ವೃಶಾಂಖ ಮತ್ತು ಅವನ ಅಮ್ಮನನ್ನು ದಿನ ಸಂಜೆ ನಾನು ಝೂಲಾ ಮೇಲೆ ಕೂತು ಟೀ ಕುಡೀತಾ, ಅವರು ವಾಕ್ ಹೋಗುವಾಗ ನಾನು ನೋಡುತ್ತಿದ್ದೆ. ನನಗೆ ಗಂಡು ಮಕ್ಕಳು ಅಂದರೆ ಸ್ವಲ್ಪ ಅಷ್ಟಕ್ಕಷ್ಟೆ, ನಾನು ಅವರ ಉಸಾಬರಿಗೆ ಹೋಗುವುದಿಲ್ಲ.
ಒಂದು ದಿನ ಪಕ್ಕದ ಮನೆ ಡಾ. ಪಾರ್ವತಿ ’ಮಾಲ್ತಿ embroideried ಸ್ವಿಸ್ ಕಾಟನ್ ರೆಡಿಮೇಡ್ ಬಟ್ಟೆಗಳ exhibition ನಡೆಸ್ತಿದ್ದಾಳೆ ನನ್ನ ಪ್ರೆಂಡ್, ಸಂಜೆ ಹೋಗುವಾ, ಬರ್ತೀರಾ?’ ಅಂತ ಕೇಳಿದ್ರು. ಮೊದಲು ಇಲ್ಲ ಅಂತ ಹೇಳುವಾ ಅಂದ್ರೂ, ಆಮೇಲೆ ಯು ಎಸ್ ನಿಂದ ಬರುವ ನನ್ನ ತಂಗಿ ಮಕ್ಕಳಿಗೆ ಏನಾದರೂ ಚೆಂದದ ಡ್ರೆಸ್ ಸಿಗಬಹುದೆಂದು, ಆಯ್ತು ಅಂದೆ. ಸಂಜೆ ರಾಮ್ -ಪಾರ್ವತಿಯ ಗಂಡ- ಬಂದ ಮೇಲೆ ಅವರ ಕಾರ್ ನಲ್ಲಿ ಹೊರಟೆವು. ನಾನು ಗೇಟ್ ಹಾಕುವಾಗ ವೃಶಾಂಖ ಮತ್ತು ಅವನ ಅಮ್ಮ ಆಗಷ್ಟೆ ನಮ್ಮ ಮನೆ ದಾಟಿ ಹೋಗುವುದನ್ನು ನೋಡಿದೆ. ನಾವು ಕಾರ ನಲ್ಲಿ ಒಂದು ತಿರುವು ಬರುವುದೊರಳಗೆ ವೃಶಾಂಖ ನ ಅಮ್ಮ, ವೃಶಾಂಖ ನನ್ನು ಎರಡು ಕೈಯಲಿ ಅಡ್ಡಡ್ಡ ಹಿಡಿದುಕೊಂಡು please save my baby ಅಂತ ಗಟ್ಟಿ ಅಳುತ್ತ ನಮ್ಮ ಕಾರ ಬಳಿ ಓಡುತ್ತಾ ಬರುವುದು ಕಾಣಿಸಿತು. ಕಾರ್ ನಿಲ್ಲಿಸಿ ನಾನು, ಡಾ. ಪಾರ್ವತಿ ಕೂಡಲೆ ಇಳಿದೆವು. ವೃಶಾಂಖ ಉಸಿರುಗಟ್ಟಿಸಿಕೊಂಡು ಅವನ ಕಣ್ಣುಗುಡ್ಡೆಗಳು ಮೇಲೆಕ್ಕೆ ಹೋಗಿದ್ದವು. ಡಾ. ಪಾರ್ವತಿ ಕೂಡಲೆ ಮಗುವನ್ನು ಎತ್ತಿಕೊಂಡು ಪಕ್ಕದ ಗಾರ್ಡನ್ ನ ಸೀಟ್ ಮೇಲೆ ಮಲಗಿಸಿ ಅವನಿಗೆ ಬೇಕಾದ ತುರ್ತು ಚಿಕಿತ್ಸೆ ನೀಡುವಲ್ಲಿ ನಿರತರಾದರು. ಗಟ್ಟಿಯಾಗಿ ಅಳುತ್ತಿದ ಅವನ ಅಮ್ಮನ ಕೈಯನ್ನು ನಾನು ಹಿಡಿದುಕೊಂಡಿದ್ದೆ ತಡ, ಅವರು ನನ್ನ ಕೈಯನ್ನು ಗಟ್ಟಿಯಾಗಿ ಅದುಮಿ, ಏನಾಯ್ತು ನನ್ನ ಮಗುವಿಗೆ ಅಂತ ಅತ್ತು ತನ್ನಷ್ಟಕ್ಕೆ ತಾನೇ ಮಾತನಾಡಲು ಶುರುಮಾಡಿದಳು. ನಾನು ಇನ್ನೊಂದು ಬೆಂಚ್ ಮೇಲೆ ಅವರನ್ನು ಕೂರಿಸಿ ಸಮಾಧಾನ ಹೇಳಿದೆ, ’he is just choked on his saliva' ಏನೂ ಆಗಲ್ಲ, ಡಾ. ಇದ್ದಾರಲ್ಲವಾ ಹೇಗೂ?’ ಅಷ್ಟರಲ್ಲಿ ವೃಶಾಂಖ ಸುಧಾರಿಸಿಕೊಂಡಿದ್ದ, ಸುತ್ತು ನಿಂತಿರುವ ಜನ, ಹಾಗೂ ತನ್ನ ಅಮ್ಮನನ್ನು ಕಾಣದೆ ಜೋರಾಗಿ ಅಳಲು ಶುರುಮಾಡಿದಾಗ ಅವನ ಅಮ್ಮ ಅವನ ಬಳಿಗೆ ಓಡಿ ಹೋದಳು. ಮಗುವಿಗೆ ಅಷ್ಟೆ ಆಗಿದ್ದು, ಉಗುಳು ನುಂಗಿ, ನೆತ್ತಿಗೆ ಹತ್ತಿ, ಉಸಿರಾಡಲು ಗೊತ್ತಾಗದೆ ಹಿಂಸೆ ಯಾಗಿತ್ತು. ಆ ಮೇಲೆ ನಾನು ಪಾರ್ವತಿಗೆ ವೃಶಾಂಖ ಮತ್ತು ಅವನ ಅಮ್ಮನನ್ನು ಅವನ ಮನೆಗೆ ಕಳುಹಿಸಿ ಬರಲು ಹೇಳಿ, exhibition ಗೆ ನಾಳೆ ಹೋಗುವಾ ಅಂತ ನಾನು ಮನೆಗೆ ವಾಪಸ್ ಆದೆ.
ರಾತ್ರಿ ಪಾರ್ವತಿ ಫೋನ್ ಮಾಡಿ, ’ಶಲ್ ವಿ ಗೋ ಟುಮೋರೋ ಮಾರ್ನಿಂಗ್ after Sri leaves for school'? we will go on my scooter' ಅಂದಾಗ ನಾನು ಹೂಂ ಅಂದೆ. (ಈ Sri = Srikamakshi, ಅವರ ಮಗಳು). ಬೆಳಿಗ್ಗೆ ನನ್ನ ಎಲ್ಲ ಕೆಲಸಗಳನ್ನು ಮುಗಿಸಿ ಮನೆಗೆ ಬೀಗ ಹಾಕಿ ಡಾ. ಪಾರ್ವತಿ ಮನೆಗೆ ಹೋದೆ. ಅವರು ಫೋನ್ ನಲ್ಲಿ ಮಾತಾಡ್ತಾ ಇದ್ದರಿಂದ, ಸನ್ನೆಯಲ್ಲೆ ನನ್ನನ್ನು ಕೂರಲಿಕ್ಕೆ ಹೇಳಿದರು. ನಾನು ಕುಳಿತುಕೊಂಡು ಅಲ್ಲೇ ಹತ್ತಿರವಿದ್ದ ಮೆಡಿಕಲ್ ಜರ್ನಲ್ ನ ಪುಟಗಳನ್ನು ತಿರುವಿಹಾಕುವಾಗ ಪುನ: ಗೇಟ್ ಸದ್ದಾಯಿತು. ನೋಡಿದರೆ ವೃಶಾಂಖ ಹಾಗೂ ಅವನ ಅಮ್ಮ. ಒಳಗೆ ಬಂದ ವೃಶಾಂಖ ನ ಅಮ್ಮ ಮೊದಲಿಗೆ ಥ್ಯಾಂಕ್ಸ್ ಹೇಳಿದ್ದು ನನಗೆ, ’sorry aunty i could not thank you properly' ನಾನು ’hey dont make an issue out of it' ಅಂದೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟ ವೃಶಾಂಖ ನನ್ನ ಬಳಿ ಬಂದ, ಎರಡು ಕೈ ಯನ್ನು ನನ್ನನ್ನು ಎತ್ತಿ ಕೋ ಅನ್ನುವ ಮಾದರಿಯಲ್ಲಿ ಹಿಡಿದ. overweight ಮಗುವನ್ನು ಕಷ್ಟಪಟ್ಟು ಎತ್ತಿ ನನ್ನ ಕಾಲಮೇಲೆ ಕೂರಿಸಿದೆ. ಅವನು ನಿದಾನಕ್ಕೆ ಎದ್ದು ನನ್ನ ಗಲ್ಲ ನೇವರಿಸಿದ, ಆ ಮೇಲೆ ಗಲ್ಲವನ್ನು ನೆಕ್ಕಿದ, ಹಾಗೇ ಹಗುರಕ್ಕೆ ಕಚ್ಚಿಬಿಟ್ಟ, ಅದನ್ನು ನಿರೀಕ್ಷಿಸದ ನಾನು ’ಹಾsss' ಅಂದೆ. ಅವನು ಗಟ್ಟಿಯಾಗಿ ನಗಲು ಶುರು ಮಾಡಿದೆ. ಆವತ್ತು ಶುರು ಆಯ್ತು ನನ್ನ ಮತ್ತು ವೃಶಾಂಖ ನ love affair. :-)ಮತ್ತು ಆ ದಿನ ನೆ ಅವನ ಹೆಸರು’ ವೃಶಾಂಖ’ ಮತ್ತು ಅವನ ಅಮ್ಮ ’ಅನು’ ಅಂತ ಗೊತ್ತಾಗಿದ್ದು. ನಿನ್ನ ಹೆಸರೇನು ಅಂತ ಮಗುವಿಗೆ ಕೇಳಿದಾಗ ಅವನು ಹೆಸರನ್ನು ಸರಿ ಹೇಳಲು ಬಾರದೆ ’ವುಕಾಂಕ್ ’ ಅಂದಿದ್ದ. ಅವನ ಅಮ್ಮನ ಬಳಿ ನಾನು ಪುನ: ಕೇಳಬೇಕಾಯಿತು ಅವನ ಹೆಸರು ಏನೆಂದು..ಮತ್ತೆ ಅವನ ಮೊದಲ ಹುಟ್ಟು ಹಬ್ಬ ಆಗಿ ಎರಡು ದಿನ ಅಷ್ಟೆ ಕಳೆದಿತ್ತಂತೆ.
ಅವನ ಅಮ್ಮ ಅನು ನನಗೆ ’ಆಂಟಿ’ ಅಂದರೆ ವೃಶಾಂಖ ಮಾತ್ರ ಅವನ ಹಕ್ಕೇನೋ ಎಂಬಂತೆ ’ಮಾಲ್ತಿsss”* ಅಂತ ಕರೀತಿದ್ದ. ಮಾಲ್ತಿ, ಚೊಕ್ಕಿ ಕೊಡು, ಬಿಕ್ಕಿ ಕೊಡು. ಮ್ಯಾಂಗೋ ಕೊಡು, ಬನಾನ ಕೊಡು. ಸಖತ್ vocabulary ಒಂದು ವರ್ಷದ ಹುಡುಗನಿಗೆ. ಮನೆಯಲ್ಲಿ ಶ್ರೀಕಾಂತ ಏನಾದರೂ ಇದ್ದು, ಯಾರೋ ಅದು ನನ್ನ ಹೆಂಡತಿನ ಹೆಸರು ಹಿಡಿದು ಕರೆಯೋದು ಅಂದ್ರೆ ಮುದ್ದು ಮುದ್ದಾಗಿ ’ಅಂಕಲ್ ಜತೆ ಟೂ ಬಿಡ್ತಿದ್ದ. ನಾನು ಅವನಿಗೋಸ್ಕರ ವಿಧ ವಿಧವಾದ ಚಾಕೋಲೇಟು, ಬಿಸ್ಕಿಟ್ ಗಳ stock ಇಟ್ಟುಕೊಂಡಿರುತ್ತಿದೆ. ಅವನು ಕೇಳುತ್ತಿದ್ದುದ್ದು ಒಂದು ಚಾಕಲೇಟ್ ಅಥವ ಎರಡು ಬಿಸ್ಕಿಟ್ ಅಷ್ಟೆ. ಅವನು ಝೂಲಾ ಮೇಲೆ ಕೂತುಕೊಳ್ಳುವುದು ನಾನು ಅವನನ್ನು ತಿನ್ನಿಸುವುದು.ಒಂದು ಪುಟ್ಟ ಲೋಟದಲ್ಲಿ ನೀರು ಕುಡಿಸುವುದು. ನಾನು ಮನೆಯಲ್ಲಿ ಇಲ್ಲದಿದ್ದರೆ ತುಂಬಾ ಬೇಜಾರು ಮಾಡಿಕೊಂಡು ವಾಪಸ್ ಹೋಗುತ್ತಿದ್ದನಂತೆ ಮಕ್ಕಳು, ಶ್ರೀಕಾಂತ ಹೇಳುತ್ತಿದ್ದರು. ಮತ್ತು ಮರುದಿನ ಅವನು ನನಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ, ’ಮಾಲ್ತಿ, ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದೆ’ ಅಂತ
ಹೀಗೆ ಒಂದು ಸಲ ನಾನು ಆಫಿಸ್ ನಿಂದ ಮನೆಗೆ ಬಂದಿದ್ದಷ್ಟೆ. ವೃಶಾಂಖ ಕೂಡ ಬಂದ. ನಮ್ಮ ಮನೆಯ ಟಿವಿ ಬಟನ್ ಮೇಲೆ ಆಡುತ್ತಿದ್ದ.ಯಾಕೋ ಅರ್ಥಿಂಗ್ ಸರಿಯಿಲ್ಲದೆ ಟಿವಿ, ಫ್ರಿಡ್ಜ, ಮತ್ತು ಕಂಪ್ಯೂಟರ್ ಗೆ ಸಣ್ಣಕ್ಕೆ ಶಾಕ್ ಹೊಡೆಯುತ್ತಿತ್ತು ’ಅದನ್ನು ಮುಟ್ಟ ಬೇಡ, ಶಾಕ್ ಹೊಡೆಯುತ್ತೆ ಅಬ್ಬು ಆಗುತ್ತೆ ಅನ್ನುತ್ತಿರಬೇಕಾದರೆ ಅವನು ಹೋಗಿ ಮುಟ್ಟಿ ಸ್ವಲ್ಪ ಶಾಕ್ ತಗುಲಿಸಿಕೊಂಡ, ಅಲ್ಲೆ ಪಕ್ಕದಲ್ಲಿ ಕೂತಿದ್ದ ಅನು ಅವನಿಗೆ ಚೆನ್ನಾಗಿ ಬೆನ್ನ ಮೇಲೆ ಬಾರಿಸಿದಳು. ಅವನು ಅಳಲಿಕ್ಕೆ ಶುರು ಮಾಡಿದ. ನಾನು ಅವನನ್ನು ತಬ್ಬಿ ಮುದ್ದು ಮಾಡ್ತ ’ಹೇಳಿದ್ದು ಕೇಳಿಸ್ಕೋಬೇಕಲ್ವಾ ವೃಶಾಂಖ ಆಗ ಅಮ್ಮ ಹೊಡೆಯಲ್ಲ’ ಅಂದೆ. ಅವನು ಬಿಕ್ಕಿ ಬಿಕ್ಕಿ ಅಳುತ್ತ ನನ್ನ ಸೀರೆ ಮುಟ್ಟಿ, ’ಮಾಲ್ತಿ ನಿನ್ನ ಚೀರೆ ಚೆನ್ನಾಗಿದೆ, ನಿನಗೆ ಚೆನ್ನಾಗಿ ಕಾಣುತ್ತೆ’ ಅಂದಾಗ ಮಾತ್ರ ನಗು ತಡೆದುಕೊಳ್ಳಲಾಗಲಿಲ್ಲ. ಎಷ್ಟೆಲ್ಲ ದೇವರ ನಾಮ, nursery rhymes, ನಂಬರ್, ಕಲರ್ ಎಲ್ಲ ಪಟ ಪಟಾ ಹೇಳುತ್ತಿದ್ದ.
ಅವನು ರಸ್ತೆ ಮೇಲೆ ವಾಕ ಮಾಡ್ತಾ ನಾನು ಆಫಿಸ್ ನಿಂದ ಬರುವಾಗ ಏನಾದರೂ ನನ್ನನ್ನು ನೋಡಿದರೆ ಅಷ್ಟು ದೂರದಿಂದ ಮಾಲ್ತಿssssss ಅಂತ ಕಿರುಚಿಕೊಂಡು, ಎರಡು ಕೈ ಗಳನ್ನು ಅಗಲಿಸಿ ಓಡಿ ಬರುತ್ತಿದ್ದ, ನಾನು ಅವನ ಸೈಜ್ (size) ಆಗಲು ರಸ್ತೆ ಮೇಲೆ ಕುಕ್ಕರುಗಾಲಲ್ಲಿ ಕುಳಿತುಕೊಳ್ಳುತ್ತಿದೆ, ಅವನ ಮುದ್ದು ಮೃದು ಕೈಗಳ ಮಾಲೆ ನನ್ನ ಕೊರಳ ಸುತ್ತ, ಹಾಗೂ ಅವನು ಓಡಿ ಬಂದ ರಭಸ ಹಾಗೂ ಅವನ overweight ನಿಂದಾಗಿ ನಾವಿಬ್ಬರೂ ರಸ್ತೆ ಮೇಲೆ, ಆಮೇಲೆ ಒಂದು ಒದ್ದೆ ಮುತ್ತು ನನ್ನ ಮೂಗಿಗೆ. ಆ ಪುಟ್ಟ ಕೈಗಳ ಮಾಲೆ ಯಾವ ಹೂವಿನ ಮಾಲೆಗೂ ಕಡಿಮೆಯಲ್ಲ.
ಮತ್ತು ನನ್ನ ಅವನ special flying kiss ಕೂಡ ಇತ್ತು. ನನ್ನ ಎರಡನೆ ಮೂರನೆ ಬೆರಳನ್ನು ನಾನು ನನ್ನ ತುಟಿಗೆ ತಾಗಿಸಿ ಆ ಬೆರಳುಗಳನ್ನು ಓಡುವಂತೆ ಮಾಡಿ ಅದನ್ನು ಅವನ ತುಟಿಗೆ ತಾಗಿಸುತ್ತಿದ್ದೆ. ಅವನು ಮನೆಗೆ ಹೋಗುವಾಗ ನಾನು ಮರೆತರೆ ಅವನು ಮಾತ್ರ ಮರೆಯುತ್ತಿರಲಿಲ್ಲ.’ ಮಾಲ್ತೀ ಫ್ಲೈಯಿಂಗ್ ಕಿಚ್ ಕೊಡು’ ಅನ್ನುತ್ತಿದ್ದ
ಕೊನೆಗೆ ಕಾರಣಾಂತರಗಳಿಂದ ಅವನ ಅಪ್ಪ ಅಮ್ಮ ವಿಚ್ಛೆದನ ಪಡೆದುಕೊಂಡು ಬೇರೆ ಬೇರೆ ಯಾಗಿ ಅನು ಈಗ ಅವಳ ತಂದೆ ತಾಯಿ ಜತೆ ಇರಲು ಹೋದಳು. ಅವರ ಮನೆಮುಂದೆ ಹಾಯುವಾಗ ಅವರ ಮನೆ ಹೆಸರು ’ವೃಶಂಖ’ (ಅವನ ಅಪ್ಪ, ಅಜ್ಜ, ಅಜ್ಜಿ ಆ ಮನೆಯಲ್ಲೇ ಇರುವುದು) ನೋಡಿದಾಗಲೆಲ್ಲ ವೃಶಾಂಖ ನೆನಪಾಗುತ್ತಾನೆ. ಅವನಿಗೆ ನನ್ನ ನೆನಪು ಇರಬಹುದೇ? ಈಗ ಅವನಿಗೆ 5 ವರ್ಷ. ಸ್ಕೂಲ್ ಗೆ ಹೋಗುತ್ತಿರಬಹುದು.
ಅವರು ಮನೆ ಬಿಟ್ಟು ಹೋಗುವ ಮುನ್ನ ಅನು ಮತ್ತು ವೃಶಾಂಖ ನನಗೆ ಬೈ ಹೇಳಲು ಬಂದಿದ್ದರು. ನಾನು ಬೇಜಾರಲ್ಲಿ ಇದ್ದೆ, ವೃಶಾಂಖ ಮಾತ್ರ ಮರೆಯದೇ ಅವನ flying kiss ಪಡೆದುಕೊಂಡು ಹೋದ. ಅದೇ ಲಾಸ್ಟ್.
miss you Vrushank.
(ಮಾಲ್ತಿ* : ಮಾಲವಿಕ ಮಾತು ಕಲಿತ ಮೇಲೆ ನನಗೆ ಮಾಲತೀ ಮತ್ತು ಶ್ರೀಕಾಂತ ಗೆ ಚಿಕ್ಕಾಂತ್ ಅಂತ ಕರೆಯುತ್ತಿದ್ದಳು.
ಈಗಿನ ಮನೆಯ 'ಮೇಲಿನ ಮನೆ ಪುಟ್ಟು' ದಿಶಾಂತ ಗೆ ಹುಶಾರು ತಪ್ಪಿದಾಗ ನಮ್ಮ ಮನೆಗೆ ಬಂದಿರುತ್ತಾನೆ, ಆಗ ಅವನು ನನಗೆ ಆಂಟಿ ಅನ್ನದೇ ’ಮಾಲ್ತಿ, ಬಾ ನನ್ನ ಹತ್ತಿರ ಕೂತ್ಕೋ’ ಅಂತಾನೆ...ಹೊಯ್ ಯಾರೋ ಅದು ಆಂಟಿನ ಹೆಸರು ಹಿಡಿದು ಕರೆಯೋದು ಅಂದ್ರೆ ಅವನ ಹುಳುಕಾದ ಹಲ್ಲುಗಳನ್ನೆಲ್ಲ ಬಿಟ್ಟು (calcium deficiency) ಗಟ್ಟಿಯಾಗಿ ನಗುತ್ತಾನೆ. ಅವನು ಯಾವಾಗಲಾದರೊಮ್ಮೆ ಮುಗುಳು ನಗುತ್ತಾನೆ, ಆದರೆ ಗಟ್ಟಿ ನಗುವುದು ಅಪರೂಪ. ಅದನ್ನು ಕೇಳಲು ಹಲವು ಜನುಮ ಸಾಲದೇನೋ
ಈಗಿನ ಮನೆಯ 'ಮೇಲಿನ ಮನೆ ಪುಟ್ಟು' ದಿಶಾಂತ ಗೆ ಹುಶಾರು ತಪ್ಪಿದಾಗ ನಮ್ಮ ಮನೆಗೆ ಬಂದಿರುತ್ತಾನೆ, ಆಗ ಅವನು ನನಗೆ ಆಂಟಿ ಅನ್ನದೇ ’ಮಾಲ್ತಿ, ಬಾ ನನ್ನ ಹತ್ತಿರ ಕೂತ್ಕೋ’ ಅಂತಾನೆ...ಹೊಯ್ ಯಾರೋ ಅದು ಆಂಟಿನ ಹೆಸರು ಹಿಡಿದು ಕರೆಯೋದು ಅಂದ್ರೆ ಅವನ ಹುಳುಕಾದ ಹಲ್ಲುಗಳನ್ನೆಲ್ಲ ಬಿಟ್ಟು (calcium deficiency) ಗಟ್ಟಿಯಾಗಿ ನಗುತ್ತಾನೆ. ಅವನು ಯಾವಾಗಲಾದರೊಮ್ಮೆ ಮುಗುಳು ನಗುತ್ತಾನೆ, ಆದರೆ ಗಟ್ಟಿ ನಗುವುದು ಅಪರೂಪ. ಅದನ್ನು ಕೇಳಲು ಹಲವು ಜನುಮ ಸಾಲದೇನೋ
ನನ್ನ ತಮ್ಮನ ಮಗಳು ಸ್ಯಾಮಿ , ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹಗೂರಕ್ಕೆ ’ಮಾಲತೀsss' ಅಂತಾಳೆ, ನಾನು ಹುಬ್ಬು ಮೇಲೇರಿಸಿ ’ಹಾಂ’ ಅಂದಾಗ ಆ ನಗುವಿನ ಅಲೆಯಲ್ಲಿ ನಾನು ತೇಲಿ ತೇಲಿ...............)
:-)
6 comments:
vrushank katheyella chennagide annisuthidaga end nalli bejaraithu
Lovely name. But feel sad for the child . . .
@ Neelesh and Radhika!
Thank you for reading.
Life is like that alwaa, not always a bed of roses..its up to us to rake whatever happiness we can find amongst the rubble!
ms
Malti Akka,
I feel so fresh with ur articles :)
One of our friend's kid was calling me with name..It is so nice to hear like that..Sometimes Shreya calls her dad as Dr Vinodkumar :))
Thank you Vanitha..i am overwhelmed..
:-)
akka
Nice reminiscence.
Second divorce case I came across in your posts.
Why do people stop loving?
Shree Kar
Post a Comment