November 8, 2013

Life is BEAUTIFUL

ಕೆಲದಿನಗಳ ಹಿಂದೆ ಆಯೋಜಿಸಲಾದ ಅರ್ಬನ್ ಕೃಷಿ ಮೇಳದಲ್ಲಿ ಶ್ರೀಕಾಂತರ ಹಿರಿಯ ಮಿತ್ರರ ಒತ್ತಾಯದ ಮೇರೆಗೆ ನಾವೂ ಒಂದು ಮಳಿಗೆ ಹಾಕಿ ನಮ್ಮ ಗ್ರಾಮ್ಯಾ ಹಾಗೂ ಕೈ ಕ್ರಾಫ್ಟ್ಸ್ ನ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುವುದು ಕೊನೆ ಘಳಿಗೆಯಲ್ಲಿ ತೀರ್ಮಾನವಾಯಿತು. ಬೆಳಿಗ್ಗೆ ಶ್ರೀಕಾಂತ ಎದ್ದವರೆ ಪೋಸ್ಟರ್ ಮಾಡುವಲ್ಲಿ ನಿರತರಾದರು. ನಾವು ಮೂವರು ಉಳಿದವರ (ನಾನು, ಅಕ್ಕ, ನಿಹಾ) ಚೆನ್ನಾಗಿದೆ/ಚೆನ್ನಾಗಿಲ್ಲ ಗಳ ಮಧ್ಯೆ ಕಡೆಗೂ ನಾವೂ ನಾಲ್ಕ್ಕೂ ಜನ ಒಪ್ಪುವಂತಹ ಪೋಸ್ಟರ್ ತಯಾರಾಯಿತು.  ಅದನ್ನು ಪ್ರಿಂಟ್ ಹಾಕಿಸಬೇಕಿತ್ತು. ಹೆಬ್ಬಾಳ್ ಗೆ ಹೋಗಲು ನಾವು ಗಾಡಿ ಬುಕ್ ಮಾಡಿಕೊಂಡಿದ್ದೆವು. ಹಾಗೆಯೇ ಪೋಸ್ಟರ್ ನ ಪ್ರಿಂಟ್ ಹಾಕಿಸಲು ನಾವು ಯಾವಾಗಲೂ ಹೋಗುವ ರಾಘವೇಂದ್ರ ಪ್ರಿಂಟರ್ಸ್ ಬಳಿ ಹೋದೆವು. ಅವರಿಗೆ ನಾನು-ನಮ್ಮ ಸಂಸ್ಥೆ- ಐಡಿಎಫ್ ನ ಆಫಿಶಿಯಿಲ್ ಪ್ರಿಂಟರ್ಸ್ ಅನ್ನೋದು. ಬೆಳಿಗ್ಗೆ ನಾವು ಏಷ್ಟೆ ಹೊತ್ತಿಗೆ ಬರುತ್ತೇವಂದ್ರೂ ರಾಜಣ್ಣ  ಅವರು ಅಂಗಡಿ ತೆರೆದು ರೆಡಿಯಾಗಿರ್ತಾರೆ. :-)ನಮ್ಮ ಸಂಸ್ಥೆಯ ಸಾಧನೆಗಳಲ್ಲೆಲ್ಲ ಅವರದ್ದೂ ಸಿಂಹ ಪಾಲು ಇದ್ದೇ ಇದೆ.

 ಅಲ್ಲಿ ಅವರ ಕಂಪ್ಯೂಟರ್ ಹಾಳಾಗಿದ್ದರಿಂದ ಶ್ರೀಕಾಂತ ಅದನ್ನು ರಿಪೇರಿ ಮಾಡುವ ಕಾಯಕ ಹೊತ್ತುಕೊಂಡರು. ಇನ್ನು ಸಧ್ಯಕ್ಕೆ ಅಲ್ಲಿಂದ ಬಿಡುಗಡೆಯಿಲ್ಲ ಎಂದು ನನಗೆ ಗೊತ್ತಾಯಿತು. ನನ್ನ ಚೀಲದಲ್ಲಿ ಆದಿನ ಚಾಕೋಲೇಟ್ ಬಿಸ್ಕತ್ ಮುಂತಾದವು ಯಾವುದೂ ಇರಲಿಲ್ಲ. ಅಕ್ಕ ಪಕ್ಕ ಕಣ್ಣು ಹಾಯಿಸಿದಾಗ ಒಂದು ಪುಟ್ಟ ಮೆಡಿಕಲ್ ಸ್ಟೋರ್ಸ್ ಕಂಡಿತು. ಏನಿಲ್ಲದಿದ್ದರೂ ಹಾಲ್ಸ್ , ವಿಕ್ಸ್ ಕಿ ಗೋಲಿ ಆದ್ರೂ ತೆಗೊಳ್ಳುವ ಅಂತಲ್ಲಿ ಹೋದೆ.
ಅಲ್ಲಿ ಒಬ್ಬ ವಯಸ್ಸಾದವರು ಇಡ್ಲಿ ತಿನ್ನುತ್ತಿದ್ದರೆ, ಹೆಂಗಸು ಗಲ್ಲಾದಲ್ಲಿ, ಗಲ್ಲಕ್ಕೆ ಕೈಯಾನಿಸಿ  ನಿಂತಿದ್ದರು. ಮೂಗಿನ ಎರಡೂ ಬದಿ ಮೂಗುತಿ ಹಾಕಿಕೊಂಡು ಚಂದದ ದೊಡ್ಡ ಕುಂಕುಮ ಇಟ್ಟು ಕೊಂಡು ನೋಡಲು ತುಂಬ ಲಕ್ಷಣವಾದ ಮುಖ. ನಾನು ಹೋದ ಕೂಡಲೇ ಹಿರಿಯರು ಏಳಲು ಉಪಕ್ರಮಿಸಿದರು. ನಾನು 'ನಿಧಾನವಾಗಿ ತಿಂಡಿ ಮುಗಿಸಿ ನನಗೇನೂ ಗಡಿಬಿಡಿಯಿಲ್ಲ' ಅಂತಂದೆ. ನನಗೆ ಬೇಕಾದ ಬಿಸ್ಕಿಟ್ ಚಾಕೋಲೇಟ್ ಗಳನ್ನೆಲ್ಲ ಕೌಂಟರ್ ಮೇಲಿರುವ ಡಬ್ಬಿಯಿಂದ ತೆಗೆದು ನಾನೇ ನೀಟಾಗಿ ಕೌಂಟರ್ ಮೇಲೆ ಜೋಡಿಸಿದೆ. ಅಷ್ಟರಲ್ಲಿ ಅವರು ತಿಂಡಿ ಮುಗಿಸಿ, ಒಂದು ಲೋಟ ನೀರು ಕುಡಿದು. ಕೈ ತೊಳೆದು ಬರುತ್ತೇನೆಂದು, ಅಂಗಡಿ ಬದಿಯಲ್ಲಿ ಇದ್ದ ಗೇಟ್ ನೊಳಗೆ ತಟ್ಟೆ ಲೋಟದೊಂದಿಗೆ ಒಳ ಹೊರಟು ಹೋದರು. ಆಗ ಆ ಮಹಿಳೆ 'ಸ್ವಲ್ಪ ಇರಿ, ಅವರು ಕೈ ತೊಳೆದು ಬರುತ್ತಾರೆ' ಅಂದರು. ನಾನು ಸುಮ್ಮನೆ ಮಾತಿಗೆ ಶುರು ಮಾಡಿದೆ. ಎಷ್ಟು ವಯಸಮ್ಮ ನಿಮಗೆ?..................
ನಿಹಾ ಬರೆದ ಈ ಚಿತ್ರದಂತೆ ಇತ್ತು ಅವರ ಮುಖ

ಭಾನುವಾರ ಆದುದರಿಂದ ಅಕ್ಕಪಕ್ಕದ ಅಂಗಡಿಗಳೆಲ್ಲ ಬಂದ್ ಅಥವಾ ಇನ್ನೂ ತೆರೆದಿಲ್ಲದ್ದರಿಂದ  ಆಗಲೇ ನಾಲ್ಕೈದು ಜನ ಸಾಮಾನು ಕೊಳ್ಳುವವರು ಬಂದಿದ್ದರು. ಅದರಲ್ಲಿ ಒಬ್ಬ ಹುಡುಗಿಗಂತೂ ಅರ್ಜೆಂಟ್. 'ಅಜ್ಜಿ ಬೇಗ ಐದು ರೂಪಾಯಿಯ ಕ್ಲೋಸ್ ಅಪ್ , ಒಂದು ಮೆಡಿಮಿಕ್ಸ್ ಸೋಪ್ ಕೊಡಿ ಅಂತ ಕೇಳಿ ಅದರ ಒಟ್ಟಿಗೆ ಎರಡು ಶ್ಯಾಂಪೂವಿನ ಸ್ಯಾಶೆ ಕೊಂಡು, (ಆ ಹುಡುಗಿ ಎಷ್ಟು ಗಡಿಬಿಡಿ ಮಾಡಿದರೂ ಅಜ್ಜಿ ನಿಧಾನವಾಗಿ ಒಂದೊಂದೆ ಸಾಮಾನು ಹುಡುಕಿ ಹುಡುಕಿ ಕೊಡುತ್ತ ಇದ್ದರು ಅದರಲ್ಲೂ  ಅವರ ಕೈ ತಾಗಿ ಬೀಳಿಸಿದ ಇತರೇ ಸಾಮಾನುಗಳೆ ಹೆಚ್ಚು  ) 'ಅಜ್ಜಿ ಲೆಕ್ಕ ಬರೆದಿಡಿ ಆಮೇಲೆ ಬರುತ್ತೇನೆ ಅಂತ ಓಡಿ ಹೋದಳು. ಇನ್ನೊಬ್ಬ ಮಹಿಳೆ ಫೋನ್ ಬೂತ್ ಉಪಯೋಗಿಸಲು ಚಿಲ್ಲರೆ ಕೇಳಲು ಬಂದಿದ್ದಳು. ನನಗೇನೂ ಅರ್ಜೆಂಟ್ ಇಲ್ಲದ್ದರಿಂದ ನಾನು ನನ್ನ ದುಡ್ಡು ಕೊಡಲು ಅಂಗಡಿ ಖಾಲಿಯಾಗಲು ಕಾಯ್ತಾ ಇದ್ದೆ.  ಹೀಗೆ ಚಿಲ್ಲರೆ ಸಾಮಾನು ಕೊಳ್ಳುವವರದ್ದೆ ಭರಾಟೆ.
ಈಗ ಅವರ ಕತೆ ಕೇಳಿ
"ನನಗೂ ಅವರಿಗೂ 80 ರ ಆಸುಪಾಸು. ಈ ಮೆಡಿಕಲ್ ಸ್ಟೋರ್ ನಾನು ಮದುವೆಯಾಗಿ ಈ ಮನೆಗೆ ಬಂದಾಗಲಿಂದಲೂ  ಇದೆ. ಅಂಗಡಿ ಹಿಂಬದಿಯಲ್ಲೇ ಮನೆ. ಮದುವೆಯಾದ ಹಲವಾರು ವರ್ಷ ಮಕ್ಕಳಿಲ್ಲದ್ದರಿಂದ, ಹೇಗೂ ಮಕ್ಕಳಾಗುವುದಿಲ್ಲವೆಂದು ನಾವಿದ್ದ ಪುಟ್ಟ ಮನೆ ಮತ್ತು ಅಂಗಡಿ ಆಗಿನ ಕಾಲಕ್ಕೆ ಸ್ವಂತ ಮಾಡಿ ಕೊಂಡ್ವಿ. ನನಗೆ 40 ಆದಾಗ ಮಗೆ ಹುಟ್ಟಿದ. ಸಂಪಾದನೆಯನ್ನು ಅಳಿಸಿ ತೂಗಿ ಉಪಯೋಗಿಸಿ ಜೀವನ ಮಾಡಿ ಮಗನಿಗೆ ಅವನಿಷ್ಟದಂತೆ ಇಂಜಿನಿಯಿರಿಂಗ್ ಓದಿಸಿದೆವು. ಓದಿ ಆದ ಕೂಡಲೆ ಅವನಿಗೆ ನೌಕರಿ ಸಿಗಲಿಲ್ಲ. ಮೆಡಿಕಲ್ ಸ್ಟೋರ್ ನ್ನೆ ಒಪ್ಪು ಓರಣಗೊಳಿಸಿ ಮಗನಿಗೆ ನೀಡುವಾ ಅಂದರೆ ಅವನಿಗೆ ಈ ಕಸುಬಿನಲ್ಲಿ ಆಸಕ್ತಿಯಿಲ್ಲ. ಕಡೆಗೂ ಒಂದು ಎಮ್ ಎನ್ ಸಿ ನಲ್ಲಿ ಕೆಲಸ ಸಿಕ್ಕಿ, ಪ್ರೋಮೋಷನ್ ಎಲ್ಲ ಸಿಕ್ಕಿ, ಅವನೂ ಲೇಟ್ ಆಗಿ ಒಂದು ತಿಂಗಳ ಹಿಂದೆಯಷ್ಟೆ ದೂರದ ಸಂಬಂಧದ ಒಂದು ಅನಾಥ ಹುಡುಗಿಯನ್ನು ಮದುವೆ ಮಾಡಿಕೊಂಡು ನಾಲ್ಕೂ ಜನ ಅಂಗಡಿ ಹಿಂಬದಿಯ ಪುಟ್ಟ ಮನೆಯಲ್ಲಿರುವುದು". ಎದುರಿನ ಅಂಗಡಿ ಅಷ್ಟೆ ಸೈಜ್ ಅಂತೆ ಅವರ ಮನೆ ಕೂಡ. ನಾಲ್ಕೂ ಜನ ಒಟ್ಟಿಗೆ ಆರಾಮಾಗಿ ಇರಲಿಕ್ಕಾಗುವುದಿಲ್ಲವಂತೆ. ಹೆಚ್ಚಿನ ಸಮಯ ಮಗನಿಗೆ ನೈಟ್ ಶಿಫ್ಟ್ ಆದರೆ, ಸೊಸೆಗೆ ಬೆಳಗ್ಗಿನ ಶಿಫ್ಟ್. ಅಪರೂಪಕ್ಕೊಮ್ಮೆ ಇಬ್ಬರಿಗೂ ಒಂದು ಭಾನುವಾರ ಒಟ್ಟಿಗೆ ಸಿಗುತ್ತದೆಯಂತೆ. ಆಗ ತಾತ ಹಾಗೂ ಅಜ್ಜಿ ಅವರಿಬ್ಬರಿಗೆ ಏಕಾಂತ ಕಲ್ಪಿಸಲು ಅಂಗಡಿಗೆ ಬಂದಿರುವುದಂತೆ. ಕೆಲವು ರಾತ್ರಿ ಇಲಿಗಳ ಕಾಟ ತಾಳಿಕೊಂಡು ಅಂಗಡಿಯಲ್ಲೇ ಮಲಗುವುದೂ ಇದೆಯಂತೆ.ನಮ್ಮ ಈ ಎರೆಂಜ್ಮೆಂಟ್ ನೋಡಿ ಸೊಸೆಗೆ ಬೇಜಾರಾಗುತ್ತೆ. 'ತುಂಬ ಒಳ್ಳೆಯವಳು ನನ್ನ ಸೊಸೆ' ರಜೆಯಂತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವಳಿಗೆ ರಜೆಯಿದ್ದ ದಿನ ನನಗೆ ಏನೂ ಕೆಲಸ ಮಾಡಲು ಬಿಡುವುದಿಲ್ಲ. "ಉಳಿದ ದಿನ ನಾನು 6.30 ಗೆ ಹೊರಟು ಬಿಡ್ತೇನೆ ನಿಮಗೆ ಏನೂ ಸಹಾಯ ಮಾಡಲು ಆಗಲ್ಲ' ಅಂತಾಳೆ.  . ಮಗ ಬೇರೆ ಮನೆ ಹುಡುಕುತ್ತಿದ್ದಾನೆ ಸ್ವಲ್ಪ ಲೋನ್ ತಗೊಂಡರೆ, ಈ ಅಂಗಡಿ ಮನೆ ಮಾರಿ ಆ ದುಡ್ಡನ್ನೆಲ್ಲ ಹಾಕಿ ನಾಲ್ಕು ಜನ ಒಟ್ಟಿಗೆ ಇರುವ ಪ್ಲ್ಯಾನ್ಸ್ ಹಾಕಿದ್ದಾರೆ. 'ಮೈನ್ ರೋಡ್ ಮೇಲೆ ಇರೋದರಿಂದ ಅಂಗಡಿಗೆ ಒಳ್ಳೇ ಬೆಲೆ ನೆ ಸಿಗುತ್ತೆ. ಅತ್ತೆ ಸೊಸೆ  ಟಿವಿ ಸೀರಿಯಲ್ ಗಳನ್ನೂ ಮೀರಿಸುವಷ್ಟು ಜಗಳ ಮನಸ್ತಾಪ ಮಾಡ್ತಾ ಇರುವ ಈ ಕಾಲದಲ್ಲಿ ಇವರದ್ದು ನನಗೆ ವಿಶಿಷ್ಟ ಸಂಸಾರ ಅನ್ನಿಸಿತು.
ತಾತನಿಗೆ ನಾನು ಕೊಂಡ ಸಾಮಾನಿನ ಬೆಲೆ ಎಷ್ಟಾಯಿತು ಅಂದಾಗ ಮೂವತ್ತು ಅಂದರು. ನನಗೆ ಡೌಟ್ ಬಂದು ಒಂದೊಂದಾಗಿ ಎಲ್ಲದರ ಬೆಲೆ ಕೇಳ್ತಾ ಹೋದೆ. 65 ರೂ ಆಗಿತ್ತು. 'ವಯಸ್ಸಾತಲ್ವಾ ಅಂತ ನಗುತ್ತ ನನ್ನ ಬಳಿ ದುಡ್ಡು ಇಸಕೊಂಡರು'.  ಅವರಿಗೆ ಶುಭವಾಗಲಿ ಅಂತ ಹಾರೈಸಿ ಗಾಡಿ ಬಳಿ ಮರಳಿದೆ.
ಪ್ರಿಂಟಿಂಗ್ ಕಟ್ಟಿಂಗ್ ಎಲ್ಲ ಮುಗಿಸುವಾಗ ಮುಕ್ಕಾಲು ಗಂಟೆ ಕಳೆದು ಹೋಯಿತು. ಹೋಗುವಾಗ ಮೇಲಿನ ಪ್ರಸಂಗ ಹಾಗೂ ಚಾಕಲೇಟ್ ಗಳನ್ನು ಶ್ರೀಕಾಂತ  ನಿಹಾ ಹಾಗೂ ಕಾರು ಚಾಲಕ್ ಸ್ವಾಮಿ ಜತೆ ಶೇರ್ ಮಾಡಿದೆ. ರಾಯರು ಎಂದಿನಂತೆ ಹ್ಮ್ಮ್ಮ್ಮ್ಮ್ಮ್ ಅಂದ್ರೆ ನಿಹಾ cho chweet' ಅಂದ್ಲು. ನಿಹಾ ಮರುದಿನ ಪರೀಕ್ಷೆ ಇದ್ದರೂ ಅವಳು ನಮ್ಮ ಜತೆ ಬಂದಿದ್ದಳು.
ಅಲ್ಲಿ ನಮ್ಮ ಕೌಂಟರ್ ನಲ್ಲಿ ಆಗಲೇ ರೂಪಾ ಹಾಗೂ ಸತೀಶ ಕಟ್ಟಿಮನಿ ಉಪಸ್ಥಿತರಿದ್ದರು. ನಮ್ಮ ಮಳಿಗೆಗೆ ತುಂಬಾ queries/ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.
:-)

7 comments:

Swarna said...

ಚೆನ್ನಾಗಿದೆ.
ಇಂಥ ಮೇಳಗಳು ಇದ್ದಾಗ ನಮಗೂ ತಿಳಿಸಿ.

Radhika said...

Malathi, you will find interesting people just about everywhere! I always enjoy reading real life stories that you post.
maLige du ondu photo iddidre chennaagirtittu.

nenapina sanchy inda said...

Thank you Swarna and Radhika!
@ Swarna: ella mail chk maaDide nimma cell no sigalilla. i think it was in the mails i deleted accidentally. The KrishimEla is still on for two more days. sadhya aadre attend maaDi.
@ Radhika: photos ella Srikanth system nallide. i think he has uploaded on facebook.
:-)
malathi S

Badarinath Palavalli said...

ನಮ್ಮ ವಾಹಿನಿಯವರು ಚಿತ್ರಿಸಿಕೊಂಡು ಬಂದಿದ್ದ ಇಡೀ ಮೇಳದ ಅಷ್ಟೂ footage ನೋಡಿದ್ದೆ.
ಪ್ರೇರೇಪಕ ಒಳ್ಳೆಯ ಬರಹ ಇದು.
ನೀಹಾಜೀ ಚಿರಿಸಿರುವ ಮಹಿಳೆ MSS ಅವರ ತರಹ ಇದ್ದಾರೆ ಅಲ್ಲವೇ.

nenapina sanchy inda said...

houdu badari, niha MS avarannu chitrisuva attempt adu. adu chennagi bandillaa anta avaLige bejaru.
thank you
:-)
ms

Anonymous said...

As Radhika said, people everywhere are interesting.

As Badari said, the drawing does resemble MSS.

The story is quite touching.

- Shrikar

nenapina sanchy inda said...

Thank you Shree Kar!! :-)