February 6, 2012

ಚಿತ್ರಸಂತೆ 2012

ಚಿತ್ರ ಸಂತೆಗೆ ಒಂದು ರೌಂಡ್ ಹಾಕುವ ಮುನ್ನ ನನ್ನ ವಿಚಿತ್ರ ಕತೆ ಹೇಳ್ತೆನೆ..
ನನಗೆ ಒಂದು ವಿಚಿತ್ರ ಕಾಯಿಲೆ ಇದೆ. ಅದು ಜನರ ಹೆದರಿಕೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ Anthropophobia -ಆಂತ್ರೋಫೊಫೋಬಿಯ ಅಂತಾರೆ. ಇದು ಯಾವಗಲಿಂದ ಶುರು ಆಯ್ತು ಗೊತ್ತಿಲ್ಲ. ಬಹುಶ: ಚಿಕ್ಕಂದಿನಿಂದ ಅಜ್ಜನ ಅತೀ ಮುತುವರ್ಜಿ/ಕಾಳಜಿ ಯಿಂದ ಹೀಗಾಗಿರಬಹುದಾ? ಮನೆಯಿಂದ ಹೊರಗೆ ಹೋಗಬೇಕಾದರೆ..ಅಂದರೆ ಶಾಲೆಗೆ/ಪೇಟೆಗೆ ಎಲ್ಲದಕ್ಕೂ ಆಳು ಕಾಳು ನನ್ನ ಜತೆ ಇರುತ್ತಿದ್ದರು, ಅಥವಾ ನಮ್ಮ ಅಜ್ಜನೆ ನಮಗೆ ಕಾರಿನಲ್ಲಿ ಕರೆದುಕೊಂದು ಹೋಗೋದು. ಅಷ್ಟಲ್ಲದೆ ಅಜ್ಜನ clients ಬಂದಾಗಲೆಲ್ಲ ನನಗೆ ಗ್ರಹಬಂಧನ. ಓದಿಕೊಳ್ಳಲು ಒಂದು ರಾಶಿ ಪುಸ್ತ್ಕಕ. ಶಾಲೆಯಿಂದ ಕರೆದುಕೊಂಡು ಹೋಗುವ ಟ್ರಿಪ್/ಟೂರ್, ಸಿನಿಮಾ ಇದಕ್ಕೆಲ್ಲ ಹೋಗಲು ಅಪ್ಪಣೆ ಇರಲಿಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಕುಟುಂಬದ ಸದಸ್ಯರೊಂದಿಗೆ ಮಾತ್ರ. ಆದ್ದರಿಂದ ನನಗೆ ಜನರ ಬಳಿ ಮಾತಾಡಲು ಅವರ ಜತೆ ಹೇಗೆ ವರ್ತಿಸಬೇಕೆಂಬುದು ಗೊತ್ತಿರಲಿಲ್ಲ..(ಈಗಲೂ...ಹೌದು ನಾಚಿಕೆ ಆಗುತ್ತೆ ಇದನ್ನು ಹೇಳಿಕೊಳ್ಳಲು) ಶ್ರೀಕಾಂತ್ ಅಂತೂ ಯಾವಾಗಲೂ ಹೇಳುತ್ತಾರೆ...for how long you can carry on like this ಅಂತ....ಮತ್ತೆ ಅವರು ಮೊದಲೆಲ್ಲ ’ಬಾಂಬೆಯಲ್ಲಿ ನೀನು ಹೇಗಿದ್ದೆ’ ಅಂದರೆ ನನ್ನ ಉತ್ತರ ’ಬಾಂಬೆಯಲ್ಲೂ ಹೀಗೆ ಇದ್ದೆ’...island ತರಹ!!
ಆದರೂ ನನ್ನ ಮನೆ ಯಿಂದ ಹೊರಗೆ ಹೋಗಿ ಮಾಡುವ ಕೆಲಸಗಳನ್ನೆಲ್ಲ ನಾನೇ ಮಾಡುತ್ತೇನೆ. It does not affect my day to day functioning in any way. 
ಒಬ್ಬಳೆ ಹೊರಗೆ ಹೋದಾಗ ಪೂರ್ತಿ switch off ಆಗಿ ಬಿಡ್ತೇನೆ. ನನ್ನ ಸುತ್ತಲೂ ಒಂದು ಕೋಟೆ ನಿರ್ಮಾಣವಾಗುತ್ತೆ. ಆದರೆ ನಾವು ನಾಲ್ಕು ಜನ ಎಲ್ಲಾದರೂ ಹೋದಾಗ ಅದು ಒಂದು ಬೇರೆ ಪ್ರಪಂಚ. ಇದರಲ್ಲಿ ನಾನು ಯಾರನ್ನೂ ಸೇರಿಸ ಬಯಸುವುದಿಲ್ಲ. ಉಳಿದ ಜನಜಂಗುಳಿಯೆಲ್ಲ ಒಂದು ತರಹ peripheral vision ನಲ್ಲಿ kaleidoscope ತರಹ ಮೂವ್ ಆಗ್ತಾ ಇರುತ್ತೆ. ಇದೆಲ್ಲ ಯಾಕೆ ಹೇಳ್ತಾ ಇದ್ದೇನಿ ಅಂದ್ರೆ ಮೊನ್ನೆ ಚಿತ್ರ ಸಂತೆಗೆ ಹೋದಾಗ ನನ್ನ ಕೆಲವು ಬ್ಲಾಗ್ ಓದುಗರನ್ನು ನೋಡಿದೆ. ಅವರು ನಗು ಮುಖ ಮಾಡಿಕೊಂಡು ನನ್ನ ಬಳಿ ಬರುವಷ್ಟರಲ್ಲಿ ನಾನು ಮುಖ ತಿರುಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿ ಆಗಿತ್ತು. ಯಾಕೋ ನನಗೆ ಇದರ ಮೇಲೆ ಪೂರ್ತಿ control ಇಲ್ಲ. ಒಬ್ಬಳೆ ಊರೂರು ತಿರುಗಿದ್ದೇನೆ... ನನಗೆ ಫೇಸ್ ಬುಕ್ ನಲ್ಲಿ ಇಷ್ಟು ಸ್ನೇಹಿತರು ಇದ್ದಾರೆ ಅಂತ ನನ್ನ ತಮ್ಮ ಯಾವಾಗಲೂ ನನಗೆ ತಮಾಷೆ ಮಾಡ್ತಾನೆ. "ಫೇಸ್ ಬುಕ್ ನಲ್ಲಿ ಫ್ರೆಂಡ್ಸ್...ಫೇಸ್ to ಫೇಸ್ ಆದಾಗ ಹೆದರು ಪುಕ್ಕಲಿ ಅಂತ. ಇಷ್ಟಕ್ಕೂ ಯಾರಾದರೂ ನನ್ನ ಗಂಭೀರ ಮುಖ ನೋಡಿ ಧೈರ್ಯ ಮಾಡಿ ಮಾತ ನಾಡಿಸಲು ಬಂದರೆ ನಾನು ಕೆಂಪು ಕೆಂಪು ಆಗಿ ನಾಲಗೆ ತೊದಲುತ್ತದೆ.ಬೆ ಬೆ ಬೆ ಅಂತಿರತ್ತೀನಿ.....ಯಾರೋ ಒಬ್ಬರು ನನ್ನನ್ನು ಭೇಟಿ ಮಾಡಿದ ಮೇಲೆ ಒಂದು ಎಸ್ ಎಮ್ ಎಸ್ ಕಳುಹಿಸಿದ್ದರು..ಬ್ಲಾಗ್ ನೀವೆ ಬರೆಯುವುದಾ...u sound so funny and interesting in your writings..ಅಂತ :-((

funny ginny ಎಲ್ಲ ನನ್ನ ಆಪ್ತ ವಲಯದಲ್ಲಿ ಮಾತ್ರ...ಅಂದ್ರೆ ನನ್ನ ಕುಟುಂಬದ ಸದಸ್ಯರು, ಕೆಲವೇ ಕೆಲವು ಬೆರಳಣಿಕೆಯ ಮಿತ್ರರು. ನನಗೆ ಫ್ರೆಂಡ್ಸ್ ಅಂತ ಆಗಿದ್ದು ಇತ್ತೀಚಿಗಿನ 10 ವರ್ಷಗಳಲ್ಲಿ, ಬೆಂಗಳೂರಿಗೆ ಬಂದ ಮೇಲೆ...ಅದೂ 5 ಜನ...
ಮತ್ತೆ ಫೇಸ್ ಬುಕ್ ಮುಂತಾದ ತಾಣಗಳಲ್ಲಿ ಫ್ರೆಂಡ್ಸ್ ಅಂದ್ರೂ ಒಂದು ತರಹ certain degree of anonymity ಇರುತ್ತದಲ್ಲವಾ? ಅದಕ್ಕೆ ಅಲ್ಲಿ ಒಡನಾಡುವುದರಲ್ಲಿ ನನಗೇನೂ ಸಂಕೋಚ ಅನಿಸುವುದಿಲ್ಲ.
ನಮ್ಮ ಆಫಿಸ್ ನಲ್ಲಿ ನನ್ನ ಈ ಪ್ರವ್ರತ್ತಿ ಎಲ್ಲರಿಗೂ ಗೊತ್ತು ಆದ್ದರಿಂದ ನನಗೆ ನನ್ನ ಪಾಡಿಗೆ ಸುಮ್ಮನೆ ಬಿಡುತ್ತಾರೆ. ಆದರೂ ಒಂದು ಸಲ vote of thanks ಗೆ ನನ್ನ ಹೆಸರು sudden ಆಗಿ ಸ್ಟೇಜ್ ನಲ್ಲಿ ಕರೆದಾಗ..ನಾನು ಕೂಲ ಆಗಿ vote of thanks ಹೇಳಿ ಬಂದೆ. ಅದೇ ಅದಕ್ಕೇನಾದರೂ ಮೊದಲೇ practice ಎಲ್ಲ ಮಾಡಿದರೆ ನನ್ನ ಕಾಲು ತರ ತರ ಕಂಪಿಸಿ, ನನ್ನ ಎದೆ ಬಡಿತ ನನ್ನ ಕಿವಿಯೊಳಗೆ ಬಿಡಿ ಬೇರೆ ಯವರಿಗೂ ಕೇಳಿಸುತ್ತದೆಯೇನೋ ಅನ್ನುವಷ್ಟು ಧಡಕ್-ಭಡಕ್...ಅಪರೂಪಕ್ಕೆ one -to -one situation ನಲ್ಲಿ ಸರಿಯಾಗೇ ವರ್ತಿಸುತ್ತೇನೆ ಆದರೆ crowd ನಲ್ಲಿ ಏನೋ ಭಯ....ಇಲ್ಲೂ ಕೆಲವೊಂದು ವಿಚಿತ್ರ ರೀತಿ behave ಮಾಡ್ತೇನೆ.
Emergency situation ಉದಾಹರಣೆಗೆ accident ಏನಾದರೂ ಆಯಿತು ಅಂತ ತಿಳಕೊಳ್ಳಿ ಆಗ ನಾನೆ ಮುಂದಾಳತ್ವ ವಹಿಸಿ ಹೀಗೆ ಹೀಗೆ ಮಾಡಿ ಅಂತ instructions ಕೊಡ್ತೇನೆ. ಆಗ ನಾನು ಬೇರೆ ನೆ ಮಾಲತಿ...:-)
ನನ್ನ ಈ ವಿಚಿತ್ರ ನಡೆವಳಿಕೆಗೆ ಕ್ಷಮೆ ಕೋರುತ್ತಾ...ಬನ್ನಿ ಚಿತ್ರ ಸಂತೆ ಗೆ ಹೋಗಿ ಬರುವ..
ಈ ಸಲದ ವಿಶೇಷ ಅಂದ್ರೆ ನಾನಾಗಿ ಕೆಲವು ಆರ್ಟಿಸ್ಟ್ ಗಳನ್ನು ಮಾತನಾಡಿಸಿದ್ದು.
ಎಂಟರ್ ಆದ ಹಾಗೆ ಮೊದಲಿಗೆ ಇಟ್ಟಿದ್ದ exhibition ಗೆ ಹೋದಾಗ ಸೂರ್ಯಕಾಂತಿ ಹೂಗಳ ಮೇಲೆ ಬಿಟ್ಟು ಬಿಟ್ಟು ಒಂದು ಚಿಟ್ಟೇ ಬಂದು ಕೂರುತ್ತಿತ್ತು. ನಾನು ನೀಹಾ ಅದರ ಬಗ್ಗೆ ಕಾಮೆಂಟ್ ಮಾಡ್ತಾ ನಗುವಾಗ ಚಿತ್ರಕಾರನೂ ನೋಡಿ...Yes??!! ಅಂದ... ನಾನು ’ಸೀ your art work is so life like that it has confused the butterfly ಅಂದಾಗ ತುಂಬ ಖುಶಿ ಪಟ್ಟ.
"which paintings did you like ma'am?"
ನಾನು ಬೆರಳಿನಿಂದ ನನ್ನಗೆ ಇಷ್ಟ ಆದ ಚಿತ್ರಗಳನ್ನು -( ಮೂರು ನಾಲ್ಕು)- ತೋರಿಸಿದೆ.
"will you be buying ma'am?"
"Not at this time, when i move to my own place..then"
"no Problem, ma'am...all the best to having your own place". "This is my card"..When you go to your own house please visit my studio and pick which ever you want"
ಅವನಿಗೊಂದು ಥ್ಯಾಂಕ್ಸ್ ಹೇಳಿ "ಫೋಟೊ ತೆಗೀ ಬಹುದಾ ಅಂತ ಕೇಳ್ದೆ’
ಅವನು ,"Excuse me ma'am, No" ಅಂದ
"why?"
ಅದಕ್ಕೆ ಅವನ ಉತ್ತರ: ’ಹಿಂದಿನ ವರ್ಷ ಯಾರೋ ಒಬ್ಬರು ಹೀಗೆ ಫೋಟೊ ತೆಗೆದುಕೊಂಡು ಹೋಗಿ ಅದನ್ನು desk Top Calendar ಮಾಡಿಕೊಂಡು ಮಾರಿ ದುಡ್ಡು ಮಾಡಿದಾರೆ ಅಂದ
ಹೀಗೂ ಉಂಟೆ ಅಂದು ಕೊಂಡು ನಾನು ನಿಹಾ ಮುಂದಕ್ಕೆ ನಡೆದೆವು...
ಈ ಚಿತ್ರ ನನಗೆ ಕನಸಲ್ಲೂ ಕಾಡುತ್ತೆ
ಸುಮಾರು ಹೊತ್ತು ಕಾದರೂ (ಆಗ ಊಟದ ಸಮಯ ) ಚಿತ್ರಕಾರನನ್ನು ಭೇಟಿ ಮಾಡಲು ಆಗಲಿಲ್ಲ

entrance nalli...ಚೆನ್ನಾಗಿದೆ ಯಲ್ಲವಾ?

ನಾನೂ ನಿಹಾರಿಕಾನೂ ಒಂದೆ ಸಲಕ್ಕೆ wow ಅಂದಂತಹ ಚಿತ್ರ. looks so alive

photograph?? no... spent half an hour here savoring all the pictures

ಧೂಳಾಗಬಾರದೆಂದು wrap ಮಾಡಿದ ಪ್ಲ್ಯಾಸ್ಟಿಕ್ ಕವರ್ ನಿಂದ ಬೇರೆನೆ effect..:-)
so sweet!!
so intricate an art!!

ಸ್ವಲ್ಪ ನಾಚಿಕೆ ಸ್ವಲ್ಪ ಹೆಮ್ಮೆಯಿಂದ ಅವನು ಚಿತ್ರದ ಬಗ್ಗೆ ಮಾತನಾಡಿದ.
ಮಾಲದಿಯಮ್ಮೆ!!ಪೈಂಟಿಂಗ್ ನೋಕುನು!!

ನಮ್ಮೆಲ್ಲರ ಕುವೆಂಪು.....
ಈ ಹುಡುಗಿ ತುಂಬಾನೆ creative ಇದ್ದಾಳೆ ಅನ್ನಿಸ್ತು..
ತಮಿಳುನಾಡಿದ ಚಿತ್ರಕಾರನ ಕೈಚಳಕ



ಕೋಲ್ಕೋತಾ ದ ಚಿತ್ರಕಾರ..


If you like my art u can also 'like' me on facebook ಅಂತ ಹೇಳಿದ Prabha Narayanan..ಅವರ ವಿಸಿಂಟಿಂಗ್ ಕಾರ್ಡ್ ತುಂಬ ಚೆನ್ನಾಗಿದೆ
ಯಾಕೋ paris ನೆನಪಾಯ್ತು!!:-)
ಡಿಟೈಲಿಂಗ್ ನೋಡಿ!!! ನಾನಂತು ದಂಗು ಬಡಿದು ಹೋದೆ!!
ಹೆಂಗಸರನ್ನೂ ನಾಚಿಸುವಷ್ಟು ಇವರ ನಾಚಿಕೆ..ಸೊ ಸ್ವೀಟ್!!:-)
ಮೇಲಿನ red T shirt ಹಾಕಿದ ಹುಡುಗ ಕೇವಲ ಮೂರುವರೆ ತಾಸಲ್ಲಿ black ball point ಪೆನ್ ನಿಂದ ಮಾಡಿದ್ದನಂತೆ!!
ಹಳೆ ಕಾಲದ ಸಿನಿಮಾ ಪೋಸ್ಟರ್ ನೆನಪಿಸಿತು


ನಿಹಾರಿಕಂಗೆ ಈ ಹುಡುಗ ವಸುಧೆಂದ್ರ ಮಾಮ (ನನ್ನ ಆಪ್ತ ಮಿತ್ರರು ಹಾಗೂ ಖ್ಯಾತ ಬರಹಗಾರರು)ನನ್ನು ನೆನಪಿಸಿತಂತೆ . ಈ ಚಿತ್ರವನ್ನು ಅವರಿಗೆ ಕಳುಹಿಸಿದಾಗ " ಈ ಹುಡುಗನಿಗೆ ನನ್ನ ಹೋಲಿಕೆಯಿದೆ ಅಂದರು". ಎಷ್ಟು ಹೊತ್ತು ಈ ಹುಡುಗನನ್ನೆ ನೋಡುತ್ತ ಇದ್ದೇವು ಅಂದರೆ ಆ ಹುಡುಗ ನಾಚಿಕೆ ಪಟ್ಟು ಫಳ್ಳನೆ ಒಂದು ಚಂದದ ನಗೆ ನಮ  ಕಡೆ ಬೀರಿದ..
ಇನ್ನೂ ಸುಮಾರು ಚಿತ್ರಗಳಿವೆ...part -2 ಮಾಡುತ್ತೇನೆ.
enjoy
:-)

20 comments:

Radhika said...

Malathi, can't believe about your fear of people. Didn't feel it in our meeting! Thanks for the lovely virtual tour to Chitrasante.

neelesh said...

hey that nail biteing girl looks like u.ur old photo. and i am worried that if i meet u, wont u fear? even i am too shy as a starter but after that only heaven can save u.lets see and curious for part 2.ba bye

Vasudhendra said...

so nice photographs! I missed this event. But your article filled that gap. thanks.

nenapina sanchy inda said...

thanks Radhika. It takes a superhuman effort to act normally..nijakkoo

Neelesh : :-)..cant tell yet...will put part-2 soon.
ms

nenapina sanchy inda said...

thanks Vasudhendra!!
:-)
malathi

Badarinath Palavalli said...

1. ಅದಕೇ ಇರಬೇಕು ಮಾಲತಕ್ಕನ ಬ್ಲಾಗ್ ಬರಹಗಳಲ್ಲೂ ತುಸು ಸಂಕೋಚ ತುಸು ಬಿಗುಮಾನ!

2. ನಿಮ್ಮ ಕಲಾಭಿರುಚಿಗೆ ಶರಣು. ಚಿತ್ರ ಸಂತೆಯ ಬರಹ ಮತ್ತು ಫೋಟೋಗಳೂ ಸೂಪರ್ರೂ...

ನನ್ನ ಬ್ಲಾಗಿಗೂ ಸ್ವಾಗತ...

nenapina sanchy inda said...

thanks Badari!!!
mundina vaara poorthi free..aaga nimma padyagaLanellaa Odtene!!
:-)
malathi S

ಮನದಾಳದಿಂದ............ said...

ಅಕ್ಕಯ್ಯಾ,
ನೀವು ಎಲ್ಲಿದ್ದರೂ ಹುಡುಕಿ ನಿಮ್ಮ ಬೆದರುವಿಕೆಯನ್ನು ಒದ್ದಿಸುವ ಆಸೆ ನನ್ನದು :)

ಚಿತ್ರ ಸಂತೆಯ ಸುಂದರ ಚಿತ್ರಗಳು, ಚಂದದ ಅನುಭವಗಳು.

ಧನ್ಯವಾದಗಳು.

ವನಿತಾ / Vanitha said...

Nice write up about chitrasante with beautiful photographs Malati akka :) My BIL too displayed his pics there. Wish I could meet Malati akka one day!

nenapina sanchy inda said...

Praveen and Vanitha
thanks for the comments. will be putting up a part two next week
:-)
malathi S

ಸುಮ said...

ಅಕ್ಕ ನೀವು Anthropophobia ಬಗ್ಗೆ ಬರೆದದ್ದು ನೊಡಿ ಆಶ್ಚರ್ಯ ಅಯ್ತು. ನಾನೂ ಈ ಕಾಯಿಲೆಯ ಹಳೇ ಪೇಷಂಟ್. ನನ್ನ ಅನುಭವಗಳನ್ನೇ ನೀವು ಬರೆದಂತಿದೆ.

nenapina sanchy inda said...

Dear Suma!!
that makes 5 of us already..got a few mails from my readers who suffer from anthropophobia
:-)
malathiakka

ದಿವ್ಯಾ ಮಲ್ಯ ಕಾಮತ್ said...

whatever!! I have never felt so about you as far as my conversation since day 1 to till date with you is concerned :-)

nenapina sanchy inda said...

@ Divya Kamath!!
remember my sentence beraLanikeyaShtu mitraru?? u r one of them dear....thats why u did not notice my hesitation!!
love u
:-)
malathi S

N said...

ಮೌನಿಯಲಿ ಅಡಗಿರುವ ಮಾತುಗಳೆಲ್ಲಾ ಪದಗಳೆಲ್ಲಾ ಪದಗಳ ರೂಪ ಪಡೆದಿವೆ. ಖುಷಿಯಾಯಿತು ನಿಮ್ಮ ಮನದಾಳದ ಮಾತುಗಳ ಕೇಳಿ..ಚಿತ್ರ ಸಂತೆಯಲಿ ಸುತ್ತಾಡಿ ನೀವು ತೆಗೆದಿರೋ ಚಿತ್ರಗಳ ನೋಡಿ ಕಿಚ್ಚಾಯಿತು.... :)))

nenapina sanchy inda said...

@ Nataraju!!
thanks Dost!!
for understanding.....
~ doDDavaru...LOL

Anitha Naresh Manchi said...

nimma sanchi ge ivattu nuggide nodi.. adbhuthagale ive illi.. tumbaa chennaagiro paintings.. avara kaiyalli adeno maantrika shakti ideyo.. swalpa hotte uri aagutte :))

nenapina sanchy inda said...

@ Anitha Naresh Manchi
i am fan of your writings!! used to read it in avadhi. now i have saved ur link.
thanks for nuggingu!!
:-)
ms

ಜಲನಯನ said...

ಮಾಲ-T ತುಂಬಾ ಒಳ್ಳೊಳ್ಳೆ ಚಿತ್ರಗಳ ಪರಿಚಯ ಮಾಡ್ಸಿದ್ದಲ್ಲದೇ ಅಲ್ಲಿನ ಪರಿಸರದೊಡನೆಯೂ ಮಿಳಿತಗೊಂಡ ನಿಮ್ಮ ಅನುಭವ ವಿವರಣೆ.. ತುಂಬಾ ಚನ್ನಾಗಿದೆ..
ಇಷ್ಟ ಆಯ್ತು...

nenapina sanchy inda said...

@ Azad Bhai
:-)
thank you
ms