July 9, 2011

ಸುಮ್ನೆ ಒಂದಿಷ್ಟು..........


ಬೆಳಿಗ್ಗೆ 6.45 ಅನ್ನುವಷ್ಟರಲ್ಲಿ ನನ್ನ breakfast ಕೆಲಸ ಹಾಗೂ ಅರ್ಧ ಅಡಿಗೆ ಮುಗಿದಿರುತ್ತೆ. ನಿಹಾರಿಕ ಕಾಲೇಜ್ ಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟಕ್ಕೆ ಬುತ್ತಿ ಕಟ್ಟಿಕೊಂಡು ಹೋಗುತ್ತಾಳೆ. ಆ ಮೇಲೆ ನಾನು ಮಂಚದ ಮೇಲೆಬಿದ್ದುಕೊಂಡು ಮಾಲವಿಕಾ ತನ್ನ ಕೆಲಸಕ್ಕೆ ರೆಡಿಯಾಗುವುದನ್ನು ನೋಡುತ್ತೇನೆ. ಅದು ನನಗೆ ಯಾವತ್ತೂ ಇಷ್ಟವಾದ ಕೆಲಸ. ಮೊದಲಿಗೆ ಅವಳ ಉದ್ದ ಕೂದಲನ್ನು ಸಪಾಟಾಗಿ ಬಾಚಿ ಒಂದೂ ಕೂದಲು ಹೊರಗೆ ಬರದಂತೆ 10-15 ಕ್ಲಿಪ್ ಗಳನ್ನು ಹಾಕಿ ಕೊಳ್ಳುತ್ತಾಳೆ. ಅವಳದು ಗುಂಗರು ಕೂದಲು, ಎಷ್ಟು ಕಷ್ಟ ಪಟ್ಟರು ಕೆಲವು ಕೂದಲು ಹಿಡಿತಕ್ಕೆ ಬರುವುದಿಲ್ಲ. ದಿನಾ ಕೂದಲು ಬಾಚುವಾಗ ಅವಳು ಅಮ್ಮ hair straightener ತೆಗೆಸಿಕೊಡು ಅನ್ನುವುದು ನಾನು ಹೂಂ ಅನ್ನುವುದು ನಡೆಯುತ್ತ ಇತ್ತು. ಅವಳಿಗೆ ಕಾಲೇಜ್ ನಲ್ಲಿ ಅವಳ ಸಹಪಾಠಿಗಳು ’ಸೂರ್ಯಕಾಂತಿ’ ಅಂತ ಕರೆಯುತ್ತಿದ್ದರು. ಯಾಕೆಂದರೆ ಸಂಜೆಯಾದ ಕೂಡಲೆ ಅವಳ ಕ್ಲಿಪ್ ಗೆ ಸೇರಿಸಿದ ಕೂದಲೆಲ್ಲ ಹೊರಬಂದು ಅವಳ  ಮುಖದ ಸುತ್ತಲೂ ಹರಡಿಕೊಂಡಿರುತ್ತದೆ.ಇವತ್ತೂ ಅವಳು ಕೇಳಿದಾಗ, ಹೇ ಹೇಗೂ ನಾಳೆ ನಿನಗೆ  ಸಂಬಳ ಬರುತ್ತೆ. ಅದರಿಂದಲೆ ತೆಕ್ಕೋ ಅಂದೆ.
ಹೌದು, ಹುಟ್ಟಿದ ಕೂಡಲೆ ಹುಬ್ಬುಗಂಟಕ್ಕಿ ಅತ್ತ ಹುಡುಗಿ ಇವಳು ಈಗ ಕೆಲಸಕ್ಕೂ ಸೇರಿಯಾಯ್ತೆ ಅನ್ನುವ ಸೋಜಿಗ ನನಗೆ.

ಅವಳಷ್ಟು ವಯಸ್ಸಿಗೆ ನನಗೆ ಮದುವೆಯಾಗಿ, ಮಾಲವಿಕ ಹುಟ್ಟಿದ್ದಳು :-) ನಾನು ಕಾಲೇಜ್ ಗೆ ಹೋಗದಿದ್ದರೇನಾಯಿತು?? ಮಾಲವಿಕ-ನಿಹಾರಿಕ ಅವರ ಕಾಲೇಜಿನ ಅನುಭವಗಳನ್ನು ಕೇಳಿದರೆ ನಾನೇ ಕಾಲೇಜ್ ಗೆ ಹೋಗಿ ಬಂದಷ್ಟೇ ಖುಶಿಯಾಗುತ್ತಿತ್ತು. ಇಬ್ಬರದ್ದೂ ಮಿಮಿಕ್ರಿ ಬೇರೆ. 

(ಸಿಂಗಾರ ಮಾಡುವವರನ್ನು ನೋಡುವುದು ನನಗೆ ಅತ್ಯಂತ ಮೋಜಿನ ವಿಷಯ. ಇದನ್ನು ಓದಿ first

http://malathisanchiyinda.blogspot.com/2010/02/blog-post.html

ನಾನು ತುಂಬ ಚಿಕ್ಕವಳಾಗಿರುವಾಗ ಮುಂಬೈನಲ್ಲಿ ಅಜ್ಜನ ಮನೆಯಿಂದ ಅಮ್ಮನ ಮನೆಗೆ ವಾರಕ್ಕೊಮ್ಮೆ  ಅಥವ ರಜೆ ದಿನಗಳಲ್ಲಿ ಹೋಗಿರುತ್ತಿದೆ. ಪ್ರತಿ ದಿನ ಬೆಳಿಗ್ಗೆ ಅಪ್ಪ ಕೆಲಸಕ್ಕೆ ಹೋದ ಮೇಲೆ ಅಮ್ಮನ best friend ವಿಜಯ ಆಂಟಿ ಬರುತ್ತಿದ್ದರು. ಅಪ್ಪ ನ ಬ್ಯಾಂಕ್ ಹಾಗೂ ವಿಜಯ ಆಂಟಿಯ ಗಂಡನ ಆಫಿಸ್ ತುಂಬ ದೂರ ಇರುವುದರಿಂದ ಇಬ್ಬರೂ ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಮನೆ ಬಿಡುತ್ತಿದ್ದರು. ಅಮ್ಮ ಬೇಗ ಬೇಗ ಮನೆ ಕೆಲಸಗಳನ್ನು ಮುಗಿಸುತ್ತಿದ್ದಳು. 10.00 ಗಂಟೆಗೆ ಮೇಲಿನ ಮನೆಯ ವಿಜಯ ಆಂಟಿ ನಮ್ಮ ಮನೆಗೆ ಬರುತ್ತಿದ್ದರು. ಅವರಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಹೆಚ್ಚಿನ ಪಾಲು ಬಳಿಯಲ್ಲೆ ಸಿಗುವ ಮೀನು ಮಾರ್ಕೆಟ್ ಅಥವಾ ತರಕಾರಿ ಮಾರುಕಟ್ಟೆಗೆ ಹೋಗುವ ಪರಿಪಾಠ. ಅಂದಿನ ದಿನಗಳಲ್ಲಿ ಫ್ರಿಜ್ ಇನ್ನೂ ನಮ್ಮ ಮನೆಗೆ ಬಂದಿರಲಿಲ್ಲ. ನಮ್ಮ ಮನೆಯ godrej ಕಪಾಟ್ ಗೆ full length  ಕನ್ನಡಿ ಇದ್ದರಿಂದ, ವಿಜಯ ಆಂಟಿ ಸೀರೆ ಉಡುವುದು, ಜಡೆ ಹಾಕುವುದು ಮುಂತಾದ ಕೆಲಸಗಳೆಲ್ಲ ನಮ್ಮ ಮನೆಯಲ್ಲೇ ಮಾಡುತ್ತಿದ್ದರು. ನನ್ನ ಅಮ್ಮನಿಗಂತೂ ಮೊಣಕಾಲು ತನಕ ಕೂದಲು. ವಿಜಯ ಆಂಟಿದೂ ಗುಂಗುರು ದಪ್ಪ ಕೂದಲು. ನಾನು ಅವರ ಮುಖಗಳನ್ನು ಕನ್ನಡಿಯಲ್ಲೆ  ನೋಡುತ್ತಿದೆ. ಅಮ್ಮ ವಿಜಯ ಆಂಟಿಗೆ ಅರ್ಧ ಜಡೆ ಹಾಕಿ ಕೊಡುತ್ತಿದ್ದರು, ಉಳಿದರ್ಧ ಜಡೆಯನ್ನು ಅವರೇ ಹಾಕಿ ಮುಗಿಸುತ್ತಿದ್ದರು. ಮಾತಂತೂ ನಿರಂತರವಾಗಿ ಸಾಗುತ್ತಿತ್ತು. ಆಮೇಲೆ ಅವರು ಸೀರೆ ಉಟ್ಟುಕೊಳ್ಳುವುದು, ಮುಖ ತೊಳೆದು, vanishing cream ಹಚ್ಚಿಕೊಂಡು, ಅದಕ್ಕೆ Ponds talcum powder ಹಚ್ಚಿಕೊಳ್ಳುತ್ತಿದರು. ಆ ಮೇಲೆ ಕೆಂಪು ಬಣ್ಣ liquid ಶ್ರೀಂಗಾರ್ ಕುಂ ಕುಂ ದುಂಡಗೆ ದೊಡ್ಡದಾಗಿ ಹಚ್ಚಿಕೊಳ್ಳುತ್ತಿದ್ದರು. ಆಗ ನಮ್ಮಮ್ಮನಿಗೆ ಕೇವಲ 20 ವರ್ಷ ವಯಸ್ಸು. ನಾನು ನನ್ನ ತಮ್ಮ ಇಬ್ಬರೂ ಹುಟ್ಟಿಯಾಗಿತ್ತು. ಅವರು ಆಮೇಲೆ ನಮ್ಮಿಬ್ಬರಿಗೂ ಮನೆಯಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿ ಹೋಗುತ್ತಿದ್ದರು. ಅಮ್ಮ ಬಿಚ್ಚಿಟ್ಟ ಸೀರೆ ನಾನು ಉಡಲು ಪ್ರಯತ್ನಿಸುತ್ತಿದ್ದೆ. voile ಸೀರೆಯಾದ್ದರಿಂದ ಅದು ಜಾರುತ್ತಿದ್ದುದೆ ಹೆಚ್ಚು. )
ಪುನಃ ಮಾಲವಿಕ ವಿಷಯಕ್ಕೆ ಬರುತ್ತೇನೆ: ಆಮೇಲೆ ಮುಖಕ್ಕೆ ಲೈಟ್ ಆಗಿ ಫೌಂಡೇಶನ್ ಹಚ್ಚಿ, lakme compact talc ಹಚ್ಚಿ, ಕಣ್ಣ ರೆಪ್ಪೆ ಮೇಲೆ ಕೆಳಗೆ ಕಪ್ಪು ಐ ಲೈನರ್ ನಿಂದ ಕಾಡಿಗೆ ಹಚ್ಚಿಕೊಳ್ಳುತ್ತಾಳೆ. ನಂತರ ತುಟಿಗೆ ಲೈಟಾಗಿ ಲಿಪ್ಸ್ಟಿಖ್. ಪ್ಯಾಂಟ್ ಶರ್ಟ್ ಕೋಟ್ ಹಾಕ್ಕೊಂಡು ಕೆಲಸಕ್ಕೆ ಹೋಗಲು ತೈಯಾರ್. ನಾನು ಮಂಚದ ಮೇಲೆ ಬಿದ್ದುಕೊಂಡಿರುವುದನ್ನು ನೋಡಿ ಶ್ರೀಕಾಂತ, ಹೇ ಒಳ್ಳೆ ಸೋಂಬೇರಿ ತರಹ ಬಿದ್ದುಕೊಂಡಿದ್ದಿಯಾ, ನನಗೆ ಆಫಿಸ್ ಕೆಲಸನಾದ್ರೂ ಮಾಡಿ ಕೊಡು ಅಂತಿರುತ್ತಾರೆ.  ನಾವು  ನಮ್ಮ ಸಂಸ್ಥೆಗಳನ್ನು ಪ್ರಾರಂಭಿಸಿದಾಗ ನಾಲ್ಕೆ ಜನ. ಆಗ ನಾನೆಲ್ಲ ತುಂಬ ಕೆಲಸ ಮಾಡಿ ಕೊಡುತ್ತಿದ್ದೆ. ಈಗ 700 ಕ್ಕಿಂತ ಜಾಸ್ತಿ ಜನರಿರುವುದರಿಂದ ನಾನು ಕೆಲವು ತಿಂಗಳಿಂದ ಅಫಿಸ್ ಕೆಲಸಕ್ಕೆ ವಿರಾಮ. ಈಗ ಓದುವುದು ಅಷ್ಟೆ ಮಾಡುವುದು. 
ಆಫೀಸ್ ಸದಸ್ಯರ ಸಂಖ್ಯೆ 700 ದಾಟಿದ್ದಷ್ಟೆ ಅಲ್ಲ ಈಗ ಯಾರು, ಯಾವ ಪ್ರಾಜೆಕ್ಟ್ ,ಹೆಸರೆಲ್ಲ ನೆನಪಲ್ಲಿಡಕ್ಕೆ ಆಗಲ್ಲ. ಒಂದು ಮೋಜಿನ ಪ್ರಸಂಗ ಕೇಳಿ. ಇತ್ತೀಚಿಗೆ ನಾನು ಕುಣಿಗಲ್ ನಲ್ಲಿ ನಡೆದ ಬೃಹತ್ ಸ್ವ ಸಹಾಯ ಸಂಘದ ಸಮ್ಮೇಳಕ್ಕೆ ಹೋಗಿದ್ದೆ. ೫೦೦೦ ಕ್ಕೂ ಹೆಚ್ಚು ಜನರು ಸೇರಿದ್ದರು. ಕೆಲವು ಪ್ರಾಜೆಕ್ಟ್ ಹೆಡ್ ಗಳನ್ನ ಶ್ರೀಕಾಂತ ನನಗೆ ಪರಿಚಯಿಸಿ ಕೊಡುತ್ತ ಇದ್ದರು. ಒಬ್ಬ ಮುಂದೆ ಬಂದು ಮ್ಯಾಡಂ ನೆನಪಿದೆಯಾ ಅಂದ. ಅದಕ್ಕೆ ನಾನು ’ನೋಡಿ ಅಪ್ಪ ನನಗೆ ಮರೆವು ಜಾಸ್ತಿ. ನಿಮ್ಮನ್ನು ನೋಡಿದ ನೆನಪಿಲ್ಲ ನಂಗೆ ಅಂದೆ’ ಅದಕ್ಕೆ ಅವನು ’ನಾನು ಮಂಜುನಾಥ ಮ್ಯಾಡಂ” ಅಂದ. ನಮ್ಮ ಆಫಿಸ್ ನಲ್ಲಿ ಸಾಕಷ್ಟು ಜನ ರಾಘವೇಂದ್ರರು ಮಂಜುನಾಥರು ಇದ್ದರಿಂದ, ಅವರನ್ನು ಆಯ ಪ್ರಾಜೆಕ್ಟ ಹೆಸರು ಸೇರಿಸಿ ಅವರನ್ನು ಕರೆಯುವುದು ವಾಡಿಕೆ, ಸುಜೀವನ ಮಂಜುನಾಥ, ಹೆಡ್ ಆಫಿಸ್ ಮಂಜುನಾಥ, ಕುಣಿಗಲ್ ಮಂಜುನಾಥ.. ವಗೈರೆ. ನಮ್ಮನ್ನು ಪರಿಚಯಿಸಿದಾರೇನ್ರಿ ಅಂದೆ. ಅದಕ್ಕೆ ಅವನ್ನು ನಸು ನಗುತ್ತ ’ಇಲ್ಲ ಮ್ಯಾಡಂ’ ಅಂದ. ಹೋ ಮತ್ತೆ ಹೇಗ್ರಿ ನಮಗೆ ಪರಿಚಯ ಅಂದಿದಕ್ಕೆ,. ಹಿಂದಿನ ತಿಂಗಳು ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟಾಗಿತಲ್ವ ಮ್ಯಾಡಂ?? ನಾನು ಆ ಮಂಜುನಾಥ ಅಂದು ಬಿಟ್ಟ.
ಹೆಲ್ಮೆಟ್ ಹಾಕದೇ ಮಂಜುನಾಥ ಮಹಾರಾಯರು, ಬೈಕ್ ರಸ್ತೆ ಮೇಲೆ ಸ್ಕಿಡ್ ಆಗಿ, ತಲೆ pavement ನ ಬದಿಗೆ ತಾಗಿ ಎಲ್ಲರೂ ಅವನ ಆಸೆ ಬಿಟ್ಟಿದ್ದರು. ಕುಣಿಗಲ್ ನಿಂದ ತುಮಕೂರು ಆಸ್ಪತ್ರೆ ಮತ್ತಲ್ಲಿಂದ ಬೆಂಗಳೂರಿನ NIMHANS ಗೆ ಸೇರಿಸ ಬೇಕೆಂದು ಹೇಳಿದಾಗ ಅಲ್ಲಿನ ಪ್ರಾಜೆಕ್ಟ್ ಹೆಡ್ ಕೆಂಪೆಗೌಡರು ನಮ್ಮ ಮನೆಗೆ ಫೋನ್ ಮಾಡಿದ್ದರು. NIMHANS ನಲ್ಲಿ ಪರಿಚಯದ ಡಾಕ್ಟರ್ ಯಾರಾದ್ರೂ ಇದ್ದರಾ ಅಂತ. patient ಪರಿಸ್ಥಿತಿ ಹೇಗಿದೆ ಅಂದಿದ್ದಕ್ಕೆ, ಮಾತಾಡ್ತಾ ಇಲ್ಲ ಸರ್, ಕಿವಿಯಿಂದನೂ ರಕ್ತ ಸೋರತಾ ಇದೆ ಅಂದ. ಆಗಲೇ ಸಮಯ ರಾತ್ರಿಯ10.00  ದಾಟಿತ್ತು. ಅವರು ತಲುಪಲು ಕನಿಷ್ಠ ಎರಡು ತಾಸಾದರೂ ಬೇಕಿತ್ತು. ಎಂಬುಲನ್ಸ್ ನಲ್ಲಿ ಕರೆದುಕೊಂಡು ಬರುತ್ತ ಇದ್ದರು ಅವರನ್ನು. ಶ್ರೀಕಾಂತ್ ಯಾಕೋ ಊಟ ಮಾಡಿದ್ದಿರಾ ಹುಡುಗರಾ ಅಂತ ಕೇಳಿದರು. ಇಲ್ಲ ಸರ ಮಧ್ಯಾಹ್ನ ಮೂರು ಗಂಟೆಗೆ ಆಕ್ಸಿಡೆಂಟ್ ಆಗಿದ್ದು, ಮಧ್ಯಾಹ್ನ  ಕೂಡ ಊಟ ಮಾಡಿಲ್ಲ ಅಂದರು. ಶ್ರೀಕಾಂತ ನನಗೆ ಅವರ ಊಟಕ್ಕೆ ಏನು ಮಾಡುವ? ಈಗ ಎಲ್ಲೂ ಊಟ ಸಿಗುವ ಹಾಗಿಲ್ಲ ಅಂದರು.ಅನ್ನ ಮಾಡುವಷ್ಟು ಟೈಮ್ ಇರಲಿಲ್ಲ, ಯಾಕಂದ್ರೆ ಶ್ರೀಕಾಂತ ಇಲ್ಲಿಂದ ಅಲ್ಲಿಗೆ ಹೊರಡಬೇಕಿತ್ತು. ನಮ್ಮ ಮನೆಯಿಂದ NIMHANS ಸಾಕಷ್ಟು ದೂರ ಇದೆ. ಚಪಾತಿ ಮಾಡಿ ಕೊಡುತ್ತೇನೆ ಅಂದೆ. ಆದರೆ ಪಲ್ಯಕ್ಕೆ ಆಲೂಗಡ್ಡೆ ಬೇಯಸುವಷ್ಟೂ ಪುರುಸತ್ತು ಇರಲಿಲ್ಲ. ಆಗ ನಾನು ಸ್ಕೂಲ್ ಗೆ /ಆಫಿಸ್ ಗೆ/ ಮಕ್ಕಳ ಡಬ್ಬಿಗೆ ಅಂತ ಮಾಡುತ್ತಿದ್ದ  ಚಟ್ನಿ ಚಪಾತಿ ನೆನಪಿಗೆ ಬಂತು. ಚಪಾತಿ ಹಿಟ್ಟು ಕಲೆಸಿ, ಬೇಗ ತೆಂಗಿನ ಕಾಯಿ ಒಡೆದು, ತುರಿದು, ಮೆಣಸು ಹುಣಸೆ ಹುಳಿ , ಹಸಿ ಶುಂಠಿ ಉಪ್ಪು ಹಾಕಿ ರುಬ್ಬಿದೆ. ಬಿಸಿ ಬಿಸಿ ಚಪಾತಿ ಮಾಡಿ ಒಳಗೆ ಚಟ್ನಿ ಹಚ್ಚಿ ಹೀಗೆ fold ಮಾಡಿ casserole ನಲ್ಲಿ ಹಾಕಿಟ್ಟೆ.

ಮನೆಯಲ್ಲಿ ಬಾಳೆಹಣ್ಣು ಸಾಕಷ್ಟು ಇತ್ತು. ಅದರ ಜತೆ ಬಿಸ್ಕಿಟ್ ಪೊಟ್ಟಣ ಎಲ್ಲವನ್ನೂ ಹಾಕಿ, ಬಾಟಲಿಯಲ್ಲಿ ನೀರು ತುಂಬಿಸಿ ಕೊಟ್ಟೆ. ಟೀ  ಮಾಡುವ ಅಂದ್ರೆ ಹಾಲು ಅಷ್ಟಿರಲಿಲ್ಲ. ಹಾಗೂ ಅಂಗಡಿಗಳೆಲ್ಲ ಬಾಗಿಲು ಹಾಕಿ ಆಗಿತ್ತು ಆಗಲೇ. ಆಸ್ಪತ್ರೆಯಲ್ಲಿ tea/coffee ಸಿಗಬಹುದು ಅಂತ ದೂರದ ಆಸೆ ಇತ್ತು ನನಗೆ. ತಿಂಡಿಯನ್ನೆಲ್ಲ ಕಟ್ಟಿಕೊಂಡು ಶ್ರೀಕಾಂತ, ಶರ್ಮ ಸರ್  ಅವರ ಕಾರಿನಲ್ಲಿ NIMHANS ಗೆ ಹೋದರು. ಅಲ್ಲೆಲ್ಲ formalities ಮುಗಿಸಿ ಬರುವಾಗ ಬೆಳಗ್ಗಿನ ಮೂರು ಗಂಟೆ. ಬಂದ ಕೂಡಲೆ ಅವರು ಹೇಳಿದ್ದು - ನೀನು ಕಳುಹಿಸಿದ್ದ ತಿಂಡಿ ಮೂರೆ ನಿಮಿಷಕ್ಕೆ ದ್ವಂಸ. ಅವರಿಗೆಲ್ಲ ಖುಶಿಯಾಗಿ ನಿನಗೆ ಥ್ಯಾಂಕ್ಸ್ ಕಳಿಸಿದ್ದಾರೆ ಅಂದು, ಇನ್ನಷ್ಟು ಇದ್ದರೂ ಅವರು ತಿನ್ನುತ್ತಿದ್ದರು ಅಂತಲೂ ಹೇಳಿ ಕಳುಹಿಸಿದ್ದರು.
ಮಂಜುನಾಥ ಗೆ ಈಗ ಎಲ್ಲ ಸರಿಯಿದೆಯಾ? ಹೇಗಿದ್ದೀರಿ?? ಅ ದಿನ ನಮಗೆಲ್ಲ ತುಂಬ ಗಾಬರಿಯಾಯ್ತು ಅಂತ ನಾನು ಅನ್ನಬೇಕಾದರೆ ಇಂವ ’ಮ್ಯಾಡಂ ಆದಿನ ಇವರೆಲ್ಲ ಸೇರಿ ಡಬ್ಬಿ ಮುಚ್ಚಳ ತೆಗೆದ ಕೂಡಲೆ ಘಂ ಎನ್ನುವ ಪರಿಮಳ ಬಂತು ಮ್ಯಾಡಂ. ನನಗೆ ಕೊಡದೆ ತಿಂದು ಬಿಟ್ಟಿದ್ದಾರೆ ಇವರೆಲ್ಲ ಅಂದಾಗ ನಮಗೆಲ್ಲ ನಗು.
ಯಾವತ್ತಿನ ಹಾಗೆ ವಿಷಯ ಎಲ್ಲಿಗೋ ಹೋಯಿತು....
ಈ ವಾರಾಂತ್ಯದಲ್ಲಿ ನಮಗೆ ಮಾಲವಿಕ ಪರವಾಗಿ ಮೊದಲ ಸಂಬಳದ treat. ನಿಹಾರಿಕ ಗೆ ಡಬಲ್ ಟ್ರೀಟ್..ಯಾಕಂದ್ರೆ ಇನ್ನು ಮುಂದೆ ಮಾಲವಿಕ ಕೂಡ ಅವಳಿಗೆ pocket money ಕೊಡುತ್ತಾಳಂತೆ. how sweet!!!
:-)

21 comments:

ಮನಸು said...

ಓಹೋ ಎಂತಹಾ ಸಹಾಯ ಮಾಡಿದ್ದೀರಿ ಮಾಲತಿ ಅಕ್ಕ... ನಿಮ್ಮ ಬಗ್ಗೆ ಖುಷಿ ಎನಿಸುತ್ತೆ...
ನಾವು ಪಾರ್ಟಿಗೆ ಬರಬಹುದಾ...!!! ನನ್ಗೆ ಟ್ರೀಟ್ ಸಾಕು ಪಾಕೆಟ್ ಮನಿ ಬೇಡಾ ಹಾಹಹ
So sweet....!!!

umesh desai said...

madam, good one. read ur other articles too at a stretch. this appealed to me a lot. keep up the good work.

ಸವಿಗನಸು said...

ನಿಹಾರಿಕಗೆ pocket money... so sweet.!!!
ಮಾಲವಿಕಗೆ ಮೊದಲ ಸಂಬಳ....so treat..!!!

prabhamani nagaraja said...

ಮಕ್ಕಳ ಸ೦ತಸದಲ್ಲಿಯೆ ನಿಮ್ಮ ಸ೦ತಸವನ್ನೂ ಕಾಣುತ್ತಾ, ನಮ್ಮೊ೦ದಿಗೆ ಹ೦ಚಿಕೊ೦ಡು, ನಮ್ಮನ್ನೂ ಸ೦ತಸಗೊಳಿಸಿದ ನಿಮಗೆ ಧನ್ಯವಾದಗಳು.

nenapina sanchy inda said...

ಸುಗುಣ, ಉಮೇಶ ದೇಸಾಯಿ, ಮಹೇಶ, ಪ್ರಭಾಮಣಿ ಎಲ್ಲರಿಗೂ ಧನ್ಯವಾದಗಳು.
ಖಂಡಿತ everyone is invited for the treat!!!
:-)
ಮಾಲತಿ ಎಸ್.

ವಿ.ರಾ.ಹೆ. said...

ಆಹ್! how sweet
ಬರಹ .. so sweet :)

ಹೆಣ್ಮಕ್ಳು ಮೇಕಪ್ ಮಾಡಿಕೊಳ್ಳೋದನ್ನ ನೋಡಕ್ಕೆ ಒಳ್ಳೇ ತಮಾಷೆಯಾಗಿ ಇರತ್ತೆ. ಏನೇನೋ ಬಳ್ಕೊಂಡು ಸುಂದ್ರಿಯಾಗ್ಬಿಟ್ವಿ ಅನ್ಕೋತಿರ್ತಾರೆ. ಆದ್ರೆ ಅಸಲಿಗೆ ಮೊದಲಿಗಿಂತ ವಿಚಿತ್ರವಾಗಿ ಆಗಿರ್ತಾರೆ .. ಹ್ಹ ಹ್ಹ..

nenapina sanchy inda said...

@ Vikas!!
I am totally against make up.:-)
but akka (malavika) puts on make up in such a way that we cannot make out. its sort of neat!!!ಇಲ್ಲದಿದ್ದರೆ ನಾನೆ ಅವಳಿಗೆ ಕಿರಿಕಿರಿ ಮಾಡ್ತೇನೆ...ಮೇಕ್ ಅಪ್ ಜಾಸ್ತಿ ಆಯ್ತು ಅಂತ.
thanks for reading!!
:-)
ಮಾಲತಿ ಎಸ್

V.R.BHAT said...

ಮಾಲತಿ ಮೇಡಂ, ನಿಮ್ಮ ಮನೆಯ ದಿನಚರಿಯೊಟ್ಟಿಗೆ ಘಟನೆಯೊಂದನ್ನೂ ಮತ್ತು ನೀವೆಲ್ಲಾ ಅದಕ್ಕೆ ಸ್ಪಂದಿಸಿದ ರೀತಿಯನ್ನು ಸಹಜ ಶಬ್ದಗಳಲ್ಲಿ ನಿರೂಪಿಸಿದ್ದೀರಿ. ಓದುತ್ತಾ ಇರುವಾಗ ಯಾರೋ ಅಕ್ಕನೋ ಅಮ್ಮನೋ ಕಥೆ ಹೇಳಿದಹಾಗೇ ಭಾಸವಾಗುತ್ತಿತ್ತು. ಬಹಳದಿನಗಳ ನಂತರ ನಿಮ್ಮ ಬ್ಲಾಗಿಗೆ ಬಂದೆ, ನನ್ನ ಸಮಯದ ಒತ್ತಡದಲ್ಲಿ ಕೆಲವೊಮ್ಮೆ ಬರಲಾಗಲಿಲ್ಲ, ಅದಕ್ಕೇ ನನಗೇ ಬೇಸರವಾಯ್ತು, ಲೇಖನ ಸರಳ ಸುಂದರವಾಗಿದೆ, ಧನ್ಯವಾದಗಳು

nenapina sanchy inda said...

V.R. Bhat ಅವರೆ!!
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಸುಮ್ನೆ ಮನಸ್ಸಿಗೆ ಬಂದಿದ್ದನ್ನ ಗೀಚಿದೆ ಅಷ್ಟೆ.
:-)
ಮಾಲತಿ ಎಸ್.

ಜಲನಯನ said...

ಮಾಲತಿ ..ಮಕ್ಕಳ ದಿನಚರಿಯನ್ನು ನೋಡಿ ಮುದಗೊಂಡು ಮನಸಾ ಅನುಭವಿಸಿ ನಮ್ಮೆಲ್ಲರಿಗೆ ಆಸೆ ಹುಟ್ಸೋ ಲೇಖನ ಜೊತೆಗೆ ಬೆಸೆದಂತೆ ಬಂದ ಮಂಜುನಾಥರ ಕಥೆ...ಚನ್ನಾಗಿದೆ...ನಿಹಾರಿಕಾಗೆ ಪಾಕೆಟ್ ಮನಿ ಎರಡು ಕಡೆಯಿಂದ ಸಿಗುತ್ತೆ ಅಂದರೆ... ಮೂಲ ಪ್ರಮಾಣ ಕಡಿಮೆ ಮಾಡಬೇಡಿ ಪಾಪ...ಹಹಹಹ...

nenapina sanchy inda said...

@ Dr. Azad!!
appreciation ಗೆ ಧನ್ಯವಾದಗಳು. ಇಲ್ಲ pocket moeny ಮೂಲ ಪ್ರಮಾಣ ಖಂಡಿತ ಕಡಿಮೆ ಮಾಡಲ್ಲ. ಹಾ ಹಾ!!
:-)
ಮಾಲತಿ ಎಸ್.

Anonymous said...

Hi nangu somberithara bidhgondu yaradru make up madkollodanna noduva antha annistidhe.Nice article Malthi.veda

nenapina sanchy inda said...

namm manege bandubiDi veda!!
thank you
:-)
malathi S

Unknown said...

Did you really not go to college? Unbelievable!

Unknown said...

Malathi Mai,

Please convey our (Pallavi and my) best wishes to Maalavika for her new job. I hope you all enjoyed the treat! Also, congrats to Srikanth maam. Its good to know that the strength of your organisation(s) have crossed 700 employees. Its surely a feel-good factor to experience the growth of a company from 4 to 700. Great feat! Wish you many more successful moments in the days to come.

Regards,
Naveen & Pallavi

nenapina sanchy inda said...

thanks a load Naveen. thanks for those appreciative lines!!! yes we will strive to do better!!
can i have ur mail id pls?? i am no longer on fb.

minchulli said...

ಮಾಲತಿಯಕ್ಕ, ಇದುವರೆಗೆ ನಾನು ಎಂಥ ಅಜ್ಞಾನಿ ಆಗಿದ್ದೆ ಅಂದ್ರೆ ನಿಮ್ಮ ಬ್ಲಾಗ್ ಇರುವುದು ನಂಗೆ ಗೊತ್ತೇ ಇರಲಿಲ್ಲ. ಹಲವು ಬಾರಿ ನನ್ನ ಬ್ಲಾಗ್ ಕಾಮೆಂಟ್ ನಲ್ಲಿ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗಲೂ ನಿಮ್ಮ ಬ್ಲಾಗಿಗೆ ಲಿಂಕ್ ಆಗಿರಲಿಲ್ಲ. ಆವಾಗ ನಿಮ್ಮ ಬ್ಲಾಗ್ ಇಲ್ಲ ಎಂದುಕೊಂಡೆ. ಇವತ್ತು ಆಕಸ್ಮಿಕವಾಗಿ ಸಿಕ್ಕಿತು ಲಿಂಕ್. ಬಂದು ನೋಡಿದರೆ ವಾಹ್ ಎನಿಸಿತು. ಎಷ್ಟು ಚಂದ ಬರೀತೀರಿ .. ಅಂದ ಹಾಗೆ ನಿಮ್ಮ ಮನೆ ತೀರ್ಥ ಹಳ್ಳಿಯಾ ? ನನ್ನ ಮನೆ ಕುಪ್ಪಳ್ಳಿ. ನಿಮ್ಮ ಹಾಗೆ ತವರು ಮನೆ ಘಟ್ಟದ ಕೆಳಗೆ; ಗಂಡನ ಮನೆ ಘಟ್ಟದ ಮೇಲೆ... ನಾಡಿದ್ದು ಊರಿಗೆ ಹೋಗುವ ಸಂಭ್ರಮ ...

neelesh said...

i have read it before its nice specially nimma ajji makeup was nice,kelavomme nivu baredaddu odidaga yavudo sahithiya barahagaleno annisuthade.and ur maalu is vry beautiful sply her eyes.now a days i look forward to ue new post 2 days once nimma blog open madi noduthiruthene

Anonymous said...

The photo proves that black and white photography sometimes scores over color.

Amazing that even the trivial ಸುಮ್ನೆ ಒಂದಿಷ್ಟು.......... can be so charming as to become the fav post of its creator!

-- Shree Kar

Anitha Naresh Manchi said...

ನಾನೂ ಬರ್ತೀನಿ ನಿಲ್ಲಿ.. ಪಾರ್ಟಿ ಮುಗಿಸಿ ಬಿಡಬೇಡಿ..

ಚುಕ್ಕಿಚಿತ್ತಾರ said...

Malathakka..
nihaarikalante nanna magaloo talege ondippattu clip haakuttaale.ella tegedaroo tale baachuvaaga baachanigege ondu eradaadaroo sikkikolluttave.... chandavaagide baraha :))