ಶುಶ್ರುತ ದೊಡ್ಡೇರಿ 'ಒಡೆದ ಹಿಮ್ಮಡಿ ಕಾಲಿನಂದದಿ' ಪ್ರಬಂಧ ದಿಂದ ಪ್ರೇರೇಪಿತ ಬರಹ.......
ನಾವು ಆಸ್ಪತ್ರೆಯಲ್ಲಿದ್ದಾಗ ನಮ್ಮ ಪೇಪರ್ ನವ್ 4 ಯುಗಾದಿ ವಿಶೇಷಾಂಕ ಮನೆಗೆ ಕಳುಹಿಸಿದ. ನಮಗೆ ಊಟ ಕಳಿಸುವಾಗ ಅಕ್ಕ ಅವನ್ನೆಲ್ಲ dunzo ಮಾಡಿದ್ಲು. ಶುಶ್ರುತ ಅವರು ಬರೆದಿದ್ದ dry skin ಬಗೆಗಿನ ಲಘು ಪ್ರಬಂಧ ಓದಿ...ಹೋ ನನಗೂ ಇವೆಲ್ಲ ಎಷ್ಟು ಕಾಡಿತ್ತು ಅಂತ ನೆನಪಿಸಿಕೊಂಡೆ.
ಮದುವೆಯಾಗಿ ಮುಂಬೈನಿಂದ ತೀರ್ಥಹಳ್ಳಿ. Drastic change in temperatures. ಮುಂಬೈ ನ ಸಮುದ್ರದ ಸೆಕೆಯ ಹವಾಮಾನ ಎಲ್ಲಿ ತೀರ್ಥಹಳ್ಳಿಯ ಎ ಸಿ ಯಂಥ ಥಂಡಿ ಎಲ್ಲಿ. 1986 ನಲ್ಲಿ ಏಪ್ರಿಲ್ ಮೇ ನಲ್ಲೂ ರಾತ್ರಿ ಚಳಿಯೇ ಇರುತ್ತಿತ್ತು. ಒಳ್ಳೆ ಹಿಲ್ ಸ್ಟೇಷನ್ ನಂತಿರುತಿತ್ತು. ಈಗ ಬಿಡಿ ತೀರ್ಥಹಳ್ಳಿಯಲ್ಲೂ ಹವಾಮಾನದಲ್ಲಿ ವೈಪರೀತ್ಯ..
ನಮ್ಮ ಮದುವೆ ಆಗಿದ್ದು ಮೇ ಕೊನೆ ವಾರ. ಜೂನ್ ನಲ್ಲಿ ಧೋ ಅನ್ನುವ ಮಳೆ. ಅಂತಹ ಮಳೆಯನ್ನು ನಾ ನೋಡಿರಲಿಲ್ಲ. ಅದೂ ಮಧ್ಯ ಅಂಗಳ ಇರುವ ಮನೆ. ಅಂಗಳಕ್ಕೆ ತಾಗಿಯೇ ಅಡುಗೆ ಮನೆ.ತುಂಬಾ ಹಳೇ ಮನೆ ಕೂಡ. ತೇವದಿಂದ ರಕ್ಷಿಸಿಕೊಳ್ಳುವ ಯಾವುದೇ ಉಪಾಯ ವಿರಲಿಲ್ಲ. ಆಗ ಹಿಮ್ಮಡಿ ಒಡೆಯಲು ಶುರು ವಾಯಿತು. ಮಾತ್ರವಲ್ಲದೆ ಕಾಲು ಬೆರಳುಗಳ ಮಧ್ಯದಲ್ಲಿ ನವೇ, ಕೆರೆತ ವಾಸನೆ...ನಾನಂತೂ ಹೌ ಹಾರಿ ಹೋದೆ. ಬೇರೆಯವರಿಗೆ ಇಂತಹುದು ಆದರೆ ನನಗೆ ಅಸಹ್ಯ.. ಇನ್ನೂ ನನಗೆ ಹಾಗಾದರೆ? ತೆಂಗಿನ ಎಣ್ಣೆ, ಮಯಣ.vaseline, ಕೆಲಸದ ಗಿರಿಜೆ ಹೇಳಿದ ಹಾಗೆ ನೈಲ್ ಪೊಲೀಶ್ ಎಲ್ಲ ಆಯ್ತು. ಹಿಮ್ಮಡಿ ಒಡೆದು ಕೆಲವೊಮ್ಮೆ ರಕ್ತ ಒಸರುತ್ತಿತ್ತು. ಬೆಳ್ಳಿಗ್ಗೆ ಎದ್ದ ಕೂಡಲೇ ನೆಲಕ್ಕೆ ತಾಕಿಸಿದರೆ, ಜೀವ ಹೋಗುವ ನೋವು. ಕ್ರಮೇಣ ಅವೇಲ್ಲ ಅಭ್ಯಾಸ ಆಗಿ ಹೋಯಿತು. ಹೊರಗೆ ಹೋಗುವಾಗ Shoe ಹಾಕಿ ನನ್ನ ಒಡೆದ ಹಿಮ್ಮಡಿಗಳನ್ನು ಅಡಗಿಸುತ್ತಿದ್ದೆ. ಯರದಾದರು ಮನೆಗೆ ಹೋದಾಗ ನೆಲದ ಮೇಲೆ ಕೂರುವ ಪ್ರಸಂಗ ಬಂದರೆ ,ಸೀರೆ ಉಟ್ಟಿಕೊಂಡಿದ್ದರೆ ಸೀರೆಯ ನೆರಿಗೆ, ಚೂಡಿದಾರ ಹಾಕಿಕೊಂಡಿದ್ದರೆ, ದುಪಟ್ಟಾದಿಂದ ಕಾಲು ಮುಚ್ಚಿಕೊಳ್ಳುತ್ತಿದ್ದೆ. ಎಲ್ಲರೂ ಚೆಂದದ ಚಪ್ಪಲಿಗಳನ್ನು ಹಾಕಿಕೊಳ್ಳುವಾಗ ಎಷ್ಟು ಆಸೆಯಿಂದ ನೋಡುತ್ತಿದ್ದೆ. ನನಗೆ ಮಾತ್ರ ಯಾವಾಗಲೂ bata shoe ನೆ ಗತಿ.ಅಷ್ಟು ಮಾತ್ರವಲ್ಲ ಯಾರದಾದರು ಮನೆಯಲ್ಲಿ ರತ್ನಗಂಬಳಿ/ಕಾರ್ಪೆಟ್ ಎಲ್ಲ ಇದ್ದರೆ ಒಳ್ಳೆ ಮ್ಯಾಗ್ನೆಟ್ ತರಹ ನನ್ನ ಹಿಮ್ಮಡಿಗೆ ಅವೆಲ್ಲ ಆಂಟಿ ಕೊಳ್ಳೋದು. ಸಾಕ್ಸ್ ಹಾಕಿದರೆ ಇನ್ನೂ ಫಜೀತಿ..ಮನೆಗೆ ಬಂದು ತೆಗೆದರೆ ಹಿಮ್ಮಡಿ ಎಲ್ಲ ರಕ್ತ..
ಎರಡು ವರ್ಷದ ಹಿಂದೆ ನಮ್ಮ ಬಿಲ್ಡಿಂಗ್ ನಲ್ಲಿ ಯೋಗ ಕ್ಲಾಸ್ ಆಯೋಜಿಸಿದ್ದರು...ನಾನೂ style ಆಗಿ ಯೋಗ ಮ್ಯಾಟ್ ಹಿಡಿದುಕೊಂಡು ಹೋದೆ. ನನ್ನ ಹಿಮ್ಮಡಿ ನನ್ನನ್ನು ತುಂಬಾ ಮುಜುಗರಕ್ಕೆ ಇಡು ಮಾಡಿತು..ನನ್ನ ಜತೆ ಯೋಗ ಮ್ಯಾಟ್ ಕೂಡ ಯೋಗ ಮಾಡಲು ಶುರು ಮಾಡಿತು. ನಾನು ಕೊನೆಗೆ ಮ್ಯಾಟ್ ಬದಿಗಿಟ್ಟು ಹಾಗೆಯೇ ನೆಲದ ಮೇಲೆ ಯೋಗ ಮಾಡಲು ಶುರು ಮಾಡಿದೆ..
ಕೈಗಳಿಗೂ ಹಾಗೆ ಪಾತ್ರೆ ಉಜ್ಜಲು ಬಳಸುವ ಸಾಬೂನಿನಿಂದ ಬೆರಳು ಯಾವಾಗಲೂ crack.. ಇದರಿಂದ ಒಳ್ಳೆ ಬಟ್ಟೆಗಳೂ ಹಾಳಾಗುತ್ತಿತ್ತು..ಪುಟ್ಟ ಮಕ್ಕಳನ್ನು ಎತ್ತಿಕೊಳ್ಳಲೂ ಭಯ. ನನ್ನ ಮಗಳ ಜೋಕ್..ಅಮ್ಮ ಕತ್ತಿ ಎಲ್ಲ ನಿನ್ನ ಕೈ ಬೆರಳಿಗೆ ಉಜ್ಜಿ sharp ಮಾಡಬಹುದು ನೋಡು...ಮತ್ತು ಸೊಳ್ಳೆ ಕಚ್ಚಿದರೆ ಅಮ್ಮ ತುರಿಸೆ ಚೆನ್ನಾಗಿರತ್ತೆ ನಿನ್ನ rough ಕೈ ಬೆರಳು ಅನ್ನತ್ತಾವೆ. ಶ್ರೀಕಾಂತ್ ಅಂತೂ ನನ್ನ ಕೈ ಕಾಲು ನೋಡಿ emery ಪೇಪರ್, sand ಪೇಪರ್ ಅಂತಾರೆ. ಯಾರದರೊ ಕೈ ಕುಲುಕಲು ಬಂದರೆ ಹೆದರಿ ಹೈರಾಣ ಆಗುತ್ತಿದೆ..ಬೇಗ ಬೇಗ ಎರಡು ಕೈ ಜೋಡಿಸಿ ನಮಸ್ಕಾರ ಮಾಡ್ತಿದ್ದೆ
ಎರಡು ವರ್ಷದ ಹಿಂದೆ ಸುಮ್ನೇ ತುಂಬಾ ನೀರು ಕುಡಿಯುವ ಗೀಳು ಬೆಳೆಸಿಕೊಂಡೇ...ಆವಾಗಿನಿಂದ ನನ್ನ ಕೈ ಬೆರಳು, ಕಾಲಿನ ಹಿಮ್ಮಡಿ ಎಲ್ಲ ಕ್ಲೀನ್...ನನ್ನ ಕುಟುಂಬದವರಿಗೆಲ್ಲ ಅಚ್ಚರಿ. ಖುಷಿಯಿಂದ ಚಪ್ಪಲಿ ತೆಗೆದುಕೊಂಡೆ....ಆದರೆ ಈಗ ಅದರ ಅಭ್ಯಾಸ ತಪ್ಪಿ ಹೋಗಿ..ಹಾಕಿಕೊಂಡರೆ ಏನೊ ಒಂತರಹ...ಹಳೆ ಗಂಡನ ಪಾದವೇ ಗತಿ ಎಂದು ಎರಡು ಜತೆ shoe ಕೊಂಡೆ...ಆದ್ರೆ ಕಾಲು ಮುಚ್ಚಿಕೊಳ್ಳುವ ಪ್ರಮೇಯ ಇಲ್ಲ. ಕೈ ಕುಲುಕುವಾ ಅಂದ್ರೆ ಕೊರೊನಾ ಮಹಾಮಾರಿ...😊☹️ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ...
No comments:
Post a Comment