(ಮೊನ್ನೆಅಗಸ್ಟ್ 5 ನೇ ತಾರೀಕಿಗೆ ನನ್ನ ಬ್ಲಾಗ್ ಶುರು ಮಾಡಿ 6 ವರ್ಷ ಆಯ್ತು. ಹಿಂದಿನ ವರ್ಷ ಮನೆ ಶಿಫ್ಟಿಂಗ್, ಅದು ಇದು ಅಂತ ಬರೆದಿದ್ದು ಕಡಿಮೆ..ಈ ವರ್ಷನಾದ್ರೂ ಸ್ವಲ್ಪ ಹೆಚ್ಚಿಗೆ ಬರೀ ಬೇಕು...)
ಹಿಂದಿನ ವರ್ಷ ನಮ್ಮ ಬಿಲ್ಡಿಂಗ್ ನ ಕೆಲ ಜನರು ಸೇರಿ, ನಮ್ಮ ಬಿಲ್ಡಿಂಗ್ ಎದುರುಗಡೆ ಇರುವ ಸೊಸೈಟಿಯ ಜಾಗದಲ್ಲಿ, ಬಿಲ್ಡಿಂಗನವರದ್ದೆ ಕರಕುಶಲ, ಕಲೆ, ಮನೆ ತಿನಿಸುಗಳ ಒಂದು ದಿನದ exhibition cum sale ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಅದರ ಮೀಟಿಂಗ್ ಎಲ್ಲ ಎಟೆಂಡ್ ಆದಾಗ ಸುಮಾರು ಜನರಿಗೆ ’ಸಾಬುದಾನಾ ವಡಾ ಸ್ಟಾಲ್’ ಇರುತ್ತಾ ಇಲ್ವ ಅನ್ನುವ ಟೆನ್ಷನ್. :-) ಮಾಲವಿಕ ಕೇಕ್, ಕೂಕೀಸ್ ಮತ್ತು ಪಿಜ್ಜಾ ಸ್ಟಾಲ್ ಇಟ್ಟಿದ್ದಳು ಅಕ್ಕ. ಮಧ್ಯಾಹ್ನದ ಹೊತ್ತಿಗೆ ಎಲ್ಲ ಸೋಲ್ಡ್ ಔಟ್ ಆಯ್ತು. ಅದು ನನಗೆ ಅಚ್ಚರಿ ಯಾಕೆಂದರೆ ಅಷ್ಟು ಸೆಲ್ಸ್ ಆಗುತ್ತೆ ಅಂತ ತಿಳಿದುಕೊಂಡಿರಲಿಲ್ಲ. (ಅಕ್ಕನ ಕೂಕಿ, ಕೇಕ್ ಗಳೆಲ್ಲ ಅವಳೊಬ್ಬಳೆ ಮಾಡೋದು ಪ್ಲಸ್ ಪ್ರತಿಯೊಂದೂ handcrafted ಹಾಗಾದ್ದರಿಂದ ಅವಳ ಪ್ರೈಸಿಂಗ್ ಸ್ವಲ್ಪ ಹೈ ಎಂಡ್.) ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವಷ್ಟರಲ್ಲಿ ಬಿಸಿ ಬಿಸಿ ಸಾಬುದಾನಾ ವಡಾ ಸ್ಟಾಲ್ ಕೂಡ ಬಂದಿತ್ತು. ಯಪ್ಪ ಏನು ಡಿಮಾಂಡ್. ಕಾರ್ಯಕ್ರಮ 8.30 ಗೆ ಮುಗಿಯಿತಾದರೂ, ಸಾಬುದಾನಾ ವಡಾ ವ್ಯಾಪಾರ 10 ಗಂಟೆ ತನಕ ನಡೆಯಿತು. ಆಫ್ ಕೋರ್ಸ್ ನಾವು ಕೂಡ ತಿಂದೆವು. 5 ವಡಾ ಗೆ 35 ರೂಪಾಯಿ. ಟೋಮ್ಯಾಟೊ ಸಾಸ್ ಜತೆ.

ಮನೆ ಹತ್ತಿರ ಇತ್ತೀಚಿಗೆ ಓಪನ್ ಆದ Indi-HOP...HOP ಅಂದ್ರೆ ಹೌಸ್ ಆಫ್ ಪಕೋಡಾs ನಲ್ಲಿ ಐದು ಸಾಬುದಾನ ವಡಾ, ಗ್ರೀನ್ ಚಟ್ನಿ ಮತ್ತು ಕಂಟೈನರ್ ಒಟ್ಟಿಗೆ 65 ರೂ.
ಅದಕ್ಕಿಂತ ಸ್ವಲ್ಪ ಮುಂಚೆ ನಾವು ಮಹಾರಾಷ್ಟ್ರಾ ಟ್ರಿಪ್ ಹಮ್ಮಿಕೊಂಡಿದ್ದೆವು. ಬೆಳಗಾವಿಗೆ ಅಮ್ಮನ ಮನೆಗೆ ಹೋಗಿ ಅಲ್ಲಿಂದ ದೊಡ್ಡ ಗಾಡಿ ಮಾಡಿಕೊಂಡು ಕೊಲ್ಹಾಪುರ್, ಪುಣೆ, ತ್ರಯಂಬಕೇಶ್ವರ, ವಿಕ್ರಮ್ ಗಡ್ ಹಾಗೂ ಔರಂಗಾಬಾದ್..ಐದು ದಿನಗಳ ಟ್ರಿಪ್. ಅಲ್ಲಿ ಉದ್ದಕ್ಕೂ ನಾವು, ಮಿಸ್ಸಳ್ ಪಾವ್, ಸಾಬುದಾನ ಖಿಚಡಿ, ಸಾಬುದಾನಾ ವಡಾ, ವಡಾ ಪಾವ್, ಆಲೂಪೋಹಾ ಮುಂತಾದ ಮಹಾರಾಷ್ಟದ ತಿನಿಸುಗಳನ್ನೇ ತಿಂದಿದ್ದು. ಅಕ್ಕನಿಗೆ ಸಾಬುದಾಣಾ ತುಂಬಾ ಇಷ್ಟ ಆಗಿ ಈಗ ಅವಳಿಗೆ ಮೂಡ್ ಬಂದಾಗಲೆಲ್ಲ ಸಾಬುದಾನಾ ಖಿಚಡಿ ಮತ್ತು ಸಾಬುದಾನಾ ವಡಾ. ನಾನು ಮುಂಬೈನಲ್ಲಿ ಹುಟ್ಟಿ ಬೆಳೆದದ್ದು ಅಲ್ಲಿ ನಾವು ಉಪವಾಸಕ್ಕೆ ಸಾಬುದಾನಾ ಖಿಚಡಿ ಹೆಚ್ಚಿಗೆ ಮಾಡುತ್ತಿದ್ದೆವು. ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಸಾಬುದಾನಾ ತಿಂದಿದ್ದು ನಿಲ್. ಮಕ್ಕಳಿಗೆ ಇಷ್ಟ ಆಗುತ್ತ ಇಲ್ಲವಾ ಅಂತ ನಾನು ಟ್ರೈ ಮಾಡಲಿಕ್ಕೆ ಹೋಗಿರಲಿಲ್ಲ. ಅವರಿಗೆ ಈಗ ಸಾಬುದಾನಾದ ರುಚಿ ಹತ್ತಿದೆ. ಹಾಗಾಗಿ ನಾನು ಈ ಖಾದ್ಯಗಳನ್ನು ಮಾಡುತ್ತಿರುತ್ತೇನೆ.
ಮತ್ತು ಹಲವಾರು ಬ್ಲಾಗ್ ಓದುಗರು ಸಾಬುದನಾ ವಡಾ ಮಾಡುವ ಬಗ್ಗೆ ಕೇಳಿದ್ದರು. ಹಾಗಾಗಿ ಇವತ್ತು ಮಾಡಿದಾಗ ಮರೆಯದೇ ಚಿತ್ರ ತೆಗೆದು ಹಾಕಿದ್ದೇನೆ.
ಮತ್ತು ಹಲವಾರು ಬ್ಲಾಗ್ ಓದುಗರು ಸಾಬುದನಾ ವಡಾ ಮಾಡುವ ಬಗ್ಗೆ ಕೇಳಿದ್ದರು. ಹಾಗಾಗಿ ಇವತ್ತು ಮಾಡಿದಾಗ ಮರೆಯದೇ ಚಿತ್ರ ತೆಗೆದು ಹಾಕಿದ್ದೇನೆ.
ಬೇಕಾಗುವ ಸಾಮಗ್ರಿ:5 ಗಂಟೆ ನೆನಿಸಿಟ್ಟು ಅಮೇಲೆ ಪೂರ್ತಿ ನೀರು ಬಸಿದಿಟ್ಟ್ ಸಾಬುದಾನಾ/ಸಾಬಕ್ಕಿ-2 ಕಪ್ , ಸಣ್ಣಕ್ಕೆ ಹೆಚ್ಚಿದ ಹಸಿಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಹುರಿದು ಪುಡಿಮಾಡಿಕೊಂಡ ಶೆಂಗಾ ಬೀಜ, ಒಂದು ಬೇಯಿಸಿದ ಆಲೂಗಡ್ಡೆ, ಉಪ್ಪು. ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಒದ್ದೆ ಕೈನಿಂದ ಬಾಲ್ಸ್ ಮಾಡಿ, flatten it on the palms of your hand. ಆಮೇಲೆ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
ಡಿಪ್: hung curds, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪು , ಪುದೀನಾ, ಉಪ್ಪು ಮಿಕ್ಸಿಯಲ್ಲಿ ಹಾಕಿ ಬ್ಲೆಂಡ್ ಮಾಡಿ. ಬಿಸಿ ಬಿಸಿ ಸಾಬುದಾನಾ ವಡಾ ಜತೆ ಸರ್ವ್ ಮಾಡಿ.
ಸಾಬುದಾನಾ ವಡಾ ಬಿಸಿ ಬಿಸಿಯಾಗಿರುವಾಗಲೆ ತಿನ್ನ ಬೇಕು
ಕೆಲವು ಟಿಪ್ಸ್: ಆಕಸ್ಮಾತ್ ಸಾಬಕ್ಕಿಯ ನೀರನ್ನು ಸರಿಯಾಗಿ ಬಸಿದಿಡಡೆ, ವಡಾ ಮಿಕ್ಸ್ ತುಂಬಾ ನೀರಾದರೆ ಕಾರ್ನ್ ಫ್ಲೋರ್ ಅಥವಾ ಅಕ್ಕಿಹಿಟ್ಟು ಬೆರೆಸಿ.
ಶೆಂಗಾ ಬೇಕಾದರೆ ಮಾತ್ರ ಬೆರೆಸಿ
ಜೀರಿಗೆ ಕೂಡ ಬೆರೆಸ ಬಹುದು.
ಎಂಜಾಯ್
:-)

3 comments:
Thanks for the recipe Malathi. Will try it sometime.
All the prices you have mentioned is quite cheap compared to price at Ranga Shankara. ondu vaDege 20 rupaayi alli!
Hi,
happy to visit your blog again.
Keep up the good work.
Rgds
Shree
thank you Radhika and Shree kar :-)
Post a Comment