April 18, 2013

ಸಂಚಿಯಿಂದ ತೆಗೆದ ನೆನಪು- 10- ನಾನಿ ಹೇಳಿದ ಕತೆ

ನಿನ್ನೆ ರಾತ್ರಿ ಬಾಯಾರಿಕೆಯಾಗಿತ್ತು. ಆದರೆ ಸೋಮಾರಿತನದ ಅಡಿಗೆ ಮನೆ ತನಕ ಯಾರು ಹೋಗ್ತಾರೆ ಅಂತ ಸುಮ್ಮನಾದೆ. ಬೆಳಿಗ್ಗೆ ತಿಂಡಿ ತಿನ್ನುವಾಗ- (ಇವತ್ತು ಬನ್ಸ್ & ತೊವ್ವೆ* .) ನಾನಿ ನಾನು ಚಿಕ್ಕಂದಿನಲ್ಲಿ ಹೇಳಿದ್ದ ಈ ಕತೆ ಮನೆಯವರೊಂದಿಗೆ ಶೇರ್ ಮಾಡಿದೆ. ಅವರಿಗೆ ಇಷ್ಟ ಆಯ್ತು so sharing ನಿಮ್ಜತೆ

ಒಬ್ಬ ಮನುಷ್ಯನಿಗೆ ಮಧ್ಯರಾತ್ರಿ ನಂತರ ಬಾಯಾರಿಕೆಯಾಗಿ ಎಚ್ಚರ ಆಯಿತಂತೆ. ಸೋಮಾರಿತನ, ಏಳದೇ ಅಲ್ಲೇ ಪುನ: ನಿದ್ದೆ ಹೋದನಂತೆ. ಆದರೆ ಅವನ ಪ್ರಾಣ/ಜೀವ ಬಾಯಾರಿಕೆ ತಾಳಲಾಗದೆ ಅವನ ದೇಹವನ್ನು ಬಿಟ್ಟು ನೀರಿನ ಜಾಡನ್ನು ಹುಡುಕಿ ಹೋಗುತ್ತಂತೆ. ಒಂದಾದ ಮೇಲೆ ಒಂದು ಮನೆ ಒಳ ಹೊಕ್ಕು , ಎಲ್ಲೂ ನೀರು ಸಿಗದೆ ಸುಮಾರು ದೂರ ಇರುವ ಒಂದು ಮನೆ ತಲುಪುತ್ತಂತೆ. ಕಡೆಗೆ ಒಂದು ಮನೆಗೆ ಹೋಗಲಿಕ್ಕೂ ಅಲ್ಲಿನ ಒಬ್ಬ ಹೆಂಗಸು ಗಡಿಗೆಯ ಮುಚ್ಚಳ ತೆಗೆದು ನೀರು ಕುಡಿಯುತ್ತಿದ್ದಾಗ ಈ ಮನುಷ್ಯನ ಪ್ರಾಣ ಆ ಗಡಿಗೆ ಯೊಳಗೆ ಹೊಕ್ಕಿತು. ಹೊಕ್ಕ್ಕಿದ ತಕ್ಷಣ ಈ ಹೆಂಗಸು,ಅವಳು ನೀರು ಕುಡಿದು ಮುಗಿದಿದ್ದರಿಂದ ಆ ಗಡಿಗೆಗೆ ಮುಚ್ಚಳ ಹಾಕಿ ಬಿಟ್ಟಳು. ಪ್ರಾಣ ಒಳಗಡೆ.

ಇಲ್ಲಿ ಮರುದಿನ ಬೆಳಿಗ್ಗೆ ಆ ಮನುಷ್ಯನ ಮನೆಯವರು ಅವನು ಎಷ್ಟು ಹೊತ್ತಾದರೂ ಏಳದೆ ಇದ್ದದ್ದು ನೋಡಿ ಬಳಿ ಬಂದು ನೋಡಿದರೆ ಅವನು ಉಸಿರಾಡ್ತಾ ಇರಲಿಲ್ಲ. ಅಳುತ್ತ ಅವನ ಅಂತ್ಯಕ್ರಿಯೆಗೆ ಸಜ್ಜಾದರು. ಇನ್ನೇನೂ ಸ್ಮಶಾನ ತಲುಪಬೇಕು, ಅನ್ನುವಷ್ಟರಲ್ಲಿ , ಆ ಹೆಂಗಸಿನ ಮನೆಯವರು ನೀರಿನ ಗಡಿಗೆಯ ಮುಚ್ಚಳ ತೆಗೆದಿದ್ದರಿಂದ, ಆ ಪ್ರಾಣ ಬೇಗ ನೀರಿಂದ ಹೊರ ಬಂದು ಈ ಮನುಷ್ಯನ ದೇಹ ಸೇರಿಕೊಂಡಿತು. ಚಟ್ಟದಲ್ಲಿ ಒಯ್ಯುತ್ತಿದ ಅವನನ್ನು, ದಢಕ್ಕೆಂದು ಅವನು ಎದ್ದ ರಭಸಕ್ಕೆ, ಹೊತ್ತೊಯ್ಯುವವರು ಚಟ್ಟವನ್ನು ಅಲ್ಲೇ ಬಿಸಾಕಿ ಓಡಿ ಹೋದರಂತೆ
ಇಷ್ಟೆ ಕತೆ. ಸೊ ಯಾರಿಗಾದ್ರೂ ರಾತ್ರಿ ನೀರಡಿಕೆಯಾದ್ರೆ ದಯವಿಟ್ಟು ನೀರು ಕುಡಿಯಿರಿ
:-)

ಬನ್ಸ್ ಮತ್ತು ತೊವ್ವೆ: ನಾನು ಬನ್ಸ್ ರೆಡಿ ಮಾಡಬೇಕಾದ್ರೆ ನೀಹಾ ಅಡಿಗಡಿಗೆ ಅಡಿಗೆ  ಮನೆಗೆ ಬಂದು 'ಅಮ್ಮ ಖಾನಾ 'ಬನ್' ಗಯಾ ಕ್ಯಾ ಅಂತ ಪನ್ನಾಡ್ತಾ ಇದ್ಲು.

ಹಾಗೇ ನಿನ್ನೆ ಕ್ಯಾರಟ್ ಹಲ್ವಾ ಮಾಡಿದ್ದೆ. ನಿಹಾ ನನಗೆ ಕ್ಯಾರೆಟ್ ತುರಿದು ಕೊಟ್ಟಳು, ಆಮೇಲೆ ಥ್ಯಾಂಕ್ಸ್ ಹೇಳಬಾರದು, ಬೇರೇನೋ ಹೇಳಬೇಕು ಅಂದ್ಲು .ನನಗೆ ಅರ್ಥ ಆಗಲಿಲ್ಲ . ಮಲವಿಕಾಗೆ ಅರ್ಥವಾಯ್ತು .I am 'grate'ful to you ಅನ್ನಬೇಕಿತ್ತಂತೆ. ಸೋ ಇವು ನಮ್ಮ ಅಡಿಗೆ ಮನೆ ಪನ್ ಗಳು..
ಅದ್ಸರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಟಲ್ ಗಳಲ್ಲಿ ಬನ್ಸ್ ಸಿಗುತ್ವೆ. ನಾವು ಆರ್ಡರ್ ಮಾಡುವಾಗ ಒಂದು ಪ್ಲೇಟ್ ಬನ್ಸ್ ಅಂತೇವಲ್ಲ ಅವರು ಕೊಡೋದು  ಪ್ಲೇಟ್ ನಲ್ಲಿ ಒಂದೆ ಬನ್... ತಮ್ಮ ಫೋನ್ ಮಾಡಿ ಏನ್ ಮಾಡ್ತಾ ಇದ್ದೀಯಾ ಅಂದ್ರೆ 'ಬನ್ಸ್' ತಿನ್ನುತ್ತಾ ಇದ್ದೀನಿ ಅಂತೇನಲ್ಲ when i am eating 'a' bun- ಸೋ ಈ ಬನ್ಸ್in plural ಫಂಡಾ ಅರ್ಥ ಆಗಲಿಲ್ಲ...:-)

10 comments:

Anonymous said...

Kathe odi ondu bottle neeru tandu bed hatra itte:) Nimma buns photo nodi nanna maglu it looks yummy andlu :)

Srikanth Manjunath said...

:-) ನಿಮ್ಮ ಲೇಖನ ಓದುವಾಗ ನೀರು ಕುಡಿಯುವ ಅಥವಾ ಬಾಯಾರುವ ಸಮಸ್ಯೆ ಇರೋದಿಲ್ಲ. ಕಾರಣ ಒಂದು ತಿಂಡಿ ತಿನಿಸುಗಳ ಬಗ್ಗೆ ಲೇಖನವಾದರೆ ಬಾಯಲ್ಲಿ ನೀರೂರುತ್ತಿರುತ್ತದೆ..ಪ್ರವಾಸಿ ಲೇಖನ ಅಥವಾ ಬೇರೆ ವಿಷಯಗಳ ಬಗ್ಗೆ ಆದರೆ ಕುತೂಹಲ ಹಸಿವು ನೀರಡಿಕೆಯನ್ನು ಮರೆಸುತ್ತದೆ.
ಯಾವ ವಿಷಯವನ್ನಾದರೂ ಕೌತುಕ ಭರಿತವಾಗಿ ಹೇಳುವ ಬರೆಯುವ ನಿಮ್ಮ ಶೈಲಿಗೆ ಶರಣು. ಬಾಯಾರಿದವನಿಗೆ ನೀರು ಸಿಕ್ಕಷ್ಟೇ ಖುಷಿಯಾಗಿದೆ ಈ ಲೇಖನ.

nenapina sanchy inda said...

haha me and my daughter Malavika had a laugh reading ur comment.
what about carrot halwa?? this q is for ur daughter
:-) thank you
malathi S

nenapina sanchy inda said...

in other words 'oasis' aa Srikanth Manjunath avare??
:-) dhanyavadagaLu
ms

Radhika said...

Hey how did you get it so fluffy? When I make, it will be like flat poori :-(. Pl. share the recipe on your cookery blog.

Digital Eyes said...

Poor fellow! she should have thought of something else other than water :-)

nenapina sanchy inda said...

Radhika : sent u the link :-)
Rajesh!!!!!!!!!!! :-) :-)
ms

Anonymous said...

Mal indu photo sametha nimma lekhana odide tumba maja banthu. Moral of the story tumba chennagidhe ha ha ha luvd ur sense of humour.

ved

vanamala said...

ಮಾಲತಿಯವರೇ

ಬನ್ ಅಂದ್ರೆ bread/bun ಇರತ್ತಲ್ಲಾ ಅದಂತೆ. ಇದು ಬನ್ಸ್ ಅಂತೆ (singular). ನಂಗೂ ಇದು ಮೊದಲು ಗೊತ್ತಿರ್ಲಿಲ್ಲ. ಈಗೀಗ ಮಕ್ಳಿಂದ ಕಲ್ತಿದ್ದು.

nenapina sanchy inda said...

Veda- Vanamala
thank you
:-)
malathi S