ದಕ್ಷಿಣ ಕನ್ನಡದಲ್ಲೆಲ್ಲ ಸಾರಾಸಗಟಾಗಿ ರಸ್ತೆ ಬದಿಯಲ್ಲಿ ಬೆಳೆಯುವ ಚಗತೆ ಸೊಪ್ಪು, ಇಲ್ಲಿ ಬೆಂಗಳೂರಿನಲ್ಲಿ ದುಡ್ಡು ಕೊಟ್ಟು ತೆಗೋತೀವಿ. 😁
ಇದರ ತಂಬುಳಿ ಸೊಗಸಾಗಿರುತ್ತದೆ.
ಎಳೆ ಸೊಪ್ಪು ಅಥವಾ ಚಿಗುರು ಇದ್ದರೆ ಇನ್ನೂ ಉತ್ತಮ - ಒಂದು ಹಿಡಿ, ಒಂದು ದೊಡ್ಡ ಟೇಬಲ್ ಚಮಚ ತಾಜಾ ಕಾಯಿ ತುರಿ, ಹಸಿಮೆಣಸು ಅಥವಾ ಹೊಟ್ಟೆಯ ಪ್ರಾಬ್ಲಮ್ ಇದ್ದರೆ 5 ಕರಿ ಮೆಣಸು....ಹಸಿ ಮೆಣಸು ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಬಹುದು, 1/2 ಟೀ ಸ್ಪೂನ್ ಜೀರಿಗೆ, ಸಣ್ಣ ಹುಣಸೆ ಹಣ್ಣು, ಉಪ್ಪು...ಎಲ್ಲವನ್ನು ನುಣ್ಣನೆ ರುಬ್ಬಿಕೊಳ್ಳ ಬೇಕು. ಅನ್ನಕ್ಕೆ ಕಲಸಿ ಮಜ್ಜಿಗೆ ಅಥವಾ ಮೊಸರಿನೊಂದಿಗೆ serve ಮಾಡಿ


No comments:
Post a Comment