ನಾನು ಋತಿಮತಿಯಾದಾಗ ಹತ್ತನೆಯ ತರಗತಿಯಲ್ಲಿದ್ದೆ. ರಜೆಯಲ್ಲಿ ದೊಡ್ಡಮ್ಮನ ಮನೆಗೆ ಹೋದಾಗ ಆಗಿದ್ದು. ಅದರ ಬಗ್ಗೆ ನನ್ನ ಅಮ್ಮ ನನಗೆ ಏನು ಹೇಳಿರಲಿಲ್ಲ. ಶಾಲೆಯಲ್ಲಿ ಮಕ್ಕಳು ಏನೋ ಮಾತಾಡ್ತಾ ಮುಸಿ ಮುಸಿ ನಗುವುದರ ಅರ್ಥ ನನಗಾಗ ಆಗಿದ್ದು. ದೊಡ್ಡಮ್ಮ ನನ್ನ ಅಣ್ಣನ ಬಳಿ ಜಲೇಬಿ ತರಿಸಿ, ನನಗೆ ತಿನ್ನಿಸಿ, ತಲೆ ಸ್ನಾನ ಮಾಡಿಸಿ ಬಟ್ಟೆಯನ್ನು ಹೇಗೆ ಬಳಸಬೇಕು ಅಂತ ಹೇಳಿಕೊಟ್ಟು , ಇನ್ನು ಪ್ರತಿ ತಿಂಗಳು ಇದು ಇರುತ್ತೆ, ಮೂರುದಿನಗಳ ನಂತರ ತಲೆ ಸ್ನಾನ ಮಾಡಬೇಕು, ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಅಂದಿದ್ದರು (ಹಿಂದಿನ ವಾರ ಅವರು ದೈವಾಧೀನರಾದರು)
ಹೇಳಿಕೊಳ್ಳಲು ನಮ್ಮ ಅಪ್ಪ ಮುಂಬೈನ ಬ್ಯಾಂಕಿನ ದೊಡ್ಡ ಅಧಿಕಾರಿ. ಕೊಟ್ಟಿದ್ದು ಎರಡು ರೂಮಿನ ಕ್ವಾರ್ಟರ್ಸ್. ಅದರಲ್ಲಿ ನಾವು ೬ ಜನ ಮಾತ್ರವಲ್ಲ ಓದಲು, ಕೆಲಸ ಹುಡುಕಿ ಬರುವ ಸಂಬಂಧಿಕರು ಸೇರಿರುತ್ತಿದ್ದರು. ಅಷ್ಟು ಮಾತ್ರವಲ್ಲ ಅಪ್ಪನಿಗೆ ಶೇರ್ಸ್ ನಲಿ ದುಡ್ಡು ಹೂಡುವ ಅಭ್ಯಾಸ ಇತ್ತು. ( ಆಗ ಅಮ್ಮ ದುಡ್ಡಿಗೋಸ್ಕರ ಕುಸ್ತಿ ಮಾಡಿದ್ದೆ ಬಂತು, ಈಗ ಅಪ್ಪ ಶೇರ್ ನಲ್ಲಿ ಹೂಡಿದ ದುಡ್ಡೆಲ್ಲ ದುಪ್ಪಟ್ಟು ತಿಪ್ಪಟ್ಟು ಆಗಿ ಅಮ್ಮನಿಗೆ ಬರುತ್ತಾ ಇದೆ, ಅಪ್ಪ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದರು) ಮುಂಬೈ ಜೀವನ ಬಲು ತುಟ್ಟಿ . ನಾನು ಅಮ್ಮ ರೇಷನ್ ಅಂಗಡಿ, ಕಡಿಮೆ ದರದಲ್ಲಿ ತರಕಾರಿ ದಿನಸಿ ಸಿಗುವ ದೂರದ ಹೋಲ್ಸೇಲ್ ಮಾರ್ಕೆಟ್ ಗೆ ದೊಡ್ಡ ದೊಡ್ಡ ಬ್ಯಾಗ್ ಹಿಡಿದುಕೊಂಡು ಲೋಕಲ್ ಟ್ರೈನ್ ಹಿಡಿದುಕೊಂಡು ಶಾಪ್ಪಿಂಗ್ ಮಾಡಲು ಹೋಗುತ್ತಿದ್ದೆವು. ಬಿಲ್ಡಿಂಗ್ ನಲ್ಲಿರುವ ಹಲವು ಜನರು ನಮ್ಮನ್ನು ನೋಡಿ ವ್ಯಂಗ್ಯ ಮಾಡಿ ನಗುತ್ತಿದ್ದದ್ದು ಗೊತ್ತಿದೆ ) ಅಂತದ್ದರಲ್ಲಿ ನಮಗೆ ಸ್ಯಾನಿಟರಿ ನ್ಯಾಪ್ಕಿನ್ ಗಗನ ಕುಸುಮವೇ ಸೈ . ತಿಂಗಳು ಕೊನೆ ಅಂದರೆ ಅಮ್ಮ ಮಾಡುವ ಸರ್ಕಸ್ ನೋಡೀನೇ ನಾನು ಹೈರಾಣು. ಅದರಲ್ಲೂ ಒಂದೊಮ್ಮೆ ಮದುವೆ ಅಂತ ಹಲವಾರು ಜನ, ನಮ್ಮ ಮನೆಯಿಂದ ದಿಬ್ಬಣ ಹೋಗುವುದಂತ ೧೫ ದಿನ ನಮ್ಮ ಮನೆಯಲ್ಲೇ ಠಿಕಾಣಿ . ಖರ್ಚು ವೆಚ್ಚ ಸರಿದೂಗಿಸಲು ಅಮ್ಮ ಅವರ ಪ್ರೀತಿಯ, ಅವರ ಅಮ್ಮನ ನೆನಪಿಗೆ ಇದ್ದ , ಒಂದೇ ಒಂದು, ಹರಳಿನ ನೆಕ್ಲೆಸ್ ಮಾರಿದ್ದಾಗ ನನಗಾದ ಸಂಕಟ ಅಷ್ಟಿಷ್ಟಲ್ಲ . ರಾತ್ರಿ ಇಡೀ ಅತ್ತು ದಿಂಬನ್ನು ತೋಯಿಸಿದ್ದೆ. ಯಾರಿಗೂ ಏನು ಕಡಿಮೆಯಾಗದಂತೆ ಅಮ್ಮ ನಿಭಾಯಿಸಿದ್ದರು.
ಅಮ್ಮ ಕೂಡ ಬಳಸುತ್ತಿದ್ದುದು ಹಳೆ ಕಾಟನ್ ಸೀರೆಯ ನ್ಯಾಪ್ಕಿನ್ . ನನಗು ಅದೇ ಅಭ್ಯಾಸ. ನನಗಿದ್ದಿದ್ದು ಬೆಳಗ್ಗಿನ ಕಾಲೇಜು . ಅಂದರೆ ೭ ರಿಂದ ಮಧ್ಯಾಹ್ನ ೧ ಗಂಟೆ. ಗೀಸರ್ ಯಾವಾಗಲೂ ಹಾಳು. ಸ್ಟವ್ ಮೇಲೆ ನಾನು ಬೆಳಿಗ್ಗೆ ನೀರು ಕಾಯಿಸಿ ಸ್ನಾನ ಮಾಡಬೇಕಿತ್ತು , ನಾಲ್ಕು ಗಂಟೆಗೆ ಎದ್ದು, ನನ್ನ ಸ್ನಾನಾದಿ ಮುಗಿಸಿ ತಮ್ಮ ತಂಗಿಯರನ್ನು ಎಬ್ಬಿಸಬೇಕಿತ್ತು. ಅದೇ ಸ್ಟೋವ್ ಮೇಲೆ ಬೆಳಗಿನ ಉಪಹಾರ ಕೂಡ ಆಗಬೇಕಿತ್ತು. ನನ್ನ ಮುಟ್ಟಿನ ಬಟ್ಟೆ ಒಗಯಲು ನನಗೆ ಯಾವತ್ತೂ ಸಮಸ್ಯೆ ಎನಿಸಲಿಲ್ಲ. ಒಂದು ರೂಮಿನ ಬಾಗಿಲ ಹಿಂದೆ ಅಮ್ಮ ದಾರ ಕಟ್ಟಿದರು. ಮುಟ್ಟಿನ ಬಟ್ಟೆ ವಾಷ್ ಮಾಡಿ ಅಲ್ಲಿ ಹಿಂದಕ್ಕೆ ಒಣಗಿಸುತ್ತಿದ್ದೆವು. ನಾನು ಮುಟ್ಟಾಗಿದ್ದು ಅಮ್ಮನಿಗೆ ತಿಳಿಯುತ್ತಲೂ ಇರಲಿಲ್ಲ. ಶಾಲೆಯಲ್ಲಿ ಮುಟ್ಟಿನ ದಿನಗಳಲ್ಲಿ ಎಲ್ಲ ತರಹದ ಸ್ಪೋಸ್ಟ್ಸ್ ಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಗೆದ್ದಿದ್ದೇನೆ. ತಿಂಗಳ ನೋವು ಯಾವತ್ತೂ ನನ್ನ ಬಳಿ ಸುಳಿಯಲಿಲ್ಲ. ಮದುವೆಯಾದ ಮೇಲೆ ಸೇರಿದ್ದು ತಿರ್ಥ'ಹಳ್ಳಿ ' ಗೆ. ಅಲ್ಲಿನ ಮನೆಯಲ್ಲಿ ಯಾರು ಪ್ಯಾಡ್ ಬಳಿಸಿದ್ದು ನನಗೆ ಗೊತ್ತಿಲ್ಲಾ. ಒಂದು advantage ಅಂದ್ರೆ ದೊಡ್ಡ ಮನೆ, ಹಲವಾರು ಬಳಸದೆ ಇರುವ ಕೋಣೆಗಳು, ಬಟ್ಟೆ ಒಗೆಯಲು ಪ್ರತ್ಯೇಕ ಜಾಗ etc . ಪ್ಯಾಡ್ ಕೊಳ್ಳಬಹುದಿತ್ತು ಆದರೂ ನನಗೆ ಹತ್ತಿ ಬಟ್ಟೆಯ ಅಭ್ಯಾಸ ಆಗಿತ್ತು. ಎಷ್ಟೆಲ್ಲಾ ಟೂರ್, ಟ್ರೆಕ್ಕಿಂಗ್, ಹೈಕಿಂಗ್ , ಬೈಕಿಂಗ್ ಎಲ್ಲ ಹೋಗಿದ್ದೇನೆ ನಾನು menses ಟೈಮ್ ನಲ್ಲಿ.
ಟ್ರಾವೆಲ್ ಮಾಡುವಾಗ ನಾನು ಹೊಚ್ಚ ಹೊಸ ಬಟ್ಟೆಗಳನ್ನು ಪ್ಯಾಡ್ ಗಳಾಗಿ ಉಪಯೋಗಿಸುತ್ತಿದ್ದೆ. ಅವನ್ನು ತೊಳೆದು ಬಿಸಾಡುತ್ತಿದ್ದೆ. ಅಜ್ಜಿ ಅವರ ಹಳೆ ನೈನ್ yards ನ ಹತ್ತಿ ಸೀರೆ ನಮಗೋಸ್ಕರ ಇಡುತ್ತಿದ್ದರು. ಕೆಲವು ಗೋಧಡಿ (quilt)ಯಾಗುತ್ತಿದ್ದವು, ಕೆಲವು ನಾವು ಹೆಣ್ಮಕ್ಕಳಿಗೆ ಪ್ಯಾಡ್ ಗಳಾಗಿ ಪರಿವರ್ತಿತವಾಗುತ್ತಿದ್ದವು.
ಆದರೆ ನನ್ನ ಮಕ್ಕಳು ಸ್ನ್ಯಾನಿಟರಿ ಪ್ಯಾಡ್ಸ್ ಉಪಯೋಗಿಸುತ್ತಾರೆ. ದೊಡ್ಡವಳು 'ಛಿ ಅದನ್ನು ಯಾರು ತೊಳೆದು ಕೊಂಡು ಕೂರುತ್ತಾರೆ ' ಅನ್ನುತ್ತಾಳೆ. ಕಿರಿಯವಳು 'ಅಮ್ಮ we ಆರ್ ಕಾಂಟ್ರಿಬೂಟಿಂಗ್ ಟು ದಿ ಪೊಲ್ಲ್ಯೂಷನ್ ' ಅಂತಾನೆ ಪ್ಯಾಡ್ಸ್ ಉಪಯೋಗಿಸುತ್ತಾಳೆ. :-)
ತೀವೃ ಹೊಟ್ಟೆ ನೋವಿನ ಬಗ್ಗೆ ಕೇಳಿದ್ದೇನೆ ಮಾತ್ರವಲ್ಲ ನನ್ನ ಇಬ್ಬರೂ ಹುಡುಗಿಯರು ನರಳುವದನ್ನು ನೋಡಿದ್ದೇನೆ. ನನಗೆ ಅಂತಹುದ್ದೇನು ತೊಂದರೆನೇ ಇರಲಿಲ್ಲ . ಅದಕ್ಕೆ ಮುಟ್ಟಿನ ತೊಂದರೆ/ಮುಟ್ಟಿನ ನೋವು ಇದರ ಬಗ್ಗೆ ಬರೆಯುವ ಹಕ್ಕು ನನಗಿಲ್ಲ . ಈಗಂತೂ ಅವೆಲ್ಲದರಿಂದ ಮುಕ್ತ ನಾನು. ಯಾವುದೇ ತರಹದ ಸೋಂಕು ನನ್ನನ್ನು ಬಾಧಿಸಿಲ್ಲ. ಮುಟ್ಟಿನ ಬಟ್ಟೆಗಳನ್ನು ನಾನು soapnut ನಿಂದ ತೊಳೆಯುತ್ತಿದೆ . ನಮ್ಮ ಅಜ್ಜಿಯ ಮನೆಯಲ್ಲಿ ಅದರ ದೊಡ್ಡ ಮರ ಇತ್ತು. ಕಾಯಿಗಳ ಸ್ಟಾಕ್ ಇರುತ್ತಿತ್ತು ನನ್ನ ಬಳಿ. ಕಾಯಿಗಳನ್ನು ಸ್ವಲ್ಪ ಹೊತ್ತು ಬಿಸಿನೀರಿಗೆ ಹಾಕಿದರೆ ಸಾಕು. ಸಾಕಷ್ಟು ನೊರೆ ಬರುತ್ತಿತ್ತು. ಬಟ್ಟೆಗಳೂ ಕ್ಲಿನ್. ನಾನು ಉಡುವ ಸಿಲ್ಕ್ ಸೀರೆಗಳಿಗೂ ಅದನ್ನೇ ಬಳಸುತ್ತೇನೆ ಈಗಲೂ
ವಾಕ್ ಹೋಗುವಾಗ ಕಸದ ಬುಟ್ಟಿಯಿಂದ ನಾಯಿಗಳು ನ್ಯಾಪ್ಕಿನ್ ಎಳೆದು ಅವನ್ನು ಛಿದ್ರ ಗೊಳಿಸಿ ರಸ್ತೆ ಮೇಲೆಲ್ಲಾ ಅದನ್ನು ಹಾಕಿದಾಗ ಅಸಹ್ಯ ಅನ್ನಿಸುತ್ತದೆ.
ಶ್ರೀಕಾಂತ ೬ ವರ್ಷಗಳ ಕಾಲ ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಡೆಪ್ಯೂಟೇಷನ್ ಮೇಲೆ ಇದ್ರು . ಅಲ್ಲಿ ಸ್ವಾ ಉದ್ಯೋಗ ತರಬೇತಿಗಳು ನಡೆದಾಗ ಹೆಣ್ಣುಮಕ್ಕಳ ಶೌಚಾಲಾಯ ಸ್ಯಾನಿಟರಿ ಪ್ಯಾಡ್ ಗಳಿಂದ ಯಾವಾಗಲೂ ಬ್ಲಾಕ್, ನಾವು ಎಷ್ಟೊಂದು ಪೋಸ್ಟರ್ಗಳು ಮಾತ್ರವಲ್ಲ, ಹಲವಾರು ಬಾರಿ ನಾನೇ ಹೋಗಿ ಅವರಿಗೆಲ್ಲ ಹೇಳಿ ಬಂದರು ಸಹ...
ಮಕ್ಕಳು ಇಬ್ಬರಿಗೂ ಹೆಚ್ಚಿನ ರಕ್ತಸ್ರಾವದ ಬಾಧೆ ಇರುವುದರಿಂದ ನಮಗೆ ಜಾಸ್ತಿ ಸ್ಯಾನಿಟರಿ ನ್ಯಾಪ್ಕಿನ್ಸ್ ಮನೆಗೆ ತರಬೇಕಾಗುತ್ತದೆ. ನ್ಯಾಪ್ಕಿನ್ ಗಳನ್ನೂ ನಾವು ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಯಿಂದ ತರೋದು. ಸ್ವಲ್ಪ ಹಣ ಉಳಿತಾಯ ಆಗುತ್ತೆ.
ಸ್ಯಾನಿಟರಿ ಪ್ಯಾಡ್ ಮೇಲೇ ಜಿ ಎಸ ಟಿ ಬಂದ ಮೇಲೆ ಎಲ್ಲರೂ ಅದರ ಮೇಲೆ ಬರೆಯುತ್ತಿದ್ದಾರೆ ನನ್ನದು ನಾಲ್ಕಾಣೆ ಇರಲಿ ಅಂತ ಅಷ್ಟೇ.
ಸರಕಾರ ಪರಿಸರ ಪ್ರೇಮಿ ಪರ್ಯಾಯ ಹಾಗು ಜನರಿಗೆ ಕೈಗೆಟಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್ ಒದಗಿಸುವ ನಿಟ್ಟಿನಲ್ಲಿ ಈಗಲಾದರೂ ಯೋಚಿಸಬೇಕು.
(ಮಾಲವಿಕ ಯಾವುದೋ ದೊಡ್ಡ ಪುಸ್ತಕ ಓದುತ್ತಿದ್ದಾಳೆ ಹಾಗಾಗಿ ನನಗೆ ಕಂಪ್ಯೂಟರ್ ಸಿಕ್ಕಿದೆ, ಅದಕ್ಕೆ ಒಂದಾದ ಮೇಲೊಂದು ಪೋಸ್ಟ್ ಗಳು )
:-)

1 comment:
Wah Akka. This is a good post. Liked it.. Your language is always same. Simple yet beautiful
Post a Comment