June 9, 2020

Home quarantine

ಮೊನ್ನೆ 7 ನೆ ತಾರಿಕಿಗೆ ಮಗಳು ಭೋಪಾಲ್ ನಿಂದ ಬಂದಾಯ್ತು. ಏನೋ ನೆಮ್ಮದಿ. ಅವಳು ಮನೆ ತಲುಪವವರೆಗೆ ಚಿಂತೆಯಿತ್ತು. ಯಾಕೆಂದರೆ ಅವಳಿಗೆ weather ಬದಲಾಗ್ತಾ ಒಣ ಕೆಮ್ಮು ಶುರು ಆಗುತ್ತೆ. ಭೋಪಾಲ್ ದಲ್ಲಿ ಮಳೆ ಹಾಗೂ ಚಳಿ ಇತ್ತಂತೆ. ಕೆಮ್ಮು ಶುರು ವಾಗಿದ್ದು ಮಾತ್ರವಲ್ಲ, fumigation ನಿಂದ ಅದು ಜಾಸ್ತಿಯಾಯ್ತು. ಅವಳ ಪಕ್ಕ ಕುಳಿತಿದ್ದ ಅಜ್ಜನಿಗೂ ವಿಪರೀತ ಕೆಮ್ಮಿತ್ತಂತೆ.

ದೆಹಲಿಯ ವಿಮಾನ ನಿಲ್ದಾಣ ಗಿಂತ ಬೆಂಗಳೂರಿನ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ತುಂಬಾ ಒಳ್ಳೆಯ ಸೌಲಭ್ಯ /quarantine ನಿಯಮಗಳನ್ನು ಚೆನ್ನಾಗಿ ಪಾಲಸುತ್ತಿದೆಯಂತೆ
ಹೊರ ರಾಜ್ಯದಿಂದ ಬಂದ ಎಲ್ಲರಿಗೂ ಈಗ ಕಡ್ಡಾಯ ಮನೆಯಲ್ಲೇ quarantine. ಹಾಗಾಗಿ ಅವಳಿಗೆ ಇಲ್ಲಿ ಬರುವ ಅವಕಾಶ ಇದ್ದರೂ ಇಲ್ಲಿ ತನಕ ಕಾದಿದ್ದು. Institutional quarantine ನ ಕೆಲ ಫೋಟೋ ನೋಡಿ ನಾನು ಹೌಹಾರಿದ್ದೆ. ಸಾಧ್ಯ ಮನೆ quarantine is better. ನಾವು ಅವಳ ಕೋಣೆಗೆ ಕಡಿಮೆ ಹೋಗುವುದು. ನಾನೊಬ್ಬಳೇ ಹೋಗುವುದು. ಅವಳಿಗೆ attached bathroom ಇರುವ ಕೋಣೆ ಬಿಟ್ಟು ಕೊಟ್ಟಿದ್ದೇವೆ. ಅವಳ ತಟ್ಟೆ, ಬಟ್ಟಲು, ಬಟ್ಟೆ ಬೇರೆ ವಾಷ್ ಮಾಡೋದು. ಕೋಣೆಗೆ, ಮನೆ ಬಾಗಿಲಿಿಗೆ quarantine sticker ಅಂಟಿಸಿದ್ದೇವೆ.
ಯಾವಾಗಲಾದರೂ ಹೆಲ್ತ್ ಇನ್ಸ್ಪೆಕ್ಟರ್ ಭೇಟಿ ನೀಡಬಹುದು
ಭೋಪಾಲ್ ದಲ್ಲಿ ಎಲ್ಲರೂ ಅವಳನ್ನು ಚೆಂದ ಮಾಡಿ ನೋಡಿಕೊಂಡಿದ್ದಾರೆ. ಒಟ್ಟು ಹದಿನೈದು ಜನ lock ಡೌನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಿಹಾ ಈಗ ಹದಿನೈದು ಜನರಿಗೆ ಅಡಿಗೆ ಮಾಡುವಷ್ಟು ಪರಿಣಿತಿ ಹೊ0ದ್ದಿದ್ದಾಳಂತೆ. 😀😀
ಅವಳು ವಾಪಸ್ ಬರುವ ಮುಂಚೆ ಅವಳ ಜತೆಗಾತಿಗಳು ಅವಳಿಗೆ ಪುಟ್ಟ ಪುಟ್ಟ gifts, letters ಎಲ್ಲ ಕೊಟ್ಟಿದ್ದಾರೆ.
ಕೆಲವರಿಗೆ ಇನ್ನೂ ಅವರವರ ಮನೆಗೆ ವಾಪಸ್ ಹೋಗಲು ಆಗಿಲ್ಲ. ಅವರ ಪಾಲಕರೆ ಸಧ್ಯಕ್ಕೆ ಮನೆಗೆ ಬರಬೇಡಿ ಅಂದಿದ್ದಾರಂತೆ. ಅವರೆಲ್ಲ ತಮ್ಮ ತಮ್ಮ ಮನೆಗೆ ಬೇಗ ವಾಪಸ್ಸಾಗಲಿ ಎಂದು ಹಾರೈಸುವೆ. ನನ್ನ ಮಗಳನ್ನು ನಾನು ಎಷ್ಟು ಮಿಸ್ ಮಾಡಿದೆ ಅಂತ ನನಗೆ ಮಾತ್ರ ಗೊತ್ತು 😐


No comments: