ಸ್ವಲ್ಪ ಸಮಯ ಅಲೋಪತಿ ಔಷಧಿ ಜತೆ ಆಯುರ್ವೇದ ಔಷಧಿ ಕೂಡ ತೆಗೋತಾ ಇದ್ರು ಶ್ರೀಕಾಂತ್. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇತ್ತೆಂದು ನನ್ನ ಅನಿಸಿಕೆ.
ಒಮ್ಮೆ ಒಂದು ದೊಡ್ಡ ಆಸ್ಪತ್ರೆಗೆ ಹೋದ್ವಿ, ಲೀವರ್ transplant ಬಗ್ಗೆ ಸೆಕೆಂಫ್ opinion ತೆಗೊಳ್ಳಲು....ನನಗೆ ಹೋಮಿಯೋಪತಿ ಔಷಧಿ ಮೇಲೆ ಯಾಕೋ ಅಪಾರವಾದ ನಂಬಿಕೆ...ಶ್ರೀಕಾಂತ್ ಗೆ ಇರಲಿಲ್ಲ. ಡಾ. ಬಳಿ ನಾನು ಸಣ್ಣ ದನಿಯಲ್ಲಿ ಹೋಮಿಯೋಪತಿ ಔಷಧಿ ಅಂದದ್ದೇ ಅವರು ಟೇಬಲ್ ಮೇಲೆ ಬಲವಾಗಿ ಗುದ್ದಿ, ಗಟ್ಟಿ ದನಿಯಲ್ಲಿ...ಲೀವರ್ cirrhosis ಗೆ ಅಲೋಪತಿ ಔಷದಿ ಬಿಟ್ರೆ ಯಾವುದನ್ನೂ ತೆಗೋ ಬಾರದು ಅಂದಿದ್ದ ರಭಸಕ್ಕೆ ಶ್ರೀಕಾಂತ್ ಬಿಡಿ ನನಗೆ ಎಷ್ಟು ಭಯ ಆಯಿತೆಂದು ಹೇಳಲಿಕ್ಕೆ ಆಗದು. 😏😏 ಶ್ರೀಕಾಂತ್ ಮರು ದಿನದಿಂದ ಆಯುರ್ವೇದ ಔಷಧಿ ಬಿಟ್ಟೆ ಬಿಟ್ರು. ಆಮೇಲೆ ಪದೇ ಪದೇ ಆರೋಗ್ಯ ಬಿಗಡಾಯಿಸಲು ಆರಂಭ ವಾದಾಗ ನಾನೂ, ಅಕ್ಕ ಕೂಡ ಪುನಃ ಅದನ್ನು ಶುರು ಮಾಡಲು ಕೇಳಿಕೊಂಡೆವು. ಅವರು ಒಪ್ಪಲೇ ಇಲ್ಲ.
ಕಾಕಿ ಸೊಪ್ಪು, ತಂಬಳಿ, ಮಜ್ಜಿಗೆ ಎಲ್ಲ ಒಳ್ಳೇದು ಅಂತ ಅದೆಲ್ಲ ಮಾಡ್ತಿದ್ದೆ.
ಯಾರೋ ಹೇಳ್ತಿದ್ರು 'ನೀನು ಶ್ರೀಕಾಂತ್ ನನ್ನು ತುಂಬಾ ಚೆನ್ನಾಗಿ ನೋಡಿ ಕೊಂಡೆ ಅಂತ
ಇಲ್ಲ ಹಲವಾರು ಬಾರಿ ನನ್ನ patience ಕೈಕೊಟ್ಟಿದೆ.
ಒಂದು ಸಂದರ್ಭ ಶೇರ್ ಮಾಡ್ತೇನೆ...
ಆ ದಿನ ಏಳುವಾಗ ಲೇಟ್. 11 ಗಂಟೆಗೆ ಡಾಕ್ಟರ್ ಅಪ್ಪೋಯಿಂಟ್ಮೆಮೆಂಟ್ಟ್ನ. ಮಜ್ಜಿಗೆ ಕಡಿತಿದ್ದೆ...ಹಾಲು ಉಕ್ಕಿ ಬಿತ್ತು. ಅದನ್ನು ಕ್ಲೀನ್ ಮಾಡಿದೆ. ಆಮೇಲೆ ಎಣ್ಣೆ ಬಾಟಲಿಯಲ್ಲಿ ತುಂಬಿಸುತ್ತಿದ್ದ ಹಾಗೆ, ಕೈ ಅಲ್ಲಾಡಿ ಅದೂ ಸ್ವಲ್ಪ ನೆಲದ ಮೇಲೆ ಬಿತ್ತು...ಅದನ್ನೂ ಕ್ಲೀನ್ ಮಾಡಿದೆ..ಸುಮಾರು ಹೊತ್ತು ತಗುಲಿತು. ದೋಸೆ ಬೇರೆ. ಕಾಯಿ ತುರಿದು ಚಟ್ನಿ ಮಾಡಲಿಕ್ಕಿತ್ತು. ನಿಹಾ ಗೆ ಒಂದು workshop conduct ಮಾಡಲಿಕ್ಕಿತ್ತು, ಅವಳೂ ಬೇಗ ಹೊರಡಿಲಿಕ್ಕಿತ್ತು. ಕೇಕ್ ತಯಾರಿಸಿ, ದೊಡ್ಡ ಕೇಕ್ ಆದ್ದರಿಂದ ಅಕ್ಕನಿಗೆ ಅದರ ಡೆಲಿವರಿ ಮಾಡಲಿಕ್ಕಿತ್ತು. ನನಗೆ ತಿಂಡಿ ಪ್ಲಸ್ ಆಸ್ಪತ್ರೆಗೆ ಒಯ್ಯಲು ಉಪ್ಪು ರಹಿತ ಊಟದ ತಯಾರಿ ಇತ್ತು. ಅದರ ಮಧ್ಯೆ ಶ್ರೀಕಾಂತ್ ಮಜ್ಜ8ಗೆ ಕುಡಿಯಲು ಬಂದ್ರು...ಅದರಲ್ಲಿನ ಬೆಣ್ಣೆ ತೆಗೆಯಲು ಪುರುಸೊತ್ತು ಆಗಿರಲಿಲ್ಲ. 'ಸಾರಿ, ನಿಧಾನಕ್ಕೆ ಮಜ್ಜಿಗೆ ಬೆಸೆಯಿರಿ... ಬೆಣ್ಣೆ ತೆಗಿಲಿಲ್ಲ ಅಂದೆ...ಅದಕ್ಕೆ ಅವರು 'ಕೂಡಲೇ ಕೂಡಲೇ ಆ ಕೆಲಸ ಮಾಡಿದ್ರೆ ತಾಪತ್ರಯ ಇರಲ್ಲ ಅಂದ್ರು' ಎಲ್ಲಿತ್ತೋ ಸಿಟ್ಟು...ನಾನು ಕಿರುಚಿ'dont you dare lecture me..ನೀವು ನಾನು ಹೇಳಿದ ಕೂಡಲೇ ಡಾಕ್ಟರ್ ಬಳಿ ಹೋಗಿದಿದ್ರೆ ಈ ತಾಪತ್ರಯ ಇರುತ್ತಿರಲಿಲ್ಲ' ಅಂದೆ...he was so taken aback at my outburst..🤔🤔
ಇನ್ನೊಂದು ದಿನ ಹೀಗೆ...ಒಣಗಿದ ಬಟ್ಟೆಯ ರಾಶಿ ಮಂಚದ ಮೇಲೆ ಬಿದ್ದಿತ್ತು. ಹುಷಾರು ತಪ್ಪಿದ ಮೇಲೆ ಆಫಿಸ್ ಮೀಟಿಂಗ್ ಎಲ್ಲ ನಮ್ಮ ಮನೆಯಲ್ಲಿ. ಅವರಿಗೆ ಟಿ ಎಲ್ಲ ಮಾಡಲಿಕ್ಕೆ ಇರುತ್ತಿತ್ತು. ಯಾಕೋ ಆ ದಿನ ಕೂಡಬ್ತುಂಬಾ ಕೆಲಸ.. ಮಕ್ಕಳಿಬ್ಬರೂ ಮನೆಯಲ್ಲಿ ಇರಲಿಲ್ಲ. ನಾನು ಅಡಿಗೆ ಮನೆ ಚೊಕ್ಕಗೊಳಿಸಿ, ಬಟ್ಟೆ ಮಡೆಚಲು ಹೋದಾಗ....ಬಟ್ಟೆ ಎಲ್ಲ ಶ್ರೀಕಾಂತ್ ನೀಟಾಗಿ ಮಡಚಿ ಇಟ್ಟಿದ್ದರು. ನಾನು ತುಂಬಾ emotional ಆಗಿ thank you srikanth... ಅಂದಿದ್ದಕ್ಕೆ..ಅಯ್ಯೋ ನಿನಗೆ ಹೆಲ್ಪ್ ಆಗೋದಾದರೆ ದಿನಾ ಬಟ್ಟೆ ಮಡಚಿ ಇಡ್ತೇನೆ ...ಅಂದ್ರು..ಬೇಜಾರಾಯಿತು ಕೇಳಿ....ಬೇಡ ಅಂದೆ...
ಹೀಗೆ i was/am not perfect...ಐದು ತಿಂಗಳಾಯ್ತು ಹೋಗಿ
ನಾಡಿದು ಬಾನುವಾರ ನಮ್ಮ ಮದುವೆಯಾಗಿ 39 ವರ್ಷ. ನಾನು 50 ವರ್ಷ ಜಗಳ ಆಡ್ತಾ, ತಮಾಷೆ ಮಾಡ್ತಾ ಇರಬಹುದೆಂದು ಕೊಂಡಿದ್ದೆ..😭😭. ,ಈ ಫೋಟೋ ಅವರ ಮೊಬೈಲ್ ನಲ್ಲಿತ್ತು


No comments:
Post a Comment