June 20, 2013

ಹೋಳಿಗೆ ಪುರಾಣ

ನನ್ನ ತಂಗಿ ಯು ಎಸ್ ನಿಂದ ಅಮ್ಮನ ಮನೆಗೆ ಬಂದಿಳಿದಿದ್ದಾಳೆ. ಮೊನ್ನೆ ಮಾತನಾಡುವಾಗ ’ಹೆ ಅಮ್ಮ ಹೋಳಿಗೆ ಮಾಡಿಟ್ಟಿದ್ದರು. ಎಷ್ಟು ಚೆನ್ನಾಗಿತ್ತು ಗೊತ್ತಾ? ನನ್ನ sister-in law (ಅವರು australia ದಲ್ಲಿರೋದು) ಕೂಡ ಇಷ್ಟಪಟ್ಟು ತಿಂದು ಸ್ವಲ್ಪ ಪ್ಯಾಕ್ ಮಾಡಿಕೊಂಡು ಹೋದರು ಅಂತ ಹೇಳಿದಳು
ಹೌದು ನಮ್ಮ ಅಮ್ಮ ಬಿಟ್ಟರೆ ನನ್ನ ಮಿತ್ರ ಗುರುದತ್ ನ ಅಮ್ಮ ಮಾಡಿದ ಹೋಳಿಗೆ ಮಾತ್ರ ನಾನು ಇಷ್ಟ ಪಟ್ಟು ತಿನ್ನೋದು. ನಾವು ಮುಂಬೈನಲ್ಲಿದ್ದಾಗ ಹೋಳಿಗೆ ಮಾಡುತ್ತಿದ್ದ ನೆನಪು ಬಂತು.  ನನಗೆ  ಬುದ್ದಿ ತಿಳಿದಾಗಿನಿಂದ - ಅದೊಂದು family affair ಆಗಿರುತ್ತಿತ್ತು. ಅಡಿಗೆ ಮನೆಗೆ ಕಾಲಿಡದ ಅಪ್ಪನಿಗೂ ಕಡ್ಡಾಯವಾಗಿ ಆ ದಿನ ಅಡಿಗೆ ಮನೆಗೆ ಬರಲೇಬೇಕಾಗುತ್ತಿತ್ತು. ಹೋಲಿ ಹಬ್ಬದ ಹತ್ತಿರದ ಭಾನುವಾರ ಅದಕ್ಕೆ ಮೀಸಲು. ಬೆಳಿಗ್ಗೆ ಬೇಗ ಅಡಿಗೆ ರೆಡಿಯಾಗಿರುತ್ತಿತ್ತು. ಅಮ್ಮ ಬೇಳೆ ಬೇಯಿಸಲು ಇಡುತ್ತಿದ್ದರು. ಕುಕ್ಕರ್ ಬಂದ ಮೇಲೆ ಆ ಕೆಲಸ ಸ್ವಲ್ಪ ಸಲೀಸಾಯಿತು. ಬೆಂದ ಕಡಲೇ ಬೇಳೆಯನ್ನು ಅಮ್ಮ ಜಾಲರಿ ಪಾತ್ರೆಯಲ್ಲಿ ಅದರ ನೀರು ಬಸಿದು ಹೋಗಲು + ಆರಲು ಇಡುತ್ತಿದ್ದರು. ಅದರಲ್ಲಿ ನನ್ನ  ಪಾಲಿನ ಕೆಲಸ ಅಂದ್ರೆ ಒರಳನ್ನು ತೊಳೆದು ಸ್ವಚ್ಛವಾಗಿ ಒರೆಸಿಡುವುದು. ಅಮ್ಮ ಅದರಲ್ಲಿ ಹಾಕಿದ ಸಾಸಿವೆಯನ್ನು ನೀರು ಹಾಕದೆ ರುಬ್ಬುವುದು. ಸಾಸಿವೆ ಯಿಂದ ಹೋಳಿಗೆಗೆ ಯೂನಿಕ್ ಕಲರ್ ಮತ್ತು ಸುವಾಸನೆ. ಸಾಧಾರಣ ಒಂದು ಚಮಚ ಸಾಸಿವೆ ದೊಡ್ಡ ರುಬ್ಬುವ ಕಲ್ಲಲ್ಲಿ ರುಬ್ಬುವುದು ಒಂದು ಹರಸಾಹಸವೇ ಸೈ.ಅದರ ಘಾಟಿಗೆ ಕಣ್ಣಲ್ಲೆಲ್ಲ ನೀರು. (ಬಹುಶ: ಅದಕ್ಕೆ ಏನೋ ನನಗೆ ಸಾಧರಣ ಕಾಯಿಲೆಗಳಾದ ಕೆಮ್ಮು ಶೀತ ತಲೆ ನೋವು ಎಲ್ಲ ಬಾಧಿಸದೇ ಇರುವುದು. ಎಲ್ಲರಿಗೂ ಒಂದು ರೌಂಡ್ ಜ್ವರ ಕಾಯಿಲೆ ಎಲ್ಲ ಆದಾಗ ನಾ ಮಾತ್ರ ಒಬ್ಬಳು ಅದಕ್ಕೆ ಗುರಿಯಾಗ್ತಿರಲಿಲ್ಲ. ಶ್ರೀಕಾಂತ ಗೆ ನಾನು ಯಾವಗಲೂ ಹೇಳುತ್ತಿರುತ್ತೇನೆ ನನಗೊಸ್ಕರ ವೈದ್ಯರ ಬಳಿ ಖರ್ಚಾಗಿದ್ದು ಕಡಿಮೆ ಅಂತ- ಜಂಬ ಕಣ್ರೀ ನನಗೆ) ನಾನು ಅದನ್ನು ನುಣ್ಣಗೆ ರುಬ್ಬುವಾಗ ಅಮ್ಮ ಮೈದಾ ಹಿಟ್ಟನ್ನು ಮೊದಲು ನೀರಿನಿಂದ ನಂತರ ಎಣ್ಣೆ ಹಾಕಿ ಚೆನ್ನಾಗಿ ನಾದುತ್ತಿದ್ದರು. ಅಷ್ಟರಲ್ಲಿ ನನ್ನ ರುಬ್ಬುವ ಕೆಸ ಮುಗಿಸಿರುತ್ತಿದ್ದೆ. ಆ ಸಾಸಿವೆ ಪೇಸ್ಟ್ ನ್ನು ಮೈದಾ ಹಿಟ್ಟಿನ ಕಣಕಕ್ಕೆ ಬೆರೆಸಿ ಅದನ್ನು ನಾದುವ ಕೆಲಸ ನನ್ನ ಪಾಲಿಗೆ. ಸರಿಯಾಗಿ ಮೆತ್ತಗಾದ ಮೇಲೆ ಅದನ್ನು ಒದ್ದೆ ಬಟ್ಟೆಯಿಂದ ಮುಚ್ಚಿಡುತ್ತಿದ್ದೆವು. 
ಈಗ ಸ್ವಲ್ಪವೇ ಆರಿದ ಕಡ್ಲೇ ಬೇಳೆಯನ್ನು ಸುಲಿದ ಏಲಕ್ಕಿ ಬೆಲ್ಲದೊಂದಿಗೆ ರುಬ್ಬುವುದು. ರುಬ್ತಾ ರುಬ್ತಾ ಅದು ಗಟ್ಟಿಯಾಗುತ್ತೆ. ಉಂಡೆ ಕಟ್ಟುವ ಹದಕ್ಕೆ ಬಂದೊಡನೆ ಅದನ್ನು ಪಾತ್ರೆಗೆ ವರ್ಗಾಯಿಸುವುದು. ಇದು ಹೂರಣ
ಈಗ ನಾನು ಮೈದಾ ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡುತ್ತಿದ್ದರೆ ನನ್ನ ತಮ್ಮ ಕೃಷ್ಣ ಕಡ್ಲೆ ಬೇಳೆಯ ದೊಡ್ಡ ಗಾತ್ರದ ಉಂಡೆ ಮಾಡಿಡುತ್ತಿದ್ದ. this will be thrice the size of the maida ball. ನಾನು ಅಮ್ಮ ಎರಡು ಬೇಲನ್ ನೊಂದಿಗೆ ಸಜ್ಜಾಗುತ್ತಿದ್ದೆವು. ನಾನು ಮೈದಾ ಹಿಟ್ಟಿನ್ನು ಸಣ್ಣ ಚಪಾತಿ ತರಹ ಲಟ್ಟಿಸಿ ಕೊಡುತ್ತಿದೆ. ಅದರಲ್ಲಿ ಅಮ್ಮ ಚೆಂದಮಾಡಿ ಕಡಲೆಬೇಳೆಯ ಹೂರಣವನ್ನು ಇಟ್ಟು ದೊಡ್ಡ ಗಾತ್ರದ ಚಪಾತಿ ಸೈಜ್ ಗೆ ಅದನ್ನು ಲಟ್ಟಿಸುತ್ತಿದ್ದರು. ಮೊದಲು ಸ್ಟವ್ ಆಮೇಲೆ ಗ್ಯಾಸ್ ಬಂದ ಮೇಲೆ ಗ್ಯಾಸ್ ಕಟ್ಟೆಯನ್ನು ನೆಲದ ಮೇಲಿಟ್ಟು ನಾವೆಲ್ಲ ಸುತ್ತು ಕೂತುಕೊಂಡು ಹೋಳಿಗೆ ಮಾಡುತ್ತಿದ್ದೆವು. ಅಪ್ಪನ ಕೆಲಸ ಅವನ್ನು ಬೇಯಿಸುವುದು. ಒಂದೈದು ಹೋಳಿಗೆ ಬೇಯಿಸಿದ ನಂತರ ಅಪ್ಪನಿಗೆ ಅದರ ಹದ ಗೊತ್ತಾಗಿ ಮಾತಿಲ್ಲದೇ ನಮ್ಮ ಕೆಲಸ ಸಾಗುತ್ತಿತ್ತು. (ಅದೇ ನಾನು ನನ್ನ ಮಕ್ಕಳೊಂದಿಗೆ ಏನಾದರೂ ಕೆಲಸ ಮಾಡುತ್ತಿರಬೇಕಾದ್ರೆ ಮಾತು ನಗು ಎಷ್ಟು ಗಮ್ಮತ್ತು ಮಾಡ್ತೇವೆ, ಅಲ್ಲಿ ನಾವೆಲ್ಲ ಆಗ ಅಷ್ಟು ಸೀರಿಯಸ್ ಯಾಕಿರ್ತಿದ್ವಿ ಗೊತ್ತಿಲ್ಲ. ಈಗ ಹಾಗಿಲ್ಲ ಮನೆ ತುಂಬ ಗೌಜು ಗಲಾಟೆ ಗದ್ದಲ ಮಾತಿಗೊಮ್ಮೆ ನಗಿಸುವ ತಮ್ಮ ಪಾಂಡು) ಎಲ್ಲ ಮುಗಿಸುವಾಗ ಸಾಧಾರಣ ಮಧ್ಯಾಹ್ನ ಒಂದು ಗಂಟೆ ಆಗುತ್ತಿತ್ತು. ನಾನು ಪಾತ್ರೆಗಳನ್ನು ತೆಗೆದಿಟ್ಟು, ಅಡಿಗೆ ಮನೆ ಸ್ವಚ್ಛ ಮಾಡುವಷ್ಟರಲ್ಲಿ ಅಮ್ಮ ಬಸಿದಿಟ್ಟ ಕಡಲೆ ಬೇಳೆಯ ಸಾರಿಗೆ ಸಾಸಿವೆ, ಕರಿಬೇವು, ಹಿಂಗು ಕೆಂಪು ಮೆಣಸಿನ ಒಗ್ಗರಣೆ, ಒಂಚೂರು ಬೆಲ್ಲ ಎಲ್ಲ ಹಾಕಿ ರೆಡಿ ಮಾಡುತ್ತಿದ್ದರು. ನಮ್ಮ ಅಡಿಗೆ ಮನೆ ಚಿಕ್ಕದಿತ್ತು ಹಾಗೂ ಡೈನಿಂಗ್ ಟೇಬಲ್ ಇರಲಿಲ್ಲ, ಮಾಡಿದ ಅಡಿಗೆ, ಹೋಳಿಗೆಯನ್ನೆಲ್ಲ ಹಾಲ್ ನಲ್ಲಿ ತಂದಿಟ್ಟುಕೊಂಡು ನಮ್ಮ ಊಟ. ಅಡಿಗೆ ಮಧ್ಯದಲ್ಲಿ ,ನಾವೆಲ್ಲ ಅದರ ಸುತ್ತ. ಊಟ ಆದಮೇಲೆ ಇನ್ನೂ ಸ್ವಲ್ಪ ಬಿಸಿ ಇದ್ದ(warm) ಹೋಳಿಗೆಯ ಮೇಲೆ, ಅಮ್ಮ ಮನೆಯಲ್ಲೇ ಕಾಸಿದ ತುಪ್ಪ ಹಾಕ್ಕೊಂಡು ಪೊಗದಸ್ತಾದ ಊಟ. ಊಟ ಕೂಡ ಮಾತಿಲ್ಲದೆ ಸಾಗುತ್ತಿತ್ತು.
ಮದುವೆ ಆದ ಮೇಲೆ ನಾನು ಕೊಪ್ಪಕ್ಕೆ ಬಂದ ಮೇಲೆ ಒಂದು ಸಲ ಹೋಳಿಗೆ ಮಾಡುವ ಹುಕ್ಕಿ ಬಂದಿತು. ನಾನು ಮಹಾ ಪ್ರೋ ಅಂದು ಕೊಂಡಿದ್ದೆ. ಅಮ್ಮನಿಗೆ ಅಷ್ಟೆಲ್ಲ ಹೆಲ್ಪ್ ಮಾಡಿದ ನನಗೆ ಹೋಳಿಗೆ ಬನಾನಾ ಬಾಯೇಂ ಹಾತ್ ಕಾ ಖೇಲ್ ಎಂಬ ಅಹಂಕಾರ. ಸರಿ ಒಬ್ಬಳೆ ಸ್ವ್ಲಲ್ಪವೇ ಸ್ವಲ್ಪ ಹೋಳಿಗೆ ಮಾಡುವ..ಹೇಗೂ ಒಬ್ಬಳೆ ತಾನೆ ಮಾಡಬೇಕಾದ್ದು. ಅಮ್ಮ ಮಾಡುತ್ತಿದ್ದನ್ನು ಚಾಚೂ ತಪ್ಪದೆ ಪಾಲಿಸಿದೆ. ಹೋಳಿಗೆ finally ರೆಡಿ ಆದಾಗ ಗಟ್ಟಿ ಆಗಿತ್ತು. ಅದನ್ನೆ ತಟ್ಟೆಯನ್ನಾಗಿ ಬಳಸಬಹುದಿತ್ತು. ಶ್ರೀಕಾಂತ ಗೆ ಆಫಿಸ್ ಗೆ ಹೋಗುವ ಮುನ್ನ ನನ್ನ ಹೋಳಿಗೆ ಮಾಡುವ ಕಾರ್ಯಕ್ರಮದ ಬಗ್ಗೆ ಕೊಚ್ಚಿಕೊಂಡಿದ್ದೆ. ಅವರು ಬರುವಾಗ ಮಿತ್ರರ ಹಿಂಡಿನೊಂದಿಗೆ ಬಂದಿದ್ದರು
ಹೋಳಿಗೆ ನೋಡಿದ ಮೇಲೆ ಒಬ್ಬಬ್ಬರದ್ದು ಒಂದೊಂದು ಕಮೆಂಟ್
"ಮ್ಯಾಡಂ ವೈರಿಗಳಿದ್ದರೆ ಸುದರ್ಶನ ಚಕ್ರ ದಂತೆ  ಇದರ ಪ್ರಯೋಗ ಮಾಡಿ ಅವರ ರುಂಡ ತುಂಡು ಮಾಡಬಹುದು ಎಂದು ನಾಟಕೀಯ ವಾಗಿ ಒಬ್ರು ಹೇಳಿದರೆ, ಇನ್ನೊಬ್ಬರು ಮ್ಯಾಡಂ ದನಕ್ಕೆಲ್ಲ ಹಾಕಲು ಹೋಗಬೇಡಿ ಅದರ ಗಂಟಲಿಗೆ ಗಾಯ ಆಗಬಹುದು , ಇನ್ನೊಬ್ಬರು ಮ್ಯಾಡಂ ಗೋಡೆಗೆ ಬಡಿದ್ರೆ ಗೋಡೆ ತುಂಡಾಗಬಹುದು, ಫ್ರಿಸ್ ಬೀ ತರಹ ಆಟ ಆಡಬಹುದು...ಅಂತೆಲ್ಲ. ನಮ್ಮ ರಾಯರು ನನ್ನ ಪೆಚ್ಚು ಮುಖ ನೋಡಿ its allright ದಿನಾ ಅದನ್ನು ಕುಟ್ಟಾಣಿಯಲ್ಲಿ ಕುಟ್ಟಿ ತಿನ್ನುತ್ತೇನೆ ಆಯ್ತಾ ಅಂದರು
ನಾವು ಕೊಂಕಣಿಯವರು ಯಾವುದನ್ನೂ ವೇಸ್ಟ್ ಮಾಡಲ್ಲ. ನಾನು ಬೆಳಿಗ್ಗೆ ಎದ್ದು ಅದನ್ನು ತುಂಡು ಮಾಡಿ ಹಾಲಲ್ಲಿ ಹಾಕಿಟ್ಟು, ನನ್ನ ಕೆಲಸ ಎಲ್ಲ ಮುಗಿಸಿದ ಮೇಲೆ ಅದಕ್ಕೆ ಸಕ್ಕರೆ ಹಾಕಿಕೊಂಡು ಸ್ಪೂನ್ ನಲ್ಲಿ ತಿನ್ನುತ್ತಿದ್ದೆ.
ಅದೇ ಫಸ್ಟ್ ಎಂಡ್ ಲಾಸ್ಟ್ ನನ್ನ ಹೋಳಿಗೆ ಪ್ರಯೋಗ
ನನ್ನ ತಂಗಿ ಸ್ಟೇಟ್ಸ್ ನಲ್ಲಿ ಇತ್ತೀಚಿಗೆ ಮಾಡಿದ್ಲಂತೆ, ಅಮ್ಮ ಮಾಡಿದ ತರಹ ಆಗದಿದ್ದರೂ iT was ok ಅಂದ್ಲು. 
ಮಕ್ಕಳ ಜತೆ ಇದನ್ನೆಲ್ಲ ಶೇರ್ ಮಾಡುವಾಗ ’ಅಮ್ಮ ನಾವು ಹೋಳಿಗೆ ಮಾಡುವ’ ಅಂದಿದ್ದಾಳೆ ಮಾಲವಿಕ. ಇನ್ನು ಮೂರು ನಾಲ್ಕು ದಿನಗಳಲ್ಲಿ ಟ್ರೈ ಮಾಡುವವರಿದ್ದೇವೆ
ನಮಗೆ ಗುಡ್ ಲಕ್ ಹೇಳ್ತೀರಾ??
:-)

6 comments:

Anonymous said...

Nimma holige Purana Odi nange nanna amma chikkamma na holige... Nenapaytu.. Nange ubbatti astu hidsalla... Amma madidaga ondu tindre doDdu! Namma manelu purana ittu idara sutta mutta
1. Ubbatti saru used to be favorite to eat to drink.. Hmm eeglu bayalli neeru

2. Maida pita Chapati if kanika peet was more.. Where they wud add green chillies and coriander to the dough

3. If some one is pregnant in the family ... They wud make sure some how churna became more than Kanika peet.. As if the churn had capabilities of determining the sex!

I have never tried ubbatti...I don't think wud ever try! Was thinking what memories my daughter wud have when she grows up of my cooking!! Got to catch up if I want her to have some memories...

nenapina sanchy inda said...

ur third pointwas shared by friend Jyothi .
yes hubbaTTi saaru...mmmmm
ur second point : may be i will try when i make hubbatti in a few days.
oh they will have memories if not of food of something else
(just yesterday my daughter shared that they used to have picnic at home when i used to go out to work. they would make a tent out of my saree, cut cucumbers, onions tomatoes, get a bread from outside and carry it to the bedroom in the picnic basket and sit inside the tent and enjoy. they always remembered to clean up before i returned home...( so i thought i was to be blamed cos i did not let them out to play..:-( yet they had their small pleasures )
thanks for reading my rambling, i really appreciate it..
:-)
malathi S

Anonymous said...

Saasive Khara irutha?? Ghaatu.... I nevew knew... :)

Radhika said...

Malathi, post the pic of obbaTTu prepared by your mom whenever you can. Never heard of saasive being used for the color. No turmeric? And no need to make bellada paaka? First time hearing this method. You know what, I have plans of gate crashing to your home tomorrow! Ananya loves obbaTTu so much especially bELe obbaTTu. We use togaribELe and not kaDlebELe. Unfortunately I don't know how to make it. Ananya insists that I learn it and she is going to help me! But I'm yet to experiment with it.

nenapina sanchy inda said...

Anonymous 2: houdu fresh sasive has a tangy smell and makes ur eyes water when u grind it..

Radhika: today we r going out we will be back only at night...i will let u know how successful our experiment with the holige will turn out...i would have cancelled today's prog if i had read ur comments yesterday...sorry..
:-)
ms

Anonymous said...

Ho Ho HO Holige kathe majavagide Mal. All the best for next Sree chakra holige programme:-)V