’ನಮ್ಮ ಸಂಸ್ಥೆಯ welfare fund” ಪೋಸ್ಟ್ ಬರೆದ ಮೇಲೆ ಒಂದು ತಿಂಗಳು ನಿಮ್ಮ ಮೆದುಳು ತಿನ್ನಲ್ಲ ಅಂತ ರಜೆ ಸಾರಿದ್ದೆ. ಹಳೆ ಪೋಸ್ಟ್ ನಲ್ಲಿ ಕೆಲವೊಂದು ಕಾಗುಣಿತದ ತಪ್ಪುಗಳಿದ್ದವು. ಅದನ್ನು ಸರಿ ಪಡಿಸಲು ಎಡಿಟ್ ಮೋಡ್ ನಲ್ಲಿಟ್ಟಿದ್ದಷ್ಟೆ, ಅಷ್ಟರಲ್ಲಿ ಎಲ್ ಪಿ ಜಿ ಗ್ಯಾಸ್ ರಿಫಿಲ್ ನವನು ಬಂದಿದ್ದ. ಬಾಗಿಲು ತೆರೆದಿದ್ದರಿಂದ ಮೇಲಿನ ಮನೆ ಪುಟ್ಟು ದಿಶಾಂತ ಕೂಡ ಒಳಗೆ ಬಂದು ಸೀದ ಕಂಪ್ಯೂಟರ್ ಬಳಿ ಬಂದು ಕೂತ. ಅವನ ಗೇಮ್ಸ್ ಯಾವ ಫೋಲ್ಡರ್ ನಲ್ಲಿದೆ ಅಂತ ಅವನಿಗೆ ಗೊತ್ತು. ಅದನ್ನು ತೆರೆದು ಅವನು ಆಟ ಆಡಿ ಕೊಳ್ಳುತ್ತಿರುತ್ತಾನೆ. ನನಗೂ ನನ್ನ ಬ್ಲಾಗ್ ಸೈನ್ ಇನ್ ಆಗಿಟ್ಟಿದ್ದು ಮರೆತು ಹೋಯ್ತು. ಅವನು ಆಟ ಆಡುವಾಗಲೆ ’ಒಂದು ನಿಮಿಶ ಪುಟ್ಟಣ್ಣ; ನನ್ನ ಫೈಲ್ ಕ್ಲೋಸ್ ಮಾಡ್ತೀನಿ, ಆಮೇಲೆ ಆಡು ಅಂತ ಹೇಳಿ ನಾನು ಪಬ್ ಲಿಶ್ ಪೋಸ್ಟ್ ಕೊಟ್ಟು ಬಿಟ್ಟೆ. ಮರುದಿನದ ಪ್ರಯಾಣದ ಪ್ಯಾಕಿಂಗ್ ಮಾಡಿದೆ. ಅವನು, - ಇನ್ನೊಂದು ರುಂ ನಲ್ಲಿ ಬ್ಲಾಕ್ ಬೋರ್ಡ್ ಇದೆ. ಅಲ್ಲಿ chalk ನಿಂದ ಚಿತ್ರ ಬಿಡಿಸ್ತಾ ಇದ್ದ. ನಾನು ಪುನ: ಬ್ಲಾಗ್ ತೆರೆದು ನೋಡಿದ್ರೆ ಅದರಲ್ಲಿ ಅರ್ಧಕ್ಕಿಂತ ಜಾಸ್ತಿ delete ಆಗಿ ಬಿಟ್ಟಿತ್ತು. ಒಂದೆ ಸಲ ’ಪುಟ್ಟು’ ಅಂತ ಕಿರುಚಿದೆ. ಅವನು ಓಡೋಡಿ ಬಂದ ’ಯಾಕೋ ಆಂಟಿ ಬರೆದಿದ್ದೆಲ್ಲ delete ಮಾಡಿದ್ದಿ’ ಅಂದೆ...ನನಗೆ ಕಂಡಾಪಟ್ಟೆ ಸಿಟ್ಟು ಬಂದಿತ್ತು. ಅವನು ಮುಖ ಚಿಕ್ಕದು ಮಾಡಿ ನನ್ನ ಕಡೆ ನೋಡ್ತಾ ನಿಂತು ಬಿಟ್ಟ, ನಾನು ಸಿಟ್ಟಿಗೆದ್ದದ್ದು ಅವನು ನೋಡೇ ಇಲ್ಲ. ಕೂಡಲೆ ನನಗೆ ’ಛೆ’ ಅನ್ನಿಸ್ತು. ಮಹಾ ನಾನೇನು ಮಹಾ ದೊಡ್ಡ ಬರಹಗಾರಳೇನಲ್ಲ. ಹೋದರೆ ಹೋಯ್ತು. ಮತ್ತು ನೀಹಾ ಯಾವತ್ತೂ ಹೇಳ್ತಾಳೆ ಸಿಟ್ಟು ಬಂದಾಗ ಆಲೋಚನೆ ಮಾಡು. ಸಿಟ್ಟು ಯಾಕೆ ಬರುತ್ತೆ ಅಂದರೆ ತಪ್ಪು ನಮ್ಮದಿರುತ್ತೆ, ’ ಅವಳು ಹೇಳೋದು ಎಷ್ಟು ನಿಜ ಅಲ್ಲವಾ? ನಾನು ಸಿಸ್ಟಮ್ ನಿಂದ ಏಳುವ ಮುಂಚೆ save ಮಾಡಿ, ಸೈನ್ ಔಟ್ ಆಗಬೇಕಿತ್ತು. ನಾನು ಅವನಿಗೆ sorry ಹೇಳಿ ತಬ್ಬಿಕೊಂಡು ಬಿಟ್ಟೆ. ಅವನೂ ಅಷ್ಟೆ ಜೋರಾಗಿ ತಬ್ಬಿ sorry aunty ಅಂದ. ನಾನು ಅವನಿಗೋಸ್ಕರ ಅವನ ಇಷ್ಟದ್ದ ಚಾಕೊಲೇಟ್ ಐಸ್ಕ್ರೀಮ್ ತಂದು ಕೊಟ್ಟೆ.
:-)
ಒಂದು ತಿಂಗಳ ಟೂರ್ ಅಂತ ಹೋಗಿದ್ದೆ. ಆದರೆ ಶ್ರೀಕಾಂತ ರಾಯರು ಆಫ್ರಿಕಾ ಗೆ ಹೊರಟಿದ್ದಾರೆಂದು ಬೇಗ ಬರಬೇಕಾಯಿತು. ಅಷ್ಟೆ ಅಲ್ಲ ಶ್ರೀಕಾಂತ ಎರಡೆರಡು ದಿನಕ್ಕೆ ಫೋನ್ ಮಾಡ್ತಾ ಇದ್ರು. ಬೇಗ ಬಾ..ನೀನಿಲ್ಲದೆ ಇಲ್ಲಿ ಬೇಜಾರಾಗುತ್ತೆ ಅಂತ. ಅದಕ್ಕೆ ನಾನು ’ಮಹಾ ಮನೆಯಲ್ಲಿದ್ದಾಗ ಎದುರಿಗೆ ಇದ್ರು ಮಾತಾಡಕ್ಕೆ ಪುರುಸೊತ್ತು ಇರಲ್ಲ, ಯಾವಾಗ್ಲೂ ಮೊಬೈಲ್ ನಲ್ಲೆ ಮಾತಿಗೆ ತೊಡಗಿರ್ತೀರಾ ಅಂತ ನಾನು ಮುನಿಸು ತೋರಿಸಿದೆ. ಅದಕ್ಕೆ ನೀನು ಮನೆಯಲ್ಲಿದ್ದಾಗ ನಿನ್ನ ಹಾಡು, ಅಡಿಗೆ ಮನೆಯಲ್ಲಿ ಪಾತ್ರೆ-ಪರಡಿ ಕುಕ್ಕುವುದು, ಮಕ್ಕಳ ಜತೆ ಪ್ರೀತಿ-ಜಗಳ, ಅಮ್ಮ-ತಮ್ಮಂದಿರ ಜತೆ ಫೋನ್ ನಲ್ಲಿ ಮಾತಾಡುವುದೆಲ್ಲ, ತಮ್ಮನ ಮಗಳ ಜತೆ ಲಲ್ಲೆಗರೆಯುವುದು...ಇವೆಲ್ಲ ನನಗೆ background music ತರಹ ಇರುತ್ತೆ, ಅದೇ ನನಗೆ ಸಮಾಧಾನ. ನೀನಿಲ್ಲದಾಗ ಎಲ್ಲ ಕಡೆ silence. ಮಕ್ಕಳು ತಮ್ಮಷ್ಟಕ್ಕೆ ಓದಿಕೊಂಡೊ ಏನೋ ಮಾಡುತ್ತಿರುತ್ತಾರೆ.....of course ನನಗೆ ಖುಶಿ ಯಾಗುತ್ತೆ ಅವರು ಆ ತರಹ ಹೇಳುವಾಗ.....ಅದಕ್ಕೆ ಬಂದು ಬಿಟ್ಟೆ. ಅಮ್ಮ ಮಾತ್ರ ಸಿಟ್ಟು ಮಾಡಿದ್ರು. ಮಕ್ಕಳು ದೊಡ್ಡವರಾಗಿದ್ದಾರೆ. ಅವರು ಮ್ಯಾನೇಜ್ ಮಾಡ್ತಾರೆ ನೀನು ತಿಂಗಳ ಕೊನೆಗೆ ಹೋಗು ಅಂತ :-)
ನನ್ನ fishbowl ನಲ್ಲಿರೋ ಮೀನು ಕೂಡ ನನ್ನನ್ನು ಮಿಸ್ ಮಾಡಿದ್ವು ಅನ್ನಿಸುತ್ತೆ. ತುಂಬ ಚಟುವಟಿಕೆಯಿಂದ ನೀರಲ್ಲೇ ಸದ್ದಿನೊಂದಿಗೆ ತಿಪ್ಪರಲಾಗ ಹಾಕ್ತಾ ಇದ್ರು, ರಾತ್ರಿ ನಾನು fishbowl ಬಳಿ ಕೂತು ಓದುತ್ತಿರುವಾಗ (One hundred shades of White by Preeti Nair..ತುಂಬ ಚೆನ್ನಾಗಿದೆ ಅವರ ನಿರೂಪಣಾ ಶೈಲಿ). ನನಗೆ ತುಂಬ disturb ಆಗ್ತಾ ಇತ್ತು ಮೀನಿನ ಆಟದ ಸದ್ದು. ಅದಕ್ಕೆ ಅವರನ್ನು ಬೆಕ್ಕಿಗೆ ಆಹಾರವಾಗಿ ಕೊಡುತ್ತೇನೆಂದು ಹೆದರಿಸಿದೆ...:-) ನಿಹಾ ಮಲಗಿದ್ದಳು..ಇಲ್ಲದಿದ್ದರೆ ನನಗೆ sadist ಅನ್ನುತ್ತಿದ್ದಳೋ ಏನೋ.
ನನ್ನ fishbowl ನಲ್ಲಿರೋ ಮೀನು ಕೂಡ ನನ್ನನ್ನು ಮಿಸ್ ಮಾಡಿದ್ವು ಅನ್ನಿಸುತ್ತೆ. ತುಂಬ ಚಟುವಟಿಕೆಯಿಂದ ನೀರಲ್ಲೇ ಸದ್ದಿನೊಂದಿಗೆ ತಿಪ್ಪರಲಾಗ ಹಾಕ್ತಾ ಇದ್ರು, ರಾತ್ರಿ ನಾನು fishbowl ಬಳಿ ಕೂತು ಓದುತ್ತಿರುವಾಗ (One hundred shades of White by Preeti Nair..ತುಂಬ ಚೆನ್ನಾಗಿದೆ ಅವರ ನಿರೂಪಣಾ ಶೈಲಿ). ನನಗೆ ತುಂಬ disturb ಆಗ್ತಾ ಇತ್ತು ಮೀನಿನ ಆಟದ ಸದ್ದು. ಅದಕ್ಕೆ ಅವರನ್ನು ಬೆಕ್ಕಿಗೆ ಆಹಾರವಾಗಿ ಕೊಡುತ್ತೇನೆಂದು ಹೆದರಿಸಿದೆ...:-) ನಿಹಾ ಮಲಗಿದ್ದಳು..ಇಲ್ಲದಿದ್ದರೆ ನನಗೆ sadist ಅನ್ನುತ್ತಿದ್ದಳೋ ಏನೋ.
ಟೂರ್ ನ ಹೈ ಲೈಟ್ ಹಳೇ ಗೋವಾ ನೋಡಿದ್ದು. ಅದನ್ನು ಫೋಟೊ ಸಮೇತ ಇನ್ನೊಂದು ಪೋಸ್ಟ್ ನಲ್ಲಿ ಹಾಕ್ತೇನೆ.
ಸಧ್ಯಕ್ಕೆ ಇಷ್ಟೆ. Delete ಆಗಿದ್ದ ಹಳೆ ಪೋಸ್ಟ್ ಗೆ ಕಮೆಂಟ್ ಹಾಕಿದವರಿಗೆಲ್ಲ ಧನ್ಯವಾದಗಳು ಮತ್ತು sorry!!!
ಸಧ್ಯಕ್ಕೆ ಇಷ್ಟೆ. Delete ಆಗಿದ್ದ ಹಳೆ ಪೋಸ್ಟ್ ಗೆ ಕಮೆಂಟ್ ಹಾಕಿದವರಿಗೆಲ್ಲ ಧನ್ಯವಾದಗಳು ಮತ್ತು sorry!!!

3 comments:
Welcome back Malathi! Looking forward to read about your trip :-)
ಪದೇ ಪದೇ ದೇಶ ಸುತ್ತಿ ನೋಡುವುದಕ್ಕೂ ಮತ್ತು ಕೋಶ ಓದುವುದಕ್ಕೂ ಪ್ರಾಪ್ತಿ ಇರಬೇಕು. ಮಾಲತಿ ಅವರೇ ನೀವು ಅಂತಹ ಭಗವತ್ ಕೃಪಾಕರಿ.
ದಿಶಾಂತನಿಗೆ ಕೊಡಿಸಿದ ಐಸ್ಕ್ರೀಂ ನಮಗೂ xerox ಮಾಡಿಬಿಡಿ. ಶ್ರೀಕಾಂತ್ ಸಾರ್ ಅವರಿಗೆ bon voyage ಹೇಳಿರಿ.
ಬಿಡುವು ಮಾಡಿಕೊಂಡು ನನ್ನ ಬ್ಲಾಗಿಗೂ ಬನ್ನಿರಿ. ನಿಮ್ಮ ಓದಿಗಾಗಿ 4 ಕವನಗಳಿವೆ.
ಈ ಪ್ರವಾಸದ ಸಚಿತ್ರ ಬರಹಕ್ಕಾಗಿ ಕಾಯುತ್ತೇವೆ.
thank you Radhika and Badarinath Palavalli!!
@ Badari: nimma sms inda nimma blog update aadaagellaa tiLiyutte. ee vaaraantyadalli nimma kavanagaLannu Oduve.
:-)
ms
Post a Comment