ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ಪಂಢರಾಪುರ, ತಿರುಪತಿ, ಕನ್ಯಾಕುಮಾರಿ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ.ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ
ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)
ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)
ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ.
No comments:
Post a Comment