July 25, 2025

ಸಾಲ್ - ಆಂಬ್ಯಾ ಕೊದ್ದೇಲ್

  


ಇದೊಂದು ಪಕ್ಕಾ 1೦೦% ಕೊಂಕಣಿ ಅಡುಗೆ. ತುಂಬಾ ಜನ ಧಾವಂತದ ಈ ಬದುಕಿನಲ್ಲಿ ಮರೆತಿರಬಹುದು. ಈ ಕೋದ್ದೆಲ್ ಅಥವಾ ಹುಳಿ ಇದ್ದಲ್ಲಿ ಒಂದು ತುತ್ತು ಹೆಚ್ಛೆ ಉಣ್ಣಬಹುದು. ಸಾಧಾರಣವಾಗಿ ಇದು ಮಳೆಗಾಲದಲ್ಲಿ ಮಾಡುವಂತಹ ಅಡುಗೆ. ಆದರೆ ಈಗ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ಮಂಗಳೂರು ಸ್ಟೋರ್ಸ್ ನಲ್ಲಿ ಉಪ್ಪಿಗೆ ಹಾಕಿಟ್ಟ ಮಾವಿನ ಕಾಯಿ ಹಾಗೂ ಹಲಸಿನ ಸೊಳೆ ಯಾವತ್ತೂ ಲಭ್ಯ.

ಇದಕ್ಕೆ ಬೇಕು : ಉಪ್ಪಿಗೆ ಹಾಕಿಟ್ಟ ಹಲಸಿನ ಸೊಳೆ, ಉಪ್ಪಿಗೆ ಹಾಕಿಟ್ಟ ಮಾವಿನ ಕಾಯಿ.


ಹಲಸಿನ ಸೊಳೆಯನ್ನು ರಾತ್ರಿಯೇ ನೀರಲ್ಲಿ ಹಾಕಿಡಿ. ಬೆಳಿಗ್ಗೆ ಚೆನ್ನಾಗಿ ತೊಳೆದು ನೀರಲ್ಲಿ ಹಾಕಿಡಿ. ಉಪ್ಪೆಲ್ಲ ಕಡಿಮೆಯಾದ ಮೇಲೆ, ತೊಳೆದ ಮಾವಿನ ಕಾಯಿ ಜತೆ ಬೇಯಿಸಿ.

ಮಸಾಲೆಗೆ : ತೆಂಗಿನ ಕಾಯಿ ತುರಿ, ಕೆಂಪು ಮೆಣಸು, ಚೂರೇ ಚೂರು ಹುಣಸೆ...ಬೇಯಿಸಿದ ನೀರು ಸೇರಿಸಿ ನುಣ್ಣಗೆ (ಕೊಂಕಣಿಯಲ್ಲಿ ಗಾಂಧ್..ಅಂದ್ರೆ ಗಂಧ ದಷ್ಟು ನುಣುಪು) ರುಬ್ಬಿ.  ನಿಮಗೆಷ್ಟು ತೆಳ್ಳಗೆ  ಬೇಕು ಅಷ್ಟು ನೀರು ಸೇರಿಸಿ. ಉಪ್ಪು ಚೆಕ್ ಮಾಡಿ ಬೇಕಿದ್ದಲ್ಲಿ  ಸೇರಿಸಿ. 

ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಒಗ್ಗರಣೆ ಹಾಕಿ...

ಇನ್ನು ಶ್ರಾವಣ ಶುರು...ನಾನ್ ವೆಜ್, ಬೆಳ್ಳುಳ್ಳಿ, ನೀರುಳ್ಳಿ  ನಿಷಿದ್ಧ...ಅದಕ್ಕೆ ಮುಂಚೆ ಈ ಪದಾರ್ಥ ಮಾಡಿ ತಿಂದು....

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ...❤️🙏🙂👍

ಸಾಲ್ ಆಂಬ್ಯಾ ಕೊದ್ದೇಲ

ಮರೆತುಹೋದ  ಈ ಖಾದ್ಯ ನೆನಪಿಸಿದ  ಷಡ್ರಸ channel ಗೆ ತುಂಬು ಹೃದಯದ ಧನ್ಯವಾದಗಳು.. 

shadrasa cooking channel

please subscribe to this channel 👆👆🙏🙏

brined mango courtesey : Dr. Rajendra Hegde

No comments: