SPOILER ALERT : ಇದು ಸಿನಿಮಾದ review ಅಲ್ಲ. ಚಿತ್ರಕತೆಯನ್ನು 90 % as is ಬರೆದಿದ್ದೇನೆ. ಈ ಚಿತ್ರವನ್ನು ನೀವು ಮುಂದೇನಾದರೂ ವೀಕ್ಷಿಸುವುದಿದ್ದರೆ ಖಂಡಿತ ಇದನ್ನು ಓದಬೇಡಿ.........
ಪೋಸ್ಟ್ ನ ಕೆಳಗಡೆ on line ಸಿನಿಮಾ ನೋಡಲು ಬೇಕಾದ ಲಿಂಕ್ ಕೊಟ್ಟಿದ್ದೇನೆ
ಪೋಸ್ಟ್ ನ ಕೆಳಗಡೆ on line ಸಿನಿಮಾ ನೋಡಲು ಬೇಕಾದ ಲಿಂಕ್ ಕೊಟ್ಟಿದ್ದೇನೆ
ಈ ಚಿತ್ರದ ಕತೆಯು ಸ್ವಾತ್ಯಂತ್ಯ್ರ ಪೂರ್ವ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸ್ಥಿತವಾಗಿದೆ. ಈ ಕತೆಯ ಮುಖ್ಯ ಪಾತ್ರ ಹರಿ ದಾದಾ*. ಮಹಾರಾಷ್ಟ್ರದ ಒಂದು ಮಧ್ಯಮ ವರ್ಗದ ಕೃಷಿ ಅವಲಂಬಿತ ಬ್ರಾಹ್ಮಣ ಕುಟುಂಬ. ಮನೆಯ ಸಂಪೂರ್ಣ ಜವಾಬ್ದಾರಿ ಹರಿದಾದಾ (ಸಚಿನ್ ಖೇಡೇಕರ್) ನ ಮೇಲೆ. ಹರಿ ದಾದಾ ಅವನ ತಮ್ಮ -ಮಹಾದೇವನ ಮದುವೆ ಮಾಡಲು ಹೊರಡುತ್ತಾನೆ. ತಮ್ಮನ ಹೆಂಡತಿ ಉಮಾ (ಪ್ರಿಯಾ ಬಾಪಟ್) ಇನ್ನೂ ಬಾಲೆ. ರಜಸ್ವಲೆಯಾದ ನಂತರ ಅವರ ಮೊದಲ ರಾತ್ರಿಯ ಮಿಲನ ಸಂಭ್ರಮದ ಫಲಶೋಧನಾ ಪೂಜೆ, ಮಹಾದೇವನ ಕಾಯಿಲೆಯಲ್ಲೂ ಅದ್ದೂರಿಯಾಗಿ ಜರಗುತ್ತದೆ. ಆದರೆ ರಾತ್ರಿ (ಮೊದಲ ರಾತ್ರಿ) ಮಹಾದೇವ ಅಸುನೀಗುತ್ತಾನೆ. ಪುಟ್ಟ ಹೆಂಡತಿ ಮದುವೆ/ ಸಂಬಂಧ ಏನು ಅನ್ನುವುದು ಗೊತ್ತಾಗುವ ಮುಂಚೆಯೆ ವಿಧವೆಯಾಗುತ್ತಾಳೆ. ಅಪರಕರ್ಮದ 10 ನೇ ದಿನ ಕಾಗೆಗೆ ಪಿಂಡ ಇಟ್ಟಾಗ ಅದು ಸ್ವೀಕರಿಸುವುದಿಲ್ಲ.ಪುರೋಹಿತರು, ಸೇರಿದ ಜನರು ತಲೆಗೊಂದರಂತೆ ಉಪಾಯಗಳನ್ನು ಹೇಳುತ್ತಾರೆ. ಆದರೆ ಹರಿ ದಾದಾ ಕಾಗೆಗೆ ಕೈ ಮುಗಿದು ಏನೋ ಬೇಡುತ್ತಾನೆ. ಅಷ್ಟರಲ್ಲಿ ಪುರ್ ಅಂತ ಹಾರಿ ಬಂದು ಕಾಗೆ ಪಿಂಡವನ್ನು ಸ್ಪರ್ಶಿಸುತ್ತದೆ.
ಮನೆಯ ಹಿರಿಯ ವಿಧವೆ ಅಜ್ಜಿ (ಹರಿದಾದಾನ ತಂದೆಯ ಅಕ್ಕ, ಅರ್ಥಾತ್ ಹರಿದಾದಾನ ಅತ್ತೆ- ನಮೂ ಅತ್ಯಾ) 10 ನೇ ದಿನ ಕ್ಷೌರಿಕನನ್ನು ಆಗಿನ ಸಂಪ್ರದಾಯದ ಪ್ರಕಾರ,ಉಮಾಳ ಕೇಶ ಮುಂಡನಕ್ಕೆ ಕರೆ ತರುತ್ತಾಳೆ. ಆಕೆ ಹಾಗೂ ಹರಿದಾದಾನ ಹೆಂಡತಿ , ತಾರಾ,ಅತ್ತು ಕೂದಲನ್ನು ತೆಗೆಸುವುದು ಬೇಡ ಅಂತ ರಚ್ಚೆ ಹಿಡಿದ ಉಮಾಳನ್ನು ದರದರನೆ ಮನೆಯಿಂದ ಎಳೆದು ತರುತ್ತಾರೆ.ಕ್ಷೌರಿಕ ಕತ್ತಿಯನ್ನು ಅವಳ ಕೂದಲ ಬಳಿಗೆ ತರಬೇಕೆನ್ನುವಷ್ಟರಲ್ಲಿ, ಅಲ್ಲಿಗೆ ಹರಿದಾದಾ ತಲುಪಿ ಕ್ಷೌರಿಕನನ್ನು ಅವನ ಪರಿಕರಗಳ ಸಮೇತ ಅಲ್ಲಿಂದ ಬಿಸಾಕುತ್ತಾನೆ. ಇಡೀ ಊರಲ್ಲಿ ಗಲ್ಲು ಗುಸುಗುಸು.
ಹೀಗೆ ಒಂದು ದಿನ ಹರಿ ದಾದಾನ ಹೆಂಡತಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದು, ಮಲಗಿದ ಕಡೆ ಆಗುತ್ತಾಳೆ. ಆಗ ಮನೆಯ ಸಂಪುರ್ಣ ಜಾವಾಬ್ದಾರಿ ಉಮಾಳ ಪಾಲಿಗೆ ಬೀಳುತ್ತೆ. ಅವಳಿಗೆ ಹರಿದಾದಾನ ಕೆಲಸ ಮಾಡುವಲ್ಲಿ ತುಂಬ ಆಸಕ್ತಿ. ಚೆಂದದ ಉಮಾಳ ಈ ಆಸಕ್ತಿಗಳನ್ನು ನೋಡಿ ಹರಿದಾದಾಳ ಹೆಂಡತಿ ಹೊಟ್ಟೆಕಿಚ್ಚು ಪಟ್ಟು ಇನ್ನಷ್ಟು ತನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಾಳೆ. ಸಾಯುವ ಮುನ್ನ ಗಂಡನನ್ನು ಕರೆದು, 'ನನಗೆ ಗೊತ್ತು ನಿಮಗೆ ಉಮಾಳ ಮೇಲೆ ವಿಪರೀತ ಪ್ರೀತಿ, ಅದು ನಿಮ್ಮ ಕಣ್ಣೋಟ, ನೀವು ಅವಳ ಬಗ್ಗೆ ತೋರಿಸುವ ವಿಶೇಷ ಆಸ್ಥೆಯಿಂದ ನನಗೆ ಗೊತ್ತಾಗಿ ಹೋಗಿದೆ. ನಾನಿನ್ನು ಉಳಿಯುವುದಿಲ್ಲ. ಯಾಕೆ ನೀವು ಅವಳನ್ನು ಮದುವೆಯಾಗಬಾರದು' ಅನ್ನುವ ಪ್ರಶ್ನೆಗೆ 'ಛೇ ಅಂತ ಆಲೋಚನೆ ನನ್ನ ಬಳಿ ಸುಳಿಯಲೇ ಬಾರದು' ಎಂದು ಬೇಸರದಿಂದ ಅಲ್ಲಿಂದ ಎದ್ದು ಹೋಗುತ್ತಾನೆ ಹರಿದಾದ' ಸ್ವಲ್ಪ ಹೊತ್ತಲ್ಲೆ ಉಮಾಳಿಂದ -ತನ್ನ ಸಂಸಾರ ಮನೆ ಮಕ್ಕಳನ್ನು ಯಾವತ್ತೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಪ್ರಮಾಣ ಸ್ವೀಕರಿಸಿ ಹರಿದಾದಾನ ಹೆಂಡತಿ ಅಸುನೀಗುತ್ತಾಳೆ.
ಈ ಮೊದಲೇ ಹರಿದಾದಾನ ಪ್ರಗತೀಶೀಲ ವಿಚಾರಗಳಿಂದ ಸಿಟ್ಟಿಗೆದ್ದಿದ್ದ ಉಪಾಧ್ಯಾಯ, ಹರಿದಾದಾನ ಮೇಲೆ ಕಿಡಿ ಕಾರುತ್ತಿದ್ದ. ವಿಧವೆ ಉಮಾಳ ಕೇಶಮುಂಡನ ಮಾಡಿಸದೇ ಇದ್ದಿದ್ದರಿಂದ ಊರ ಜನರಿಂದ ಹರಿದಾದಾನ ಕುಟುಂಬದ ಮೇಲೆ ಬಹಿಷ್ಕಾರ ಹಾಕಿಸಿದ್ದ. ಹರಿದಾದಾ ಕಾಶಿಯ ಮಹಾಪಂಡಿತರಿಂದ, -ಅವನಿಂದ ಗೊತ್ತಿದ್ದು-ಗೊತ್ತಿಲ್ಲ್ಲದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ ಅಂತ ಮೂರು ರೂಪಾಯಿಯ ತಪ್ಪು ಕಾಣಿಕೆಯಿತ್ತು, ಮಹಾಪಂಡಿತರಿಂದ ಕ್ಷಮಾಪಣೆಯ ಪತ್ರ ಪಡೆದಿದ್ದರಿಂದ ಉಪಾಧ್ಯಾಯನಿಂದ ಅವನಿಗೆ ಏನೂ ಮಾಡಲಾಗದ ಪರಿಸ್ಥಿತಿ ಮಾತ್ರವಲ್ಲದೆ, ಊರಿನಲ್ಲಿ ಎರಡು ಬಣಗಳು ತಯಾರಾಗಿದ್ದವು.ಊರಿನ ಉಪಾಧ್ಯಾಯ (ಪುರೋಹಿತ) ಅವರನ್ನೊಳಗೊಂಡು ಎಲ್ಲರೂ ಉಮಾ ಹಾಗೂ ಹರಿದಾದಾಗೆ ಛೀಮಾರಿ ಹಾಕುತ್ತಾರೆ 'ಈಗ ಹೆಂಡತಿ ಸತ್ತ ಮೇಲೆ ನಿಮ್ಮ ವ್ಯಭಿಚಾರಕ್ಕೆ ಇನ್ನಷ್ಟು ಕುಮ್ಮಕ್ಕು ಸಿಕ್ಕಿದೆ. ನಿಮಗಿಬ್ಬರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ'. ಅಷ್ಟಲ್ಲದೆ ಅವನು ಊರಿನ ಇತರ ಜನರನ್ನು ಸೇರಿಸಿ ಕೊಂಡು ಉಮಾ ಹಾಗೂ ಹರಿದಾದಾನ ಮೇಲೆ ಹಲ್ಲೆ ಎಸಗುತ್ತಾನೆ. ಅಷ್ಟರೊಳಗೆ ಅಲ್ಲಿಗೆ ಬಂದ ಹರಿದಾದಾನ ಆಪ್ತಮಿತ್ರ ,ಸ್ವಾತಂತ್ರ್ಯ ಚಳುವಳಿಗಾರ ಬಲವಂತ (ಮರಾಠಿಯಲ್ಲಿ ಬಳವಂತ್) ಅವನ ಸಂಗಡಿಗರೊಂದಿಗೆ ಬಂದು ಉಪಾದ್ಯಾಯ ಹಾಗೂ ಅವನ ಸಂಗಡಿಗರಿಗೆಲ್ಲ ಸದೆ ಬಡಿಯುತ್ತಾರೆ. ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹರಿದಾದಾ ಅವನಿಗೆ ಆಭಾರಿ ಎನ್ನುವಾಗ 'ಇವತ್ತು ನಾನಿಲ್ಲಿದ್ದೆ ನಿಮ್ಮನ್ನು ಸಂರಕ್ಷಿಸಿದೆ. ಇಲ್ಲದಿದ್ದರೆ ಅವರು ಉಮಾಳನ್ನು ಏನು ಮಾಡುತ್ತಿದ್ದರೋ ನಾನು ಊಹಿಸಲಾರೆ' ಅಂತ ಹೇಳಿ ಅವನು ಹೊರಟು ಬಿಡುತ್ತಾನೆ. ಮನೆಯ ಹಿರಿಯ ರಾದ ವಿಧವೆ ನಮೂ ಅತ್ತೆ, ಹಾಗೂ ಹರಿದಾದಾನ ತಂಗಿ ಅವನಿಗೆ ಉಮಾಳನ್ನು ಮದುವೆಯಾಗಿ ಜನರ ಬಾಯಿಗೆ ಬೀಗ ಹಾಕಿಸು ವಂತೆ ಬುದ್ದಿವಾದ ಹೇಳುತ್ತಾರೆ. ಅವನು ಒಪ್ಪುವುದಿಲ್ಲ.
ಇವೆಲ್ಲ ಕಿರಿಕಿರಿಯೇ ಬೇಡ ಅಂತ ಅವನ ಮಗ ಸಂಕರ್ಷಣ್ ಗೆ ಸೂಕ್ತ ಕನ್ಯೆ ಹುಡುಕಿ ಮದುವೆ ಮಾಡಿಬಿಡುತ್ತಾನೆ. ಸಂಕರ್ಷಣ್ ಮತ್ತು ಅವನ ಹೆಂಡತಿಯ ಮಲಗುವ ಕೊಠಡಿಯಿಂದ ಬರುವ ಸದ್ದು ಮಾತುಗಳನ್ನು ಕೇಳಿಸಿಕೊಂಡು, ಉಮಾ ಅವರ ಕೋಣೆಯ ಹೊರಗೆ ಕೂತು ಅವರ ಮಾತುಕತೆಯನ್ನು ಆಲಿಸುತ್ತಿರುವಾಗಲೆ ಅಲ್ಲಿ ಹರಿದಾದಾನ ಆಗಮನವಾಗುತ್ತೆ. ಅವಳು ಹೆದರಿ ಮುಜುಗರದಿಂದ ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ.
ಮರುದಿನ ಬೆಳಿಗ್ಗೆ ಮನೆಯ ಸಾಮಾನಿನ ಪಟ್ಟಿ ಅವಳು ನೀಡಲು ಬಂದು 'ನನ್ನ ನಿನ್ನೆ ರಾತ್ರಿಯ ನಡವಳಿಕೆಯಿಂದ ನಿಮಗೆ ಏನನ್ನಿಸಿತೋ, ಅದಕ್ಕೆ ಕ್ಷಮೆಯಿರಲಿ' ಅಂದಾಗ, ಅವನು ಮನೆಯ ಕೆಲಸದ ಆಳಿಗೆ ಗಟ್ಟಿ ದನಿಯಿಂದ ಕರೆದು ಇನ್ನು ಮುಂದೆ ಈ ಹೆಂಗಸು ನನ್ನ ಎದುರಿಗೆ ಬರಕೂಡದು. ಅವಳ ಮಾತನ್ನು ನೀನು ನನಗೆ ರವಾನಿಸಬೇಕು' ಎಂಬ ಫರ್ಮಾನು ಹೊರಡಿಸುತ್ತಾನೆ. ಈ ಮಾತಿನಿಂದ ಉಮಾಗೆ ತುಂಬ ಘಾಸಿ ಆಗುತ್ತೆ. ಅವಳು ಮೌನಿಯಾಗುತ್ತಾಳೆ.
ಒಂದು ದಿನ ಬಲವಂತ ಮನೆಗೆ ಬಂದಾಗ 'ಕಾಕಾ, ನಾನು ಪುಟ್ಟ ಹುಡುಗಿಯಾಗಿ ಈ ಮನೆಗೆ ಬಂದಾಗಲಿಂದ ನೀವು ನನ್ನನ್ನು ನೋಡಿದ್ದೀರಿ. ನಿಮ್ಮ ಮಿತ್ರ ನನ್ನ ಜತೆ ಮಾತು ಕತೆ ಬಿಟ್ಟಿದ್ದಾರೆ. ದಯವಿಟ್ಟು ಅವರು ಯಾಕೆ ಹಾಗೆ ನನ್ನ ಜತೆ ವ್ಯವಹರಿಸು ಯುತ್ತಾರಂತೆ ಕೇಳುವಿರಾ?'
ಅದಕ್ಕೆ ಬಲವಂತ್, 'ನೋಡು ಉಮಾ, ಹರಿದಾದಾ ಕಾರಣವಿಲ್ಲದೇ ಏನೂ ಮಾಡಲಾರ. ಮತ್ತು ನೀನು ಈ ಮಾತು ನನ್ನ ಜತೆ ಹೇಳಿದ್ದೀಯಾ ಅಂದರೆ, ಇದಕ್ಕೂ ಅವನು ಸಿಟ್ಟು ಮಾಡಿಕೋತಾನೆ' ಅನ್ನುವಷ್ಟರಲ್ಲಿ ಈ ಸಂಭಾಷಣೆಗಳನ್ನೆಲ್ಲ ಹರಿದಾದಾ ಕೇಳಿಸಿಕೊಂಡು ಅಗ್ಗಿರುತ್ತೆ. 'ಬಲವಂತ್, ನಾಚಿಕೆಯಾಗಲ್ಲವಾ? ಮನೆಯಲ್ಲಿ ಯಾವುದೇ ಗಂಡಸು ಇಲ್ಲದಿದ್ದಾಗ ಮನೆಯ ಸೊಸೆಯ ಜತೆ ಮಾತಾಡುತ್ತಾರಾ ಯಾರದರೂ?"
ಅದಕ್ಕೆ ಬಲವಂತ್, "ಈ ಹುಡುಗಿ ನನಗೆ ಮಗಳ ತರಹ'
"ಮಗಳ ತರಹ, ಮಗಳಲ್ಲವಲ್ಲ? ಇನ್ನು ಮುಂದೆ ನನ್ನನ್ನು ಸಂಪರ್ಕಿಸಬೇಕಾದಲ್ಲಿ ಎಲ್ಲಾದರೂ ಹೊರಗೆ ಸಿಗುವ, ನನ್ನ ಮನೆಗೆ ನೀನು ಕಾಲಿಡಕೂಡದು'
"ನಿನ್ನಂತಹ ಸಂಶಯಪಡುವವನಲ್ಲಿ ಮನೆಯೊಳಗೇನು, ಹೊರಗೂ ಸಿಗುವ ಅಪೇಕ್ಷೆ ನನಗಿಲ್ಲ 'ಎಂದು ಹೇಳಿ ದುರ್ದಾನ ಪಡೆದುಕೊಂಡವರ ಹಾಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ ಬಲವಂತ್.
ಅದೇ ಸಿಟ್ಟಿನಲ್ಲಿ ಮರವನ್ನು ಕೊಡಲಿಯಿಂದ ಕಡಿಯುವಾಗ ತನ್ನ ಕಾಲಿಗೆ ತೀವ್ರ ಏಟು ಮಾಡಿಕೋತಾನೆ ಹರಿದಾದಾ. ರಾತ್ರಿ ನೋವಿನಿಂದ ನರಳುವಾಗ ಉಮಾ ಅವನ ಕಾಲಿಗೆ ಮುಲಾಮು ಹಚ್ಚುವಾಗ ಅವನಿಗೆ ಉಮಾಳಲ್ಲಿ ಪುಟ್ಟ ಹುಡುಗಿ 'ದುರ್ಗಾ'(ಮದುವೆ ಮುಂಚಿನ ಹೆಸರು. ಸಂಪ್ರದಾಯದ ಪ್ರಕಾರ ಅಲ್ಲಿ ಮದುವೆ ನಂತರ ಹೆಸರನ್ನು ಬದಲಾಯಿಸಲಾಗುತ್ತದೆ) ನೆನಪಾಗಿ ಅವಳ ಜತೆ ಸುಮಾರು ವರ್ಷಗಳ ಹಿಂದೆ ಮಹದೇವನಿಗೋಸ್ಕ್ರರ ಹೆಣ್ಣು ನೋಡಲು ಹೋದಾಗ ಅವಳ ಜತೆ ಆಡಿದ ಮಾತುಕತೆ, ಅವನ ಪ್ರಶ್ನೆಗೆ ಅವಳ ಚಿನ್ನಕುರುಳಿ ಉತ್ತರಗಳನ್ನು ನೆನಪಿಗೆ ತಂದುಕೊಂಡು ಕನವರಿಸುತ್ತಿರುತ್ತಾನೆ. ಆಗ ಉಮಾಳಿಗೆ ಹರಿದಾದಾ ಅವಳನ್ನು ಪ್ರೀತಿಸುವುದು ಅರ್ಥವಾಗುತ್ತೆ. ಅವನಿಗೆ ಮಂಪರು ಕಳೆದು ಉಮಾಳನ್ನು ಅವನ ಬಳಿ ನೋಡಿ, ಅವನು ಮನೆಯ ಕೆಲಸದಾಳಿಗೆ, 'ಇನ್ನು ಮುಂದೆ ರಾತ್ರಿ ನನ್ನ ಕೋಣೆಯಲ್ಲೇ ಮಲಗು, ಯಾಕೋ ಒಬ್ಬನೆ ಮಲಗಲು ನನಗೆ ಹೆದರಿಕೆ ಶುರು ಆಗಿದೆ. '
ಈ ಮಾತನ್ನು ಕೇಳಿ ಉಮಾ ಇನ್ನಷ್ಟು ಘಾಸಿಗೊಳ್ಳುತ್ತಾಳೆ. ಇನ್ನಷ್ಟು ಮೌನಿಯಾಗುತ್ತಾಳೆ, ಕೂದಲನ್ನು ಬಿಟ್ಟು, ಅವಳಿಗೆ ಅಂತ ಕೊಟ್ಟ ಹೊಸ ಬಟ್ಟೆಗಳಿಂದ ಕೌದಿ ಹೊಲೆಯುವುದು, ಸುಮ್ಮನೆ ಮನೆಯ ಹೊರಗೆ ಮೆಟ್ಟಿಲಮೇಲೆ, ಬಾವಿಯ ಬಳಿ ಕೂರುವುದು ಇಂತದ್ದವನ್ನೆಲ್ಲ ಮಾಡುತ್ತಾಳೆ, ಇವೆಲ್ಲವನ್ನು ನೋಡಿಕೊಂಡು ಹರಿದಾದಾ ಸುಮ್ಮನಿರುತ್ತಾನೆ. ಸಂಕರ್ಷಣ್, ಮದುವೆಯಾಗಿ ಬೇರೆ ಊರಿನಲ್ಲಿರುವ ತನ್ನ ಅಕ್ಕನನ್ನು ಬರ ಹೇಳುತ್ತಾನೆ. ಅವರಿಬ್ಬರೂ ಸೇರಿ ಅವರ ಬಾಲ್ಯದ ಆಟಗಳನ್ನೆಲ್ಲ ನೆನಪಿಸಿಕೊಳ್ಳುತ್ತಾರೆ. ಚಿಕ್ಕವರಾಗಿದ್ದಾಗ ಉಮಾ ಅವರಿಗೋಸ್ಕರ ಕತೆ ಹೇಳುವುದು. ಕೂದಲು ಬಾಚಿ ಹೆರಳು ಹಾಕುವುದು ಮುಂತಾದವುಗಳು. 'ಬಾ, ನಿನಗೆ ಏನಾದರೂ ಓದಿ ಹೇಳಲೆ ಅಥವ ನಿನ್ನ ಕೂದಲು ಬಾಚಲೆ' ಎಂದು ಅವಳು ಕೇಳಿದಾಗ, ಫಕ್ಕನೆ ಉಮಾ ಅವಳನ್ನು ಕೇಳುತ್ತಾಳೆ' ಕೋಣೆಯಲ್ಲಿ ಗಂಡ ಹೆಂಡತಿ ಕೂಡಿ ಏನು ಮಾಡುತ್ತಾರೆ? ನನಗೆ ಹೇಳು. ನನ್ನ ಗಂಡನನ್ನು ಕಳೆದುಕಂಡ ಮೇಲೆ ನನಗೆ ಏನೋ ಮಹತ್ವವಾದದ್ದನ್ನ ಕಳೆದುಕೊಂಡಿದ್ದೀನಿ ಅಂತ ಗೊತ್ತಾಗ್ತಾ ಇದೆ, ಆದರೆ ಅದೇನು ಅಂತ ನನಗೆ ಈ ವರೆಗೆ ತಿಳಿದಿಲ್ಲ. ಅವಳು (ಸಂಕರ್ಷಣ ನ ಅಕ್ಕ- ಹೆಸರು ನೆನಪಿಲ್ಲ) ಅಸಹ್ಯ ಪಟ್ಟುಕೊಂಡು ಅವಳ ಕೈಯನ್ನು ಕೊಡವಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ. ಈ ಸಂಗತಿಯ ನಂತರ ಉಮಾ ಊಟ ನೀರು ಬಿಟ್ಟು ಬಿಡುತ್ತಾಳೆ. ಊರಿನ ವೈದ್ಯರು ಅವಳು ಏನನ್ನು ತಿನ್ನದಿದ್ದರೆ ಅವಳ ಜೀವಕ್ಕೆ ಅಪಾಯವಿದೆ, ಪೇಟೆಗೆ ಹೋಗಿ ದೊಡ್ಡ ಡಾಕ್ಟರ್ ಹತ್ತಿರ ಸೇರಿಸಬೇಕು ಅಂತ ಹೇಳುತ್ತಾನೆ. ಸಂಕರ್ಷಣ ಪೇಟೆಗೆ ಹೋಗುವ ತಯಾರಿ ನಡೆಸುವಾಗ 'ಈ ಒಂದು ರಾತ್ರಿ ಕಳೆಯಲಿ, ಅವಳು ಹೊಟ್ಟೆಗೆ ಏನಾದರೂ ತೆಗೆದುಕೊಳ್ಳಬಹುದು ಅಂತ ಹೇಳಿ, ರಾತ್ರಿ ಅವನ ಸ್ನೇಹಿತ ಬಲವಂತನ ಮನೆಗೆ ಬರುತ್ತಾನೆ, ಬಲವಂತನನ್ನು ಕಂಡು, 'ನಾನೇನು ನಿನ್ನ ಕ್ಷಮೆ ಕೇಳಲು ಬಂದಿಲ್ಲ, ಆದರೆ ಉಮಾ ಅನ್ನ ನೀರು ಬಿಟ್ಟು ಸಾಯುತ್ತಿದ್ದಾಳೆ, ನೀನಾದರೂ ಬಂದು ಅವಳಿಗೆ ತಿಳಿಹೇಳು...
ನೀನು ಕ್ಷಮೆಕೇಳಿದರೂ ನಾನೇನು ನಿನ್ನನ್ನು ಕ್ಷಮಿಸುತ್ತಿರಲಿಲ್ಲ, ನಡೆ ಉಮಾಳನ್ನು ನೋಡುವಾ ಅಂತ ಇಬ್ಬರೂ ಮನೆಗೆ ಬರುತ್ತಾರೆ. ಉಮಾಳಿಗೆ 'ಬಲವಂತ್' ಒಂದು ಲೋಟದಲ್ಲಿ ಪೂಸಿ ಮಾಡಿ ನೀರು ಕೊಡಲು ಹೋದಾಗ ಅವಳು ಅದನ್ನು ಕೊಡವಿ ಬೀಳಿಸುತ್ತಾಳೆ. ಬಲವಂತ ಸೋತವನಂತೆ, ಉಮಾಳನ್ನು ಜೀವದಿಂದುಳಿಸಲು ನಿನ್ನಿಂದ ಮಾತ್ರ ಸಾಧ್ಯ ಅಂತ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.
ಈಗ ಹರಿದಾದಾ ಉಮಾಳ ಕೋಣೆಗೆ ಹೋಗುತ್ತಾನೆ. ಉಮಾಳ ಬಳಿ 'ಹುಡುಗಿ ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿ ಅಂತ ನಿನ್ನ ಕಣ್ಣುಗಳಲ್ಲಿದ್ದ ಆರಾಧನಾ ಭಾವನೆಯಿಂದಲೇ ನನಗೆ ಗೊತ್ತಾಗಿದೆ. ಆದರೆ ನಿನಗೆ ಗೊತ್ತಾ? ನಿನ್ನ ಗಂಡ ಮಹದೇವ ತೀರಿಕೊಂಡಾಗ ಕಾಗೆ ಅವನ ಪಿಂಡವನ್ನು ಸ್ಪರ್ಶಿಸಲಿಲ್ಲ. ನಾನೇ ಕೊನೆಗೆ ಕೈ ಮುಗಿದು 'ಮಹದೇವ ನೀನು ನಿನ್ನ ಹೆಂಡತಿಯಲ್ಲಿ ಎಷ್ಟು ಜೀವ ಇಟ್ಟಿದ್ದೆ ನನಗ್ಗೊತ್ತು. ಅವಳನ್ನು ಬೇರೆ ಯಾವ ಗಂಡಸು ಸ್ಪರ್ಶಿಸದಂತೆ ನೋಡಿಕೊಳ್ಳುವ ಆಣೆ ನಾನು ನಿನಗೆ ನೀಡುತ್ತೇನೆ' ಅಂದ ಮೇಲೆ ಮಹದೇವನ ಆತ್ಮ ಬಂದು ಪಿಂಡ ಸ್ವೀಕರಿಸಿದ್ದು. ಎಲ್ಲರೂ ಹರಿದಾದಾ ಆಧುನಿಕ ಮನೋಭಾವದಿಂದ ನಿನ್ನ ಕೇಶ ಮುಂಡನ ಮಾಡಲಿಲ್ಲ ಅಂದು ಕೊಂಡಿದ್ದರು. ಕೇಶ ಮುಂಡನ ಮಾಡುವವ ಗಂಡಸು. ಅವನು ನಿನ್ನನ್ನು ಸ್ಪರ್ಶಿಸದಿರಲಿ ಅಂತ ನಾನು ಅವನನ್ನು ಅನಾಮತ್ತು ಎತ್ತಿ ಅಂಗಳದಿಂದ ಬಿಸಾಕಿದ್ದು, ಹಾಗೆ ನನ್ನ ಆಪ್ತಮಿತ್ರನ ಜತೆ ವೈರ ಮಾಡಿದ್ದು.ಈಗ ಅನ್ನಿಸ್ತಾ ಇದೆ ಸತ್ತ ಮಹಾದೇವನಿಗೆ ಇತ್ತ ವಚನವನ್ನು ಕಾಪಾಡಲು, ಜೀವಂತ ಇರುವ ನಿನ್ನನ್ನು ಸ್ವಲ್ಪ ಸ್ವಲ್ಪವಾಗಿ ಸಾಯಿಸಿದೆ ಅಂತ' ಎಂಥ ಹುಂಬ ನಾನು. ಈಗಿಂದೀಗಲೇ ನಾನು ನಿನ್ನನ್ನು ಮದುವೆಯಾಗುತ್ತೇನೆ. ಸ್ವಲ್ಪ ಕಾಯು ಈಗ ಬಂದೆ' ಅಂತ ಹೇಳಿ ಒಳಮನೆಯ ಪೆಟ್ಟಿಗೆಯಿಂದ ಅವನ ಹೆಂಡತಿಯ ಮಂಗಳಸೂತ್ರ ತೆಗೆದುಕೊಂಡು ಅವನು ಉಮಾಳ ಕೋಣೆಗೆ ಬರುವಷ್ಟರಲ್ಲಿ ಅವಳು ಅದೇ ನಗು ಮುಖದಿಂದ ಸಾವನ್ನಪ್ಪಿರುತ್ತಾಳೆ.
ಮುಂದೆ ಹರಿದಾದಾ ಬಲವಂತ ರು ಸೇರಿ ಅಬಲಾ ನಾರಿ ಕಲ್ಯಾಣ ಮಾರ್ಗದರ್ಶನ ಕೇಂದ್ರ ಸ್ಥಾಪಿಸುತ್ತಾರೆ. ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಮಾರ್ಗದರ್ಶನ ನೀಡುವ ಕೇಂದ್ರ. ಆಗ ಅಲ್ಲಿಗೆ ಒಬ್ಬ ಹೆಣ್ಣುಮಗಳು ಬರುತ್ತಾಳೆ. 'ನಾನು ವಿಧವೆಯಾಗಿ ಎರಡು ವರ್ಷವಾಯಿತು. ಈಗ ನನಗೆ ಮರು ಬಾಳುವೆ ನೀಡಲು ಒಬ್ಬರು ಮುಂದೆ ಬಂದಿದ್ದಾರೆ. ಆದರೆ ಮದುವೆಯಾಗಲು ನಾವು ಎರಡು ತಿಂಗಳು ಕಾಯಬೇಕಾಗಿದೆ. ನನ್ನ ಗಂಡನ ಮನೆಯಲ್ಲಿರಲು ಸರಿ ಕಾಣದೆ ಈಗ ನಾನು ಅದನ್ನು ತ್ಯಜಿಸಿದ್ದೇನೆ, ಮತ್ತು ನನ್ನನ್ನು ಮದುವೆಯಾಗುವವರ ಬಳಿ ಇರಲು ನಾನು ಹೋಗಲಾರೆ. ಸಧ್ಯಕ್ಕೆ ವಾಸಕ್ಕೆ ಒಂದು ಆಶ್ರಯ ಸಿಕ್ಕಿದೆ. ಆದರೆ ನನಗೆ ಸ್ವಲ್ಪ ಆರ್ಥಿಕ ಸಹಾಯ ಬೇಕಾಗಿದೆ' ಹೀಗೆ ಮಾತನಾಡುತ್ತಾ ಆಡುತ್ತ, ಆ ಹುಡುಗಿ ಊರಿನಲ್ಲಿ ಹರಿದಾದಾಗೆ ಸಾಕಷ್ಟು ಕಿರುಕುಳ ಕೊಟ್ಟ ಉಪಾಧ್ಯಾಯನ ಮಗಳು ಅಂತ ಗೊತ್ತಾಗುತ್ತೆ. ಹರಿದಾದಾ ಅವಳಿಗೆ ಅವನ ಹೆಂಡತಿಯ ಮಂಗಳಸೂತ್ರ ತಂದು ಕೊಟ್ಟು, ಅದನ್ನು ಮಾರಿ ಬಂದ ದುಡ್ಡನ್ನು ವಿನಿಯೋಗಿಸಲು ಹೇಳಿ ಬೀಳ್ಕೊಡುತ್ತಾನೆ. ಬಲವಂತ 'ನಿನ್ನನ್ನು ಅರ್ಥ ಮಾಡುವುದೇ ಕಷ್ಟ' ಅಂದಾಗ 'ಗೊತ್ತಾ ಬಲವಂತ್? ನಾನು ರಾತ್ರಿ ಮಲಗದೇ ಎಷ್ಟೋ ಕಾಲವಾಯಿತು' ಕಣ್ಣು ಮುಚ್ಚಿದರೆ ನನಗೆ ಉಮಾಳ ಮುಖವೇ ಕಾಣುತ್ತೆ. ನಾನು ಕೋಣೆಯಿಂದ ಮಂಗಳಸೂತ್ರ ತರುವಷ್ಟರಲ್ಲಿ ಅವಳು ಅಸುನೀಗಿದ್ದು ಯಾಕೆ ಗೊತ್ತ? ಅದು ಅವಳಿಗೆ ನನ್ನ ಮೇಲಿರುವ ಪ್ರೀತಿ. ನಾನು ಮಹದೇವನಿಗಿತ್ತ ಮಾತನ್ನು ನಾನು ಉಳಿಸಿಕೊಳ್ಳಬೇಕೆಂದು ಅವಳು ತನ್ನ ಜೀವ ತ್ಯಾಗ ಮಾಡಿದಳು. ನಾನು ಆ ಹುಡುಗಿಗೆ ಕೊಟ್ಟ ಮಂಗಳಸೂತ್ರದಿಂದ ಉಮಾಳಿಗೆ ಶಾಂತಿ ಸಿಕ್ಕಿದರೆ ನನಗೆ ಅಷ್ಟೇ ಸಾಕು. ನೋಡುವ ಇವತ್ತಾದ್ರೂ ನನಗೆ ಕಣ್ಣು ತುಂಬ ನಿದ್ದೆ ಬರಬಹುದು'.
ಕತೆಯ ಆಯ್ಕೆ, (ಬರೆದವರು ಉಷಾ ದಾತಾರ್) ಅದನ್ನು ಸೂಕ್ಷ್ಮತೆಯಿಂದ ಹೆಣೆದ ಬಗೆ ಹಾಗೂ ಚಿತ್ರೀಕರಣಕ್ಕೆ ಆಯ್ದ ಸ್ಥಳ (ಮಹಾರಾಷ್ಟ್ರದ ಕೊಂಕಣ್ ಪ್ರದೇಶ) ಎಲ್ಲವೂ ವಿಶಿಷ್ಟ. ಈ ಚಿತ್ರದಲ್ಲಿ ಇನ್ನೂ ಮೋಜಿನ ಪ್ರಸಂಗಗಳು, ಉಪಕತೆಗಳೂ ಇವೆ. ಎಲ್ಲವನ್ನೂ ಹೇಳಹೊರಟರೆ ಮಾಂಜ್ರೇಕರ್ ಅವರು ನನ್ನ ಬ್ಲಾಗ್ ಗೆ shoot at 'site' ಆರ್ಡರ್ ಕೊಡಬಹುದು. ಮಹಾರಾಷ್ಟ್ರದ ಬ್ರಾಹ್ಮಣ ಮನೆತನದ ಆಚರಣೆಗಳನ್ನು, ಉದಾಹರಣೆ: ವಧುವನ್ನು ನೋಡಲು ಹೋಗುವುದು, ಮದುವೆ ನಿಶ್ಚಯವಾದ ಮೇಲೆ ವರ/ವಧುವಿನ ಮನೆಗಳಲ್ಲಿ ನಡೆಯುವ ತಂಟೆ ತುಂಟತನಗಳು, ಮದುಮಗಳು ಹೊಸ್ತಿಲಲ್ಲಿ ಅಕ್ಕಿ ಬೀಳಿಸಿ ಒಳ ಬರುವ ಸಂದರ್ಭದಲ್ಲಿ, ಗಂಡನ ಹೆಸರನ್ನು ಕವನದಲ್ಲಿ ಬಳಸಿ ಹೇಳಿ ಒಳಗೆ ಬರುವುದು, ಋತುಮತಿಯಾದ ಮೂರನೆ ದಿನ ನಡೆಯುವ ಕಲಾಪಗಳು, ಮದುಮಕ್ಕಳ ಮೊದಲ ರಾತ್ರಿಗೆ ಅನುವಾಗಿಸುವ ಕಾರ್ಯಗಳು , ಮರಣದ ನಂತರದ ಕ್ರಿಯೆಗಳನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ, ಆಗಿನ ಕಾಲದ ವೇಷಭೂಷಣಗಳನ್ನೂ ಚೆನ್ನಾಗಿ ತೋರಿಸಿದ್ದಾರೆ. ಕೆಲವು ಕಡೆ ಸಂಗೀತ ಸ್ವಲ್ಪಕಿರಿಕ್ ಎಂದೆಣಿಸಿದರೂ ಅದನ್ನು ಕಡೆಗಣಿಸಬಹುದು. ಮತ್ತೆ ಫ್ಲಾಶ್ ಬ್ಯಾಕ್ ಹೋಗುವಾಗ ಕೆಲವೊಮ್ಮೆ ಕತೆಯlಲ್ಲಿ ತಾಳ ತಪ್ಪಿದ ಹಾಗೆ ಅನಿಸಿ ಸ್ವಲ್ಪ ಕಿರಿಕಿರಿಯಾಗುತ್ತದೆ especially ಮರಾಠಿ ಅರ್ಥವಾಗದವರಿಗೆ. ಹಾಡು ನೃತ್ಯ ಚೆನ್ನಾಗಿವೆ.
ಸ್ವಾತಂತ್ರ್ಯಪೂರ್ವ ಮಹಾರಾಷ್ಟ್ರದ (ಈಗಲೂ 85%) ಸಂಸ್ಕೃತಿ- ರೀತಿ ರಿವಾಜುಗಳನ್ನು, ತುಂಬ ನೈಜತೆಯಿಂದ ಹಿಡಿದಿಟ್ಟಿದ್ದಾರೆ ಮಹೇಶ ಮಾಂಜ್ರೆಕರ್ ಅವರು. ಸಿಮಿಮಾದ ಸೆಟ್ಟಿಂಗ್, ಕಾಸ್ಟ್ಯೂಮ್, ಸಂಭಾಷಣೆ, ಎಲ್ಲರ ಪಾತ್ರಾಭಿನಯ ಕೂಡ (ಒಟ್ಟಾರೆ ಟೀಮ್ ವರ್ಕ್ ಗೆ hats off) ನೈಜತೆಯಿಂದ ಕೂಡಿದೆ. ಆದರೂ ಈಗಿನ ಕಾಲದಲ್ಲಿ ಹಳೆಯ ಮೌಲ್ಯಗಳನ್ನು ಮಹೇಶ ಮಾಂಜ್ರೆಕರ್ ಎತ್ತಿ ಹಿಡಿದಿಡುವುದು ಎಷ್ಟು ಸಮಂಜಸ?
ಇಲ್ಲಿ ಕೆಲವು ಸಂಗತಿಗಳು ನನ್ನನ್ನು ಕಾಡಿವೆ:
"ಕಾಕಸ್ಪರ್ಶ- ಒಂದು ವಿಲಕ್ಷಣ ಪ್ರೇಮ ಕತೆ"
ಇಲ್ಲಿ ಕೆಲವು ಸಂಗತಿಗಳು ನನ್ನನ್ನು ಕಾಡಿವೆ:
ಹರಿದಾದಾಗೆ larger than life portrayal ಏನೋ ಕೊಟ್ಟಿದ್ದಾರೆ ಆದರೆ:
1. ಅವನು ಕಾಶಿಯ ಮಹಾನ್ ಪಂಡಿತರಿಗೆ ಕ್ಷಮಾಪಣೆ ಕೋರಿ ಪತ್ರ ಬರೆಯುವಾಗ ಮನೆಯ ವಿಷಯಗಳನ್ನು ಕೂಲಂಕುಷವಾಗಿ ತಿಳಿಸಿದ್ದಾನೆಯೇ?
2. ಅವನು ಮನೆಯ ಹೆಂಗಸರನ್ನು ತನ್ನ decision making ನಲ್ಲಿ ಯಾಕೆ ಅವಕಾಶ ನೀಡಲಿಲ್ಲ?? ಒಂದೆರಡು ಸಂದರ್ಭದಲ್ಲಿ ಉಮಾ ಮಾತನಾಡಲು ಪ್ರಯತ್ನಿಸಿದಾಗ 'ನಾನೇನು ಬಳೆ ತೊಟ್ಟುಕೊಂಡಿಲ್ಲ, ಹೆಂಗಸರ ಸಲಹೆ ಕೇಳಲು' ಅಂತ ಅವಳ ಬಾಯಿ ಮುಚ್ಚಿಸುತ್ತಾನೆ.
3. ಆಪ್ತ ಮಿತ್ರ ಬಳವಂತ್, ಉಮಾಳನ್ನು ಚಿಕ್ಕಂದಿನಿಂದ ಬಲ್ಲವನು, ಅವನಿಗೆ ಮನೆಗೆ ಇನ್ನು ಮುಂದೆ ಮನೆಗೆ ಬರುವುದು ಬೇಡ ಅಂದಿದ್ದು, ಕಕ್ಷಿದಾರನೊಬ್ಬ ಸಂಕರ್ಷಣ್ ನನ್ನು ಭೇಟಿ ಮಾಡಲು ಬಂದಾಗ ಅವನನ್ನು ಮನೆಯಿಂದ ಹೊರಗೆ ಕಳಿಸಿದ್ದು.. ತುಂಬ ಬಾಲಿಶವೆನಿಸಿತು.
3. ಪರಪುರುಷ ಅವಳನ್ನು ಮುಟ್ಟಬಾರದೇನೋ ಸರಿ, ಆದರೆ ಅವಳಿಗೆ ಮುಂದಿನ ವಿದ್ಯಾಭ್ಯಾಸ ಕೈಗೊಳ್ಳುವಲ್ಲಿ ಪ್ರೋತ್ಸಾಹಿಸಬಹುದಿತ್ತು.
4. and did he think he was immortal...ಆಕಸ್ಮಾತ್ ಅವನೇನಾದರೆ ತೀರಿಕೊಂಡಿದ್ದರೆ ಉಮಾಳ ಬಾಳು ಏನಾಗುತ್ತಿತ್ತು?(ಸಂಕರ್ಷಣ್ ಏನೋ ಒಳ್ಳೆಯವನಾಗಿರಬಹುದು, ಆದರೆ ಅವನ ಹೆಂಡತಿ?) ಇದು ಒಂದು ತರಹ oppression ಅಲ್ಲವಾ?
ಒಟ್ಟಾರೆ ಎಲ್ಲರೂ ಒಂದುಸಲ ನೋಡ ಬಹುದಾದ ಚಿತ್ರ. ನಾನು ಈ ಚಿತ್ರಕ್ಕೆ 5 ರಲ್ಲಿ 3.50 ಅಂಕಕೊಡುತ್ತೇನೆ."ಕಾಕಸ್ಪರ್ಶ- ಒಂದು ವಿಲಕ್ಷಣ ಪ್ರೇಮ ಕತೆ"
*ದಾದಾ: ಅಣ್ಣ
ಕತೆ: ಉಷಾ ದಾತಾರ
ನಿರ್ದೇಶನ: ಮಹೇಶ ಮಾಂಜ್ರೆಕರ್
ಮುಖ್ಯ ಭೂಮಿಕೆಯಲ್ಲಿರುವವರು ಸಚಿನ್ ಖೇಡೇಕರ್ (ಹರಿದಾದಾ), ಪ್ರಿಯಾ ಬಾಪಟ್ (ಉಮಾ), ಕೇತಕಿ ಮಾಟೆಗಾಂವ್ಕರ್ (ದುರ್ಗಾ),
ಸಿನಿಮಾ ನೋಡಲು ಉತ್ಸುಕರಾಗಿದ್ದರೆ ಇಲ್ಲಿದೆ ಅದರ ಲಿಂಕ್ ಇದನ್ನು ಕಳುಹಿಸಿದವರು ಯು ಎಸ್ ನಿಂದ ಶ್ರೀವತ್ಸ ಜೋಶಿಯವರು..
marathi movie kaaksparsha
(* ಕಾಗೆ animated , ಅಲ್ಲದೇ ದುರ್ಗ(ಉಮಾಳ younger version) ಕಾಲಿಗೆ transparent nail enamel ಹಚ್ಚಿದ್ದಳು ಅನ್ನಿಸ್ತು)
:-)
ಕತೆ: ಉಷಾ ದಾತಾರ
ನಿರ್ದೇಶನ: ಮಹೇಶ ಮಾಂಜ್ರೆಕರ್
ಮುಖ್ಯ ಭೂಮಿಕೆಯಲ್ಲಿರುವವರು ಸಚಿನ್ ಖೇಡೇಕರ್ (ಹರಿದಾದಾ), ಪ್ರಿಯಾ ಬಾಪಟ್ (ಉಮಾ), ಕೇತಕಿ ಮಾಟೆಗಾಂವ್ಕರ್ (ದುರ್ಗಾ),
ಸಿನಿಮಾ ನೋಡಲು ಉತ್ಸುಕರಾಗಿದ್ದರೆ ಇಲ್ಲಿದೆ ಅದರ ಲಿಂಕ್ ಇದನ್ನು ಕಳುಹಿಸಿದವರು ಯು ಎಸ್ ನಿಂದ ಶ್ರೀವತ್ಸ ಜೋಶಿಯವರು..
marathi movie kaaksparsha
(* ಕಾಗೆ animated , ಅಲ್ಲದೇ ದುರ್ಗ(ಉಮಾಳ younger version) ಕಾಲಿಗೆ transparent nail enamel ಹಚ್ಚಿದ್ದಳು ಅನ್ನಿಸ್ತು)
:-)
6 comments:
Malathi, when I read this, I could feel the painful life of women in that era. Disgusting. Glad times have changed from then to now, though the descrimination continues to exist in different form.
hi
nANU NIVU BAREDA KATHE ODALILLA, YAKENDRE, MOVIE NODABEKU, THANKS FOR THE LINK, \
MOVIE NODI MATTE BARTINI ILLI
Nivedita!!
thanks for coming here...eager to know what u think of the movie..
:-)
malathi S
I cant understand marathi much...thanks 4 d translation of d movie...i love Balavanths character.. :)
Really different!! Narrated whole story to hubby dear while sleeping as he has not yet read :) both liked :)
Divya!!
did the story put him to sleep..:-);-)....
thanks to both you and Sandeep!!
also thanks to Sumathi, Radhika
ms
Post a Comment