ವಯಸ್ಸು ಆಗ್ತಾ ಇದ್ದ ಹಾಗೆ ಕೆಲವು tips
1. ಸ್ನಾನದ ಕೋಣೆಯಲ್ಲಿ ಒಂದು ನೈಲ್ ಕಟ್ಟರ್ ಇಟ್ಟುಕೊಂಡು ಬಿಡಿ. ಕಾಲಿನ ಉಗುರು ಗಟ್ಟಿಯಾಗುರುತ್ತೆ, ಕೆಲವೊಮ್ಮೆ ಉಗುರು ಬೆಳೆಯಲು ಬಿಟ್ಟರೆ ಅವು ಒಳಮುಖವಾಗಿ ಚರ್ಮದ ಒಳಹೊಕ್ಕುವ ಸಾಧ್ಯತೆ ಇದೆ. ಆಗ ತುಂಬಾ ನೋವಾಗುತ್ತೆ. ಸ್ನಾನದ ಬಳಿಕ ಉಗುರು ಮೆತ್ತಗಾಗುತ್ತೆ. ಆಗ ಉಗುರು ಕತ್ತರಿಸಲು ಸುಲಭವಾಗುತ್ತೆ. ಕೆಲವರ ಕಾಲು ಉಗುರುಗಳನ್ನು ನೋಡಿದ್ದೇನೆ. ಅಸಹ್ಯವಾಗಿ ಕಾಣುತ್ತೆ. ವಯಸ್ಸಾದರೇನಂತೆ...one should be well groomed..ಜೀವನದಲ್ಲಿ ಇನ್ನೇನಿದೆ ಅಂದು ಕೊಂಡು dont let yourselves go...ದೈಹಿಕ ಸ್ವಚ್ಛತೆಯನ್ನು ಕಾಪಾಡಿ. ಉಗುರು ಕಟ್ ಮಾಡಿ, ಕೂದಲು ಒಪ್ಪವಾಗಿರಿಸಿ, ಚೆಂದದ ಬಟ್ಟೆ ಧರಿಸಿ
2. ತುಂಬಾ ನೀರು ಕುಡಿಯಿರಿ. ಮನೆಯಲ್ಲೇ ನಿಧಾನವಾಗಿ ವಾಕ್ ಮಾಡಿ.
3. ರಾತ್ರಿ 7.30 ಗೆ ಮುಂಚೆ ಊಟ/ತಿಂಡಿ ಮುಗಿಸಿಬಿಡಿ. ಒಂದು ಸಣ್ಣ ವಾಕ್ ಹೋಗಿ. ರಾತ್ರಿ ಹಸಿವೆ ಆದ್ರೆ ಒಂದು ಗೇರು ಬೀಜ ಅಥವಾ ಒಂದು ಬಾದಾಮಿ ತಿನ್ನಿ.
4. ಚಳಿಗಾಲ ಹತ್ತಿರ ಬರುತ್ತಿದೆ. ಕಾಲು ಬುಡಕ್ಕೆ vaseline ಹಚ್ಚಲು ಶುರು ಮಾಡಿ. ಹಚ್ಚಿ ಕಾಲು ಚೀಲ ಧರಿಸಿ. ಮನೆಯಲ್ಲಿ ಜಾರದಂತಹ ಬುಡ ವಿದ್ದ ಚಪ್ಪಲಿ ಧರಿಸಿ. ಜಮಖಾನ ಹಾಸಿಡಿ..ಕೆಲವರಿಗೆ ಚಳಿಗಾಲದಲ್ಲಿ ಮಂಡಿ ನೋವು ಶುರುವಾಗುತ್ತೆ. ನೋವು ಶುರು ಆಗುವ ಮುಂಚೆಯೇ ನೋವಿನ ತೈಲ ಹಚ್ಚಲು ಪ್ರಾರಂಭಿಸಿ. ದಿನಕ್ಕೆ ಒಂದು ಚಮಚ ತುಪ್ಪ ಕಡ್ಡಾಯವಾಗಿ ಸೇವಿಸಿ..
5. ರಾತ್ರಿ ಎಚ್ಚರವಾದಾಗ...ನೀರು ಕುಡಿಯಲು, ಅಥವಾ ಬಾತ್ರೂಂ ಹೋಗ ಬೇಕಾದಾಗ, ನಿಧಾನಕ್ಕೆ ಎದ್ದು, ಎರಡು ನಿಮಿಷ ಕೂತಿದ್ದು..ಆಮೇಲೆ ಏಳಿ..
6. ಮೂತ್ರ ಲೀಕ್ ಆಗುವ ಶಂಕೆ ಇದ್ದಲ್ಲಿ, ಅಥವಾ ಕೆಮ್ಮುವಾಗ/ ಸೀನುವಾಗ ಮೂತ್ರ ಲೀಕ್ ಆಗುತ್ತಿದ್ದಲ್ಲಿ : ಮಾರುಕಟ್ಟೆಯಲ್ಲಿ ಹಲವಾರು ಒಳ್ಳೆಯ quality ಯ ದಯಾಪರ್ ಇದ್ದಾವೆ. ನಿಸ್ಸಂಕೋಚವಾಗಿ ಖರೀದಿಸಿ ಬಳಸಿಕೊಳ್ಳಿ...ಇದರಲ್ಲಿ ನಾಚಿಕೆ ಪಡುವಂತದ್ದು ಏನೂ ಇಲ್ಲ. ಮುಜುಗರವಾದರೆ ಆನ್ಲೈನ್ ಮುಖಾಂತರ ತರಿಸಿಕೊಳ್ಳಿ 👍
7. ಕಾಲು ಒರೆಸುವ ಬಟ್ಟೆ ತೂತು, ಹರಿದು ಹೋಗಿದ್ದಲ್ಲಿ ಅಂತದನ್ನು ಬಳಸಬೇಡಿ...ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು. ವಯಸ್ಸಾಗುತ್ತ ಮೂಳೆ ಗಟ್ಟಿ ಇರುವುದಿಲ್ಲ. ಜಾಗ್ರತೆ ವಹಿಸಿದ್ದಷ್ಟು ನಮಗೇ ಒಳ್ಳೆಯದು. ಇತರರಿಗೆ ತೊಂದರೆ ಕೊಡುವುದು ತಪ್ಪುತ್ತದೆ.
ಸಧ್ಯಕ್ಕೆ ಇಷ್ಟು ನೆನಪಾಗಿದ್ದು....
be happy..
No comments:
Post a Comment