ನನಗೆ ಪಾನ್ ಪಸಂದ್ ಮಾರುಕಟ್ಟೆಗೆ ಬಂದಾಗನಿಂದ ತುಂಬಾsss ಇಷ್ಟವಾಗ್ತಿತ್ತು. ಮದುವೆಯಾದ ಕೆಲ ಸಮಯದ ನಂತರ ಅದು
ನನಗೆ ಕಣ್ಣಿಗೆ ಬಿದ್ದಿರಲಿಲ್ಲ. ಹಿಂದಿನ ವರ್ಷ ಅಕ್ಕ ನ ಟ್ರೀಟ್ ಅಂತ, ಬ್ರಿಟಿಶ್ ಲೈಬ್ರರಿ ಗೆ
ಹೋದಾಗ ಅಲ್ಲಿಂದಲೇ ಅವಳು ನನಗೆ ಅಲ್ಲೇ ಹತ್ತಿರವಿದ್ದ ’ಮಸ್ತ್ ಕಲಂದರ್’ ಗೆ ಹೋದಾಗ
ಅಲ್ಲಿ ಆಫ್ಟರ್ ಮಿಂಟ್ ಗೆ ಬದಲಾಗಿ ಅದನ್ನೆ ಕೊಟ್ಟಿದ್ದಾಗ ’ಅರೇ ಅಕ್ಕ ಇದನ್ನು ತಿನ್ನದೇ ಎಷ್ಟೊಂದು ವರ್ಷಗಳದಾವು ಎಂದು
ಉದ್ಗರಿಸಿ, ಒಂದು ಕ್ಷಣ ’ಶಾದಿ ಔರ್ ತುಮ್ಸೆ? ಕಭಿ ನಹೀಂ ಎನ್ನುವ ಅದರ ad ದೂರದರ್ಶನದಲ್ಲಿ ನೋಡಿದ್ದು ನೆನಪಾಗಿ ನಗು ಬಂತು. ಅವಳ ಪಾಲಿನ ಪಾನ್ ಪಸಂದ್ ಕೂಡ ನಾನೇ ಗುಳುಂ ಮಾಡಿದೆ. ಹಾಗಂತ ನನಗೆ ಮದುವೆ ಮನೆಯಲ್ಲಿ
ಅಥವಾ ಪಾನ್ ಬೀಡಾ ಅಂಗಡಿಯಲ್ಲಿ ಸಿಗುವ ಪಾನ್ ಗಳು ಇಷ್ಟ ಆಗಲ್ಲ. ಕೆಲವೊಮ್ಮೆ ದೊಡ್ಡ ದೊಡ್ಡ
ಪ್ಯಾಕೆಟ್ ಪಾನ್ ಪಸಂದ್ ತಂದಿಟ್ಟು ತಿಂದಿದ್ದೂ ಇದೆ. ಶ್ರೀಕಾಂತ ಯಾವಾಗಲೂ ಹೇಳೋರು, "ಯಾಕೆ ಆ artificial ಪಾನ್
ಪಸಂದ್ ತಿಂತಿಯಾ? ಅದರ ಬದಲು
ಎಲೆ ಅಡಿಕೆ ಹಾಕಬಹುದಲ್ಲವಾ ಅಂತ!
ನಮ್ಮ
ಮನೆಯಲ್ಲಿ ಶ್ರೀಕಾಂತ ಗೆ ಕೆಲವೊಮ್ಮೆ ರಾತ್ರಿ ಊಟದ ನಂತರ ಎಲೆ ಅಡಿಕೆ ತಿನ್ನುವ ಅಭ್ಯಾಸ ಇದೆ.
ಅಡಿಕೆ ನಮ್ಮ ತೀರ್ಥಹಳ್ಳಿಯ ತೋಟದ್ದು,
ಸ್ಟಾಕ್ ಇರುತ್ತೆ. ಊಟದ ನಂತರ ಅವರು ಉಯ್ಯಾಲೆ ಮೇಲೆ ಕೂರುವುದಂತೆ. ನಾನು ಕಚ್ಚೆ
ಹಾಕಿ ಸೀರೆ ಉಟ್ಟು ಕೊಂಡು, ಸೆರಗಿನಿಂದ
ಎಲೆಗಳನ್ನು ಉಜ್ಜಿ, ಅದಕ್ಕೆ
ಹಿತವಾಗಿ ಸುಣ್ಣ ಎಲೆ ಅಡಿಕೆ ಪುಡಿ ಬೆರೆಸಿ ಚೆಂದವಾಗಿ ಮಡಚಿ ಅದನ್ನು ಅವರ ಬಾಯಲ್ಲಿ ಹಾಕಿ, ನಾನು ಒಂದು ಎಲೆ ಹಾಕಿ
ತೂಗುಯ್ಯಾಲೆ ಮೇಲೆ ನಿಧಾನಕ್ಕೆ ತೂಗ್ತಾ.........ಇದು ಅವರ ಕನಸು. ಅದಕ್ಕೆ ನಾನು ’ಮೊದಲು ತೇಗದ ಮರದ ಕುಸುರಿ
ಕೆಲಸದ ಮಣೆ ಹಾಕಿರುವ ತೂಗುಯ್ಯಾಲೆ ಮಾಡಿಸಿ ಆಮೇಲೆ ನೋಡುವ ’ ........:-)
ಎರಡು
ತಿಂಗಳ ಹಿಂದೆ ದೆಹಲಿಗೆ ಹೋದಾಗ ಅಲ್ಲಿ ನಾನು ಪಾನ್ ಕುಲ್ಫಿ ತಿಂದು ಅದು ನನಗೆ ತುಂಬಾ ಇಷ್ಟ
ಆಯ್ತು. ಅದಾದ ಕೆಲ ದಿನಗಳ ನಂತರ ಫೇಸ್ ಬುಕ್ ನ ಪಾಕ ಶಾಲೆ ಪೇಜ್ ನಲ್ಲಿ ಪೂರ್ಣಿಮಾ ಗಿರೀಶ್
ವೀಳ್ಯದೆಲೆ ಚಿತ್ರಾನ್ನ್ ಮಾಡುವ ಬಗೆ ಹಾಕಿದರು. ಹಾಗೆ ಮಾಲವಿಕ ಒಂದು ಸಲ ಅದರ ಮಿಲ್ಕ್
ಶೇಕ್ ಮಾಡಿದ್ದಳು. ಅದು ನನಗೆ ತುಂಬಾ ಇಷ್ಟ ಆಗಿ ನಿಹಾಳ ಪಾಲಿನದ್ದು ನಾನೇ ಕುಡಿದುಬಿಟ್ಟೆ.
ಅದಕ್ಕೆ ಮಾಲವಿಕ ಇವತ್ತು ಪುನ: ಮಾಡಿದ್ದರಿಂದ ಅದರ ಫೋಟೊ ಹಾಗೂ ರೆಸಿಪಿ ನಿಮಗಾಗಿ
ಬೇಕಾಗಿರುವುದು:
ಎರಡು ವೀಳ್ಯದೆಲೆ, ಎರಡು ಚಮಚ
ಗುಲ್ಕಂದ್, ಒಂದು
ಗ್ಲಾಸ್ ಹಾಲು, ಅರ್ಧ
ಗಂಟೆ ನೆನೆಸಿಟ್ಟ ಸಬ್ಜ್ (ಫಲೂದಾ ಸೀಡ್ಸ್) ಸಕ್ಕರೆ ಬೇಕಿದ್ದಲ್ಲಿ ಮಾತ್ರ, ಕೆಲವು ಐಸ್ ಕ್ಯೂಬ್ಸ್.
ಎಲ್ಲವನ್ನು (except falooda seeds. they have to be added just before serving) ಬ್ಲೆಂಡರ್ ನಲ್ಲಿ ಹಾಕಿ. ಕೂಲ್ ಕೂಲ್ ಪಾನ್ ಮಿಲ್ಕ್ ಶೇಕ್ ತಯಾರು...
:-).


No comments:
Post a Comment