೆ ಇಲ್ಲೊಬ್ಬರು ಅಪರೂಪದ ಹೃದ್ಧಾಯ ಶ್ರೀಮಂತರು.

Digital Eyes said...

Touching story. Whats the name of Kotyadipathi?

Radhika said...

Good one!

Anonymous said...

If u were a screen play writer rajashri production would have signed u :) happy endings.... Hegu dinaa sutta mutta hecchu novu kadime nalivu kanutteve... Aaga ondistu odi haguraguva.... Happy endings is a better choice! Now u know the reason why am a frequent visitor here :)

nenapina sanchy inda said...

Thank you Badari, Rajesh, Radhika and Anonymous..special thanks nimge...
:-)
malathi S

Srikanth Manjunath said...

ಒಳ್ಳೆ ತನವಿದ್ದ ಕಡೆ ಒಲವು ಹರಿಯುತ್ತದೆ ಎನ್ನುವಂತೆ.. ನದಿ ಎಲ್ಲೇ ಹುಟ್ಟಿದರು ಸೇರುವುದು ಸಾಗರವನ್ನೇ. ಹಾಗೆಯೇ ಒಳ್ಳೆಯ ಮನಸ್ಸು ಒಳ್ಳೆಯ ಮನಸ್ಸನ್ನು ಎಳೆದು ತಂದು ಕೂರಿಸುತ್ತೆ ಅನ್ನುವುದಕ್ಕೆ ಈ ಸುಂದರ ಕಥೆ ಒಂದು ಸಾಕ್ಷಿ. ಕಥೆ ಕಾಲ್ಪನಿಕ ಇರಲಿ ನೈಜವಾಗಿರಲಿ ಹುಮ್ಮಸ್ಸು ತುಂಬುವುದು ಮಾತ್ರ ನಿಜ

Anonymous said...

The hero's heart of this story really wonderful Ma'am. But in fact such person faces big problems...