ಡಾಯಗೊ ಎಂಬ ಚೆಲ್ಲೋ (cello) ನುಡಿಸುವಾತ. ಅವನ orchestra ಗುಂಪು disband ಆದಾಗ ಅವನಿಗೆ ಬೇರೆ ಯಾವ ಕೆಲಸವೂ ಇರುವುದಿಲ್ಲ.
ಯಾಕೆ ನಾವು ಅಮ್ಮ ಸಾಯುವಾಗ ತನ್ನ ಹೆಸರಿಗೆ ಬಿಟ್ಟ ಮನೆಗೆ ವಾಪಸ್ಸಾಗಬಾರದು ಎಂದಾಗ ಹೆಂಡತಿ ಒಪ್ಪುತ್ತಾಳೆ
ಹುಟ್ಟೂರಿಗೆ ಮರlಳಿದ ಮೇಲೆ ವೃತ್ತಪತ್ರಿಕೆಯಲ್ಲಿ departures ಎನ್ನುವ ಜಾಹೀರಾತು ನೋಡಿ ಅದರ ಕಚೇರಿಗೆ ಹೋಗುತ್ತಾನೆ. ಅವನ ಅಂದಾಜಿನ ಪ್ರಕಾರ ಅದು travel agency ಅಥವಾ ಗೈಡ್ ಕೆಲಸ ಅಂದುಕೊಳ್ಳುತ್ತಾನೆ. ಅದರ ಮಾಲೀಕ ಏನೂ ವಿವರಣೆ ನೀಡದೆ ಅವನಿಗೆ ಕೆಲಸ ಮಾತ್ರವಲ್ಲ ಮುಂಗಡ ಹಣ ಕೂಡ ನೀಡುತ್ತಾನೆ
ಆದರೆ ಅದು ಸತ್ತವರನ್ನು - ಮನೆಯವರಿಗೆ ಮುಜುಗರವಾಗದಂತೆ ಸ್ವಚ್ಛ ಗೊಳಿಸಿ, ಸುಂದರವಾಗಿಸಿ ಚಿತೆಗೇರಿಸುವ ಕಾಯಕ. ಮಾಲೀಕ ತುಂಬಾ ತನ್ಮಯನಾಗಿ ಈ ಕೆಲಸ ಮಾಡುವುದನ್ನು ನೋಡಿ ಇವನಿಗೂ ಆ ಕೆಲಸ ನಿಭಾಯಿಸಲು ತೊಡುಗುವಂತೆ ಮಾಡುತ್ತದೆ.
ಹೆಂಡತಿಗೆ ಕೆಲ ಸಮಯದ ನಂತರ ಗೊತ್ತಾದಾಗ ಅಸಮಾಧಾನ ಗೊಂಡು ಅವನನ್ನು ಬಿಟ್ಟು ಹೋಗುತ್ತಾಳೆ. pregnant ಅಂತ ಗೊತ್ತಾದಾಗ ಮರಳಿ ಬಂದು, 'ಮಗನಿಗೆ ಏನು ಕೆಲಸ ಮಾಡುತ್ತಿ ಎಂದು ಹೇಳಲು ಧೈರ್ಯ ಬರುತ್ತಾ' ಅಂತ ಕೇಳುತ್ತಿರುವಾಗಲೇ ಅವರಿಬ್ಬರಿಗೂ ತುಂಬಾ ಇಷ್ಟವಾದ 'public bath' ನಡೆಸುವ ಹೆಣ್ಣುಮಗಳ ದೇಹಾಂತ ವಾಗುತ್ತದೆ. ಆಗ ಹೆಂಡತಿ ತನ್ನ ಗಂಡ ಮಾಡುತ್ತಿರುವ ಕೆಲಸ ಕಣ್ಣಾರೆ ನೋಡಿ ಸಮಾಧಾನ ಗೊಳ್ಳುತ್ತಾಳೆ.
ತನ್ನ ತಂದೆ ತಾನು ಚಿಕ್ಕವನಿರುವಾಗ ಬಿಟ್ಟು ಹೋದದ್ದೇ ನೆಪವಾಗಿಸಿಕೊಂಡು ಕೋಪದ ಜಿದ್ದು ಹಿಡಿದಿರುತ್ತಾನೆ. ಅವನ ಸಾವಿನ ಸುದ್ದಿ ಕೇಳಿ ಅವನು ಅಲ್ಲಿಗೆ ಹೋಗಲು ಇಷ್ಟ ಪಡುವುದಿಲ್ಲ. ಆದರೆ ಅವನ ಸಹೋದ್ಯೋಗಿ, ಹೆಂಡತಿ ಬುದ್ಧಿವಾದದ ಮೇರೆಗೆ ಕೊನೆಗೆ ಹೋಗುತ್ತಾನೆ. ತನ್ನ ತಂದೆಯನ್ನು ಡೀಸೆಂಟ್/ ಸಭ್ಯ ಆಗಿ ನಿರ್ಗಮಿಸುವ ಕಾಯಕದಲ್ಲಿ ತೊಡಗುತ್ತಾನೆ
ಅತ್ತು ಅತ್ತು dehydration ಆಯ್ತು ಕಣ್ರೀ....😔😔
ನನಾಗಿಷ್ಟವಾಯ್ತು. ನಿಮಗೂ ಇಷ್ಟವಾಗಬಹುದು.
...ಚೆಂದ ತೆಗೆಗಿದಿದ್ದಾರೆ ಸಿನಿಮಾ

No comments:
Post a Comment