ಬೆಳಿಗ್ಗೆ ನಾನು ವಾಕ್ ಮುಗಿಸುವಷ್ಟರಲ್ಲಿ ಪಾರ್ಕ್ ತರಕಾರಿಯವಳು ಬಂದಿರುತ್ತಾಳೆ. ಹೆಚ್ಚಾಗಿ ನನ್ನದೇ ಬೋಣಿ (first buy ) rituals ಇರುತ್ತೆ, ನನಗೇನು ಬೇಕು ಅಂತ ಕೇಳಿ ಆ ಚೀಲ ಮೊದಲು ಹೊರಗೆ ತೆಗೆದು, ಇನ್ನು ನಾಲ್ಕೈದು ಚೀಲಗಳನ್ನು ತೆರೆದಿಟ್ಟು , ದುಡ್ಡನ್ನು ನಾನು ಯಾವುದೇ ಚೀಲಕ್ಕೆ ಹಚ್ಚಿ , ಅದನ್ನು ಅವಳ ಕೈಗಿಡಬೇಕು. :-) ಎರಡು ಕೈನಲ್ಲಿ ದುಡ್ಡನ್ನು ಪಡೆದು, ಹಣೆಗೆ ಹಚ್ಚಿ ಅದನ್ನು ಅವಳ ದುಡ್ಡಿನ ಸಂಚಿ ಯಲ್ಲಿ ಹಾಕುತ್ತಾಳೆ. ನಾನು ಅವಳ ಹತ್ತಿರ ತೆಗೊಳ್ಳೋದು ಬರಿ ಸಾಮಾನುಗಳು ಅಂದರೆ ಶುಂಠಿ , ಕೊತ್ತಂಬರಿ ಸೊಪ್ಪು , ಕರಿಬೇವು , ನಿಂಬೆ ಹಣ್ಣು ಇತ್ಯಾದಿ . ಅವಳ ಕಂಪ್ಲೇಂಟ್ ಇರುತ್ತೆ ಯಾವಾಗ್ಲೂ. ಹತ್ತಿರ ಅಕ್ಕ/ ಅಂತ, ನಾನು ಅವಳಿಗೆ 'ಮನೆಯವರು ಮಡಿವಾಳ ಮಾರ್ಕೆಟ್ ವಾಕ್ ಹೋಗಿ ಅಲ್ಲಿಂದ ತರಕಾರಿ ತರ್ತಾರೆ, ನಾನೇನ್ಮಾಡಲಿ ಅಂತ ಹೇಳಿ ನಗುತ್ತೇನೆ, ಅವರು ಆಫಿಸ್ ಟೂರ್ ಅಂತ ತುಂಬಾ ನಾನು ಅವಳ ಹತ್ತಿರಾನೆ ತರಕಾರಿ ತೆಗೊಳ್ತೇನೆ.
ಇವತ್ತು ನಾನು ಸ್ವಲ್ಪ ಬೇಗ ವಾಕ್ ಮುಗಿಸಿದೆ. ಶ್ರೀಕಾಂತ್ ಗೆ ಹಳ್ಳಿಗೆ ಹೋಗಲಿಕ್ಕಿತ್ತು. ಹಾಗಾಗಿ ಬೇಗ ಬ್ರೇಕ್ಫಾಸ್ಟ್ ಮಾಡಿಕೊಡಬೇಕಿತ್ತು. ಅದಕ್ಕೆ ಅವರಿಗೆ ತಿಂಡಿ ಮಾಡಿಕೊಟ್ಟು ತರಕಾರಿವಳ ಹತ್ತಿರ ಹೋದೆ. ನನಗೆ ಅರ್ಜೆಂಟ್ ಶುಂಠಿ ಬೇಕಿತ್ತು , ಪಾಲಕ್ ಪೊಂಗಲ್ ಮಾಡಲಿಕ್ಕೆ.
'ಅಕ್ಕ ನಿಮ್ಮ ಬಿಲ್ಡಿಂಗ್ ನಲ್ಲಿ ಈಗ ಸೂಪರ್ ಮಾರ್ಕೆಟ್ ವ್ಯಾನ್ ನಲ್ಲೆ ತರಕಾರಿ ಬರುತ್ತಂತೆ.?"
:ಹೌದು"
"costly ಇರುತ್ತಾ , ನಮಗಿಂತ ಕಡಿಮೆ ರೇಟ್ ಗೆ ಮಾರ್ತಾರ?
" ಕೆಲವಕ್ಕೆ ಹೆಚ್ಚು ಕೆಲವಕ್ಕೆ ಕಡಿಮೆ ಇರುತ್ತೆ"
" ನಮ್ಮನ್ನು ಮರೀಬೇಡಿ ಅಕ್ಕ"
i was amazed at her information gathering ability. One of the important trait for an entrepreneur. ತನ್ನ ಅಕ್ಕ ಪಕ್ಕದಲ್ಲಿ ಏನು ನಡೀತಿದೆ ಅಂತ...
ನಾನು 'ಇಲ್ಲ, ಅಲ್ಲಿ ಜಿನಸಿ ತೇಗೋತೇನೆ,ತರಕಾರಿ ಹೂ ಎಲ್ಲ ನಿಮ್ಮ ಹತ್ರಾನೇ ತೆಗೊಳ್ಳೋದು ಅಂದೆ.
ತಮಿಳು ಅವಳ ಮಾತೃಭಾಷೆ . ಆದರೆ ಸಲೀಸಾಗಿ ಕನ್ನಡ,ಹಿಂದಿ ಇಂಗ್ಲೀಷ ಎಲ್ಲಾ ಮಾತಾಡ್ತಾಳೆ.
yes yes, no no, 25 rupees only.......sab kuch lE jaao, paise kal dEnaa... ವಗೈರೆ ವಗೈರೆ...
ನಮ್ಮ ಏರಿಯಾ ದಲ್ಲಿ ಹೆಚ್ಚ್ಚು ಪಿ ಜಿ ಗಳು. ಈ ಮನೆಗೆ ಶಿಫ್ಟ್ ಆಗಿ ೫ ವರ್ಷ. ಇಷ್ಟರಲ್ಲೇ ಹಲವಾರು ಇಂಡಿಪೆಂಡೆಂಟ್ ಮನೆಗಳನ್ನು ನೆಲಸಮ ಮಾಡಿ, ಬಹುಮಹಡಿ ಪಿ ಜಿ ಯನ್ನಾಗಿ ಮಾಡಿದ್ದಾರೆ. ಗಂಡು ಮಕ್ಕಳ ಪಿ ಜಿ ಯಲ್ಲಿ ಹೆಚ್ಚಾಗಿ ನಾರ್ಥ್ ನ ಅಡಿಗೆಯವರು. ಅವರಿಗೆ ಹಿಂದಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ನಮ್ಮತರಕಾರಿಯವಳ ಜತೆ ಕುಶಲೋಪರಿ , ಕೆಲವೊಮ್ಮೆ ಜಗಳ ಕೂಡ (ಸೀರಿಯಸ್ ಅಲ್ಲ,ತಮಾಷೆಗೆ ) ಆಡುತ್ತಾರೆ.
ನನ್ನ ಹತ್ತಿರ ವಾಕ್ ಹೋಗುವಾಗ ಮೊಬೈಲ್ ಇರಲ್ಲ. ಇವತ್ತು ಶುಂಠಿ ತರುವಾಗ ಅವಳಿಗೆ ಕೇಳಿ ಅವಳದ್ದೊಂದು ಫೋಟೋ ತೆಗೆದೇ.


No comments:
Post a Comment