April 1, 2013

city of joy ನ ಕನಸುಗಾರ- ನಟರಾಜು -ಪುಸ್ತಕ ಬಿಡುಗಡೆಯು

ನಾನಾಯ್ತು ನನ್ನ ಇಮಿಡಿಯೆಟ್ ಫ್ಯಾಮಿಲಿ ಆಯ್ತು. ಅಂದ್ರೆ ನಾನು ಶ್ರೀಕಾಂತ ಮಾಲವಿಕ ನಿಹಾರಿಕ. ಇದರಲ್ಲಿ ಯಾರಿಗೂ ಸೇರ್ಪಡೆ ಇಲ್ಲ. ಇಂತಹ ಒಂದು ಬುದ್ದಿ ಇದೆ ನನಗೆ. ಅಮ್ಮ ನನಗೆ ವಿಚಿತ್ರ ಪ್ರಾಣಿ ಅಂತಲೂ, ಶ್ರೀಕಾಂತ - antisocial ಅಂತಲೂ ಮಕ್ಕಳು ಕೆಲವೊಮ್ಮೆ ಮೊಮ್ಮೀ ಯು ಆರ್ ವೀಯರ್ಡ್ ಅಂತ್ಲೂ ಲೇಬಲಿಸುತ್ತಿರುತ್ತಾರೆ.ಅಂದರೆ ಫ್ರೆಂಡ್ಸ್ ಗೆ ಬೇಕಾದಾಗ ನಾನಿರುತ್ತೇನೆ. ಬೇಡದಿದ್ದರೆ ಅಷ್ಟೆ ಹೋಯ್ತು ಅಂದುಕೊಳ್ಳುತ್ತೇನೆ. ನಾನು ಯಾರನ್ನು ಹಚ್ಚಿಕೊಳ್ಳುವುದು ಅಪರೂಪ. ಇಂತಹ ಒಂದು ಸಮಯದಲ್ಲಿ ನಮ್ಮ ಮನೆಗೆ ನಮ್ಮ ಕುಟುಂಬದ ಆಪ್ತರ ತಂಗಿಯ ಪುಟಾಣಿ ಎರಡು ವರ್ಷದ ಮಗಳಿಗೆ ಕ್ಯಾನ್ಸರ್ ಅಂತ, ಟ್ರೀಟ್ ಮೆಂಟ್ ಗೆ ಇಲ್ಲಿ ಬೆಂಗಳೂರಿಗೆ ಬಂದಾಗ ನಮ್ಮಲ್ಲಿ ಇರುತ್ತಿದ್ದರು. ಆಗ ನಾನು ಆಫಿಸ್ ನ ಕೆಲಸ ಮನೆಗೆ ತಂದು ಸರಿ ರಾತ್ರಿ ವರೆಗೆ ಆ ಕೆಲಸಗಳನ್ನು ಮಾಡುತ್ತಿದ್ದೆ.  ಆ ಫ್ಯಾಮಿಲಿಯವರು ಆಸ್ಪತ್ರೆಯಿಂದ ಬರುವ ತನಕ ಕಾದ ಹಾಗೆ ಆಗುತ್ತಿತ್ತು ಹಾಗೂ ನನ್ನ ಆಫಿಸ್ ಕೆಲಸಗಳು ಮಾಡಿದ ಹಾಗೆ ಆಗುತ್ತಿತ್ತು.  ನಾನು ಆಫಿಸ್ ಕೆಲಸ ಜತೆ ಯು ಎಸ್ ನಲ್ಲಿರುವ ಶ್ರೀವತ್ಸ ಜತೆ, ತಂಗಿ ಜತೆ, ತಂಗಿ ಗಂಡ ಸಂದೀಪ್ ಜತೆ ಚ್ಯಾಟಿಂಗ್ ಮಾಡ್ತಾ, ಅಪರೂಪಕ್ಕೊಮ್ಮೆ ಅವಧಿ ಬ್ಲಾಗ್ (ಈಗ ಅದು ವೆಬ್ ಸೈಟ್) ಗೆ ಹೋಗುತ್ತಿದ್ದೆ. ಅಲ್ಲಿ ಪರಿಚಯ ಆದವರು ರಘು. ಅವರು ಡಿಸೈನ್ ಮಾಡಿದ ಕವರ್ ಪೇಜ್ ಅವರ ಚುಟುಕು ಪದ್ಯಗಳ ಮದ್ಯಸಾರ ಹೀರುತ್ತ ಅದ್ಯಾವಾಗ ಪರಿಚಿತರಾಗಿ ಸ್ನೇಹಿತರು ಮಾತ್ರವಲ್ಲ ನಮ್ಮ ಕುಟುಂಬದ ಸದಸ್ಯರಾದರು ಗೊತ್ತಾಗಲೇ ಇಲ್ಲ. ಈ ಏಪ್ರಿಲ್ 13 ಕ್ಕೆ ನಮ್ಮ ಫ್ರೆಂಡ್ ಶಿಪ್ ನ 6th anniversary :-) :-)
(ಹಲವಾರು ಬಾರಿ ಹೀಗೂ ಆಗಿದೆ. ಎಸ್ ಎಮ್ ಎಸ್ ಮೈಲ್ ಗಳಲ್ಲಿ ಇಷ್ಟ ಆದವರು ಮುಖತ: ಕಂಡಾಗ ನಮ್ಮ energies match ಆಗದೆ ನಾನು ದೂರು ಸರಿದದ್ದೂ ಇದೆ :-( )

ಹಾಗೇ ಇತ್ತೀಚಿಗೆ ಪರಿಚಯವಾದವರು ನಟರಾಜು. ರಘು ಕವರ್ ಪೇಜ್ ಗೆ ಅವರು ಹಾಕಿದ ಕಮೆಂಟ್ ಇಷ್ಟ ಆಗಿ,ಅಲ್ಲಿ ನಮ್ಮ ಕಮೆಂಟ್ cross comment ಎಲ್ಲ ನಡೆದು, ಅವರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರು ನಾನು ಎಕ್ಸೆಪ್ಟ್ ಮಾಡಿದೆ.

so ಇದು ನನ್ನ ಫ್ಯಾಮಿಲಿ ಯಲ್ಲಿ ಸೇರಿಕೊಂಡ ನನ್ನ ಇಬ್ಬರು ಫ್ರೆಂಡ್ಸ್ ಬಗ್ಗೆ ಕತೆ .....

(ಅಂದ ಹಾಗೆ ಆ ಪುಟ್ಟ ಹುಡುಗಿ ಅವಳ ಹೆಸರಿ ರಿಯಾ ನಾಲ್ಕು ವರ್ಷದ ಸತತ ಟ್ರೀಟ್ ಮೇಂಟ್ ನಿಂದ ಕ್ಯ್ನಾನ್ಸರ್ ನಿಂದ ಮುಕ್ತಿ ಪಡಿದಿದ್ದಾಳೆ. ಇತ್ತೀಚಿಗೆ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಡಾಕ್ಟರ್ ಇನ್ನು ಹೆದರುವ ಅವಶ್ಯಕತೆ ಇಲ್ಲ ಅಂದಿದ್ದಾರೆ)

ಮುಂದೆ ನಟರಾಜು  ಅವರ qualification ನೋಡಿ ಅವರ ಫೆಲ್ಲೊಶಿಪ್ ಮುಗಿಯುತ್ತ ಬರುತ್ತಿದ್ದ ಹಾಗೆ ನಮ್ಮ ಆಫಿಸ್ ಗೆ ಒಂದು ಹೊಸ ಪ್ರಾಜೆಕ್ಟ್ ಬಂದು. ನಟರಾಜು ಅವರಿಗೆ ಇಂಟೆರೆಸ್ಟ್ ಇದೆಯಾ ಅಂತ ಕೇಳಿ ಹಾಗೆ ಪರಿಚಯ ಆತ್ಮೀಯತೆಗೆ ತಿರುಗಿತು. ಒಂದು ವಿಶೇಷ ಸಂಗತಿ ಯೆಂದರೆ ಅವರು ನನಗೆ ಡೇ ವನ್ ನಿಂದ ಅಮ್ಮ, ಮಾಮ್ ಅಂತ ಕರೆಯುವುದು ಯಾಕೋ ತುಂಬ ಇಷ್ಟ ಆಯ್ತು. ಆ ಮೇಲೆ ಅವರು ದೂರದ ಕೋಲ್ಕತ, ಅಲ್ಲಿನ ವಿಷಯಗಳು, ಅವರ ಓದು, ಸಿನಿಮಾ ಸಂಗೀತ ಅಂತ ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದರು. ಇವೆಲ್ಲದರ ಮಧ್ಯ ಅವರು ನನಗೆ 'ಅಮ್ಮ ನಾನು ಒಂದು ಕಾದಂಬರಿ ಬರೆದಿದ್ದೇನೆ ಅದನ್ನು ಎಡಿಟ್ ಮಾಡಿ ಕೊಡಿ ಎಂದು ಕೇಳಿಕೊಂಡರು. ಅದಕ್ಕೆ ನಾನು ನನ್ನದು ಅರೆ ಬೆಂದ ಕನ್ನಡ ನಾ ಹೇಗೆ ಎಡಿಟ್ ಮಾಡಲಿ ಎಂದು ಕೇಳಿದೆ. ಆದರೂ ಅವರು ಮೊದಲ ಮೂರು ಅಧ್ಯಾಯಗಳನ್ನು ಕಳುಹಿಸಿಕೊಟ್ಟರು. ಅದನ್ನು ಓದ್ತಾ ಇದ್ದರೆ ಎಡಿಟಿಂಗ್ ಬಿಡಿ ಎಲ್ಲ ಈಗಲೇ ಓದಲೆಬೇಕೆಂಬ ತವಕ ಮಾತ್ರವಲ್ಲದೆ ಇದು ಹೊಸ ತರ ವಾಗಿದೆ ನಟರಾಜು ನನಗೆ ತುಂಬ ಇಷ್ಟ ಆಗ್ತಾ ಇದೆ' it's going to click ಅಂತ ಮೈಲಿಸಿದೆ. ಹೀಗೆ ಅವರು ಮೂರು ಮೂರೆ ಅಧ್ಯಾಯ ಕಳಿಸೋದು ನಾನು ಓದಿ ಎಡಿಟ್ ಮಾಡಿ ಕಳಿಸೋದು ಮಾಡ್ತಾ ಇದ್ದೆ. ಹಾಗೆ ನಿಹಾ ನ illustrations ಬಳಸಬಹುದಾ ಅಂತ ಕೇಳಿದ್ರು, ನಾನು ಅವಳಿಗೆ ಕೇಳಿ ಅವಳು ಓಕೆ ಅಂದ ಮೇಲೆ ಅವಳ ಬ್ಲಾಗ್ ತಾಣದ ಲಿಂಕ್ ಕಳಿಸಿದೆ. 

ನಿಮಗೆ ಆಸಕ್ತಿಯಿದ್ದರೆ ನೀವು ಅವಳ ಬ್ಲಾಗ್ ಗೆ ಹೋಗಬಹುದು. ರೆಗ್ಯುಲರ್ ಆಗಿ ಅವಳು ಅಪ್ ಡೇಟ್ ಮಾಡಲ್ಲ

ಹೀಗೆ ಅವರ ಪುಸ್ತಕ ಬೇಗ ರೆಡಿಯಾದ್ರೂ ಬಿಡುಗಡೆ ದಿನ ತುಂಬ ಮುಂದ ಮುಂದಕ್ಕೆ ಹೋಗುವಾಗ ನಾನು ಇಂಟರೆಸ್ಟ್ ಹೋಗುವ ಮುನ್ನ (ಅವರು ಆ ಪುಸ್ತಕದ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿ ಸುಮಾರು ಸಮಯವೇ ಕಳೆದು ಹೋಗಿತ್ತು- publicity ಗೆಲ್ಲ ಹೇಳಿ ಮಾಡಿಸಿದ್ದು ಫೇಸ್ ಬುಕ್) ಬಿಡುಗಡೆ ಮಾಡಿ ಪ್ಲೀಸ್ ಅಂದೆ. ಹೇಳಿದ ಸಮಯಕ್ಕೆ ಪ್ರಕಾಶಕರು ಪುಸ್ತಕ ರೆಡಿ ಮಾಡಿ ಕೊಡಲಿಲ್ಲವಾದ್ದರಿಂದ ಬೇಜಾರು ಪಟ್ಟುಕೊಂಡು ಅವರದ್ದೆ ಆದ 'ಪಂಜು ಪ್ರಕಾಶನ' ಪ್ರಾರಂಭಿಸಿ ಕೊನೆಗೂ ಪುಸ್ತಕ ನಿನ್ನೆ ಬಿಡುಗಡೆ ಆಯ್ತು.

ಯಥಾಪ್ರಕಾರ - ನಾನು ನಟರಾಜು ಗೆ ಖಂಡಿತ ಪುಸ್ತಕ ಬಿಡುಗಡೆ ದಿನ ಹಾಜರ್ ಆಗುತ್ತೇನೆ ಅಂದರೂ- ಅದರ ಹಿಂದಿನ ದಿನ ಬೇಡ ಸೆಖೆ, ಅಷ್ಟು ದೂರ ಹೋಗಬೇಕಾ, ಆಮೇಲೆ ಸಾರಿ ಅಂದ್ರಾಯ್ತು ಅಂದುಕೊಳ್ಳುತ್ತಿರುವಾಗಲೇ ಮುನ್ನ (ಸುಮತಿ ದೀಪಾ ಹೆಗ್ಡೆ ಅಂತ ಫೇಮಸ್ ಆನ್ facebook) ಎಸ್ ಎಮ್ ಎಸ್ ಮಾಡಿದಳು. ಬೆಂಗಳೂರಿಗೆ ನಿಮ್ಮ ಮನೆಗೆ ಬರಬೇಕಾದ್ರೆ ಯಾವ ಸ್ಟಾಪ್? ಟಿಕೆಟ್ ಸಿಕ್ಕಿದ್ರೆ ಬರುತ್ತೇನೆ. ಆದ್ರೆ ನಟರಾಜು ಗೆ ಇದು ಸರ್ಪ್ರೈಸ್ ಇರಲಿ ಅಂತ.( ನಟರಾಜು ಗೆ ನಾನು ಇಲ್ಲಿ mom ಆಗ್ತಾ ಅಲ್ಲಿ ಮುನ್ನ /ಸುಮತಿ ತಂಗಿಯಾಗಿಬಿಟ್ಟಿದ್ದಳು). ನಾನು ಸರಿ ಅಂದು, ಆ ಮೇಲೆ ನಾನು ಸಿಕ್ಕಾಪಟ್ಟೆ ಎಗ್ಸೈಟ್ ಆಗಿ ಬೇಗ ಬೇಗ ನನ್ನ ಫೇವರಿಟ್ ಸೀರೆ ಇಸ್ತ್ರಿ ಮಾಡಿಕೊಂಡೆ. ಸೋ ನಾನು ಬಿಡುಗಡೆ ಸಮಾರಂಭಕ್ಕೆ ಹೋಗಿದ್ದಕ್ಕೆ ಅದರ ಶ್ರೇಯ ಖಂಡಿತ ಮುನ್ನಳಿಗೆ ಸೇರುತ್ತೆ.ನನ್ನ ಸಂಭ್ರಮ ನೋಡಿ ಶ್ರೀಕಾಂತ ಗೆ ಅಚ್ಚರಿಯೋ ಅಚ್ಚರಿ, ಅದೂ ಮುನ್ನ ಉಡುಪಿಯಿಂದ ಈ ಕಾರ್ಯಕ್ರಮಕ್ಕೆ ಬರುತ್ತಾಳೆಂದು ಅವರಿಗೆ ಕೌತುಕ)

ನಾವು ಅಂದರೆ 'ನಾನು- ನಿಹಾ- ಮುನ್ನಾ 'ಬೇಗನೆ ತಲುಪಿದ್ವಿ. ನಟರಾಜು ಸ್ವತ: ನಮ್ಮನ್ನು ಎದುಗೊಂಡರು. ಫೇಸ್ ಬುಕ್ ಚಿತ್ರದಲ್ಲಿ ನೋಡಿದ್ದ ನನಗೆ ಅವರನ್ನು ಎದುರಿಗೆ ನೋಡಿದಾಗ ತಕ್ಷಣಕ್ಕೆ ಗುರುತು ಸಿಗಲಿಲ್ಲ :-(. ಕೆಲ ಹೊತ್ತು ಬದರಿನಾಥ ಪಲವಳ್ಳಿ (ಅವರು ಸಿಕ್ಕಿದ್ದು ಸಕತ್ ಖುಶಿ ನನ್ನ ಬ್ಲಾಗ್ ಅನ್ನು ಅವರು 4 ವರ್ಷಗಳಿಂದಲೂ ಓದುತ್ತ ಪ್ರೋತ್ಸಾಹಿಸುತ್ತ ಬಂದಿದ್ದಾರೆ, ಹಬ್ಬ ಹರಿದಿನಗಳಲ್ಲಿ ಫೋನ್, ಅಪರೂಪಕ್ಕೊಮ್ಮೆ ಎಸ್ ಎಮ್ ಎಸ್ ಮಾಡುತ್ತಿದ್ದೆವಾದರೂ ಇದು ನಮ್ಮ ಮೊದಲ ಭೇಟಿ), ಚೇತನಾ ತೀರ್ಥಹಳ್ಳಿ, ಜಯಪ್ರಕಾಶ್ ಇ., ಅತ್ರಾಡಿ ಸುರೇಶ ಹೆಗ್ಡೆ, ಉಮೇಶ ದೇಸಾಯಿ, ಶಿವು, ಸುನಿತಾ ಮಂಜುನಾಥ, ಉಷಾ ಕಟ್ಟೆಮನೆ- ಇವರ ಜತೆ ಮಾತನಾಡಿದೆ.  ಖುಶಿ ಮತ್ತು ಅಚ್ಚರಿಯ ಸಂಗತಿಯೆಂದರೆ ಮುನ್ನಳಿಗೆ ಎಷ್ಟೊಂದು ಪರಿಚಯದವರು ಅಂತ. ಹಾಗೇ ಹೇಳಿದೆ ಕೂಡ. ಅದಕ್ಕೆ ಅವಳು ನಮ್ಮದು ಫೇಸ್ ಬುಕ್ ನಲ್ಲಿ ಕನ್ನಡ ಬ್ಲಾಗಿಗರು ಅಂತ ಒಂದು ಪೇಜ್ ಇದೆ ಅದರ ಮೂಲಕ ಇವರೆಲ್ಲರ ಪರಿಚಯ ಅಂತ ಹೇಳಿದಳು.

ನಿಹಾ ಕೆಲವು ಫೋಟೊ ತೆಗೆದಳು- ಕಾರ್ಯಕ್ರಮದ್ದು ಹಾಗೆ ನಂತರದ್ದು. ಅವಳ ಫೇವರಿಟ್ ಕ್ಯಾಮರಾ ಹಳ್ಳಿಗೆ ನಮ್ಮ ಪ್ರಾಜೆಕ್ಟ್ ಆಫಿಸ್ ಗೆ ಹೋಗಿದೆ ಆದ್ದರಿಂದ ಈ ಕ್ಯಾಮರದಲ್ಲಿ ಅವಳಿಗೆ ಖುಶಿ ಅನ್ನಿಸುವಂತಹ ಯಾವ ಚಿತ್ರಗಳು ಬಂದಿಲ್ಲ ಅನ್ನುವ ಬೇಜಾರು. ಇವತ್ತು ಅವಳಿಗೆ ಪರೀಕ್ಷೆ ಆದರೂ ನಿನ್ನೆ ನಮ್ಮೊಂದಿಗೆ ಬಂದಿದ್ದಾಳೆ...i am too bored to read..ಅಂತ

 ಕಾರ್ಯಕ್ರಮ ಸರಿಯಾದ ಸಮಯಕ್ಕೆ ಪ್ರಾರಂಭ ಆಗದಿರುವುದು ನನಗೆ ಕಿರಿಕಿರಿ ಎನ್ನಿಸಿತು. ಚೇತನಾ ಪುಸ್ತಕದ ಬಗ್ಗೆ ಅದರ ಕುತೂಹಲ ಕಾಪಾಡಿಕೊಂಡೇ ಅದರ ಬಗ್ಗೆ ಚುಟುಕಾಗಿ ಮಾತಾಡಿದ್ದು ಖುಶಿ ಅನ್ನಿಸ್ತು. ಕಾಂಪಿಯರ್ (ಹೆಸರು ನೆನಪಾಗ್ತಾ ಇಲ್ಲ) ಕೂಡ ಚುಟುಕಾಗಿ ಮಾತಾಡಿ ಸಮಾರಂಭ ನಡೆಸಿಕೊಟ್ಟರು ಇಲ್ಲದಿದ್ದರೆ ಕೆಲವೊಮ್ಮೆ ಅವರ ದನಿಗೆ ಅವರೇ ಮಾರುಹೋಗಿ ಬೇಕಾದ್ದನ್ನು ಬೇಡದನ್ನು ಮಾತಾಡುವವರನ್ನು ಕೇಳಿದ್ದೇನೆ. ಬಾನಂದೂರು ಕೆಂಪಯ್ಯನವರು ಹಾಡಿದ 'ಬಿದಿರು' ಮತ್ತು 'ಹಂಸಾ' ಜನಪದ ಸೊಗಡಿನ ಪದ್ಯಗಳು ತುಂಬ ಹಿಡಿಸಿದವು. ಗೋಪಾಲ ವಾಜಪೇಯಿವರು ಓದಿದ ಅವರೇ translate ಮಾಡಿದ ಕಬೀರದಾಸರ ದೋಹಾಗಳಲ್ಲಿ ಕೆಲವು ಇಷ್ಟ ವಾದವು. ಜರಗನಹಳ್ಳಿ ಶಿವಶಂಕರ್ ಅವರ ಚುಟುಕುಗಳು ತುಂಬಾ ಹಿಡಿಸಿದವು ನನಗೆ.

ಕಾರ್ಯಕ್ರಮದ ನಂತರ ಉತ್ತರ ಭಾರತದ ನೃತ್ಯಗಳ ಕಿರುಚಿತ್ರ ನಿಹಾಗೋಸ್ಕರ ಕೂತು ನೋಡಿದೆ. ಹೊರಗಡೆ ಬಂದು ಮಂಜುಳಾ ಬಬಲಾದಿ(ಅವರ ಜತೆ ಫೋಟೊ ಶೂಟ್ ಕುಡ ಆಯ್ತು thanks to Niharika.) ಅದಾದ ನಂತರ ಪರೇಶ ಸರಾಫ್, ಶ್ರೀವತ್ಸ್ ಕಂಚಿಮನೆ, ಪ್ರಶಸ್ತಿ  ಮತ್ತೆ ಕೆಲವರ ಹೆಸರು ನನಗೆ ಮರೆತು ಹೋಯ್ತು ಮುನ್ನಳ ಮೂಲಕ ಪರಿಚಯವಾದರು. 

ನಾವು ರಿಕ್ಷಾ ಹತ್ತಿ ಕುಳಿತ ನಂತರ ಒಬ್ಬರು ಬಂದು ರಿಕ್ಷಾ ಗಟ್ಟಿ ಹಿಡಿದು ನಿಂತು ಸುಮ್ಮನೆ ನಮ್ಮನ್ನು ನೋಡ್ತಾ ಇದ್ರು. ನಾನು 'ಹೇಳಿ' ಎಂದೆ. ಅವರು ಆವಾಗ್ಲಿಂದ ನಿಮ್ಮನ್ನು ಮಾತನಾಡಿಸಲು ಕಾಯ್ತಾ ಇದ್ದೆ,ನೀವು ಬ್ಯುಸಿ ಇದ್ರಿ,  ಪುಸ್ತಕದ ಒಳ ಚಿತ್ರಗಳನ್ನು ಈ ಪುಟ್ಟಿ ಬರೆದಿದ್ದ ಅಂತ ನಿಹಾ ಕಡೆ ತೋರಿಸುತ್ತ ಕೇಳಿದ್ರು. ನಾನು ಹೌದು ಅಂದೆ. ಅಭಿನಂದಿಸಕ್ಕೆ ಬಂದೆ ಅಂದ್ರು . ನಿಹಾ ನಾನು ಒಟ್ಟಿಗೆ ಥ್ಯಾಂಕ್ಸ್ ಹೇಳಿದ್ವಿ. :-) ಅವರ ಹೆಸರು ಶ್ರೀ ಶ್ರೀ ಅಂತೆ. ಅವರು ಹೈದರಾಬಾದಿನಿಂದ ಬಂದ್ರಂತೆ. ಹಾಗೆ ಸುನಿತಾ ಮಂಜುನಾಥ್ ಎಲ್ಲ ಮೈಸೂರಿನಿಂದ ಒಂದು ಟೀಮ್ ಮಾಡಿಕೊಂಡು ಬಂದಿದ್ರು. ಹಾಗೆ ಉಡುಪಿ, madras, krishnagiri, mysore ನಿಂದೆಲ್ಲ ಬಂದಿದ್ದು ನೋಡು ಖುಶಿ ಅನ್ನಿಸ್ತು. :-)

ನಟರಾಜುಗೆ ಊಟಕ್ಕೆ ಕರೆದೆವು ಆದರೆ ಅವರು 'ಇಲ್ಲಿನ ಕೆಲಸ ಗಳನ್ನೆಲ್ಲ ನಿಪಟಾಯಿಸಿ ಬರೋದು ಲೇಟ್ ಆಗುತ್ತೆ, ಆದರೆ ಸಂಜೆ ಮನೆಗೆ ಬರ್ತೇನೆ ಮಾಮ್' ಅಂದಾಗ ಹೂಂ ಅಂದು ನಾವು ಮೂರು ಜನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ತಡಕಾ ಗೆ ಹೋಗಿ ಊಟ ಮಾಡಿ ಮನೆಗೆ ಬಂದು ಫ್ಯಾನ್ ಕೆಳಗಡೆ ಅಡ್ಡಾದೆವು. ನಾನು ಮುನ್ನ ಸುಮ್ಮನೆ ಲೋಕಾಭೀರಾಮದ ಮಾತಾಡುತ್ತಿದ್ದರೆ ನಿಹಾ ಸಣ್ಣ ನಿದ್ದೆ ಹೊಡೆದು ನಮಗೋಸ್ಕರ ಟೀ ಮಾಡಿದಳು. ಅಷ್ಟರಲ್ಲೆ ನಟರಾಜು ಫೋನ್ ಮಾಡಿ ನಮ್ಮ ಮನೆಗೆ ಬರಲು ವಿಳಾಸ ಕೇಳಿದರು. ಸಂಜೆ ಬಂದು ರಾತ್ರಿ ನಮ್ಮೊಂದಿಗೆ ಊಟ ಮಾಡಿ ಹೊರಟರು. ಶ್ರೀಕಾಂತ ಮಾಲವಿಕಾ ಕೂಡ ನಟರಾಜು ಅವರನ್ನು ಭೇಟಿ ಮಾಡಿದ ಹಾಗಾಯ್ತು.

Dear Nataraju: ಪುಸ್ತಕದ ಟೈಟಲ್ ತುಸು ಉದ್ದ ಆಯ್ತು. ಪ್ರಿಂಟ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿಲ್ಲ. ನಿಹಾ ನ illustrations ತುಂಬಕ್ಕೆ ಎಳೆದು ವಿರೂಪವಾಗಿವೆ ಅನ್ನಿಸ್ತು. ಎಲೆಮರೆಕಾಯಿ ಇನ್ನು ಓದಬೇಕಷ್ಟೆ. ಅದೊಂದು ಒಳ್ಳೆ initiative. ಕವರ್ ಪೇಜ್ ಎರಡೂ ಇಷ್ಟ ಆಯ್ತು. ಪಂಜು ಪ್ರಕಾಶನದ ಲೋಗೊ ಅಷ್ಟು ಇಷ್ಟ ಆಗಲಿಲ್ಲ...
ಇನ್ನೂ ಒಳ್ಳೆಯದನ್ನು ಬರೀರಿ. ಅತ್ಯಂತ ಚಿಕ್ಕ ಅವಧಿಯಲ್ಲಿ ಸಿಕ್ಕಿರುವ ಖ್ಯಾತಿಗೆ ಗಾಳಿಯಲ್ಲಿ ಹಾರಾಡಬೇಡಿ ಅಂತ ಹೇಳುತ್ತಾ
malathi mom.....
:-)
ಕೆಳಗಡೆ ನಿಹಾ ಕ್ಲಿಕ್ಕಿಸಿದ ಕೆಲವು ಫೋಟೊಗಳು
ಕಾರ್ಯಕ್ರಮಕ್ಕೆ ಹೊರಡುವ ಮುನ್ನ : ಶ್ರೀಕಾಂತ ಕ್ಲಿಕ್ಕಿಸಿದ್ದು

ಪುಸ್ತಕ ಬಿಡುಗಡೆ ಮಾಡಿದವರು ಶ್ರೀ ಗೋಪಾಲ ವಾಜಪೇಯಿ
ಪುಸ್ತಕದ ಕುರಿತು ಮಾತಾಡುತ್ತಿರುವ ಚೇತನಾ ತೀರ್ಥಹಳ್ಳಿ

ಪಂಜು ಅಂತರ್ಜಾಲ ತಾಣದ ವಿಶಿಷ್ಟ ಬಿಡುಗಡೆ ಮೊಬೈಲ್ ಮೂಲಕ :-)

ಅವರಿಬ್ಬರೂ ಚಂದದ ಸ್ಮೈಲ್ ಕೊಡುತ್ತಿದ್ದರೆ i was more interested in Manjula's bangle and earrings :-)

Cloudy sky and tree captured by Niharika at Suchitra film society

Nataraju with Mom and Sis

Niharika and Nataraju: ನನ್ನ ಕ್ಲಿಕ್ :-)

talking about  baul ಸಂಗೀತ/ hilsa fish in Bengali preparation/ ನನ್ನ ತೇಜಸ್ವಿ etc etc with rayaru and Munna: ನನ್ನ ಕ್ಲಿಕ್
A pic after sharing a humble meal with us

ಬಿಡುಗಡೆಯಾದ ಪುಸ್ತಕಗಳ ಹೆಸರು
ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ...ಮತ್ತು ಖುಷಿ ನಗರಿಯ ಆತನ ನೆಲ್ಮೆಯ ಗೆಳತಿಯೂ....ಪಂಜು ಪ್ರಕಾಶನ..Rs. 180/- ಕವರ್ ಪೇಜ್ ಡಿಸೈನ್ ದಯಾನಂದ ಟಿ.ಕೆ
ಎಲೆಮರೆಕಾಯಿ....ಸಂಪುಟ-೧......ಸಂಸ್ಕೃತಿ ಪ್ರಕಾಶನ ಬಳ್ಳಾರಿ....Rs. 160/- ಕವರ್ ಪೇಜ್ ಡಿಸೈನ್...ವಿ.ಆರ್. ಕಾರ್ಪೆಂಟರ್
ಪುಸ್ತಕಗಳು total kannada ದಲ್ಲಿ ಲಭ್ಯ.( i think it is in Jayanagar 3 rd block..).and also at ಅಂಕಿತ ಪುಸ್ತಕ ಮತ್ತು ಆಕೃತಿ ಪುಸ್ತಕ...

13 comments:

Badarinath Palavalli said...

ನನಗೂ ಅಂದು ತಾವು, ನಿಹಾರಿಕಾ ಮತ್ತು ದೀಪಾಜೀ ಸಿಕ್ಕಿದ್ದು ತುಂಬಾ ಸಂತಸದ ಸಂಗತಿ. ಇನ್ನೂ ಇನ್ನೂ ಇನ್ನೂ ಮಾತನಾಡುವ ಉಮೇದಿ ನನಗಿತ್ತು. ಯಾಕೋ ಮೂರು ಜನರು ಸದ್ದಿರದೇ ಕೂತು ಬಿಟ್ಟಿರಿ!

ನಿಮ್ಮ ಬ್ಲಾಗಿನ ಹೂರಣವೇ ಅಂತದು. ನಾನು ನಾಲ್ಕೇನು ನಲವತ್ತು ವರ್ಷ ನಿಮ್ಮ ಭಿಮಾನಿ.

ನಟಣನ್ನ ಕಾರ್ಯ ಕ್ರಮ ಆಪ್ತವಾಗಿತ್ತು.

Srikanth Manjunath said...

ಸ್ನೇಹಕ್ಕೆ ದಿಕ್ಕುಗಳನ್ನೂ ಬೆಸೆಯುವ ಶಕ್ತಿ ಇರುತ್ತದೆ. ರಕ್ತ ಸಂಬಂಧ ಹರಿಯೋಲ್ಲ ಅಂತಾರೆ. ಆದರೆ ಅದಕ್ಕಿಂತ ಮಿಗಿಲಾದದ್ದು ಈ ಅಕ್ಷರದ ಸಂಬಂಧ. ಒಂದು ಸಮಾರಂಭದ ಚುಟುಕ ವಿವರಣೆ ಕೊಡುತ್ತಲೇ ಅಂತರಂಗದ ಮೃದಂಗ ನವಿರಾಗಿ ರಾಗ ಹಾಡಿದ ಒಂದು ಉತ್ತಮ ಲೇಖನ ಇದು. ಪುಸ್ತಕದ ಬಗ್ಗೆ ವಿವರಣೆ ಕೊಡುತ್ತಲೇ ಅದರ ಒರೆ ಕೋರೆಗಳನ್ನು ಹೇಳುವ ಸುಂದರ ಶೈಲಿ ಇಷ್ಟವಾಯಿತು. ಕಾರ್ಯಕ್ರಮ ತಪ್ಪಿಸಿಕೊಂಡದ್ದು (ಬೆಂಗಳೂರಿನಲ್ಲಿ ಇರದ ಕಾರಣ) ಬೇಸರವಾಯಿತು. ಸಹೋದರಿ ಸುಮತಿ, ಸಹೋದರ ನಟರಾಜು, ನಿಮ್ಮನ್ನು ಹಾಗು ಅನೇಕ ಬ್ಲಾಗ್ ಲೋಕದ ಮಿತ್ರರನ್ನು ಭೇಟಿಯಾಗದ ನೋವು ಕಾಡುತ್ತಿದೆ. ಇನ್ನೊಮ್ಮೆ ಖಂಡಿತ ಅವಕಾಶ ಸಿಗುತ್ತೆ ಅನ್ನುವ ಹಂಬಲ. ಸುಂದರ ಲೇಖನ ಮೇಡಂ ಇಷ್ಟವಾಯಿತು

Radhika said...

pustakada hesarEnu?

nenapina sanchy inda said...

thank you Badari and Srikanth :-) Srikanth nimma bagge naanu sumathi maataDikoMDevu. neevu ooralliradiruvudu avaLe hELidlu.:-)
Radhika i have updated the post with the book details
:-)
malathi S

Paresh Saraf said...

ತಮ್ಮ ಭೇಟಿ ಬಹಳ ಖುಷಿ ಕೊಟ್ಟಿತು :)

nenapina sanchy inda said...

same here Paresh! thank you
:-)
malathi S

Sudeepa ಸುದೀಪ said...

oh...god...today i read this, after Nataraju told me, malathi mom write something about the function, and told u are very famous, and he is a jealous creature toooooooo :-P

ಜಲನಯನ said...

ಛೇ, ನನಗೆ ಮಿಸ್ ಆಯ್ತು... ಆದರೂ ನಿಮ್ಮ ಮೇಲೆ ನನಗೆ ವಿಶೇಷ ಕೋಪಾ...:( :( ಮಾಲತಿಜಿ... ಹಾಗೇ ಈಗ ಆ ಬಿರುಗಾಳಿಗೆ ನಟರಾಜನ್ನೂ ಸೇರ್ಸಿತೀನಿ... ನನ್ನ ಎರಡೂ ಪುಸ್ತಕ ಬಿಡುಗಡೆಗೆ ಬರಲಿಲ್ಲ...!!!!
ಹೋಗ್ಲಿ ಬಿಡಿ...
ನಟರಾಜ್ ಬಗ್ಗೆ ವಿಶೇಷ ಅಭಿಮಾನ..ಮೂರು ಕಾರಣಕ್ಕೆ
ಒಂದು- ನನ್ನದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ
ಎರಡು- ವಿಜ್ಞಾನಿಯಾಗಿರೋದು...ನಾನೂ ಅವರ ಹಾಗೆ
ಮೂರು-ದೂರ ಇದ್ದು ಕನ್ನಡ ಸೇವೆಯಲ್ಲಿ ಅದರಲ್ಲೂ ’ಎಮಕಾ’ ಪ್ರಾರಂಭಿದ್ದಕ್ಕೆ
ಸುಂದರ ಲೇಖನ ಮಾಲತಿ...ಅಕ್ಕಯ್ಯಾ....

Anonymous said...

hmmm.....tiLeetu maalathi. khushiyaaytu :-)
Anjali Ramanna

nenapina sanchy inda said...

thanks Munna (sumathi deepa hegde) lots more activity because of this link in FB..:-)
i am not famous...pls tell Nataraju :-)
ms

nenapina sanchy inda said...

Azad Bhaiyya: nimge kOpa suit aagallaa. :-)
arrere Anjali Ramanna what a pleasant suprise. thanks for peeping in
love
:-)
ms

shivu.k said...

ಮೇಡಮ್,
ಕಾರ್ಯಕ್ರಮದ ವಿವರಣೆ ಮತ್ತೊಮ್ಮೆ ಮೆಲುಕು ಹಾಕಿದಂತಾಯ್ತು. ಬೆಳಗೆರೆ ಬುಕ್ಸ್ ನಲ್ಲಿ ನೋಡಿದ ನಂತರ ಎರಡನೇ ಬಾರಿ ನಿಮ್ಮ ಬೇಟಿ ಖುಷಿ ಕೊಟ್ಟಿತು.

nenapina sanchy inda said...

thanks Shivu...namagoo khushi aaytu alli nimmannu nODi...
:-)
malathi S