ಶುಭಾಶಯ ಪತ್ರಿ, ಶ್ರೀಕಾಂತ ನನಗೋಸ್ಕರ ಮಾಡಿಕೊಟ್ಟಿದ್ದು. ಚಿತ್ರದಲ್ಲಿರುವ ಲ್ಯಾಂಪ್ ನನ್ನದು. ಫೋಟೊ ತೆಗೆದಿದ್ದು as usual ನಿಹಾರಿಕಾ.
ಈ ದೀಪ special ದೀಪ. usually ಎಲ್ಲರೂ ಮೆಟ್ಟಿಲ ಮೇಲೆ ಜೋಡಿ ದೀಪ ಬೆಳಗಿಸಿದರೆ ನಾನು ಒಂಟಿ ದೀಪ ಬೆಳಗಿಸುವುದು. ಎಲ್ಲರೂ ಯಾಕೆ ಎಂದು ಕೇಳುತ್ತಾರೆ. ಆದರೆ ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಪ್ರತಿ ಸಲ ಈ ದೀಪವನ್ನು ನಾನು ಮೆಟ್ಟಿಲ ಬಲಬದಿಗೆ ಇಡುವಾಗ ನಾನು ಉದ್ದ ಲೈಟ್ ಹೌಸ್ (ಹೂಂ ಗೊತ್ತು ನಾನು ಬರೇ 5' 2" ಆದ್ರೂ) ಎನೋ ಎಂಬಂತೆ ಭಾಸವಾಗುತ್ತೆ. ಲೈಟ್ ಹೌಸ್ ಎಲ್ಲರಿಗೂ ಗೊತ್ತಿರಬಹುದು ಎಂದು ನನ್ನ ಅನಿಸಿಕೆ.ಹಿಂದಿನ ಕಾಲದಲ್ಲಿ ಹಡಗುಗಳಿಗೆ ದಾರಿ ದೀಪವೆಂಬಂತೆ ಬೆಳಗಿಸುತ್ತಿದ್ದರು.
ನನ್ನ ಈ ದೀಪ ಗಾಳಿ, ಮಳೆ , ಚಳಿಗೆ ಒಂದೆ ತರಹ ಬೆಳಗುತ್ತದೆ (ಎಣ್ಣೆ ಖಾಲಿ ಯಾಗುವ ತನಕ)
love you dear lamp......
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
:-)
:-)
9 comments:
Happy Yugaadi to you and your family Malathi!
:-) thank you Radhika...u commented before i was done with editing...
Have a great 2012...
:-)
malathi S
ದೀಪ ಮತ್ತು ಶ್ರೀಕಾಂತ ಸಾರ್ ಅವರ ಶುಭಾಶಯ ಪತ್ರ ಎರಡೂ ಸೂಪರ್ರೂ...
ಉಗಾದಿ ಶುಭಾಶಯಗಳು.
ನನ್ನ ಬ್ಲಾಗಿಗೂ ಸ್ವಾಗತ...
ಶುಭಾಶಯ ಪತ್ರಿಯ ಡಿಸೈನ್ ಚೆನ್ನಾಗಿದೆ!
ದೀಪ ನೋಡಿ ಇಂದೋರಿನ ನಮ್ಮ ಬೀಗ ಡಾ| ವ್ಯವಹಾರೆ ಯವರ ನೆನಪಾಯಿತು - ಅವರಿಗೆ ಇತ್ತೀಚೆಗೆ ಇದೇ ತರಹದ (ಆದರೆ ಮೇಲೆ ಚೂಪಾದ ಮೊನೆಯಿರುವ) ದೀಪವನ್ನು ಅವರ ಅಪೇಕ್ಷೆಯಂತೆ ರವಾನಿಸಿದ್ದೆವು.
ನಮ್ಮ ಕರಾವಳಿ ಕಡೆಗೆ ಮನೆಗಳ ಮುಂದಿನ ಅಂಗಳದಲ್ಲಿರುವ ದೊಡ್ಡ ತುಳಸೀ ಕಟ್ಟೆಯ ಮುಂದೆ ನೆಲಕ್ಕೆ ಉದ್ದನ್ನ ಮರದ ಕೋಲು ನೆಟ್ಟು ಅದರ ಮೇಲೆ ಇಂತಹ ದೀಪವನ್ನು ಇರಿಸುತ್ತೇವೆ.
ನಿಮಗೆಲ್ಲರಿಗೂ, ನಿಮ್ಮ ಓದುಗಬಂಧುಗಳಿಗೂ ಯುಗಾದಿಯು ಸಮ್ರದ್ಧಿ, ಸಂತಸ ಗಳನ್ನೂ ತರಲಿ ಎಂದು ಹಾರೈಸುತ್ತೇನೆ.
ಬದರಿ: ಧನ್ಯವಾದಗಳು. ನಿಮ್ಮ ಕವನ ಓದಿದೆ. ಚೆನ್ನಾಗಿದೆ.
ಅನಾಮಿಕ ಅವರೆ:ಕರಾವಳಿಯ ದೀಪದ ಮಾಹಿತಿ ಕೊಟ್ಟಿದ್ದು ಖುಶಿಯಾಯ್ತು. ನಿಮ್ಮ ಹೆಸರು ಹಾಕಿದಿದ್ದರೆ ಇನ್ನಷ್ಟು ಖುಶಿಯಾಗ್ತಿತ್ತು!!ನಿಮಗೂ ಹಬ್ಬ ಹಾಗೂ ಈ ವರ್ಷ ಹಾಗೂ ಮುಂದಿನ ಎಲ್ಲ ವರ್ಷಗಳೂ ಸಂತಸ ಹಾಗೂ ಸಮೃದ್ಧಿಯಿಂದ ಕೂಡಲಿ ಎಂದು ಹಾರೈಸುತ್ತೇನೆ.
ಈ ದೀಪ ನಾನು ಬೆಂಗಳೂರಿನಲ್ಲಿ ಕೊಂಡಿದ್ದು. ಹಲವಾರು ಬಂಧುಗಳು including my mom.. ಈ ದೀಪ ಬೇಕು ಅಂದಿದ್ದರು...ಆ ಮೇಲೆ ನನಗಿದು ಎಲ್ಲೂ ಕಾಣಿಸಲಿಲ್ಲ.
ಧನ್ಯವಾದಗಳು ನಿಮಗೆ!!
:-)
ಮಾಲತಿ ಎಸ್.
ಹೌದಲ್ಲ ಮಾರಾಯರೇ, ಹೆಸರು ಬಿಟ್ಟು ಹೋಗಿದೆ.
ಹೆಸರಿನ ಬದಲು,ನಿಮ್ಮ ಚಿತ್ರದಲ್ಲಿ ಇರುವಂತದ್ದೇ ಅಲ್ಲದಿದ್ದರೂ ಬೇರೊಂದು ದೀಪ ಯುಗಾದಿಯ ಉಡುಗೊರೆಯಾಗಿ ಕಳಿಸಿಕೊಟ್ಟರೆ ಆದೀತೇ?
ಹೆಸರು: ಕಾಳು
Green gram?? i thought it was ಹಸಿರು ಕಾಳು
thanks. but no, thanks for the ಉಡುಗೊರೆ
:-)
ms
Hasiru KaaLu sounds more appropriate. However, the name has corrupted into Hesaru KaaLu.
Here I was just trying to convey that my name might be KaaLu.
KaaLappa
Post a Comment