September 20, 2012

ನಮ್ಮದೊಂದು ಸಡನ್ ಟ್ರಿಪ್ಪು

ಎಲ್ಲರೂ ಈಗ ಹಬ್ಬ ಮುಗಿಸಿ ಸುಧಾರಿಸುತ್ತಿರಬಹುದು. ಇದೋ ನಿಮಗಿಲ್ಲಿದೆ ನಮ್ಮ ಗೌರಿ-ಗಣಪನ ಚಿತ್ರ.
I really thought this pic got deleted. Imagine my joy when i found this saved in my ofc photos. 

ಮೊನ್ನೆ ಶನಿವಾರ ಸಂಜೆ ನಾನು ವಾಕ್ ಮುಗಿಸಿ ಬರುವಾಗ ಶ್ರೀಕಾಂತ , 'ನಾಳೆ ರವಿ ಗೆ ಹೇಳಿದ್ದೀನಿ. ಬೆಳಿಗ್ಗೆ 7 ಗಂಟೆಗೆಲ್ಲ ಮನೆಯಿಂದ ಹೊರ ಬೀಳುವಾ ಅಂದ್ರು. ಹಲವಾರು ತಿಂಗಳಿನಿಂದ ನಾವು ಎಲ್ಲೂ ಹೋಗಿರಲಿಲ್ಲ. ನನಗೂ ಬೆಂಗಳೂರಿನಿಂದ ಒಂದು ಬ್ರೇಕ್ ಬೇಕಿತ್ತು. ನನಗೇ ಜೋರು ನೆಗಡಿಯಾಗಿ -ಸುಮಾರು 5 ವರ್ಷಗಳ ನಂತರ ನನಗೆ ನೆಗಡಿಯಾಗಿದ್ದು. ತಲೆ ಭಾರ, ಒಂದು ಕಿವಿ ಡಮಾರ್...ಆದ್ರೂ ಎಲ್ಲಾದ್ರೂ ಹೀಗೇss ಹೋಗುವ ಅಂದ ಕೂಡಲೆ i perked up. ನಾನೋ Developmental Farmer ನಾರಾಯಣ ರೆಡ್ಡಿಯವರ ಫಾರ್ಮ್ ಗೆ ಏನೋ ಅಂದುಕೊಂಡಿದ್ದೆ. ಹಲವಾರು ತಿಂಗಳುಗಳಿಂದ ಅಲ್ಲಿಗೆ ಹೋಗುವ ಪ್ಲ್ಯಾನ್ಸ್ ಇತ್ತು. ನಾನು ಏನೂ ಕೇಳಲಿಲ್ಲ, ಸರಿ ಅಂತ ಅಷ್ಟೆ ಹೇಳಿದೆ. ಸ್ವಲ್ಪ ಸಮಯದ ನಂತರ ನೀಹಾ ಶ್ರೀಕಾಂತ ಮಾತನಾಡುವಾಗ ಮೇಕೆ ದಾಟು ಎನ್ನುವ ಹೆಸರು ಕೆಳಿಸಿತು. ಓ ನಾವು ಅಲ್ಲಿಗಾ ಹೋಗ್ತಾ ಇರೋದು? ನನಗಂತೂ ಎಲ್ಲಿ ಹೋದ್ರೂ ನಡೀತಿತ್ತು. ಮಾಲವಿಕಾಳಿಗೆ ಎಸ್ ಎಮ್ ಎಸ್ ಮಾಡಿದೆ ರಜಾ ಹಾಕಕ್ಕೆ ಬರುತ್ತಾ ಅಂತ, ಅವಳು mommy are you joking? ಸಂಡೆ ನನಗೆ ರಜೆ ಕೊಡಲ್ಲಲ್ವಾ> ನೀವೆಲ್ಲ ಹೋಗಿ ಬನ್ನಿ. ಈ ಕೆಲಸದಲ್ಲಿ ಒಂದು ವರ್ಷ ಮುಗಿಲಿಕ್ಕೆ ಬಂತು. ಮುಂದಿನ ತಿಂಗಳು ನನಗೆ ಒಂದು ವಾರ ಪೈಡ್ ಲೀವ್  ಕೊಡ್ತಾರೆ ಆವಾಗ ನಾಲ್ಕೂ ಜನ ಎಲ್ಲಾದರೂ ಹೋಗುವಾ, ನಾಳೆ ನೀವು ಮೂರು ಜನ ಹೋಗಿ ಬನ್ನಿ ಅಂದ್ಲು. ಸರಿ ಅಂದೆ.
ಬೆಳಿಗ್ಗೆ ಮಾಲವಿಕ ಅವಳ ಕೆಲಸಕ್ಕೆ ಹೊರಟು ಹೋದ ಮೇಲೆ ನಾವು ಹೊರಟಿದ್ದು. ಸಾಧಾರಣ ಏಳು ಗಂಟೆ ಆಗಿತ್ತು. ಗಟ್ಟಿ ಯಾಗಿ ಅಕ್ಕಿ ಕಡಬು ಕಬಳಿಸಿ ಹೊರಟಿದ್ದು. ನನ್ನ ಎರಡೂ ಕಿವಿ ಕೆಪ್ಪ್ ಆಗಿತ್ತು. ಒಂದು ಮೂಗು ಕಟ್ಟಿಹೋಗಿ ಉಸಿರಾಟಕ್ಕೆ ಕಿರಿಕಿರಿ ಅನ್ನಿಸ್ತಿತ್ತು. 20 ವಿಕ್ಸ್ ಕಿ ಗೋಲಿ ಪ್ಯಾಕ್ ಮಾಡಿಸಿಕೊಂಡು ಹೊರಟಿದ್ದೆ. ರವಿಗೆ ಮೇಕೆದಾಟು ಅಂದಾಗ ಅವನು ಮೇಕೆದಾಟಲ್ಲಿ ನೋಡುವಂತದ್ದು ಏನಿಲ್ಲ ಅಂತ ಅದರ ಕತೆ ಹೇಳಿದ
ಯಾವಾಗ್ಲೋ ಒಂದು ಸಲ ಕನಕಪುರದ ಬಳಿ ಒಂದು ವ್ಯಾಘ್ರ ಒಂದು ಮೇಕೆಯನ್ನು ಅಟ್ಟಿಸಿಕೊಂಡು ಬಂತಂತೆ. ಮೇಕೆ ಓಡ್ತಾ ಓಡ್ತಾ ನದಿ ಹತ್ತಿರ ತಲುಪಿತಂತೆ. ಇನ್ನೊಂದು ದಡಕ್ಕೆ ಹೋಗಲಿಕ್ಕೆ ಸ್ವಲ್ಪ ಹೆಚ್ಚೆ ದೂರ ಇತ್ತಂತೆ. ಆದ್ರೆ ಪ್ರಾಣ ಭಯದಿಂದ ಮೇಕೆ ಈ ದಡದಿಂದ ಆ ದಡಕ್ಕೆ ಜಂಪ್ ಹೊಡಿತಂತೆ ಅದರ ಪುಣ್ಯಕ್ಕೆ ಅದು ಸೇಫ್ ಆಗಿ ಆ ಕಡೆ ತಲುಪ್ತಂತೆ. ಏನಿಲ್ಲ ಮೇಡಂ ಆಗ ಮೇಕೆ ಜಂಪ್ ಹೊಡಿಯುವಷ್ಟು ಜಾಗ ಇತ್ತು . ವರ್ಷ ಕಳೆದಂತೆ ಮಳೆನೀರಿನ ಹಾಗೂ ನದಿ ನೀರಿನಿಂದ ಕೊರೆತಕ್ಕೊಳಗಾಗಿ ಎರಡು ದಡಗಳ ಮಧ್ಯ ಹೆಚ್ಚು ಅಂತರ ಉಂಟಾಗಿದೆ ಅಷ್ಟೆ. ನೋಡುವಂತದ್ದು ಏನಿಲ್ಲ. ಅದರ ಬದಲಿಗೆ ನಾವು ಭರಚುಕ್ಕಿ-ಗಗನಚುಕ್ಕಿ ಫಾಲ್ಸ್ ಮತ್ತು ತಲಕಾಡು..ಇಲ್ಲಿಗೆ ಹೋಗುವ ಅಂದ...ನಾವು ಸರಿ ಎಲ್ಲಿ ಕರೆದುಕೊಂಡು ಹೋಗ್ತೀರಿ ಹೋಗುವಾ ಅಂದ್ವಿ.
ಮೊದಲಿಗೆ ರವಿ ನಮಗೆ (ನನಗೆ ದೇವಸ್ಥಾನಗಳಿಗೆ ಹೋಗುವುದೆಂದರೆ ಆಗಲ್ಲ ಅಂತ ರವಿಗೆ ಗೊತ್ತು) ಅದಕ್ಕೆ ಅವರು ನಯವಾಗಿ ಈ ಒಂದು ದೇವಸ್ಥಾನ ನೋಡಿಬಿಡಿ ಅಂತ ಮಾಳೂರ್ (ಮಳ್ಳೂರು-ಚನ್ನಪಟ್ಟಣಕ್ಕೆ ಹೋಗುವ ದಾರಿಯಲ್ಲಿದೆ) ನಲ್ಲಿರುವ ಅಪ್ರಮೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು.ದ್ರಾವಿಡ ಶೈಲಿಯಲ್ಲಿ ಕಟ್ಟಿದ ಈ ದೇವಸ್ಥಾನ ಒಳಗಡೆ ತುಂಬ ಸುಂದರವಾಗಿದೆ. ಕ್ಲೀನ್ ಆಗಿ ಇಟ್ಕಂಡಿದ್ದಾರೆ.





ಅಪ್ರಮೇಯ ಶ್ರೀ ವಿಷ್ಣುವಿನ ಇನ್ನೊಂದು ಹೆಸರು. ಅಲ್ಲಿನ ಪುರೋಹಿತರ ಪ್ರಕಾರ ಈ ದೇವಸ್ಥಾನ 3000 ವರ್ಷ ಹಳೆಯದಂತೆ. ನಾವು ದೇವರ ಮುಂದೆ ಉಪಸ್ಥಿತರಾದ ನಂತರ ಪುರೋಹಿತರು ಗರ್ಭಗುಡಿಯಲ್ಲಿ ವಿದ್ಯುಚಕ್ತಿ ಬೆಳಕನ್ನು ಹಾಕಿದ್ದರಿಂದ ದೇವರ ಮೂರ್ತಿ ನಿಚ್ಚಳವಾಗಿ ಕಾಣಿಸಿತು. ಸಾಲಿಗ್ರಾಮ ಶಿಲೆಯಿಂದ ಮಾಡಿರುವ ಸುಂದರ ಮೂರ್ತಿ. ಫೋಟೊ ತೆಗೆಯುವುದು ನಿಶಿದ್ದವಾಗಿತ್ತು. ಮೊದಲೆಲ್ಲ ದೇವರ ಮುಂದೆ ಹಚ್ಚಿಟ್ಟ ದೀಪದ ಬೆಳಕಲ್ಲಿ ದೇವರ ಮೂರ್ತಿಯನ್ನು ನೋಡುವುದಿತ್ತು. ಅದೇ ಚೆಂದ. ಈ electric light ನಿಂದ ಒಂದು ತರಹ artificial atmosphere.(ಇನ್ನೂ ಏನೇನೋ ಇದೆ ದೇವಸ್ಥಾನದಲ್ಲಿ ನಾನು ಹೇಳಲ್ಲ ನೀವೆಲ್ಲ ಹೋಗಿ ನೋಡಿ..its worth it..
ಇಲ್ಲಿಂದ ನೇರವಾಗಿ ನಾವು ಗಗನಚುಕ್ಕಿ ಜಲಪಾತಕ್ಕೆ ಹೋದೆವು. ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿ ಕಾವೇರಿ ರಭಸವಾಗಿ   ಬಂಡೆ ಮತ್ತು ಕೊರಕಲು ಪ್ರದೇಶದಲ್ಲಿ ಹರಿದು ಈ ಹೆಸರು ಪಡೆದಿದ್ದಾಳೆ. ಮಾಮೂಲಿ ಅಲ್ಲಿಗೆ ಹೋಗುವ ದಾರಿ ದುರಸ್ತಿಯಲ್ಲಿದ್ದುದರಿಂದ ನಾವು ಊರ ಹೊರಗಿನಿಂದ ಬಂದು ಸ್ವಲ್ಪ detour ತೆಗೆದುಕೊಳ್ಳಬೇಕಾಯಿತು.
ಕೆಳಗಿವೆ ಕೆಲ ಚಿತ್ರಗಳು:
ಇದು ನಾನು ತೆಗೆದ ಚಿತ್ರ



ಇದೂ ನಾನೆ ತೆಗೆದದ್ದು

ನಾನು ನಿಹಾ

ಇದು ನಿಹಾ ತೆಗೆದ ಚಿತ್ರ
ಗಗನಚುಕ್ಕಿಯಲ್ಲಿ pay & use toilet ಉಸ್ತುವಾರಿ ನೋಡಿಕೊಳ್ಳುವ ನಾಗಮ್ಮ. ಇವರ ಜಮೀನಿನಲ್ಲಿ ಟಾಯ್ಲೆಟ್ ಹಾಕಿಸಿಕೊಂಡಿದ್ದಾರೆ. ಮಲೇರಿಯ ಜ್ವರದಿಂದ ಕಂಪಿಸುತ್ತಾ , ಅಲ್ಲೇ ಕಟ್ಟೆಯ ಮೇಲೆ ಮಲಗಿದ್ದರು. ಯಾಕಮ್ಮ ಹುಷಾರಿಲ್ಲವಾ ಅಂತ ಶ್ರೀಕಾಂತ ಮಾತನಾಡಿಸಿದ್ದಾಗ, "ಮೊನ್ನೆ ತನಕ ಆಸ್ಪತ್ರೆಯಲ್ಲೇ ಇದ್ದೆ. ಅಲ್ಲಿ ಮಲಗಿಲಿಕ್ಕೆ ಬೇಜಾರಾಗತ್ತೆ ಅಂತ ಇಲ್ಲಿ ಮಲಗ್ತಾ ಇದ್ದೀನೀ' ಅಂದ್ಲು. ನಿಮ್ಮ ಹಟ್ಟಿ ನೋಡಬಹುದಾ ಅಂದಿದಕ್ಕೆ,' ಅಲ್ಲೇನಿದೆ ನೋಡುವಂತದ್ದು ಅಂತ ಕೇಳುತ್ತ ಅವರ ಮನೆ ನೋಡಲು ಅನುಮತಿ ಇತ್ತರು. ಒಂದು ಏಕರೆ ಜಾಗದಲ್ಲಿ ಪುಟ್ಟ ಹಟ್ಟಿ, ಒಂದು ಹಸು ಕಟ್ಟುವ makeshift ದೊಡ್ಡಿ, ಪೇರಲೆ, ಸೀತಾಫಲ, ನುಗ್ಗೆಕಾಯಿ, ರಾಜನೆಲ್ಲಿಕಾಯಿ ಮರಗಳನ್ನು ಬೆಳೆಸಿದ್ದಾರೆ. ಮನೆ ಒಳಗೆ ಹಾಗೂ ಆವರಣ ಅತ್ಯಂತ ಸ್ವಚ್ಛವಾಗಿ ಇಟ್ಟಿದ್ದು ನೋಡಿ ನಾನಂತು ಫುಲ್ impressed.
ತೋಟವನ್ನು ಇನ್ನಷ್ಟು ಚೆನ್ನಾಗಿ ಮಾಡಲು ಶ್ರೀಕಾಂತ ರಿಂದ ಸಲಹೆ ಪಡೆದುಕೊಳ್ಳುತ್ತಿರುವುದು

ಅವರ ಮನೆ. loved this place. it has too much positive vibes

ನೆಲ್ಲಿಕಾಯಿ ಮರ.

ಭರಚುಕ್ಕಿಗೆ ಹೋಗುವ ದಾರಿಯಲ್ಲಿ



ಎಂಥ ಮನೋಹರ ದೃಶ್ಯ!!!ನೇಜಿ ಮಾಡುತ್ತಿರುವುದು. ಮೇಲಿನ ಮೂರು ಚಿತ್ರ ನಮ್ಮ ರಾಯರ ಕ್ಯಾಮೆರಾ ಕಣ್ಣಲ್ಲಿ:-)

ಇಲ್ಲಿಂದ ರವಿ ನಮಗೆ ಇನ್ನೊಂದು ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಗಗನಚುಕ್ಕಿ-ಭರಚುಕ್ಕಿ- ರಂಗನಾಥಸ್ವಾಮಿ ದೇವಾಲಯ ಒಂದೇ ದಿನ ನೋಡಿದರೆ ಪುಣ್ಯವಂತೆ...:-))
ಈ ದೇವಸ್ಥಾನದ ಒಳಗಡೆ ನೆಲಕ್ಕೆ ಮಾರ್ಬಲ್ಲ್ಲ ಟೈಲ್ಸ್ ಹಾಕಿದ್ದರು

ಗಾರ್ಡನ್ ಮತ್ತು ಇತರೇ ರಿಪೇರಿ ಕೆಲಸಗಳು ನಡೆಯುತ್ತಿದ್ದವು. ಲೈಟ್ ಕಂಬ ಈ ಚಿತ್ರಕ್ಕೆ ಅಡ್ಡಿ ಬಂದಿದೆ. ನಿಹಾಳನ್ನು ಕ್ಲಿಕ್ ಮಾಡಿದ್ದು ನಾನು
ಹಳೆಗನ್ನಡದಲ್ಲಿರುವ ಫಲಕ. ಎಡಬದಿಗೆ ಪೋಲಿಸ್ ರು ಕಾಣಿಸುತ್ತಾರಾ? ಯಾರೋ ವಿ ವಿ ಐ ಪಿ ಗಳ ಜತೆ ಬಂದವರೇನೋ ಅಂದುಕೊಂಡಿದ್ವಿ. ನಾವು ಭರಚುಕ್ಕಿ ಜಲಪಾತವನ್ನೆಲ್ಲ ನೋಡಿಬಂದ ಮೇಲೆ ನಮಗೆ ಬೇಸರದ ಸಂಗತಿಯೊಂದು ಕಾದಿತ್ತು. ಹಿಂದಿನ ದಿನ ಅಂದ್ರೆ ಶನಿವಾರ ಬೆಂಗಳೂರಿನ ಐದು ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭರಚುಕ್ಕಿಗೆ ಬಂದಿದ್ದರಂತೆ. ಅದರಲ್ಲೊಬ್ಬ ಕಾಲು ಜಾರಿ ಬಿದ್ದು ಅವನ ಶವ ಭಾನುವಾರ ಸಿಕ್ಕಿದ್ದು. ಅವನ ಜತೆಯಲ್ಲಿನ ಹುಡುಗರು ಆಲ್ಲೆ ಗುಂಪುಕಟ್ಟಿಕೊಂಡು ಸೋತಮುಖದಲ್ಲಿ ಕೂತಿದ್ದರು. ನಾನು ಲೊಚಗುಟ್ಟುತ್ತಿರುವಾಗಲೇ ರವಿ ನನಗೆ ಗಿಡಗಂಟಿಗಳ ಎಡೆಯಿದ್ದಡೆ ಕೈ ತೋರಿಸಿ, 'ನೋಡಿ ಮೇಡಂ ಪೋಸ್ಟ್ ಮಾರ್ಟಮ್ ಮಾಡ್ತಿರೋದು ಅಂತ' ಇನ್ನಷ್ಟು ನೋವು ಅನುಭವಿಸುತ್ತಿರುವಾಗಲೇ ಹುಡುಗನನ್ನ್ನು ಬಿಳಿಬಟ್ಟೆಯಲ್ಲಿ ಕಟ್ಟಿ ತೆಗೆದುಕೊಂಡು ಅಲ್ಲಿಂದ ಹೊರಗೆ ಬಂದರು. ಅವನನ್ನು ಹಿಡಿದುಕೊಂಡು ಬಂದವರು ಮೂಗನ್ನು ಮುಚ್ಚಿಕೊಂಡಿದ್ದರು. ಶವ ತುಂಬ ಕೊಳೆತುಹೋದ ಸ್ಥಿತಿಯಲ್ಲಿತ್ತಂತೆ. ಅದನ್ನು ಅಲ್ಲೇ ಪಾರ್ಕ್ ಮಾಡಿದ ಟೆಂಪೋ ಟ್ರಾಕ್ಸ್ ನಲ್ಲಿ ಹಾಕಿದರು, ಇನ್ನು  ನೋಡಕ್ಕೆ ಆಗದೆ ನಾವು ಅಲ್ಲಿಂದ ಹೊರಟ್ವಿ.
ಪಾಪ ಅಪ್ಪ ಅಮ್ಮ ಮಕ್ಕಳು ಕಲಿಯಲೀ ಅಂತ ಎಲ್ಲೆಲ್ಲಿಗೋ ಕಳಿಸ್ತಾರೆ. ಭರಚುಕ್ಕಿಯಲ್ಲಿ ಇಳಿಯುವಾಗಲೇ ದೊಡ್ಡ ಬೋರ್ಡ್ ನಲ್ಲಿ ವಾರ್ನಿಂಗ್ ಸೈನ್ ಹಾಕಿದ್ದಾರೆ. ಎಲ್ಲೆಲ್ಲಿ ಹೋಗಕೂಡದೆಂದು/ಇಳಿಯಕೂಡದೆಂದು. ಈ ಹುಡುಗ ನಾರ್ಥ್ ನಿಂದ ಬಂದವನಂತೆ. :-((ಕೆಲ ಹುಡಗರು ಅದರಲ್ಲೂ ಅವರ ಜತೆ ಹೆಣ್ಣುಮಕ್ಕಳು ಇದ್ದರಂತೂ ಯಾವ ರೀತಿ ಮಂಗ ಚೇಷ್ಟೆ ಮಾಡುತ್ತಾರೆಂದು  ಆ ದಿನಾನೇ ಕಣ್ಣಾರೆ ನೋಡಿದ್ದೇನೆ.
ಭರಚುಕ್ಕಿಯ ಚಿತ್ರಗಳು:


 for my sister jyothi pai :-)))))))))))))

ರವಿ


ರವಿ ಕ್ಲಿಕ್ಸ್
ಇಲ್ಲಿಂದ ನಾವು ಮಲೇ ಮಾದೇಶ್ವರ ಬೆಟ್ಟಕ್ಕೆ ಹೋದೆವು. ತಲಕಾಡು ಕ್ಯಾನ್ಸಲ್ಡ್....ಮಲೇ ಮಾದೇಶ್ವರ ಅಂದರೆ ಗುಡ್ಡದ ಮೇಲೆ ದೇವಸ್ಥಾನ ಅಂದುಕೊಂಡಿದ್ದೆ. ಇದು ನೋಡಿದರೆ ಬೆಟ್ಟ ಹತ್ತಿ ಇಳಿದ ಮೇಲೆ ಸಿಗುವ ದೇವಸ್ಥಾನ. ಆ ದಿನ ಅಮವಾಸ್ಯೆಯಂತೆ. ಅದಕ್ಕೆ ಅಲ್ಲಿ ಜಾತ್ರೆ-ಗೌಜು-ಗದ್ದಲ..ಅದರ ಚಿತ್ರಗಳನ್ನು ಇನ್ನೊಂದು ಪೋಸ್ಟ್ ನಲ್ಲಿ. ಕೊಳ್ಳೇಗಾಲ ಮಾರ್ಗವಾಗಿ ಹೋಗಿದ್ದು ತುಂಬ ಇಷ್ಟವಾಯ್ತು ನನಗೆ ಆ ಊರು. ರಸ್ತೆಯ ಉದ್ದಕ್ಕೆ ಕೆರೆ. ಮಳವಳ್ಳಿ, ಮಧುಪುರ ದಲ್ಲೆಲ್ಲ ಹಳೆಯ ಕೆಲವು ಕಂಬದ ಮನೆಯ ನೋಡುವ ಭಾಗ್ಯ ಸಿಕ್ಕಿತು.
ರಾತ್ರಿ 10.45 ಗೆ ಮನೆ ತಲುಪಿದೆವು. ರಾತ್ರಿ ಊಟ ರಾಮನಗರದ ಕಾಮತ್ ಹೋಟಲ್ ನಲ್ಲಿ.
sorry ಎಲ್ಲರೂ ಗೌರಿ ಗಣಪನ ಫೋಟೊ ಹುಡುಕ್ತಿದ್ದೀರಾ? ಚೆನ್ನಾಗಿ ಬಂದಿಲ್ಲ ಅಂತ ಶ್ರೀಕಾಂತ ಅದನ್ನು ಡಿಲೀಟ್ ಮಾಡಿದ್ದಾರೆ...
ಯಾಕೋ ವಿಸರ್ಜನೆ ಮುಂಚೆ ಒಂದೆರಡು ಫೋಟೊ ತೆಗೆದಿದ್ದೆ ನನ್ನ ಮುದ್ದು ಗಣಪಂದು..ಇಗೋ ಇಲ್ಲಿದೆ ನಿಮಗಾಗಿ
 ನಮ್ಮ eco-friendly ಮಣ್ಣಿನ ಗಣಪ

ಗಮ್ಮತಂದ್ರೆ ನಮ್ಮ ಗಣಪನ ಇಲಿ ಸಖತ್ ದೊಡ್ಡದಾಗಿದೆ.. :-)
:-)

13 comments:

Sudeepa ಸುದೀಪ said...

Beautiful pictures...Good narration...so lovely green farms...i <3 1st pic..where the temple with pink flowers, Nagammas house, the pic which u dedicated 2 jyothi, last pic where u only n with blue mountains...love them...
Enjoy u r trip with good pics pacchi.. :-)

Radhika said...

Nice picks. Me too wants to visit Gaganachukki, Bharachukki.

nenapina sanchy inda said...

Thanks Munna!!
Dear Radhika!!
Its just 129 Kms from Bangalore. u could plan it this weekend itself
:-)
ms

Anonymous said...

Nice travelogue !

-Shree Kar

Anonymous said...

Naane allige hodantha feel aayithu. I've decided to plan a trip to these places shortly. Thanks for the wonderful Travelogue.

Dayananda said...

ನೀವು ತಿಳಿಸಿರುವ ಸ್ತಳಗಳನ್ನು ನಾನು ನೋಡಿದ್ದರೂ ,ನಿಮ್ಮ ಲೇಖನ ಓದಿದ ಮೇಲೆ ಇನ್ನೊಮ್ಮೆ ನೋಡಬೇಕೆನಿಸುತ್ತಿದೆ

Dayananda said...

ಗಣೇಶನ ಮೈ ಮೇಲಿನ ಬಿಳಿಯ ವಸ್ತು ಏನು ಎಂದು ತಿಳಿಯಲ್ಲಿಲ್ಲ .ಜನಿವಾರವ ?

nenapina sanchy inda said...

Thank you Dayanand avare for coming here and also for following the blog.
ಹೌದು ಅದು ಜನಿವಾರ contrast ಇರಲಿ ಅಂತೇನೋ ಹಾಕಿದೆ ಆದರೆ direction ತಪ್ಪಿದೆ...
:-)
ಮಾಲತಿ ಎಸ್.

Sudeepa ಸುದೀಪ said...

hey pacchi...nice pics of Ganapati... blessed.. :-)

ವನಿತಾ / Vanitha said...

Nice narration malathi Akka :) Gaganachukki-bharachukki, , MM hills, Talakaadu was our favorite picnic spots when we were @ Mysore..aahh..started missing mysore :)..Luved ur red-yellow comb dress and Ganapati..Hope u had nice festival ..Take care :)

nenapina sanchy inda said...

Thank you Vanitha!! iam experimenting with colourful clothes..thats, i am deviating from my usual black/grey dresses...:-)
Yes we did have a grand festival with relatives and friends coming over to the pooja lunch

N said...

ದೇವರು ಒಳ್ಳೆಯದು ಮಾಡಲಿ ನಿಮಗೆ..

nenapina sanchy inda said...

Nataraju: Amen!!:-)