April 6, 2018

ದಂತಕತೆ

ಮೊನ್ನೆ ಒಂದು ದಿನ  ಪೊಂಗಲ್ ಮಾಡಿದ್ದೆ. ತಿಂದಾದ ಮೇಲೆ ಒಂದಷ್ಟು ಶೆಂಗಾ  ಬಾಯಲ್ಲಿ ಹಾಕಿಕೊಂಡು  ಕಚ್ಚಿದೆ. ಎಡಬದಿಯ ಹಲ್ಲು ಕಟಕ್ ಅಂದಿದ್ದು ಮಾತ್ರವಲ್ಲ ಬೆಳಗ್ಗಿನ ೭. ೪೫ ಗೆ ನಕ್ಷತ್ರಗಳ ದರ್ಶನ ಆಯ್ತು.ಸಾವರಿಸಿಕೊಳ್ಳಲು ಸ್ವಲ್ಪ ಸಮಯ  ಹಿಡಿಯಿತು .   ಕನ್ನಡಿಯಲ್ಲಿ ಚೆಕ್ ಮಾಡಿದಾಗ ಪೆಟ್ಟಾದ ಹಲ್ಲಿನ ಬದಿಯ ದವಡೆಗೆ ಒಂದು ರಕ್ತ ತುಂಬಿದ ಕೆಂಪು ಗುಳ್ಳೆ ಎದ್ದಿತ್ತು. ನಮ್ಮ ಮನೆಯ ಬಳಿಯ ದಂತಚಿತ್ಸಾಲಯ ಓಪನ್ ಆಗೋದೇ ೧೦ ಗಂಟೆಗೆ. ನೋವಲ್ಲೇ ಎಲ್ಲ ಮನೆ ಕೆಲಸ ಬೇಗ ಬೇಗ ಮುಗಿಸಿದೆ. 
ಸ್ವಲ್ಪ ಫ್ಲ್ಯಾಷ್ಬ್ಯಾಕ್  ಗೆ ಹೋಗುವಾ, ಎರಡು ತಿಂಗಳ ಹಿಂದೆ ಹಲ್ಲು ನೋವು ಅಂತ ಡಾಕ್ಟರ್ ಬಳಿ ಹೋಗಿದ್ದೆ. ಆಗ ರೂಟ್ ಕೆನಾಲ್ ಮಾಡಿಸಬೇಕಮ್ಮ ಅಂದಿದ್ದರು. ಸರಿ ಅಂದೆ. ಎಲ್ಲರ ಹಲ್ಲಿಗೆ  ಎರಡು ನರಗಳಿದ್ದರೆ ನನ್ನ ಹಲ್ಲಿಗೆ ಮೂರು ನರಗಳಿವೆ ಅಂತ ಎಕ್ಸ್ ರೇ ನಲ್ಲಿ ಗೊತ್ತಾಯಿತು. ಎರಡು ನರಗಳು ಸುಲಭದಲ್ಲಿ ಸಿಕ್ಕರೆ ಮೂರನೇ ನರ ಸಿಗದೇ , ಪದೇ ಪದೇ ಎಕ್ಸ್ ರೇ ಮಾಡೋದು , ಲೋಕಲ್ ಅನೆಸ್ತೇಷಿಯಾ ಇಲ್ಲದೆ ನರ ಹುಡುಕೋದು ಮಾಡೋದು  ಎರಡು ದಿನ ಬಿಟ್ಟು ಬನ್ನಿ ಅನ್ನೋದು ನಡಿತಾ ಇತ್ತು. ಕೊನೆಗೆ 'ಯಾಕೋ ಆ ನರಾ ಸಿಗ್ತಾ ಇಲ್ಲ, ಇನ್ನು ಚಳಿಗಾಲ ಶುರು ಆಗುತ್ತೆ ಆಗ ನೋವು ಶುರು ಆಗುತ್ತೆ, ಆಗ ಬನ್ನಿ ನೋಡುವಾ ಅಂದ್ರು. ನಾನು ಒಳ್ಳೆ ಟೂರ್ ಎಲ್ಲ ಹಾಕ್ಕೋ೦ಡು  ಗಮ್ಮತ್ತು ತಿರುಗಾಡಿ ಬಂದೆ. ಹಲ್ಲು ನೋವು ಏನೂ ಶುರು ಆಗಲಿಲ್ಲ. ಆದರೆ ಆ ಹಲ್ಲು expose ಆಗೇ ಇತ್ತು. ಡಾಕ್ಟರ್ ಅದರಲ್ಲಿ ಸ್ವಲ್ಪ ಸಿಮೆಂಟ್ ತುಂಬಿಸಿಟ್ಟಿದ್ದರು ಅಷ್ಟೇ 
ಫ್ಲ್ಯಾಷ್ಬ್ಯಾಕ್ ಮುಗಿತು 
ಡಾಕ್ಟರ್ ಬಳಿ ಹೋದ್ರೆ ಅವರು ತುಂಬಾ ಮರುಕ ಪಟ್ರು, ಅಯ್ಯೋ ಎರಡು ತಿಂಗಳು ಬಿಟ್ಟು ಬರಬೇಕಿತ್ತು ,(ಇಷ್ಟ್ರಲ್ಲೇ ಮೂರು ತಿಂಗಳು ಆಗಿತ್ತು ) ಹಲ್ಲು fracture  ಆಗಿಬಿಟ್ಟಿದೆ, ಅಂತ ಬೇಜಾರು ಪಟ್ಟುಕೊಂಡರು. ನಾಳೆ ಸರ್ಜನ್ ಬರ್ತಾರೆ , ಹಲ್ಲು ಉಳಿಸಲಿಕ್ಕಾಗುತ್ತಾ ನೋಡುವಾ ಅಂದ್ರು. ಆದರೆ ಹಲ್ಲು ಉಳಿಸಲಿಕ್ಕಾಗಿಲ್ಲ. ಕೀಳ್  ಬಿಟ್ರು. ಒಂದು ಗಟ್ಟಿ ಹಲ್ಲು ನನ್ನ ಉಡಾಫೆಯಿಂದ ಹೋಗೆ ಬಿಡ್ತು ;-( . ಆದರೆ ಐಸ್ಕ್ರೀಮ್  ತಿನ್ನುವ ಚಾನ್ಸ್ ಸಿಗ್ತು .  ಕಾಲೇಜ್ ನಲ್ಲಿದ್ದಾಗ ಕೋಲ್ಗೆಟ್ ಕಂಪನಿ ಯವರು healthy teeth contest  ಹಮ್ಮಿಕೊಂಡಿದ್ದು,ನನಗೆ ಅದರಲ್ಲಿ ಎರಡನೇ ಪ್ರೈಜ್ ಮಾತ್ರವಲ್ಲ ಹಲವಾರು ಟೂಥ್ ಬ್ರಶ್ , ತೂಥ್ಪೇಸ್ಟ್ ಬಹುಮಾನವಾಗಿ   ಬಂದಿದ್ದು ನೆನಪಿಸಿಕೊಂಡು    ಬೇಜಾರುಪಟ್ಟುಕೊಂಡೇ. 
ಅಂದಹಾಗೆ ನಮ್ಮ ಹಲ್ಲಿನ ಡಾಕ್ಟರ್ ತೀರ್ಥಹಳ್ಳಿಯವರು. ಮತ್ತು ಖ್ಯಾತ ಸಂಗೀತಗಾರ/ಹಾಡುಗಾರರಾದ ಮನ್ನಾ ಡೇ ಅವರ ಬಳಿ ಹಲ್ಲಿನ ಉಪಚಾರಕ್ಕಾಗಿ ಬಂದ  ಫೋಟೋ ಅವರ  ರಿಸೆಪ್ಟ್ನ್ ನಲ್ಲಿ ಹಾಕಿಕೊಂಡಿದ್ದಾರೆ. 
 ಆ ಸಂಜೆ  ಊಟ ಮಾಡುವಾಗ 
ನಾನು : ಮನ್ನಾ ಡೇ ನಮ್ಮ ಡಾಕ್ಟರ್ ಹತ್ತಿರ ಹಲ್ಲು ರಿಪೇರಿ ಮಾಡಿಸಿಕೊಂಡಿದ್ದಾರೆ 
ಮಾಲವಿಕಾ : ಅವರು ತೀರಿಕೊಂಡಿದ್ದಾರಲ್ಲವಾ ?
ನಿಹಾರಿಕಾ : ಅವರ ಹತ್ತಿರ ಹಲ್ಲು ಕೀಳಿಸಿಕೊಂಡು ತೀರಿಕೊಂಡ್ರಾ ಹೇಂಗೆ .... 
:-) :-) 



6 comments:

Srikanth Manjunath said...

ಹ ಹ ಹ.. ಕಡೆ ಸಾಲುಗಳು ಒಳ್ಳೆ ಕಿಕ್ ಕೊಡ್ತು..

ಗಣಪನ ದಂತ
ವೀರಪ್ಪನ ದಂತ ಕತೆ
ಆದ ಮೇಲೆ ನವಿರಾದ ಹಾಸ್ಯ ತುಂಬಿ ತಂದಿರುವ ಈ ಲೇಖನ ಇನ್ನೊಂದು ಆಯಾಮ ತೋರಿಸುತ್ತದೆ..

ಸೂಪರ್ ಮೇಡಂ. ನೋವಿನ ಕತೆಯನ್ನು ಹಾಸ್ಯದಲ್ಲಿ ಅದ್ದಿ ತೆಗೆದ ಪರಿ ಸೂಪರ್

Anonymous said...

My spouse and I stumble over here from a different website and thought I may as well
cueck things out. I like what I see sso
now i'm following you. Look forward to finding out
about your web page repeatedly.

Anonymous said...

Excellent, what a blog it is! This blog gijves valuable data to us, keep it up.

Radhika said...

Malathi, this one is too good!

nenapina sanchy inda said...

Thank you srikanth manjunath. HEgiddeeri? #ಸುಮಾರು ಸಮಯದ.ನಂತರ.ಈ.ಕಡೆ ಬಂದಿದ್ದೀರಿ. ಧನ್ಯವಾದಗಳು
ಮಾಲತಿ ಶೆಣೈ

nenapina sanchy inda said...

Thank you Radhika ☺