October 9, 2012

ಹೀಗೊಂದು ಒನ್ ವೇ ಸಂಭಾಷಣೆ

ನಿನ್ನೆ ನಿಹಾಳ ಜತೆ ಅವಳ ಕಾಲೇಜ್ ಗೆ ಹೋಗಿದ್ದೆ ಅವಳ psychology subject ಆಗಿ. ಬಸ್ ನಲ್ಲಿ ಕೇಳಿದ್ದ ಸಂಭಾಷಣೆ as is..
ಹೆಲ್ಲೋ ಸುಮಿ...
..................
ನನ್ನದು ನಡೀತಾ ಇದೆ ಯಾವತ್ತಿನ ಹಾಗೆ ಏನೂ ಸುಖ ಇಲ್ಲ..
..................
ಹೂಂ ಹೇಳ್ಕೊಳ್ಳೋಕೆ ಸರಕಾರಿ ನೌಕರಿನೆ, ಆದರೆ ಸಂಬಳ ಹೆಚ್ಚಾಗ್ತಾ ಖರ್ಚೂ ಜಾಸ್ತಿ
....................
ಗಂಡ ಎನಿಸಿಕೊಂಡವ ಕುಡಿದು ಎಲ್ಲೋ ಬಿದ್ದ್ದಿರತಾನೆ.ಮನೆಗೆ ಬಂದ್ರೆ ಬಂದ. ಬಂದ್ರೂ ಗಲಾಟೆ. ನಾನು ಸುಮ್ನಿರಲ್ಲ.ಬರೀ ಗೋಳು
...................
ಅವನಾ?? (ಬಹುಶ: ಮಗನ ಬಗ್ಗೆ ಇರಬೇಕು)ಇಂಜಿನಿಯರಿಂಗ್ ಮುಗಿಸಿದ್ದಾನೆ. ದಿನ ಇಡೀ ಕಂಪ್ಯೂಟರ್ ಮುಂದೆ ಕಟಿಪಿಟಿ ಮಾಡ್ತಿರ್ತಾನೆ..ಅವನೆ ಹೇಳಿಕೊಳ್ಳುವ ಹಾಗೆ ಅವನೊಬ್ಬ ಜೀನಿಯಸ್ ಅಂತೆ
........................
ಕೆಲಸ ಏನು ಅವನನ್ನು ಹುಡುಕ್ಕಂಡು ಬರುತ್ತಾ? ಇವನ್ ತಾನೆ ಹೋಗಬೇಕು? ಎಲ್ಲ ನನ್ನ ಖರ್ಮ (ಕರ್ಮ)
........................
ಅವಳಾ? ವಯಸ್ಸು 25 ಆಯ್ತು. ಕತ್ತೆ ತರಹ ಬೆಳೆದಿದ್ದಾಳೆ. ಬಿ ಎಸ್ಸಿ ಮಾಡಿ ಮನೆಯಲ್ಲೇ ಇದ್ದಾಳೆ. ಕೆಲಸಕ್ಕೋಗೋದು ಬಿಡು. ಮನೆ ಕೆಲಸಕ್ಕೂ ಸಹಾಯ ಮಾಡಲ್ಲ. ಗಂಟೆ 9 ಆಯ್ತು ಹೌದಾ? ಇನ್ನೂ ಏಳೇ ಇಲ್ಲ ಸೋಂಬೇರಿ..ಯಾಕೆ ಬೆಳಿಗ್ಗೆ ಹಾಲು ತರೋದು, ತರಕಾರಿ ಕೊಯ್ದು ಕೋಡೋದು ಹಿಂತದ್ದೆಲ್ಲ (ಇಂತದ್ದೆಲ್ಲ )ಮಾಡಿಕೊಡಬಹುದಲ್ವಾ?
..........................
ನಿನ್ನೆ ಸಂಜೆ ಆಫಿಸ್ ನಲ್ಲಿ ಒಡಿಟ್ (audit)ನಡಿತೀತ್ತು ಮನೆಗೆ ಹೋಗುವಾಗ ಲೇಟ್...ಬೆಳಿಗ್ಗೆ ನಾನು ಮಂಚದ ಮೇಲೆ ಹಾಕಿದ್ದ ಒಣಗಿದ ಬಟ್ಟೆ ಹಾಗ್ ಹಾಗೇ...ಎಲ್ಲಾ ನಾನು ಹೇಳಿ ಮಾಡಬೇಕಾ?
.........................
ಟಿ.ವಿ ನೋಡ್ತಿರ್ತಾಳೆ
..........................
ಸುಮೀ, ಅದು ಮಾಡಿ ಆಯ್ತು. ಪಕ್ಕದ ಮನೆಗೆ ಹೋಗಲಿಕ್ಕೆ ಶುರು ಮಾಡಿದ್ಲು. ಸುಮ್ನೆ ನಮ್ಮ ಮನೆ ಹೇಸಿಗೆ ಬೇರೆಯವರಿಗೆ ತಿಳಿಯೋದು ಬೇಡ ಅಂತ ಪುನ: ಹಾಕಿಸ್ಕೊಂಡೆ. ಮತ್ತು ಸಿಗುವ ಒಂದು ಭಾನುವಾರ ನನಗೂ ಒಂದು ಬ್ರೇಕ್ ಟಿ.ವಿ ನಲ್ಲಿ ತೋರಿಸೋ ಸಿನಿಮಾಗಳು (ಬಹುಶ: ಟಿ.ವಿ ನೆಟ್ ವರ್ಕ್ ಕೇಬಲ್ ಕನೆಕ್ಷನ್ ?)
.........................
ಗಂಡು ನೋಡ್ತಾ ಇದ್ದೀನಿ. ತಕ್ಷಣಕ್ಕೆ ಸಿಗಬೇಕಲ್ಲ. ಎಲ್ಲರಿಗೂ ಕೆಲಸಕ್ಕೆ ಹೋಗುವವರು ಬೇಕು. ಒಂದೆರಡು ಬಿಸಿನೆಸ್ಸ್ ನಲ್ಲಿರೋ ಹುಡುಗರ ಮನೆಯವರು ಕೇಳಿಕೊಂಡು ಬಂದಿದ್ರು. ಇವಳಿಗೆ ಬೇಡವಂತೆ. ಬಲವಂತ ಮಾಡಿ, ಬೈದ್ದಿದ್ದಕ್ಕೆ ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಹೇಳ್ತಾಳೆ ಬೇರೆ. ಸಾಯ್ಲಿ ಅಂತ ನಾನೇ ಸುಮ್ನಾದೆ. ನೋಡಿದ್ಯಾ ಸುಮಾ ಒಟ್ಟಿಗೆ ಸುಖ ಇಲ್ಲ. ನಾಲ್ಕು ದಿನ ಎಲ್ಲದರೂ ಹೋಗಿ ಸಾಯುವ ಅಂದ್ರೆ ನನಗೆ ಯಾರಿದ್ದಾರೆ? ನಾನ ಇವನ್ನನ್ನ ಕಟ್ಟಿಕೊಂಡು ದಿನಾನೆ ನಮ್ಮ ಮನೆಯವರ ಪಾಲಿಗೆ ನಾ ಸತ್ತು ಹೋದೆ. ನಿನ್ನನ್ನ ಬಿಟ್ರೆ ಹೇಳಿಕೊಳ್ಳುವಂತಹ ಸ್ನೇಹಿತರು ಹಿತೈಷಿಗಳು ಯಾರೂ ಇಲ್ಲ.
........................
ಪ್ರೀತಿ ಪ್ರೇಮ ಎಲ್ಲ ಸ್ವಲ್ಪ ಕಾಲ ಚಂದ. ಈಗ ನಾನೆ ಉದಾಹರಣೆಯಾಗಿದ್ದೀನಿ ಅಲ್ಲವ?ಪ್ರೀತಿಸಿದವನ್ನನ್ನ ಕಟ್ಟಿಕೊಂಡೆ ಉಳಿದವರೆಲ್ಲ ನನ್ನಿಂದ ದೂರ ಆದರು. ಇವಂದು ಆಮೇಲೆ ಗೊತ್ತಾಯ್ತು..ಪ್ರೀತಿ ಅಂತ ಅಲ್ಲ ಸುಮ್ನೆ ಜಿದ್ದಿನಿಂದ ನನ್ನನ್ನು ಮದುವೆ ಮಾಡಿಕೊಂಡಿದ್ದು. ನೀನೆ ಸುಖಿ ಸುಮಿ..
........................
ಹೌದಾ ಸುಮೀ..ಈ ಸಂತಸದ ವಿಷಯ ಹೇಳಲಿಕ್ಕೆ ಇಷ್ಟು ಹೊತ್ತು ಬೇಕಾಯ್ತಾ. ಛೆ ನಂದೇ ರಗಳೆಯಾಗಿ ಹೋಯ್ತು. ಏನು ಮಾಡ್ತಾನೆ ಹುಡುಗ, ಏನ್ ಕತೆ?
........................
ಹೂಂ. ದಸರಾಗೆ ಹೇಗೂ ರಜೆ ಇದೆ. ಅದಕ್ಕೆ ಇನ್ನಷ್ಟು ಸೇರಿಸಿ ನಾನಂತು ಹಾಜರ್. ಹಾಗೇ ದೆಹಲಿ ಕೂಡ ನೋಡಬಹುದು. ಖಂಡಿತ ಬರ್ತೇನೆ ಸುಮಿ. ಈಗ ಫೋನ್ ಇಡ್ಲಾ. ಸಂಜೆ ಮಾತಾಡ್ತೀನಿ. ನನ್ನ ಸ್ಟಾಪ್ ಬಂತು.
............................

9 comments:

Badarinath Palavalli said...

again 'psychology subject' hahaha :-D

ಸಂಭಾಷಣೆಗಳು ವೃತ್ತ ಮತ್ತೆ ಆರಂಭದ ಹೊನಲಿಗೆ ಬರುತ್ತವೆ, ಅದೇ ಬದುಕು ಮಾಲತಿಯವರೇ.

ನೋವುಗಳು ನಿರಂತರ, ಅದನ್ನು ಹಂಚಿಕೊಂಡು ಹಗುರ ಮಾಡಿದೆವು ಅಂದುಕೊಂಡರೂ, ಅದು ಮತ್ಯಾರಿಗೋ ಹಿಂಸಿಸಿದ ಪರಿಯಷ್ಟೇ...

ಇಲ್ಲಿ ಬರುವ ಪಾತ್ರ ನಮ್ಮ ದಿನ ನಿತ್ಯದ ವ್ಯವಹಾರ ಅಲ್ಲವೇ?

ಅಂತೂ ಕಡೆಗೆ ಆಕೆ ಬೆಳಕಿನ ಹುರುಪು ಕಂಡದ್ದು ಖುಷಿಯಾಯಿತು.

Srikanth Manjunath said...

ಪ್ರೀತಿ ಪ್ರೇಮ ಬಿಸಿ ಮಸಾಲೆ ದೋಸೆಯಂತೆ..ಬಿಸಿ ಇದ್ದಾಗ ಚನ್ನ..ಆರಿದ ಮೇಲೆ ಚಕ್ಕಳ...ಸುಖಃ ಹಂಚಿಕೊಂಡಾಗ ಅಕ್ಷಯವಾಗುತ್ತದೆ....ದುಃಖ ಕ್ಷಯವಾಗುತ್ತದೆ...ಒಳ್ಳೆಯ ಲೇಖನ..ಒನ್ ವೇ ಆದರು ನಾನ ದಿಕ್ಕುಗಳಲ್ಲಿ ಲಹರಿಯನ್ನು ಹರಡುತ್ತೆ..ಸುಂದರ ಲೇಖನ...ಅಭಿನಂದನೆಗಳು

nenapina sanchy inda said...

:-) nanna one way sambhasaNeginta Badari mattu Srikanth Manjunath , nimma comment sakhattaagide...
ms

Sudeepa ಸುದೀಪ said...

nicely written... :)) some time sits...like...ghar ghar ki kahaani....

Anonymous said...

I liked your concept and the way you wrote. But I pity for the lady.

nenapina sanchy inda said...

thank u munna!
Dear Anonymous ji:
i wonder at people who wash their dirty linen in public...were we all meant to hear??.or may be she really was pissed off at something that happened at home before she left for work, that was desperate to bare all her feelings at that moment when her friend called??
hope she finds peace and contentment soon...
:-(
ms

Shree Kar said...

ಸೂsss ಪರ್ರು!
ಯಾರೋ ಸೆಲ್ಫೋನಿನಲ್ಲಿ ಮಾತಾದಿದ್ದನ್ನೇ ನಿಮ್ಮ ಪೋಸ್ಟಿನ ಬಂಡವಾಳ ಮಾಡ್ಕೊಂಡ್ ಬಿಟ್ರಲ್ಲ!

ಲವ್ವು, ಮ್ಯಾರೇಜು ಎಲ್ಲಾ ಲೊಳಲೊಟ್ಟೆ ಅಲ್ವೇ?

Suresh Nayak said...

ಅಲ್ಲ ನಾವು ಇಷ್ಟು ದೂರದಿಂದ ಅವರ ಸಂಭಾಷಣೆ ಕೇಳೋ ಹಾಗಾಯಿತಲ್ಲ !! ಪಾಪ ಅವರು ತಮ್ಮಷ್ಟಕ್ಕೆ ಏನೋ ಮ್ಮಾತಡ್ತಿದ್ರು ... ಅದನ್ನು ಇಂಟರನೆಟ್ ವಾಣಿ ಮಾಡಿ ಬಿಟ್ರಲ್ಲ :-)

Anonymous said...

Iruvudellava bittu iradidareDege tudivude jeevana....