ಮಳೆಯಿಲ್ಲದಿದ್ದರೂ ಹಲುಸಾಗಿ ಸಿಗುತ್ತಿದೆ ಹಲಸಿನ ಬೆಳೆ. ತೋಟದಿಂದ ಹಲಸಿನಕಾಯಿಗಳು ಬಂದಾಗಲೆಲ್ಲ ಏನಾದರೂ ಹೊಸತನ್ನು ಮಾಡುತ್ತೇನೆ ಇತ್ತೀಚಿಗೆ. ಇದಕ್ಕೆ ಹೊಸ ಸೇರ್ಪಡೆ ಹಲಸಿನಕಾಯಿಯ ಕಟ್ ಲೆಟ್. ತುಂಬ ಸುಲಭ.
ಕುಟುಂಬದ ಮಿತ್ರ ಶ್ರೀ ಪಡ್ರೆ ಯವರು ಹಲಸಿನ ಜಾಡನ್ನು ಹಿಡಿದು ದೇಶ ವಿದೇಶದಲ್ಲೆಲ್ಲ ಸಂಚರಿಸಿ ಹಲಸಿಗೆ ಒಂದು ರೆಸ್ಪೆಕ್ತೇಬಲ್ ಸ್ಟೇಟಸ್ ಸಿಗುವಲ್ಲಿ/ ಅದನ್ನು ವಾಣಿಜ್ಯ ಬೆಳೆಯನ್ನಾಗಿ ಪರಿವರ್ತಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದರ ಬಗ್ಗೆ ಅಧ್ಯಯನ ನಡೆಸಿ ಹಲವಾರು ಮಾಹಿತಿಗಳನ್ನು ಕಲೆಹಾಕಿ, , ಸಿವಿಲ್ ಸೊಸೈಟಿ ಮತ್ತು ಅಡಿಕೆ ಪತ್ರಿಕೆಗಳಲ್ಲಿನ ಬರಹದ ಮುಖಾಂತರ ಓದುಗರಲ್ಲಿ ಕೃಷಿಕರಲ್ಲಿ ಈ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.so much so that ಈಗ ಹಲಸು ಇಸ್ synonymous with ಶ್ರೀ ಪಡ್ರೆ..:-) ನಿಮಗೊಂದು ಹ್ಯಾಟ್ಸ್ ಆಫ್ ಪಡ್ರೆಯವರೆ....ಹಾಗೆ ಹಲಸನ್ನು ಬಳಸಿ ಹೊಸ ತಿಂಡಿ ತಿನಿಸುಗಳನ್ನು ಮಾಡಿದಾಗಲೂ ಅವರನ್ನು ನೆನೆಸ್ತೇವೆ.. ಮೊನ್ನೆ ಮಾಲ್ ಒಂದರಲ್ಲಿ 400 ಗ್ರಾಮ್ ಬಿಡಿಸಿದ ಹಣ್ಣಾದ ಹಲಸಿನ ತೊಳೆಗೆ 60 ರೂ ಗಳನ್ನು ಕೊಟ್ಟು ಒಬ್ಬ ಹಿರಿಯರು ಖರೀದಿಸಿದ್ದರು. Styrofoam tray ನಲ್ಲಿ ಈ ತೊಳೆಗಳನ್ನು ನೀಟಾಗಿ ಜೋಡಿಸಿ ಅದಕ್ಕೆ ಮೇಲಿನಿಂದ ಗಾಳಿ ಸೋಕದಂತೆ ಕ್ಲಿಂಗ್ ವ್ರ್ಯಾಪ್ (cling wrap)ನಿಂದ ಸುತ್ತಲಾಗಿತ್ತು ಅದರಲ್ಲಿ ಲೆಕ್ಕ ಮಾಡಿ ನಾಲ್ಕು ಹಲಸಿನ ತೊಳೆಗಳಿದ್ದವು. :-)
ಹಲಸಿನ ಕಾಯಿಯ ಹೋಳನ್ನು ಉಪ್ಪು ಮತ್ತು ಸ್ವಲ್ಪವೆ ನೀರು ಸಿಂಪಡಿಸಿ ಬೇಯಿಸಿ. ಆ ಮೇಲೆ ನೀರು ಸಂಪುರ್ಣ ವಾಗಿ ಬಸಿದು ಬಿಡಿ. ಇದಕ್ಕೆ ಬೇಯಿಸಿದ ಕ್ಯಾರೆಟ್ ಬಟಾಣಿ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ-ಕೊತ್ತಂಬರಿ ಪುಡಿ, ಸಣ್ಣಗೆ ಕತ್ತರಿಸಿದ ನೀರುಳ್ಳಿ, ಆಮ್ ಚೂರ್ ಪುಡ /.ಅಥ್ವಾ ಹುಣಸೆ ಹಣ್ಣಿನ ಪೇಸ್ಟ್, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಕೆಳಗಿನ ಆಕಾರದಲ್ಲಿ ಮಾಡಿ ಇಡಿ. ಇವನ್ನು ಅಕ್ಕಿ ಹಿಟ್ಟು/ ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ/ಹೊರಳಿಸಿ (i am not getting that word in Kannada) ಕಾವಲಿ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ shallow fry ಅಥವ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಟೊಮೇಟೊ ಕೆಚ್ ಅಪ್ ನೊಂದಿಗೆ ಸರ್ವ್ ಮಾಡಿ
ತವಾ ಫ್ರೈ
Deep Fry
This is a filling and nutritious food.


9 comments:
Looks yummy :) I am sure tasted good too... Anything with jackfruit wud be yummy... Missing halasu and maavu :(
Nimage hotte novu bandre.... Nanna matra bayya beDi... Yakendre... Photo nodi full jollu ;)
Anonymous:
loved the deep fried one's. :-) there is a popular saying 'you are what you eat' so i feel soon i am gonna resemble a Jackfruit..:-)
thank you
malathi S
If u become a jackfruit u will become a breed called ' Chandra Barka ' which is full pink :)
Anonymous:
mmmm love that red variety of poNas...btw have u tasted phassphoNosu??
:-)
malathi S
Yes madam... I have tasted that... It's more common in dakshina Kannada.. Super tangy... They make Gojju out of it right?
The best I have had so far a breed called rudrakshi... Which has become very rare :'(
ನೋಡಿದರೇಣೆ ಸಾಂದ್ರ ಜೊಲ್ಲು ರಸ. ಖಂಡಿತ ಪ್ರಯತಿಸಿ ನೋಡುತ್ತೇವೆ.
Anonymous
(since i do not have ur mail id i have to comment here..anyways..)
just love the ripe phasphoNos. its so long since i tasted one...
two years ago we asked a coconut climber to remove a few raw pasphoNas and i had stored it in brine. usually i make gojju in combination with raw mangoes which is also preserved in brine..aah konkani's rock..:-) :-)
ms
+1
Post a Comment