ಸಿಗ್ನಲ್ ಬಳಿ ಗಾಡಿ ನಿಲ್ಲಿಸಿದಾಗ ಒಬ್ಬ ಮಹಿಳೆ ಪುಟ್ಟ ಮಗುವೊಂದನ್ನು ಕುಂಕುಳಿಗೇರಿಸಿ ಬಂದು, ಏನಾಗ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಗಾಡಿಯ ಮುಂಬದಿಯ ಗಾಜನ್ನು ಚಕಚಕನೆ ಸ್ವಚ್ಛ ಮಾಡಿ ಬಿಟ್ಟಳು. ಗೂಗಲ್ ಪೆ ಅಂತ ಇರುವುದರಿಂದ ಚಿಲ್ಲರೆ ಕಾಸು ಇಟ್ಟುಕೊಳ್ಳೋದು ಕಡಿಮೆ ಯಾಗಿದೆ. ಅಕ್ಕನ ಬಳಿ ಕೂಡ ಕ್ಯಾಶ್ ಇರಲಿಲ್ಲ. ಸಿಗ್ನಲ್ ಚಾಲೂ ಆಗುವ ಮುಂಚೆ ನನ್ನ ಪರ್ಸ್ ನಲ್ಲಿ ತಡಕಾಡಿ 20 ರೂ ನ ಕಾಯಿನ್ ಒಂದು ಸಿಕ್ಕಿ ಅದನ್ನು ಯಶವಂತ್ ಮೂಲಕ ಆಕೆಗೆ ರವಾನಿಸಿದೆ.
ಆಕೆ ತಿರುಪೆ ಎತ್ತಿಲ್ಲ ಅಂತ ಖುಷಿ ಪಡಬೇಕೆ? ಅಥವಾ ನಮ್ಮ ಪಾಪಾಪ್ರಜ್ಞೆ ಯನ್ನು ಗುರಿಯಾಗಿಸಿ ದುಡ್ಡು ಮಾಡಿಕೊಂಡಿದ್ದಕ್ಕೆ irritate ಆಗಬೇಕೆ ...ಇದೇ dilemma
ಅಂದ ಹಾಗೆ ನನ್ನ ಪಾಕಶಾಲೆ/ ತೋಟದ ಕೆಲಸ ಪ್ರಯಾಣದ ಬಗ್ಗೆ ವಿಡಿಯೋ ಗಳನ್ನು ನಾನು you ಟ್ಯೂಬ್ ನಲ್ಲಿ ಹಾಕ್ತಿದ್ದೇನೆ. interest ಇದ್ದವರು subscribe ಮಾಡಿ ನೋಡಬಹುದು. 🙏🙏
No comments:
Post a Comment