May 4, 2023

ಹೆಬ್ಬಲಸು

ನಮ್ಮ ಊರಿನ ತೋಟದಲ್ಲಿ ಒಂದು ಹೆಬ್ಬಲಸಿನ ಮರ ಇತ್ತು. ಮರ ಸಪೂರಕ್ಕೆ ಉದ್ಧವಾಗಿತ್ತು. ಹತ್ತಲು ಬರುತ್ತಿರಲಿಲ್ಲ, ಡೊಂಟಿಗೆ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಹಕಿಗಳು ತಿಂದು ಬಿಸಾಕಿದ ಹಣ್ಣಾದ ಹೆಬ್ಬಲಸು ಸಿಗುತ್ತಿತ್ತು. ಏನು ರುಚಿ ಅಂತೀರಾ? 200 ತೆಂಗಿನ ಮರಗಳಿದ್ವು ತೋಟದಲ್ಲಿ. ಒಂದು ತೆಂಗಿನಕಾಯಿಯ ಮರ ಈ ಹೆಬ್ಬಲಸಿನ ಮರಕ್ಕೆ ತಾಗಿಕೊಂಡ ಹಾಗಿತ್ತು. ತೆಂಗಿನಕಾಯಿ ಇಳಿಸುವವವನಿಗೆ ದಂಬಾಲು ಬಿದ್ದು, ಅವನಿಗೆ ಕಾಡಿಸಿ ಪೀಡಿಸಿ ಹೆಬ್ಬಲಸನ್ನು ಬೀಳಿಸಲು ಕೇಳಿಕೊಳ್ಳುತ್ತಿದ್ದೆವು ಮೊನ್ನೆ ಅಕಸ್ಮಾತ್ತಾಗಿ ತೀರ್ಥಹಳ್ಳಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಬೆಳಗಿನ ತಿಂಡಿಗೆ ಮೆಗರವಳ್ಳಿಯ ಕಾಮತ್ ಹೋಟೆಲ್ ಗೆ ಹೋದೆವು. ಹೋಟಲ್ ಎದುರುಗಡೆ ವಾರಾಹಿ backwaters ಹೋಮ್ ಸ್ಟೇ ಅನ್ನುವ ಬೋರ್ಡ್ ನೋಡಿದೆ. ಹೋಟೆಲಿನವರೆ ಆದ ನಾಗೇಶ್ ಕಾಮತ್ ನಮಗೆ ಅಲ್ಲಿ ಬಳಿ ಇರುವ backwaters ಬಗ್ಗೆ ಹೇಳಿದರು. ಗಾಡಿ ಎಷ್ಟು ದೂರ ಹೋಗುತ್ತೋ ಹೋದ್ವಿ. ಆಮೇಲೆ ಕಾಲ್ನಡುಗೆಯಲ್ಲಿ backwaters ಕಡೆಗೆ ಹೋಗುವಾಗ ಈ ಹೆಬ್ಬಲಸಿನ ಮರ ನೋಡಿದೆ. ಎಷ್ಯೊಂದು ಹಣ್ಣುಗಳು. ಬಾಯಲ್ಲಿ ನೀರೂರಿತು. ಆಸೆಯಿಂದ ನೆಲವನ್ನೆಲ್ಲ ಹುಡುಕಿದೆ. ಕೆಲ ಬೀಜಗಳು ಮಾತ್ರ ಕಂಡವು. ಈಗೀಗ ಮಂಗಳೂರು ಸ್ಟೋರ್ ಗಳಲ್ಲಿ ಉಪ್ಪಿಗೆ ಹಾಕಿಟ್ಟ ಹಸಿ ಹೆಬ್ಬಲಸು ಸಿಗುತ್ತೆ. ಅದು + ಉಪ್ಪಿಗೆ ಹಾಕಿಟ್ಟ ಮಾವಿನಕಾಯಿ ಒಗ್ಗೂಡಿಸಿ ಮಾಡಿದ ಗೊಜ್ಜು ಮತ್ತು ಕುಚ್ಚಲಕ್ಕಿ ಗಂಜಿ+ ತುಪ್ಪ...ವಾಹ್!!!! ಚಿತ್ರ ನೋಡಿ ಖುಷಿ ಪಡಿ. ಅಷ್ಟೇ 😄

No comments: