August 20, 2023

ಇಡ್ಲಿ ಎಲ್ಲಿ ಇಡ್ಲಿ

ಇವತ್ತು ಬೆಳಗ್ಗೆ ಏಳುವಾಗ ಆಗಲೇ 6.15. ಹಾಗೆ ನೋಡಿದರೆ ಮಲಗುವಾಗ 9.55. ಏನೋ ರೀಲ್ಸ್ ನೋಡ್ತಿದ್ದ ಹಾಗೆ , ಮೊಬೈಲ್ ನಲ್ಲಿ ಗಂಟೆ ಕೂಡ ನೋಡಿದ್ದೆ. ಬೆಳಿಗ್ಗೆ ಬೇಗ ಎದ್ದು ಮಡಿವಾಳ ಕೆರೆ ಕಡೆ ವಾಕ್ ಹೋಗುವ ಪ್ಲ್ಯಾನ್ ಇತ್ತು. ಏಳುವಾಗ ಲೇಟ್, ಅಲ್ಲದೆ ಬೆಳಗಿನ ನಾಸ್ತಾ ಗೆ ಇಡ್ಲಿ ಗೆ ರೆಡಿ ಮಾಡಿದ್ದೆ.   ಎದ್ದು, ಹಲ್ಲುಜ್ಜಿ ಮೊದಲು ಇಡ್ಲಿ ಬೇಯಿಸಲು ಇಟ್ಟೆ. ಚಟ್ನಿಗೆ ನಿನ್ನೆಯೇ ತುರಿದ ಕಾಯಿ ಫ್ರಿಜ್ ನಲ್ಲಿತ್ತು. ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿಟ್ಟು, ನಾನು ಅಕ್ಕ ವಾಕ್ ಹೊರಟರೆ, ರಾಯರು ಬನಶಂಕರಿ ಮಾರುಕಟ್ಟೆಗೆ ತಾಜಾ ತರಕಾರಿ ತರಲು ಹೊರಟಾಗಿತ್ತು. 
ಅಮ್ಮ ಗ್ಯಾಸ್ ಒಲೆ ಆಫ್ ಮಾಡಿದ್ದೀಯ ಅಂತ ಅಕ್ಕ ಕೇಳಿದಳು. ಇತ್ತೀಚಿಗೆ ಹಲವಾರು ಬಾರಿ ಗ್ಯಾಸ್ ಆನ್ ಇಟ್ಟಿದ್ದಿದ್ದೆ. ದೋಸೆ ಮಾಡಿ ಕಾವಲಿ ಹಾಗೆ ಗ್ಯಾಸ್ ಒಲೆ ಮೇಲೆ, ಒಗ್ಗರಣೆ ಹಾಕಿದ ಮೇಲೆ ಕೂಡ ಗ್ಯಾಸ್ ಆನ್ ಇಟ್ಟಿದ್ದು..ಹೀಗೆ. ಈಗ ಹೊರಗೆಲ್ಲಾದರೂ ಹೋಗುವಾಗ ಕಡ್ಡಾಯವಾಗಿ ಗ್ಯಾಸ್ ಆಫ್ ಇದೆ ಅಂತ ಖಾತರಿ ಮಾಡಿ ನೆ ಮನೆಗೆ ಬೀಗ ಹಾಕೋದು. ವಯಸ್ಸಾಗ್ತಾ ಇದೆ ಅನ್ನೋದಕ್ಕೆ ಒಂದು example. 😲
 ಹಾಗೆ ಅಕ್ಕ' ಅಲ್ಲ ಇಡ್ಲಿಯ ಒಳ್ಳೆ ಪರಿಮಳ ಬರ್ತಾ ಇದೆ, ಅದಕ್ಕೆ ಕೇಳಿದ್ದು ಅಂದ್ಲು. ನಾನು hmmm the aroma of idli batter steaming in containers smeared with coconut oil ಅಂತ ಹೇಳ್ತಾ ಬೀಗ ಹಾಕಿ, ಲಿಫ್ಟ್ ಗೆ ಕಾಯ್ತಾ ಇರುವಾಗ, ಅಮ್ಮ i only like the idli you prepare, else where ican smell the udid dal in the idlis which i do not like ಅಂದ್ಲು. ಸ್ವಲ್ಪ ಸೂಕ್ಷ್ಮ ನಾಲಿಗೆ ಮತ್ತು ಮೂಗು ನಮ್ಮ ಅಕ್ಕನಿಗೆ 😁 ಇದನ್ನು ಕೇಳಿ ನನಗಂತೂ ಖುಷಿ.

   ಹಿಂದಿನ ವರ್ಷ ಅಮ್ಮನ ಮನೆಗೆ ಹೋಗಿದ್ದೆ. ಮಾಲವಿಕಾ ಮತ್ತವಳ ತಂದೆ ಇಲ್ಲಿ ಇದ್ದರು. ಮಾಲವಿಕಾ ದೋಸೆ ಮತ್ತಿತರ ಬೆಳಗಿನ ತಿಂಡಿಯನ್ನು ಮಾಡುತ್ತಾಳೆ, ರುಚಿಯಾಗೂ ಇರುತ್ತೆ..ಆದರೆ ಇದುವರೆಗೆ wet grinder ಉಪಯೋಗಿಸಿ ಇಡ್ಲಿ ಒಂದನ್ನು ಮಾಡಿರಲಿಲ್ಲ. ಫೋನ್ ಮಾಡಿ ನನಗೆ ಇಡ್ಲಿ ಹಿಟ್ಟಿನ ಅಳತೆ ಕೇಳಿದಳು. ಮರು ದಿನ ಫೋನ್ ಮಾಡಿ 'ಅಮ್ಮ ಇಡ್ಲಿ ಚೆನ್ನಾಗಿ ಬರಲಿಲ್ಲ, ಕಲ್ಲಿನ ತರಹ ಆಗಿದೆ ಹಾಗೂ ಉದ್ದಿನ ವಾಸನೆ ಹೊಡೆಯುತ್ತೆ ..ಅಂತ ಹೇಳಿದಳು. ಇಡ್ಲಿ ಹಿಟ್ಟಿ ಗೆ ಬಹುಷ್ಯ ನೀರು ಕಡಿಮೆಯಾಗಿರಬೇಕು. ಮತ್ತು ಉದ್ದು ಸರಿ ತೊಳೆದಿ ರಲಿಕ್ಕಿಲ್ಲ ಅವಳು 😀. ವಿವರಿಸಿ ಹೇಳಿದೆ. 'ಓ ಹಾಗೋ' ಅಂದ್ಲು. ಉದ್ದಿನ ವಾಸನೆ ಮಿಕ್ಸಿ ಯಲ್ಲಿ ಇಡ್ಲಿ ರುಬ್ಬಿದ್ರೆ ಮಾತ್ರ ಬರೋದು. ಕೈ ನಲ್ಲಿ ಅಥವಾ ವೆಟ್ grinder ನಲ್ಲಿ ಸರಿಗಾಗಿ 45 ನಿಮಿಶ ಉದ್ದು ರುಬ್ಬಬೇಕು. ಮತ್ತು ನಾನು  ಬೆಳ್ತಿಗೆ ಕೆಂಪು ಅಕ್ಕಿಯ ರವೆ ಮಾಡಿತ್ತು ಕೊ0ಡಿರುತ್ತೇನೆ. ಅದನ್ನು 2 ಗಂಟೆ ನೆನೆಹಾಕಿ, ರುಬ್ಬಿದ ಉಡ್್ಡ್ ಹಿಇನ್ಗೆಆ , ನೀರೆಲ್ಲ ಹಿಂಡಿ ಹಾಕಿ, ರಾತ್ರಿನೇ ಗೋಕರ್ಣದ ಹರಳುಪ್ಪ್ಪು ಬೆರೆಸುತ್ತೇನೆ
ಬೆಳಿಗ್ಗೆ ಅದನ್ನ ಇಡ್ಲಿ ಬೇಯಿಸಿವ ಪಾತ್ರೆಯಲ್ಲಿ , ಇಡ್ಲಿ stand ನಲ್ಲಿ ಸರಿಯಾಗಿ 12 ನಿಮಿಷ ಬೇಯಿಸುತ್ತೇನೆ. by the way even i like the idlis i make next to amma's and my friend guru's mother 😀 ಅಂತ ಹೇಳುತ್ತಾ ಇಡ್ಲಿ ಪುರಾಣ ಇಲ್ಲಿಗೆ ಸಮಾಪ್ತ...ಇಡ್ಲಿ ಹಿಟ್ಟು ಇದ್ರೆ ಮೂರು ದಿನ breakfast ಬಗ್ಗೆ ನಿಶ್ಚಿಂತೆ. ಅಷ್ಟು ದೊಡ್ಡದಿದೆ ನನ್ನ wet grinder. ಕಡಿಮೆ ಬೆಲೆಗೆ ದೊಡ್ಡದು ಸಿಕ್ತು ಮೆಟ್ರೋ cash & carry ನಲ್ಲಿ
ಇವತ್ತು ಇಡ್ಲಿ ಜತೆ ಸಾಂಬಾರ್ ಮತ್ತು ಗಾಂಧಾರಿ ಮೆಣಸಿನ ಕಾಯಿ ಹಾಕಿ ಚಟ್ನಿ ಮತ್ತು ಕರಿಬೇವಿನ ಚಟ್ನಿ ಪುಡಿ ಮತ್ತು ತುಪ್ಪ ❤️🙏. ಶ್ರೀಕಾಂತ ಅಂತೂ wow tasty idlis ಅಂತ ಅದೆಷ್ಟು ಬಾರಿ ಆ0ದ್ರೋ..😀😀👍

No comments: