ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರೈನ್ ರಿಸರ್ವ್ ಆಗಿತ್ತು. ನಾವು ಬೆಳಗಾವಿಯಿಂದ ಹುಬ್ಬಳ್ಳಿ ತನಕ ಗಾಡಿ hire ಮಾಡಿಕೊಂಡಿದ್ವಿ. ಹಾಗಾಗಿ ಕಿತ್ತೂರು, ಧಾರವಾಡ ಹುಬ್ಬಳ್ಳಿಯಲ್ಲಿ ಕೆಲವು ಸ್ಥಳಗಳನ್ನು ನೋಡುತ್ತ ಬಂದ್ವಿ. :-)
ಮೊದಲಿಗೆ ಕಿತ್ತೂರು. ಪರವಾಗಿಲ್ಲ ! ಕೋಟೆಯನ್ನು ಅದರ ಪರಿಸರವನ್ನು ಚೆನ್ನಾಗಿ maintain ಮಾಡಿದ್ದಾರೆ.
ನಂತರದ ನಮ್ಮ ಸ್ಟಾಪ್ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ . ಅಲ್ಲಿ ಒಳಗಡೆ ಬೇಂದ್ರೆಯವರ ಹಲವಾರು ಕಪ್ಪು ಬಿಳುಪು ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಫೋಟೊ ತೆಗೆಯುವುದು ನಿಷೇಧಿಸಿ ಬೋರ್ಡ್ ಹಾಕಿದ್ದರು. ನಾವು ಚಿತ್ರಗಳನ್ನು ವೀಕ್ಷಿಸುತ್ತಿದ್ದಹಾಗೆ ಹಿನ್ನೆಲೆಯಲ್ಲಿ ಮಂದವಾಗಿ ಬೇಂದ್ರೆ ಯವರ ಕವನಗಳಿಗೆ ರಾಗ ಸಂಯೋಜನೆ ಮಾಡಿದ ಹಾಡುಗಳು ಹೊಮ್ಮುತ್ತಿದ್ದವು. ಅವರ ಕವನಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಅನುವಾದಿಸಿ ಹಾಕಲಾಗಿತ್ತು.
ನನ್ನ ಕವಿ ಮಿತ್ರರೊಬ್ಬರ ಇಷ್ಟದ ಕವಿ ಬೇಂದ್ರೆಯವರು. ಅವರ ಹಲವು ಪದ್ಯಗಳು ಅವರಿಗೆ ಬಾಯಿಪಾಠ. ಫೋನ್ ಮಾಡಿದಾಗಲೆಲ್ಲ ಕೆಲವು ಸಾಲುಗಳನ್ನು ನನಗೆ ಹೇಳದಿದ್ದರೆ ನನ್ನ ಅವರ ಮಾತುಗಳು ಅಪೂರ್ಣ ಎನಿಸುವಷ್ಟು. ಅವರು ಕೆಳಗಿನ ಸಾಲುಗಳನ್ನು ನನಗೊಮ್ಮೆ ಹೇಳಿದಾಗ, ಶ್ರೀಕಾಂತರ ಲೈಬ್ರರಿಗೆ ದಾಳಿ ಮಾಡಿ ಬೇಂದ್ರೆಯವರ, ಅವರ ಬಗ್ಗೆ, ಅವರ ಕವನಗಳ ಪುಸ್ತಕ ಹೊರಗೆ ತೆಗೆದು ಸ್ವಲ್ಪ ಸ್ವಲ್ಪವಾಗಿ ಓದಿದೆ. ಇಗೋ ಈ ಸಾಲುಗಳು (ನಾನು ಬಡವಿ : ನಾದಲೀಲೆ) ನಿಮಗಾಗಿ. ನಿಮಗಿಷ್ಟವಾದ ಸಲುಗಳೇನಾದರೂ ಇದ್ರೆ ನನ್ನ ಜತೆ ಶೇರ್ ಮಾಡಿ ಪ್ಲೀಸ್:
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
http://www.threeessays.com/books/a-life-in-three-octaves/
ಎಲ್ಲಾ ಚಿತ್ರಗಳು ನನ್ನ ಸೆಲ್ ಫೋನ್ ನಲ್ಲಿ ತೆಗೆದದ್ದು
:-)
ಮೊದಲಿಗೆ ಕಿತ್ತೂರು. ಪರವಾಗಿಲ್ಲ ! ಕೋಟೆಯನ್ನು ಅದರ ಪರಿಸರವನ್ನು ಚೆನ್ನಾಗಿ maintain ಮಾಡಿದ್ದಾರೆ.
ಕಿತ್ತೂರು ಕೋಟೆಯ ಬಗೆಗಿನ ಮಾಹಿತಿ ಓದುತ್ತಿರುವ ರಾಯರು
ಗಟ್ಟಿ ದನಿಯ ಪುಟ್ಟ ಹಕ್ಕಿ
ನಂತರದ ನಮ್ಮ ಸ್ಟಾಪ್ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ . ಅಲ್ಲಿ ಒಳಗಡೆ ಬೇಂದ್ರೆಯವರ ಹಲವಾರು ಕಪ್ಪು ಬಿಳುಪು ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಫೋಟೊ ತೆಗೆಯುವುದು ನಿಷೇಧಿಸಿ ಬೋರ್ಡ್ ಹಾಕಿದ್ದರು. ನಾವು ಚಿತ್ರಗಳನ್ನು ವೀಕ್ಷಿಸುತ್ತಿದ್ದಹಾಗೆ ಹಿನ್ನೆಲೆಯಲ್ಲಿ ಮಂದವಾಗಿ ಬೇಂದ್ರೆ ಯವರ ಕವನಗಳಿಗೆ ರಾಗ ಸಂಯೋಜನೆ ಮಾಡಿದ ಹಾಡುಗಳು ಹೊಮ್ಮುತ್ತಿದ್ದವು. ಅವರ ಕವನಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಅನುವಾದಿಸಿ ಹಾಕಲಾಗಿತ್ತು.
ನನ್ನ ಕವಿ ಮಿತ್ರರೊಬ್ಬರ ಇಷ್ಟದ ಕವಿ ಬೇಂದ್ರೆಯವರು. ಅವರ ಹಲವು ಪದ್ಯಗಳು ಅವರಿಗೆ ಬಾಯಿಪಾಠ. ಫೋನ್ ಮಾಡಿದಾಗಲೆಲ್ಲ ಕೆಲವು ಸಾಲುಗಳನ್ನು ನನಗೆ ಹೇಳದಿದ್ದರೆ ನನ್ನ ಅವರ ಮಾತುಗಳು ಅಪೂರ್ಣ ಎನಿಸುವಷ್ಟು. ಅವರು ಕೆಳಗಿನ ಸಾಲುಗಳನ್ನು ನನಗೊಮ್ಮೆ ಹೇಳಿದಾಗ, ಶ್ರೀಕಾಂತರ ಲೈಬ್ರರಿಗೆ ದಾಳಿ ಮಾಡಿ ಬೇಂದ್ರೆಯವರ, ಅವರ ಬಗ್ಗೆ, ಅವರ ಕವನಗಳ ಪುಸ್ತಕ ಹೊರಗೆ ತೆಗೆದು ಸ್ವಲ್ಪ ಸ್ವಲ್ಪವಾಗಿ ಓದಿದೆ. ಇಗೋ ಈ ಸಾಲುಗಳು (ನಾನು ಬಡವಿ : ನಾದಲೀಲೆ) ನಿಮಗಾಗಿ. ನಿಮಗಿಷ್ಟವಾದ ಸಲುಗಳೇನಾದರೂ ಇದ್ರೆ ನನ್ನ ಜತೆ ಶೇರ್ ಮಾಡಿ ಪ್ಲೀಸ್:
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.
ಎಷ್ಟು ಚೆನ್ನಾಗಿದೆಯಲ್ಲವಾ?? :-)
ಬೇಂದ್ರೆ ತಾತನೊಂದಿಗೆ ನಾನು.
ನಮ್ಮ ಧಾರವಾಡದ ಆಫಿಸ್ ನ ಕಲೀಗ್ಸ್ ಅಲ್ಲಿಗೇ ಬಂದಿದ್ದರಿಂದ ಸುಮಾರು ಸಮಯ ಬೇಂದ್ರೆಯವರ ಮನೆಯ ಮುಂದೆ ನಿಂತಿದ್ದೆವು. ನನಗೇನಾದರು ಕವನ ಬರೆಯುವ inspiration ಸಿಗಬಹುದಾ ಅಂತ ಕಾದೆ. ಕಾದು ಕಾದು perspiration ಬಂತೇ ವಿನ: ಕವನ ಹುಟ್ಟಲಿಲ್ಲ. :-) ಶ್ರೀಕಾಂತ ಹಲವಾರು ಪುಸ್ತಕಗಳನ್ನು ಖರೀದಿಸಿದರು.
ಆ ಮೇಲೆ ಪಾಟೀಲ್ ಸರ್ ಮನೆಯಲ್ಲಿ ಉಪ್ಪಿಟ್ಟು+ಚಟ್ನಿ ಪುಡಿ, ಅವಲಕ್ಕಿ+ ಮೊಸರಿನ ಪೊಗದಸ್ತಾದ ಬ್ರಂಚ್ (ಬ್ರೇಕ್ ಫಾಸ್ಟ್ ಕಮ್ ಲಂಚ್) ಅಲ್ಲಿಂದ ಹೊರಡುವಾಗ ಸ್ವಲ್ಪ ವಿಳಂಬವಾದ ಕಾರಣ ಒಂದು flying visit ಹುಬ್ಬಳ್ಳಿಯ ಉಣಕಲ್ ನ ಗಂಗೂಬಾಯಿ ಸ್ಕೂಲ್ ಆಫ್ ಮ್ಯುಸಿಕ್ ಗೆ. ಅಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತವನ್ನು ಹೇಳಿಕೊಡಲಾಗುತ್ತದೆ. ಒಟ್ಟಿಗೆ 20 ವಿದ್ಯಾರ್ಥಿಗಳು ಮತ್ತು ಐದು faculty. ಅವರಲ್ಲಿ ನಮಗೆ ಗಣಪತಿ ಭಟ್ಟ ಹಾಸಣಗಿ ಸಿಕ್ಕಿದರು. ಅವರ ಮೂಲಕ ಡಾ. ಎನ್ ರಾಜಂ ಕೂಡ ಅಲ್ಲಿ ಕಲಿಸುತ್ತಾರೆಂದು ಖುಶಿ ಆಯಿತು. ಪೂರ್ತಿ ಗುರುಕುಲ ನೋಡಲು ಇನ್ನ್ನೊಮ್ಮೆ ಬರುತ್ತೇವೆಂದು ಅಲ್ಲಿಂದ ಹೊರಟೆವು.
ರೇಖಾಚಿತ್ರಗಳು
ಶ್ರೀ ಗಣಪತಿ ಭಟ್ ಹಾಸಣಗಿ
ಅಲ್ಲಿಗೆ ಭೇಟಿ ನೀಡಿದ್ದಾಗ ನಿಹಾರಿಕಾ 'ನಮ್ಮ ಕಾಲೇಜಿಗೆ ಮನು ಸರ್ ಅವರನ್ನು ಹುಡುಕಿಕೊಂಡು ದೀಪಾ ಗಣೇಶ ಮತ್ತು ಅವರ ಹಸ್ಬೆಂಡ್ ಬಂದಿದ್ದರಮ್ಮ. ಮನು ಸರ್ ಅವರನ್ನು ಹುಡುಕಿ ಕರೆಯಲು ನನಗೆ ಹೇಳಿದ್ದರು. ದೀಪಾ ಅವರು ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಬರೆದಿದ್ದಾರೆ. ಅದನ್ನು ಮನು ಸರ್ ಗೆ ಕೊಡಲು ತಂದಿದ್ದರು. ನಾನು ಸುಮ್ಮನೆ ಪುಸ್ತಕದಲ್ಲಿ ಕಣ್ಣು ಹಾಯಿಸಿದೆ. ತುಂಬಾ ಚೆನ್ನಾಗಿ ಬರೆದಿದ್ದಾರೆ. ಆ ಪುಸ್ತಕ ಕೊಳ್ಳಲೇಬೇಕು' ಅಂತ ಹೇಳಿದ್ದಳು. ಶ್ರೀಕಾಂತ ದೆಹಲಿಗೆ ಹೊರಟಿದ್ದಾರೆ. ಆ ಪುಸ್ತಕದ ಹೆಸರು ಕಳಿಸಿದ್ದೇನೆ. ತುಂಬಾ ಕಾತುರದಿಂದ ಕಾಯ್ತಾ ಇದ್ದೀನಿ ಆ ಪುಸ್ತಕ ಓದಲು.
ದೀಪಾ ಗಣೇಶ ನನಗೆ 'ದ ಹಿಂದು'ದಲ್ಲಿ ಅವರ ಬರಹದ ಮೂಲಕ ಪರಿಚಯ.ಯಾವುದಾದರು ಸಂಗೀತ ಕಾರ್ಯಕ್ರಮ ಮಿಸ್ ಆದಾಗಲೆಲ್ಲ ದೀಪಾ ಅವರ ಬರಹಗಳಿಗೆ ಕಾಯುತ್ತೇನೆ. ಕಾರ್ಯಕ್ರಮ ಎಟೆಂಡ್ ಆಗಿದ್ದಷ್ಟು ತೃಪ್ತಿಯಾಗುತ್ತೆ ಅವರು ಬರೆದ್ದನ್ನು ಓದಿದರೆ. :-).
ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
http://www.threeessays.com/books/a-life-in-three-octaves/
ಎಲ್ಲಾ ಚಿತ್ರಗಳು ನನ್ನ ಸೆಲ್ ಫೋನ್ ನಲ್ಲಿ ತೆಗೆದದ್ದು
:-)

No comments:
Post a Comment