ಮೊನ್ನೆ ಒಂದು ವೈರಲ್ ಆದ ಸುದ್ದಿ ಓದ್ತಾ ಇದ್ದೆ. ಏನಿಲ್ಲ ಯಾರೋ ಮನೆ ಮಾಲೀಕರು ಬಾಡಿಗೆದಾರರ deposit ನಿಂದ 5000/- ಮಾತ್ರ ಕಟ್ ಮಾಡಿ ಉಳಿದ ಹಣವನ್ನು ತಂಟೆ ತಕರಾರಿಲ್ಲದೇ ವಾಪಸ್ ಮಾಡಿದರು ಅಂತ..
ನಾವು ಬೆಂಗಳೂರಿಗೆ ಬಂದು ಈ ತಿಂಗಳ ಕೊನೆಗೆ 25 ವರ್ಷ ಆಗಲಿದೆ. ನಮ್ಮ ಮೊದಲ ಬಾಡಿಗೆ ಮನೆ, ಚಿಕ್ಕದು, 5 ವರ್ಷದ ಲೀಸ್ ಮೇಲೆ ಪಡಕೊಂಡಿದ್ಫು. ಆ ಐದು ವರ್ಷಗಲ್ಲಿ, ನಮ್ಮ ಸಂಸ್ಥೆ ಹುಟ್ಟಿ, ಹಲವಾರು project ಗಳನ್ನು ನಿಭಾಯಿಸುತ್ತ, ಒಳ್ಳೆ ಹೆಸರನ್ನೂ ಸಂಪಾದಿಸಿತು. ಐದು ವರ್ಷಗಳ ನಂತರ ಲೀಸ್ ಮುಗಿದ ಹಾಗೆ, ಸಂಸ್ಥೆಯ ಹಿರಿಕರ ಸಲಹೆಯ ಮೇರೆಗೆ ದೊಡ್ಡ ಮನೆ ಬಾಡಿಗೆ ಪಡೆಯಲು ನಿಶ್ಚಯಿಸಿದೆವು. ಆಗ ಅಕ್ಕ ಪಕ್ಕ ದವರು, ಪರಿಚಯ ಇದ್ದವರು, ಇಲ್ಲದವರು ಎಲ್ಲರೂ ಸಿಕ್ಕಿದ್ದೆ chance ಅಂತ ಶ್ರೀಕಾಂತ್ ರವರನ್ನು ಹೆದರಿಸಲು ಪ್ರಾರಂಭಿಸಿದರು...ನಿಮ್ಮ owner ತುಂಬಾ ಕಿರಿ ಕಿರಿ, ಹಳೆಯ ಬಾಡಿಗೆ ದಾರರಿಗೆ ದುಡ್ಡು ವಾಪಸ್ ಮಾಡಲು ತುಂಬಾ ಸತಾಯಿಸಿದ್ದಾರೆ ಅಂತ. " ದೊಡ್ಡ ಗಟ್ಟಿಯಾದ ಬೀಗ ಜಡಿದು, ದುಡ್ಡು ಕೊಟ್ಟ ಮೇಲೆ ಮನೆ ಅವರಿಗೆ ವಹಿಸಿ ಕೊಡಿ ಮುಂತಾದ ಸಲಹೆಗಳು...ಆ ಲೀಸ್ ಮೊತ್ತ ದೊಡ್ಡದೇ...ನಮಗೆ ಬೇಕಿತ್ತು. ಶ್ರೀಕಾಂತ್ ಆವಾಗ ಚಿಕ್ಕ ಚಿಕ್ಕ ವಿಷಯಕ್ಕೂ ನನ್ನ ಸಲಹೆ ಕೇಳುವವರು. ಎಲ್ಲರೂ ಹೇಳುವುದು ನಿಜ ಇರಬಹುದಾ? ನಿನಗೇನನ್ನಿಸುತ್ತೆ?
ಆವಾಗ ಸಣ್ಣ ಪ್ರಾಯ, ಏನೋ ಜಿದ್ದು, ಹುಮ್ಮಸ್ಸು, ಏನು ಬೇಕಾದರೂ ಸಾಧಿಸಬಹುದು ಎಂಬ ಹುಂಬ ಧೈರ್ಯ..( ಬ್ಯಾಂಕ್ ಕೆಲಸ ಬಿಡ್ತೇನೆ ಎಂದಾಗ ನಾನು ಹಿಂದೆ ಮುಂದೆ ಆಲೋಚಿಸದೆ, dont worry, manual labour ಬೇಕಾದ್ರು ಮಾಡಲು ನಾನು ರೆಡಿ...- ನಾನು ಮಾಡಿರುವ distance education ಡಿಗ್ರಿ ಗೆ ಒಳ್ಳೆ ಕೆಲಸ ಸಿಗುವ ಭರವಸೆ ನನಗಿರಲಿಲ್ಲ 😀😀 - ಆದರೂ ಒಂದು ಕಡೆ life style e-magazine ಗೆ content developer ಹುದ್ದೆಗೆ interview ಗೆ ಹೋಗಿ..ಅವರು 8000 ರೂ ಸಂಬಳ ಕೊಡಲು ರೆಡಿ ಯಾಗಿದ್ದರು. ಆಫಿಸ್ ಮಣಿಪಾಲ್ ಸೆಂಟರ್ ನಲ್ಲಿ. ನಾವಿದ್ದದು ರಾಜಾಜಿನಗರ. ಎರಡು ಬಸ್ ಚೇಂಜ್ ಮಾಡಿ ಹೋಗಬೇಕಿತ್ತು. ನನಗೂ ಒಪ್ಪಿಗೆ ಇತ್ತು. ಆದರೆ ಶ್ರೀಕಾಂತ್ 'ಇಲ್ಲ 10000 ಕೇಳು ಅಂದ್ರು...ಆ.ಆಫಿಸ್ ನವರು ಪಾಪ ನಾವೂ ಇತ್ತೀಚಿಗೆ ನಾವು ಶುರು ಮಾಡಿದ್ದೇವೆ...ಅಷ್ಟೆಲ್ಲ ಸಂಬಳ ಕೊಡಲು ಆಗುವುದಿಲ್ಲ, ಮುಂದೆ ಖಂಡಿತ ಸಂಬಳ ಹೆಚ್ಚಿಸುವಾ ಅಂದ್ರು ....ಅಷ್ಟರಲ್ಲೇ ನಮಗೆ ಬೇರೆ ಪ್ರೊಜೆಕ್ಟ್ ಸಿಕ್ಕಿ, ನಾನು ಅದರಲ್ಲೇ involve ವಾಗುವುದೆಂದಾಯಿತು. ಅದೇ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ...🙏🙏
ಯಾವತ್ತಿನ ಹಾಗೆ ಟ್ರಾಕ್ change ಆಯ್ತು)
ಐದು ವರ್ಷದಲ್ಲಿ ಲೀಸ್ ನ ಮೊತ್ತದಲ್ಲಿ ಎಷ್ಟು ಕಡಿತ ವಾಗುತ್ತದೆ ಅಂತ ಶ್ರೀಕಾಂತ್ ಖುದ್ದು ಲೆಕ್ಕ ಹಾಕಿ owner ಗೆ 'ಸರ್ ಇಷ್ಟು ಹಣ ಬರಬೇಕು' ಎಂದಿದ್ದರು.. ಅವರೂ ಹೂಂ ಸರಿಯಾಗಿದೆ...ಪೈಂಟಿಂಗ್ ಹಣ ಒಂದು ಸೇರಿಸಿ. ಚೆಕ್ 'ಈ' ತಾರೀಕಿಗೆ ತಂದು ಕೊಡ್ತೀನಿ' ಅಂದ್ರು
ನಿನ್ನ intution ಏನು ಹೇಳುತ್ತೆ ಅಂತ ಶ್ರೀಕಾಂತ್ ಕೇಳಿದ್ದರು.
ನಾನು 'ಖಂಡಿತ ಏನೂ ತಕರಾರಿಲ್ಲದೇ ನಮ್ಮ ಹಣ ವಾಪಸ್ ಕೊಡುತ್ತಾರೆ...ಅಷ್ಟಕ್ಕೂ ಈಗಲೇ ಚಿಂತೆ ಯಾಕೆ ಮಾಡ್ತೀರಾ ಅಂದೆ...
ಹೇಳಿದ ತಾರೀಕಿಗೆ ಬೆಳ್ಳಂಬೆಳ್ಳಿಗೆ ಬೆಲ್. ಮನೆ ಮಾಲೀಕರು ಚೆಕ್ ಕೊಟ್ಟು ಹೋದರು..
ಆಮೇಲೆ ಚೆಕ್ bounce ಆಗುತ್ತೆ ಅಂತ ಎಲ್ಲರೂ ಹೇಳಿದರು. 😀 ಶ್ರೀಕಾಂತ್ ಬ್ಯಾ0ಕ್ open ಆಗಲು ಕಾಯುತ್ತಿದ್ದು, ಬೇಗ ಹೋಗಿ ಚೆಕ್ ಕೊಟ್ಟರು...ಅಲ್ಲೂ ಎನೂ ಕಿರಿಕಿರಿಯಾಗಲಿಲ್ಲ...ದುಡ್ಡು credit ಆಯ್ತು
ಆ ಮೇಲೆ ಜನರು ಅಷ್ಟಕ್ಕೂ ಸುಮ್ಮನಾದರ' ಇಲ್ಲ 'ನಿಮ್ಮ ಗ್ರಹಚಾರ ಒಳ್ಳೆದಿತ್ತು ಅಂದ್ರು 😀😀
ಇದನ್ನು ಮೆಲುಕು ಹಾಕಲು ಶ್ರೀಕಾಂತ್ ಎ ಇಲ್ಲ 🙂


No comments:
Post a Comment