November 29, 2012

ಚಿಕ್ಕ ಚಿಕ್ಕು ಕತೆ

ಟೀ ಕುಡೀತಾ ಬಾಲ್ಕನಿ ಮೇಲೆ ಕೂತಾಗ ಹೊಳೆದ ಕತೆ>>>>(love you Brooke Bond Red Label chai)
ತೋಟದಿಂದ ಮನೆಗೆ ತಂದಿದ್ದ ದೊಡ್ಡ ಚಿಕ್ಕುಗಳನ್ನು ಮೃದುಲಾ ಹಣ್ಣಾ ಗಿಸಲು ಅವನ್ನು ಅಕ್ಕಿ ಡಬ್ಬಿಯಲ್ಲಿ ಹಾಕುತ್ತ ಇದ್ದಳು. ಅದರಲ್ಲಿ 5 ಕಾಯಿ ಚೆನ್ನಾಗಿ ಹಣ್ಣಾಗಿತ್ತು ಆಗಲೆ. ಅವನ್ನು ಬದಿಗಿಟ್ಟು, ಕೆಲಸದವಳು ಮೆನೆಕೆಲಸ ಮುಗಿಸಿ, ’ಹೋಗಿ ಬರ್ತೇನೆ ಅಕ್ಕ’ ಎಂದಾಗ...’ಈ ಚಿಕ್ಕುಗಳನ್ನು ಮನೆಗೆ ತೆಗೆದುಕೊಂಡು ಹೋಗು’ ಅಂತ ಅವಳ ಕೈಗೆ ಇತ್ತಳು. ಅವಳು ಹೋದ ಮೇಲೆ ಅಲ್ಲೆ ಇದ್ದ ಮೃದುಲಾಳ ತಂದೆ ಅವಳನ್ನು
 ತರಾಟೆಗೆ ತೆಗೆದುಕೊಂಡರು, ’ಅಷ್ಟು ಚೆನ್ನಾಗಿರೋ ರುಚಿಯಾಗಿರೋ ಹಣ್ಣನ್ನು ಆ ಕೆಲ್ಸದವಳಿಗೆ ಕೊಡ ಬೇಕಿತ್ತೆ? ಎದುರು ಮನೆಯ ಛಾಯಾಪತಿ ಮನೆಗೆ ಕಳಿಸಬಹುದಿತ್ತು.’
ಮೃದುಳಲಿಗೆ ಈಗ ಆಲೋಚನೆ, ಅಲ್ಲ ಆ ಛಾಯಾಪತಿಯವರ ಕುಟುಂಬ ಅಮೇರಿಕಾದಿಂದ ಬಂದವರ ತರಹ ಆಡ್ತಾರೆ, ಮಾತು ಮಾತಿಗೆ ರಾಂಬುಟಾನ್, ಸ್ಟ್ರಾಬೆರ್ರಿ, ರಾಸ್ಪಬೆರ್ರಿ ಅಂತಾರೆ ವಿನ ಭಾರತ ದೇಶದ ಹಣ್ಣಿನ ಹೆಸರು ಸುದ್ದಾ ಉಸುರಿಸಲ್ಲ. ಅವರಿಗೆ ಚಿಕ್ಕು ಕೊಟ್ಟರೂ ಅದೂ ಗ್ಯಾರಂಟಿ ಕಸದ ಬುಟ್ಟಿಗೆಸೇರುತ್ತೆ ಅಂತ ಅವಳಿಗೆ ಗೊತ್ತು, ಆದರೆ ಯಾರಿಗೂ ಎದುರು ಮಾತಾಡುವ ಸ್ವಭಾವ ಮೃದುಲಾಳದಲ್ಲ್ಲ. ’ಅಲ್ಲ ಅವರು ಉಳ್ಳವರು ಹಣ್ಣನ್ನು ಕಾಸುಕೊಟ್ಟು ತಂದುಕೊಂಡು ತರುತ್ತಾರೆ. ನೂರಾರು quantityಯಲ್ಲಿ ನಮ್ಮ ತೋಟದಲ್ಲಿ ಬೆಳೆದ ಐದು ಚಿಕ್ಕು ಹಣ್ಣನ್ನು ಕೆಲಸದವಳಿಗೆ ಕೊಟ್ಟ ಮಾತ್ರಕ್ಕೆ ಪ್ರಳಯ ಬರುತ್ತಾ??? ಮತ್ತೆ ಮೃದುಲಾ ಅವಳಿಗೆ ಸರಿ ಎನಿಸಿದ್ದನ್ನು ಮಾಡುವವಳೆ ಬಿಡಿ..
ಆದರು ಆಲೋಚಿಸಿ: ನಾವು ಉಳ್ಳವರಿಗೆ ಕೊಡುತ್ತೇವಲ್ಲವೇ (for eg ಗೃಹ ಪವೇಶ, ಮದುವೆ, ಮುಂಜಿ, ಹುಟ್ಟುಹಬ್ಬ ಇತ್ಯಾದಿಗಳಿಗೆ...ಇಲ್ಲದ್ದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ (ನಾವು= most cases)
ಮೊದಲೇ ಕಂಜೂಸ್ ಎಂದು ಖ್ಯಾತಿ ಪಡೆದ ನಾ ಇನ್ನು ಮುಂದೆ ಯಾರಿಗೂ ಗಿಫ್ಟ್ ಕೊಡಲ್ಲ..:-))))

4 comments:

ಜಲನಯನ said...

ಹಹಹ ಮೊದಲಿಗೆ ಚೆಕ್ಕು ಚೆಕ್ಕು ಕತೆ ಅಂದ ಓದ್ಕೊಂಡು...ಅಲ್ಲಾ ಮತ್ತೆ ಆ ಮಹಾಶಯ ಮಾಲತಿಗೂ ನಾಮ ಇಟ್ಟು ಸಹಾಯ ಮಾಡಿ ಮಗಳು ಅನಾರೋಗ್ಯದಿಂದ ಹಾಸ್ಪಿಟಲ್ ಸೇರಿದ್ದಾಳೆ ಅಂತ ಹಣ ಈಸ್ಕೊಂಡು, ನಮಗೆಲ್ಲಾ ಕೊಟ್ಟಹಾಗೆ...ಕ್ಯಾಶ್ ಆಗದ ಚೆಕ್ ಕೊಟ್ನಾ..??? ಅಂದ್ಕೊಂಡೆ...ಹಹಹಹಹ ಆಮೇಲೇ ಗೊತ್ತಾಗಿದ್ದು...ಅದು ಚಿಕ್ಕು ಅಥವಾ ಸಪೋಟಾ ಬಗ್ಗೆ ಹೇಳಿದ್ದು ಅಂತ... ಹಹಹ ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಅನ್ನೋಹಾಗೆ... ನನ್ನ ಕಥೆ ಆಯ್ತು..

Anonymous said...

Oh Neevu baredirodu satya Mal, nanu sadarnavagi ullavara maduvege, atava inyavude smarambagalige hodre, sumne kai kottu barodashte!!!

Srikanth Manjunath said...

ಉಳ್ಳವರು...ಸುತ್ತಾ ಮುತ್ತ ನೋಡಿ ನಗುವರು..
ಇಲ್ಲದವರು..ಸುತ್ತ ಮುತ್ತ ಹುಡುಕುವರು...ಸೊಗಸಾಗಿದೆ...

Anonymous said...

Ullavara illadavara vishaya gottilla aadre chikku matra Hannina rani....