ಪತ್ತೆದಾರರಿಗೆ ಜೆನೆಟ್ ಹೇಳಿ ಕಳಿಸಿದ್ದಳು. ಆಕೆಯ ಪತಿ 4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಎಷ್ಟೆ ಆಲೋಚನೆ ಮಾಡಿದರೂ ಆತ ಯಾಕೆ ಹಾಗೆ ಮಾಡಿದ ಎಂಬುದೆ ಅವಳಿಗೆ ತಲೆ ತಿನ್ನುತ್ತಿತ್ತು. ಅವರಿಬ್ಬರೂ ಸೇನೆಯಲ್ಲಿದ್ದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸೇವೆಯಿಂದ ನಿವೃತ್ತಿ ಹೊಂದಿದವರು. ಯಾವುದೋ ಒಂದು ಬಾಲ್ ಪಾರ್ಟಿ ಯಲ್ಲಿ ಸಿಕ್ಕಿ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಇಬ್ಬರೂ ಅನಾಥರು. ಹಾಗಾಗಿ ಸ್ವಲ್ಪ ವಯಸ್ಸಾಗಿದ್ದರೂ, ಒಬ್ಬರಿಗೂಬ್ಬರು ಕಂಪೆನಿಯಾಗಬಹುದೆಂದು ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷಗಳ ಬಳಿಕ ಈ ದುರ್ಘಟನೆ. ಇಬ್ಬರಿಗೂ ಹೇಳಿಕೊಳ್ಳ್ಳುವಂತ ಆತ್ಮೀಯರು ಯಾರೂ ಇರಲಿಲ್ಲ. ಒಬ್ಬರಿಗೊಬ್ಬರಿದ್ದರು ಅಷ್ಟೆ.
ಪೋಲಿಸರಿಗೂ ಏನೂ ಹೊಳೆದಿರಲಿಲ್ಲ. ಅದಕ್ಕೆ ಅವಳು ಪತ್ತೆದಾರರನ್ನು ನೇಮಿಸಿದಳು. ಪತ್ತೆದಾರರು ಮನೆಯನ್ನು ಶೋಧಿಸುತ್ತಿದ್ದಾಗ ಅವರ ಕೈಗೆ ಒಂದು ಫೈಲ್ ಸಿಕ್ಕಿತು. ಆ ಫೈಲ್ ಫೋಲ್ಡರ್ ನಲ್ಲಿ ಕೆಲವು ಕಾಗದ ಪತ್ರಗಳ ಜತೆಗೆ ಒಂದು ಚೈನ್ ಹಾಗೂ ಅದಕ್ಕೆ ತಗುಲಿರುವ ಲಾಕೆಟ್ ಸಿಕ್ಕಿತು. ಅವರು ಲಾಕೆಟ್ ಅನ್ನು ಪರಿಶೀಲಿಸುವಾಗ ಅವಳೆ ಮುಂದಾಗಿ,
'ಆ ಚೈನ್ ನನ್ನದು. ಅದರ ಕೊಂಡಿ ತುಂಡಾಗಿದೆಯಂತ ಹಿಂದಿನ ವಾರ ನಾನು ಸೋಮನ್ ಕೈಲಿ ರಿಪೈರಿಗೆ ಅಂತ ಕಳಿಸಿದ್ದೆ. ಆದರೆ ಅದನ್ನು ಫೈಲ್ ನಲ್ಲೇ ಮರೆತಿದ್ದರು ಅನ್ನಿಸುತ್ತೆ'
ಪತ್ತೇದಾರ ಆ ಲಾಕೆಟ್ ಅನ್ನು ಆಚೀಚೆ ತಿರುಗಿಸುವಾಗ ಹೇಗೋ ಆ ಲಾಕೆಟ್ ತೆರೆದುಕೊಂಡಿತು. ಅದರಲ್ಲಿ ಒಂದು ಫೋಟೊ. ಆ ಫೋಟೊದಲ್ಲಿ ನಗುಮುಖದ ಇಬ್ಬರು ಮಕ್ಕಳು-ಡೊಡ್ಡವನು ಹುಡುಗ. ಪುನ: ಜೆನೆಟ್ ಲೇ ಮುಂದಾಗಿ,
'ನನಗೆ ಬುದ್ದಿ ಬಂದಾಗಿನಿಂದ ಅದು ನನ್ನ ಕೊರಳಿನಲ್ಲಿದೆ. ಬಹುಶ: ಅನಾಥಾಶ್ರಮಕ್ಕೆ ಸೇರಿಸುವಾಗ ನನ್ನ ತಂದೆಯೋ ತಾಯಿಯೋ ನನ್ನ ಕೊರಳಿಗೆ ಹಾಕಿರಬಹುದು'
ಚಿತ್ರ ಮಿನಿಯೇಚರ್ ಗಾತ್ರದ್ದು ಇದ್ದುದರಿಂದ ಅದರಲ್ಲಿನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಪತ್ತೆದಾರರು ಅವರ ಪರಿಚಯವಿರುವ ಛಾಯಾಗ್ರಾಹಕರ ಬಳಿ ಅದನ್ನು ಕೊಂಡೊಯ್ದು ಆ ಚಿತ್ರದ ಬ್ಲೊ ಅಪ್ ಒಂದನ್ನು ಮಾಡಿಸಿದರು.ಆ ಫೋಟೊದಲ್ಲಿನ ಹುಡುಗಿ ಮುಖಕ್ಕೂ ಜೆನೆಟ್ ಗೂ ಸಾಮ್ಯವಿತ್ತು ಆ ಫೋಟೊದ ಕೆಳಗಡೆ ಸೂಕ್ಷ್ಮವಾಗಿ ನೋಡಿದರೆ ಒಂದು ಶಿಲುಬೆ ಆಕಾರ ಹಾಗೂ ಊರಿನ ಹೆಸರು ಕಾಣಸಿಕ್ಕಿತು. ನಮ್ಮ ಪತ್ತೆದಾರರ ಟೀಮ್ ಆ ಊರಿಗೆ ಹೋಯಿತು. ಅದೊಂದು ಪುಟ್ಟ ಊರು. ಹೆಚ್ಚಿನವರೆಲ್ಲ ಕ್ರಿಶ್ಚಿಯನ್ನರೆ. ಆ ಊರಿನ ಇಗರ್ಜಿಗೆ ತಾಗಿದ ಹಾಗೆ ಒಂದು ಅನಾಥಾಶ್ರಮ. ಅಲ್ಲಿಗೆ ಹೋದರು ಇವರೆಲ್ಲ. ತುಂಬ ಹಳೆಯ ರೆಕಾರ್ಡ್ ಗಳು ಅಲ್ಲಿ ಸಿಗುವುದು ಇವರಿಗೆ ಅನುಮಾನವಿತ್ತು. ಅಲ್ಲಿನ ಕಛೇರಿಯಲ್ಲಿ ಕೆಲಸ ಮಾಡುವವರೆಲ್ಲ ತರುಣರು. ಆದರೂ ಅವ್ರಿಗೆ ಕೇಳಿದರು. ಅವರಲ್ಲಿ ಒಬ್ಬರು, ತಡಿರೀ, ನಮ್ಮ ಅಂಟೋಣಿಯವರಿಗೆ ಕೇಳುವ. ಅವರು 90 ವರ್ಷ ವಯಸ್ಸಿನವರಾದರೂ ಬುದ್ದಿ ಮತ್ತು ನೆನಪು ತುಂಬ ಚುರುಕಾಗಿದೆ. ಸರಿ, ಅಂಟೋನಿಗೆ ಬುಲಾವ್ ಹೋಯಿತು. ಮುದುಕ ಅಂಟೋನಿ ನಿಧಾನವಾಗಿ ಕೋಲು ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಬಂದ. ಅವನಿಗೆ ಲಾಕೆಟ್ ತೋರಿಸಲಾಯಿತು. ’ಅರೇ ಮೊನ್ನೆ ಭಾನುವಾರ ಅಷ್ಟೆ ಇನ್ನೊಬ್ಬ ವ್ಯಕ್ತಿ ಈ ಲಾಕೆಟ್ ಬಗ್ಗೆ ಕೇಳಿ ಹೋದರು. ಅವರಿಗೆ ಹೇಳಿದ ಹಾಗೆ ನಿಮಗೂ ಹೇಳುತ್ತೇನೆ. ’ಯುದ್ದದ ಸಮಯ ಆಗ ಏನು ಕಷ್ಟವೋ ಏನೋ ಆ ತಾಯಿ ಇಬ್ಬರು ಮಕ್ಕಳನ್ನು ಇಲ್ಲಿ ತಂದು ಬಿಡುವಾಗ ನಾನೇ ಇಲ್ಲಿದ್ದೆ. ಇಬ್ಬರ ಕುತ್ತಿಗೆಯಲ್ಲೂ ಸಮಾನಾದ ಚೈನೂ- ಲಾಕೆಟ್. ಹೆಣ್ಣು ಮಗು ತುಂಬ ಚಿಕ್ಕದು. ಇನ್ನೂ ತಾಯಿ ಹಾಲು ಕುಡಿಯುವ ಹಸುಳೆ.ಹಸಿವೆಯಿಂದಲೋ ಏನೋ ತುಂಬ ಅಳುತ್ತಿತ್ತು. ನಾನು ಹಾಗೂ ಫಾದರ್ ಆ ಮಗುವಿಗೆ ಹಾಲಿನ ಏರ್ಪಾಡು ಮಾಡಲು ಒಳಗೆ ಹೋದೆವು, ನಾವು ಬರುವಷ್ಟರಲ್ಲಿ ಆ ತಾಯಿ ಪರಾರಿ. ಸಾಧಾರಣ 5 ವರ್ಷದ ಹುಡುಗ ಮಾತ್ರ ಸುಮ್ಮನೆ ಎಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ. ಕೊಂಕಣಿ ಭಾಷೆ ಮಾತನಾಡುತ್ತಿದ್ದ. ಆ ರಾತ್ರಿ ಭೀಕರ ಯುದ್ದ. ಒಂದಾದ ಮೇಲೆ ಒಂದು ಬಾಂಬ್ ಸ್ಪೋಟ. ನಮ್ಮ ಈ ಹಳೇ ಅನಾಥಾಶ್ರಮದಲ್ಲಿ ಒಂದು ನೆಲಮನೆಯಿತ್ತು. ಆಶ್ರಮದ ಇತರೇ ಮಕ್ಕಳನ್ನೆಲ್ಲ ಒಟ್ಟು ಮಾಡಿ ಎರಡು ರಾತ್ರಿ ಅಲ್ಲೇ ಕಳೆದೆವು. ಮೂರನೆ ದಿನ ನಾವೆಲ್ಲ ಹೊರಗೆ ಬಂದು ನೋಡಿದ್ದಾಗ ಊರಿಗೆ ಊರೆ ಧ್ವಂಸ. ಇಬ್ಬರಿಗೂ ಹೆಸರು ನಾವೇ ಇಟ್ಟಿದ್ದು ಜೆನೆಟ್ ಮತ್ತು ಜೇಜು.
ಕೆಲ ತಿಂಗಳ ನಂತರ ಒಂದು ಹಿಂದು ಕುಟುಂಬ ಆ ಹುಡುಗನನ್ನು ದತ್ತು ತೆಗೆದುಕೊಂಡು ಹೋದರು. ಅದರ ವಿವರಗಳೆಲ್ಲ ಕಡೆತದಲ್ಲಿದ್ದವು. ಮೊನ್ನೆ ಬಂದ ವ್ಯಕ್ತಿಗೋಸ್ಕರ ಮೇಲ್ಛಾವಣಿಯಲ್ಲಿದ್ದ ಧೂಳು ತುಂಬಿದ ಕಡತಗಳನ್ನೆಲ್ಲ ತೆಗೆದು ಅಂದಾಜಿನಲ್ಲಿ ನಾಲ್ಕೈದು ಕಡತ ಹುಡುಕುತ್ತಿದ್ದ ಹಾಗೆ ನಮಗೆ ಆ ದತ್ತು ತೆಗೆದುಕೊಂಡ ಹುಡುಗನ ಪರಿವಾರದವರ ಅಡ್ರೆಸ್ ಸಿಕ್ಕಿತು. ಬಂದ ವ್ಯಕ್ತಿ ಒಂದು ದೊಡ್ಡ ಮೊತ್ತದ ಸಹಾಯಧನದ ರೂಪದಲ್ಲಿ ಚೆಕ್ ಬರೆದುಕೊಟ್ಟು ಅ ವಿಳಾಸ ಬರೆದುಕೊಂಡು ಹೋದರು’ ಇಲ್ಲಿಗೆ ಮಾತು ನಿಲ್ಲಿಸಿದ ಅಂಟೋನಿ. ಪತ್ತೆದಾರರೂ ಆ ವಿಳಾಸವನ್ನು ನೋಟ್ ಮಾಡಿಕೊಂಡು
ಮತ್ತೆ ಆ ಹುಡುಗಿ ಅವನ ತಂಗಿ, ಅವಳ ವಿಚಾರ ಏನಾದರೂ ಗೊತ್ತೇ?? ’ಹಾಂ ಅವಳು ನಮ್ಮ ಇಗರ್ಜಿ ಶಾಲೆಯಲ್ಲೇ 5 ಕ್ಲಾಸ್ ತನಕ ಓದಿ, ಮತ್ತೆ ಒಂದು ರೆಸಿಡೆಂಶಿಲ್ ಶಾಲೆಗೆ ವರ್ಗಾಯಿಸಳಾದಳು. ಆ ಶಾಲೆಯ ವಿಳಾಸ ನಮ್ಮ ಕಛೇರಿಯವರು ನಿಮಗೆ ನೀಡುತ್ತಾರೆ”
ರೆಸಿಡೆಂಶಿಯಲ್ ಶಾಲೆಗೆ ಹೋಗಿ ವಿಚಾರಿಸಿದಾಗ ಅವರು ಹೀಗೆ ಹೇಳಿದರು’ಓದಿನಲ್ಲಿ ತುಂಬ ಚುರುಕು ಜೆನೆಟ್. ಮುಂದೆ ಅವಳು ವಾಯುಸೇನೆ ಯಲ್ಲಿ ಭರ್ತಿ ಯಾದಳು. ನಮ್ಮ ರೆಸಿಡೆಂಶಿಯಲ್ ಶಾಲೆಯ ಒಂದು ನಿಯಮವಿದೆ. ಕೆಲಸಕ್ಕೆ ಹೋಗುವವರು ಅವರ ಮದುವೆಯಾಗುವ ತನಕ ಅವರ ಸಂಬಳದಲ್ಲಿನ ಸ್ವಲ್ಪ ಮೊತ್ತ ಶಾಲೆಗೆ ನೀಡಬೇಕೆಂದು. ಇತ್ತಿಚಿನ ಎರಡು ವರ್ಷಗಳ ಹಿಂದೆ ಅವಳಿಗೆ ಮದುವೆಯಾಯಿತು. ಮೊನ್ನೆ ಕ್ರಿಸ್ ಮಸ್ ಗೆ ಒಂದು ಕಾರ್ಡ್ ಕಳಿಸಿದ್ದಳು. ಯಾಕೆ ಅವಳ ವಿಚಾರ ಕೇಳುತ್ತಿದ್ದೀರಿ? ಅವರಿಗೆ ಏನೋ ಒಂದು ಉತ್ತರ ಕೊಟ್ಟು ಪತ್ತೆದಾರರು ಮುಂದಿನ ವಿಳಾಸ ಹುಡುಕಿ ಹೊರಟರು.
ಆ ವಿಳಾಸ ಹುಡುಕಿಕೊಂಡು ಹೋದರು. ಅದು ಬೇರೆಯದೇ ಊರಾಗಿತ್ತು. ಅಲ್ಲಿ ತಲುಪಿದಾಗ ರಾತ್ರಿ. ಸರಿ ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ ಆ ಊರಲ್ಲಿ. ಆ ರಾತ್ರಿ ಅಲ್ಲಿನ ಚಿಕ್ಕ ಹೋಟಲ್ ನಲ್ಲಿ ತಂಗಿದ್ದು, ಬೆಳಿಗ್ಗೆ ಅವರ ಕಾರ್ಯ ಶುರು ಮಾಡಿದರು. ಮನೆ ಪತ್ತೆ ಹಚ್ಚಲು ತುಂಬ ಕಷ್ಟ ಪಡಬೇಕಾಗಲಿಲ್ಲ. ಹೋಟಲ್ ನ ಮಾಣಿಯೇ ಅವರಿಗೆ ಅಲ್ಲಿ ಕರೆದುಕೊಂಡು ಹೋಗಿ ಆ ಮನೆಯನ್ನು ತೋರಿಸಿದ್ದ. ಪಾಳು ಬಿದ್ದ ದೊಡ್ಡದಾದ ಬಂಗಲೆ. ಆದರು ಮನೆಯಂಗಳ ಗುಡಿಸಿ ನೀಟ್ ಆಗಿಟ್ಟಿದ್ದರಿಂದ ಅಲ್ಲಿ ಯಾರೋ ವಾಸಿಸ್ತಾ ಇರುವ ಕುರುಹು ಸಿಕ್ಕಿತು. ಮನೆಯ ಬಾಗಿಲಿಗೆ ಬಡಿದಾಗ, ಸುಮಾರು ಹೊತ್ತಾದ ಮೇಲೆ ಇಲ್ಲಿಯೂ ಕೂಡ ಓರ್ವ ಮುದುಕ ನಿಧಾನಕ್ಕೆ ಬಂದು ಬಾಗಿಲು ತೆಗೆದ. ದೃಷ್ಟಿ ಪೂರ್ತಿ ಮಂಜಾಗಿದ್ದು ಕಷ್ಟ ಪಟ್ಟು ಬಂದವರನ್ನು ನೋಡ ಹತ್ತಿದರು.ಅವರಿಗೆ ಲಾಕೆಟ್ ನಲ್ಲಿದ್ದ ಫೋಟೊ ಸರಿ ಕಾಣುತ್ತಿರಲಿಲ್ಲವಾಗಿ, ಬ್ಲೋ ಅಪ್ ಮಾಡಿದ ಫೋಟೊ ನೇ ತೋರಿಸಿದರು. ಅವರು ಏನೋ ಆಲೋಚಿಸುವವರಂತೆ ಪುನ: ಒಳಗೆ ಹೋಗಿ ಇವರ ಬಳಿಯಿದ್ದ ಲಾಕೆಟ್ ತರಹದ್ದೆ ಇನ್ನೊಂದು ಲಾಕೆಟ್ ತಂದು ಇವರ ಮುಂದೆ ಇರಿಸಿದರು. ಮಾತನಾಡುವಾಗ ದನಿ ಅದುರುತ್ತಿತ್ತು.
"ಸೋಮು ನಮ್ಮ ಮನೆಗೆ ಬಂದಾಗ ಈ ಲಾಕೆಟ್ ಚೈನ್ ಅವನ ಕುತ್ತಿಗೆಗಿತ್ತು. ಅವನನ್ನು ದತ್ತು ಪಡೆದ ಈ ಮನೆಯವರು ಅವನನ್ನು ಸ್ನಾನ ಮಾಡಿಸಿ ತರಲು ನನಗೆ ಹೇಳಿದರು. ಹಾಗೆ ಆ ಚೈನ್ ನ್ನೂ ತೆಗೆದಿಡಲು ಸೂಚಿಸಿದರು. ನಾನು ಆ ಚೈನ್ ಅನ್ನು ನನ್ನ ಬಳಿಯೇ ಇರಿಸಿಕೊಂಡೆ. ಇದಾದ ಕೆಲ ದಿನದ ನಂತರ ರಾತ್ರಿ ಎಲ್ಲಿಂದಲೋ ಕಾರ್ ನಲ್ಲಿ ಮರಳುತ್ತಿರುವಾಗ, ಕಾರ್ ಎಕ್ಸಿಡೆಂಟ್ ನಲ್ಲಿ ಇಬ್ಬರೂ ತೀರಿಕೊಂಡರು. ದತ್ತು ಪ್ರಕ್ರಿಯೆ ಇನ್ನೂ ಮುಗಿದಿರಲಿಲ್ಲ. ಎಲ್ಲಿ ಎಲ್ಲ ಆಸ್ತಿ ಆ ಹುಡುಗನಿಗೇ ಹೋಗುತ್ತೋ ಅಂತ ಅವರ ದಾಯಾದಿಗಳು ಈ ಪುಟ್ಟ ಹುಡುಗನಿಗೆ ಕಿರುಕುಳ ನೀಡಲು ಆರಂಭಿಸಿದರು. ಆ ಮೇಲೆ ಒಂದು ದಿನ ಸೋಮು ಕಾಣೆಯಾದ. ಕೆಲಸದವನಾದ ಏನು ಮಾಡಲು ಸಾಧ್ಯವಿತ್ತು?
ನಮ್ಮ ಪತ್ತೇದಾರರು ಒಂದಕ್ಕೊಂದು ತಾಳೆ ಹಾಕಿ ಸೋಮು ಯಾಕೆ ಆತ್ಮಹತ್ಯೆ ಮಾಡಿಕೊಂಡನು ಅಂತ ಅಂದಾಜಿಸಿದರು.
ಅವರು ಗೊತ್ತಿಲ್ಲದೆ ಘೋರ ಅಪರಾಧ ಮಾಡಿದ್ದರು. ತಮ್ಮ ತಂಗಿಯನ್ನೆ ಮದುವೆಯಾಗಿ ಅವಳ ಜತೆ ದೈಹಿಕ ಸಂಬಂಧ ಹೊಂದಿದ್ದರು. ಈ ಆಘಾತ ತಡೆಯಲಾಗದೆ ಜೆನೆಟ್ ಗೂ ಹೇಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನು.
ಪತ್ತೆದಾದರು ಜೆನೆಟ್ ಬಳಿ ಹೋಗಿ’ನಮಗೂ ಕಾರಣ ತಿಳಿಯಲಾಗಲಿಲ್ಲ’ ನನ್ನನ್ನು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡನು. ಇದನ್ನು ಕೇಳಿದ ಪತ್ತೇದಾರರ ಜ್ಯೂನಿಯರ್, ಯಾಕೆ ಸುಳ್ಳು ಹೇಳಿದ್ರಿ? ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡದ್ದು ಅಂತ ನಮಗೆ ತಿಳಿದಿದೆಯಲ್ಲ?’
’ಸತ್ಯ ಗೊತ್ತಾಗಿ ಅವರೂ ಆತ್ಮಹತ್ಯೆ ಮಾಡಿಕೊಂಡ್ರೆ’ ಅವರದಲ್ಲದ ಪಾಪಕ್ಕೆ ಅವರನ್ನು ಯಾಕೆ ಹೊಣೆಮಾಡಿ ಅವರಲ್ಲೂ ಪಾಪಪ್ರಜ್ಝೆ ತುಂಬುವುದು. ಬದುಕಿಕೊಳ್ಳಲಿ ಬಿಡು.
(ಈ ಕತೆಗೆ ಸ್ಪೂರ್ತಿ ಕೆ.ಎನ್. ಗಣೇಶಯ್ಯನವರ ನೇಹಲ ಕಥಾಸಂಕಲದಲ್ಲಿನ ಕತೆ ’ನಿಷಿದ್ದಬಂಧ’ ಹಾಗೂ ಯಾವಾಗಲೋ ಚಿಕ್ಕಂದಿನಲ್ಲಿ ಅಂಗಡಿಯಿಂದ ಸಾಮಾನು ಕಟ್ಟಿಸಿ ಬಂದ ಮರಾಠಿ ಪೇಪರ್ ನಲ್ಲಿ ಬಂದ ಇಂತಹುದೊಂದು ಕತೆಯ ನೆನಪಿನ ಆಧಾರದ ಮೇಲೆ.)
:-)

5 comments:
ಒಂದೇ ಬಳ್ಳಿಯಲ್ಲಿ ಹುಟ್ಟಿದ ಎರಡು ಸುಮಗಳು ಕಾಲನ ಹೊಡೆತಕ್ಕೆ ಸಿಕ್ಕಿ ಬೇರೆಯಾಗಿ..ಸೇನೆಯಲ್ಲಿ ಶತ್ರುಗಳ ದಾಳಿಯಲ್ಲಿ ನಲುಗದಿದ್ದರೂ ಕಾಲ ಕೊಟ್ಟ ತಿರುವಿನಿಂದ ಘಾಸಿಯಾಗಿ ನೊಂದ ನಾಯಕನ ಚಿತ್ರಣ ಮಾರ್ಮಿಕವಾಗಿ ಸೊಗಸಾಗಿ ಮೂಡಿಬಂದಿದೆ. ಅಂತ್ಯ ನಿರೀಕ್ಷೆಯಂತೆ ಇದ್ದರೂ ಕೂಡ ಅದಕ್ಕೆ ಕೊಟ್ಟ ತಿರುವುಗಳು ರೋಚಕವಾಗಿದೆ..ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು
thank you Srikanth Manjunath...nim comment spoorthidayaka vaagirutte
:-)
ms
Baraha Chennagide Malathi.
Surprised and happy to find your comment here Sandhya!!
thank u
:-)
ms
Malathi, read a story quite similar to this one from Gopalakrishna Pai's short stories collection yesterday.
Post a Comment