June 8, 2011

ನಿಮ್ಗೂ ಹಿಂಗೆ ಆಗೈತಾ??

ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ ಅಲ್ಲವಾ?

ನಾವು ಬೆಂಗಳೂರಿಗೆ ಬಂದು 6 ತಿಂಗಳು ಆಗಿತ್ತಷ್ಟೆ. ನಮ್ಮ ಮೊದಲ ಪ್ರಾಜೆಕ್ಟ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ consultants ಆಗಿ. ಅದಕ್ಕೆ ಅವರು ನಮಗೆ ಕಛೇರಿ ನಡೆಸಲು ಜಯನಗರ 4th ಬ್ಲಾಕ್ ಶಾಪ್ಪಿಂಗ್ ಸಂಕೀರ್ಣದಲ್ಲಿ 7ನೇ ಮಹಡಿಯಲ್ಲಿ ಸ್ಥಳ ನೀಡಿದ್ದರು. . ನಮ್ಮ ಸೀನಿಯರ್ ಹೆಬ್ಬಾಳರ yezdi ಬೈಕ್ shopping complex ಪಾರ್ಕಿಂಗ್ ಸ್ಥಳದಿಂದ ಕಳುವಾಯಿತು. ಪಾಪ ಒಂದು ತಿಂಗಳು ಕಾದು, ಅದರ insurance ಹಣ ಬಂದ ಮೇಲೆ ಇನ್ನೊಂದು ಹೊಸ ಬೈಕ್ ’rajdoot; ಖರೀದಿ ಮಾಡಿದ್ರು

ಅದು ಎರಡೇ ದಿನಕ್ಕೆ ಅದೇ ಜಾಗದಿಂದ ಪುನ: ಕಳುವಾಯ್ತು. ಪೋಲಿಸ್ complaint ಕೊಟ್ರೆ ಪೋಲಿಸರು ಬೇಡದಿದ್ದ ಪ್ರಶ್ನೆಗಳನ್ನೆಲ್ಲ ಕೇಳಿ ಹೆಬ್ಬಾಳರು ಮನಸ್ಸಿಗೆ ತುಂಬ ಬೇಜಾರು ಮಾಡಿಕೊಂಡಿದ್ರು. ಯಾಕೋ ನನ್ನ ಬಾಯಿಯಿಂದ,tension ಮಾಡ್ಕೋಬೇಡಿ ಹೆಬ್ಬಾಳ ಅವರೆ, ಕಳೆದು ಹೋದ ಬೈಕ್ ಸಿಗುತ್ತೆ ಅಂದಿದ್ದೆ.:ಅದಕ್ಕೆ ಅವರು ಇನ್ನಷ್ಟು ಬೇಜಾರಿನಿಂದ, ಹಳೆ ಬೈಕೆ ಸಿಗಲಿಲ್ಲ, ಇನ್ನು ಹೊಸ ಬೈಕ್ ಸಿಗುತ್ತ? ಅಂದಿದ್ದರು.ನನ್ನ ಬಾಯಿಯಿಂದ ಹಾಗ್ಯಾಕೆ ಬಂತು ಅಂತ ನನಗೂ ಸ್ವಲ್ಪ ಇರುಸುಮುರುಸಾಯ್ತು.ಅದರೆ ಮರುದಿನ ಪೋಲಿಸ್ ಸ್ಟೇಶನ್ ನಿಂದ ಫೋನ್ ಬಂದಿತ್ತು. ಬೈಕ್ ಸಿಕ್ಕಿದೆ, formalities complete ಮಾಡಿ ಅದನ್ನು ತೆಗೊಂಡು ಹೋಗಿ ಅಂತ.

episode - 2

ಅನಂತ ವ್ರತದ ದಿನ. ಬೆಳಿಗ್ಗೆ ಉಪ್ಪಿಟ್ಟಿನ ಬ್ರೆಕ್ ಫಾಸ್ಟ್ ಆದಮೇಲೆ, ಮನೆ ಕೆಲಸ ಎಲ್ಲ ಬೇಗ ಮುಗಿಸಿದ್ದೆ. ಮಧ್ಯಾನ್ಹ ಮಲ್ಲೆಶ್ವರಂ ನಲ್ಲಿರುವ ಕಾಶೀ ಮಠದಲ್ಲಿ ಊಟ ಇತ್ತು, ಹಾಗೇ ಸಂಜೆ ಪರಿಚಯದವರೊಬ್ಬರ ಮದುವೆ ರಿಸೆಪ್ಷನ್ ಇತ್ತು, ಹಾಗಾಗಿ ನನಗೆ ಅಡಿಗೆ ಕೆಲಸ ಇರಲಿಲ್ಲ. ಅದಕ್ಕೆ showcase ನಾದ್ರೂ ಕ್ಲೀನ್ ಮಾಡುವ ಅಂತ world space ನಲ್ಲಿ ಹಾಡು ಹಾಕ್ಕೊಂಡು. ಹಿಂದಿ ಹಾಡಿನ ಜತೆ ನಾನು ಗುಣುಗುಣಿಸ್ತಾ ನನ್ನ ಕೆಲಸ ಮಾಡ್ತಾ ಇದ್ದೆ. ಆಗ ಸೊಪ್ಪು ಮಾರುವವನು ಅಲ್ಲಿಂದ ಹೋಗ್ತಾ ಇದ್ದ. ಮಕ್ಕಳಿಗೆ ರಜೆ ಇತ್ತು.ಅವರು ಒಳಗಡೆ ಏನೋ ಮಾಡ್ತಾ ಇದ್ದರು. ಶ್ರೀಕಾಂತ್ ಜ್ಝೂಲಾ ಮೇಲೆ ಕೂತು ಪೇಪರ್ ಓದ್ತಾ ಇದ್ದರು. ಆ ಸೊಪ್ಪು ಮಾರುವವನ ಹತ್ತಿರ ನಾವು ಯಾವತ್ತೂ ಸೊಪ್ಪು ತೆಗೊಂಡಿರಲಿಲ್ಲ, ಯಾಕಂದ್ರೆ ನಮ್ಮನೆ ತರಕಾರಿ ಡಿಪಾರ್ಟಮೆಂಟ್ ಶ್ರೀಕಾಂತ್ ದ್ದು. ಅವರು ಬೆಳಿಗ್ಗೆ ಬೆಳಿಗ್ಗೆ ಶಂಕರನಗರ-APMC ಯಾರ್ಡ್ ನ ತರಕಾರಿ ಮಾರುಕಟ್ಟೆಯಿಂದ ಎರಡು ಮೂರು ದಿನಕ್ಕೊಂದು ಸಲ ವಾಕ್ ಹೋಗುವ ನೆಪದಲ್ಲಿ ತರಕಾರಿ ತರುತ್ತಾರೆ.

ಸೊಪ್ಪು ಮಾರುವವ ಅಜ್ಜನಿಗೆ ತುಂಬ ವಯಸ್ಸಾಗಿತ್ತು, ಸ್ವಲ್ಪ ಮುಂಗೋಪಿ ಕೂಡ. ಮನೆ ಮುಂದೆ ನಿಂತು, ಸರ್, ’ನಗ್ತಾ ಇರ್ತಾರಲ್ಲವಾ ಆ ಹೆಣ್ಣು ಮಗಳನ್ನ ಕರೀರಿ ಸರ್ ಅಂದ. ಹೊರಗಿನ ರೂಮ್ ನಲ್ಲಿರುವ ನನಗೆ ಕೇಳಿಸಿ ನಾನು ನಿಹಾನ್ನ ಕೂಗಿದೆ. ಯಾಕಂದ್ರೆ ಅವಳು ನಮ್ಮ ಏರಿಯಾನಲ್ಲೆಲ್ಲ ever smiling ಹುಡುಗಿ ಅಂತ famous. ನಿಹಾ ಹೊರಗಡೆ ಬಂದ್ಲು. ಅದಕ್ಕೆ ಅಜ್ಜ ಇವರಲ್ಲ, ಇನ್ನೊಬ್ಬರು ಅಂದ್ರು. ನನಗೆ ಆಶ್ಚರ್ಯ ನಾನು - ಅಕ್ಕ (ಮಾಲವಿಕ) ಮನೆಯಲ್ಲಿ ಜೋಕ್ಸ್ ಎಲ್ಲ ಮಾಡಿ ನಗ್ತಿರ್ತೇವೆ, ಆದರೆ ಮನೆ ಹೊರಗಡೆ ಘನ ಗಾಂಭೀರ್ಯ. :-) ಆದರೂ ಮಾಲವಿಕಳನ್ನು ಕರೆದೆ. ಇವರೂ ಅಲ್ಲ ಅಂದು ಬಿಟ್ಟ ಅಜ್ಜ. ನಾನೇ ಎನು ವಿಷಯ ಅಂತ ಕೇಳಲು ಹೋದ್ರೆ, ನನ್ನ ಮುಖ ನೋಡಿದ್ದೆ ಅಳಲಿಕ್ಕೆ ಶುರು ಮಾಡ್ಕೊಂಡು ಬಿಟ್ರು.ನನಗಂತೂ ಆ ಹಿರಿಯ ಜೀವ ಅಳುವುದು ನೋಡಿ ಒಂತರಹ ಆಯ್ತು.

"ಏನಾಯ್ತು ಅಜ್ಜ’?? ಅಂತ ಕೇಳಿದೆ.

’ನನ್ನ ಮಗಳಿಗೆ ಜೋರು ಹುಷಾರಿಲ್ಲ ಕಣಮ್ಮ, ಅಸ್ಪತ್ರೆಗೆ ಸೇರಿಸವ್ರೆ’ ನನಗೆ ಒಬ್ಬಳೆ ಮಗಳು ಕಣಮ್ಮ’

’ನಾನು- ದುಡ್ಡು ಗಿಡ್ಡು ಬೇಕಾಗಿತ್ತ ಅಜ್ಜ’??

ಇಲ್ಲ ನಿಮ್ಮ ಮುಖ ನೋಡಿ ಹೋಗೋಣ ಅಂತ ಬಂದೆ. ಈಗ ಸಮಾಧಾನ ಆಯ್ತು ಅಂತ ಹೊರಟೆ ಬಿಟ್ಟ ಅಜ್ಜ.

ಶ್ರೀಕಾಂತ್ ನಾನು ಮುಖ ಮುಖ ನೋಡ್ಕೊಂಡ್ವಿ.

ಶ್ರೀಕಾಂತ : ’ಏನೋ ಪ್ಲಾನ್ ಇದೆ ಅಜ್ಜಂದು’ ಇಲ್ಲದಿದ್ದರೆ ಹಾಗೆಲ್ಲ ಯಾರು ಅನ್ನಲ್ಲ ಅಂದ್ರು. ನನಗೂ ಸ್ವಲ್ಪ ವಿಚಿತ್ರ ಅನ್ನಿಸಿತ್ತು.

ಅದಾದ ಎರಡು ದಿನ ಬಿಟ್ಟು ಬೆಳಿಗ್ಗೆ ಬಾಗಿಲ ಬಳಿ ಸದ್ದು ಆಯ್ತು.ಬಾಗಿಲು ತೆಗೆದು ನೋಡಿದ್ರೆ, ಸೊಪ್ಪು ಮಾರುವ ಅಜ್ಜ ಒಂದು ಪ್ಲಾಸ್ಟಿಕ್ ಬ್ಯಾಗ್ ತುಂಬ ಸೊಪ್ಪು ಬಾಗಿಲ ಬಳಿ ಇಟ್ಟು ಏನೂ ಹೇಳದೆ ಪರಾರಿಯಾಗುವ ಅಂದಾಜಿನಲ್ಲಿದ್ದರು. ನಾನು ಅವರನ್ನು ನಿಲ್ಲಿಸಿ’ಅಜ್ಜ, ಏನಿದೆಲ್ಲ’ ಅಂತ ಕೇಳಿದೆ.’ ’ಏನಿಲ್ಲ ಮಗಳಿಗೆ ಹುಷಾರಾಯ್ತು. ಸ್ವಲ್ಪ ಸೊಪ್ಪು, ಮೆಣಸಿನಕಾಯಿ, ನಿಂಬೆ ಹಣ್ಣಿವೆ ಅಷ್ಟೆ’

ನನಗೆ ಸರಿಯನಿಸಲ್ಲ, ನೀವು ದುಡ್ಡು ತೆಗೊಳ್ಳಿ ಇಲ್ಲದಿದ್ದರೆ ಸೊಪ್ಪು ವಾಪಸ್ ತೆಗೆದುಕೊಂಡು ಹೋಗಿ ಅಂದೆ. ಸುಮಾರು ೩೦-೪೦ ರೂ ಮೌಲ್ಯದ ತರಕಾರಿಯಿತ್ತು. ಹಾಗಾದ್ರೆ ಸೊಪ್ಪಿನ 10 ರೂ ಮಾತ್ರ ಕೊಡಿ, ಅಂತ ಪಟ್ಟು ಹಿಡಿದರು. ನಾನು 25 ರೂ ಕೊಟ್ರೂ ಅದರಿಂದ ಕೇವಲ ಹತ್ತೆ ರೂಪಾಯಿ ತೆಗೆದುಕೊಂಡು ಹೋದರು.

ನಾವು ಆ ಮನೆಯಲ್ಲಿ ಇರುವ ತನಕ ಅವನು ದಿನಾ ಸೊಪ್ಪು ಮಾರಲಿಕ್ಕೆ ಬರುತ್ತಿದ್ದ. ಆದರೂ ಆಮೇಲೆ ಯಾವತ್ತೂ ನಮ್ಮ ಮನೆಕಡೆ ಬರುತ್ತಿರಲಿಲ್ಲ. ಅಶ್ಚರ್ಯ ಅನಿಸುತ್ತೆ ಅಲ್ಲವಾ??

ನಿಮಗೂ ಇಂತಹ ಅನುಭವ ಆಗಿರಬಹುದಲ್ಲವಾ??

ಸಂಜೆ ತಮ್ಮ ಫೋನ್ ಮಾಡಿದಾಗ (ಅವನು ದಿನಾ ಫೋನ್ ಮಾಡ್ತಾನೆ) ಶ್ರೀಕಾಂತ್ - ಬೆಳಿಗ್ಗೆ ಹೀಗೆಲ್ಲ ಆಯ್ತು ಅಂದಾಗ ಅವನು ’ಮಾಲತಿಆನಂದಮಯಿ ಆಶ್ರಮ’ ಶುರುಮಾಡುವ. ಮಾಲತಿ ಹಣೆಗೆ ದೊಡ್ಡ ಬಟ್ಟು ಇಟ್ಕೊಂಡು ನಗುತ್ತ ಎಲ್ಲರನ್ನೂ ತಬ್ಬಿಕೊಂಡು ಮುತ್ತು ಕೊಡಲಿ, ದುಡ್ಡಿನ ಮ್ಯಾನೆಜ್ ಮೆಂಟ್ ಮಾತ್ರನಂದು ಅಂದ್ಬಿಟ್ಟ :-)

episode -3

ಆ ದಿನ ಪೆಟ್ರೊಲ್ ಹಾಕಿಸಿಕೊಳ್ಳಲು ದೊಡ್ಡ ರಶ್. ನಾನು ನಮ್ಮ ಮುಂದಿರುವ ಬೈಕ್ ಗಳನ್ನೆಲ್ಲ ಲೆಕ್ಕ ಮಾಡಿದಾಗ ನಮ್ಮದು 21 ನೇ ಸರದಿ. ನೋಡ್ತಾ ನೋಡ್ತಾ ಟೂ-ವ್ಹೀಲರ್ ಸಾಲು ತುಂಬ ಉದ್ದವಾಗಿ, ಪೆಟ್ರೋಲ್ ಬಂಕಿಂದ ಕಣ್ಮರೆಯಾಗಿ ಆಚೆಗೆಲ್ಲೋ ಹೋಯ್ತು.ಇನ್ನೊಂದು ಬದಿಯಲ್ಲಿ ಪೆಟ್ರೊಲ್ ತುಂಬಿಸಲು ರಿಕ್ಷಾಗಳು queueನಲ್ಲಿ ನಿಂತಿದ್ದವು. ರಸ್ತೆ ಬದಿ ನೋಡ್ತಾ ನಿಂತಾಗ ಒಂದು ಸ್ಕೂಟರ್ ನಮ್ಮನ್ನು ಹಾಯ್ದು ಹೋಯ್ತು. ಸ್ಕೂಟರ್ ಹಿಂಬದಿ ವಯಸ್ಸಾದ ಹೆಂಗಸು ಕೂತಿದ್ದರು. ಅವರ ಕೈನಲ್ಲಿ ಒಂದು transparent ಪ್ಲಾಸ್ಟಿಕ್ ಡಬ್ಬಿ ಇತ್ತು. ಆ ಡಬ್ಬಿಯಲ್ಲಿ ಕೆಂಡಸಂಪಿಗೆ ಹೂಗಳು ಇದ್ದವು. ನನಗೆ ಕೆಂಡಸಂಪಿಗೆ ಹೂ ಅಂದರೆ ತುಂಬ ಇಷ್ಟ. ಶ್ರೀಕಾಂತ ಗೆ ತೋರಿಸುವಷ್ಟರಲ್ಲಿ ಆ ಸ್ಕೂಟರ್ ನಮ್ಮನ್ನು ಹಾದು ಹೋಗಿಯಾಗಿತ್ತು. ನಾನು ಕಣ್ಣು ಮುಚ್ಚಿ ಸ್ವಲ್ಪ flashback ಮೋಡ್ ಗೆ ಹೋದೆ. ಅಮ್ಮ ಅಂಧೇರಿ ಮಾರ್ಕೆಟ್ (ಮುಂಬೈ)ಗೆ ಹೋದಾಗಲೆಲ್ಲ ನನಗೋಸ್ಕರ ಕೆಂಡಸಂಪಿಗೆ ಹೂ ತರುತ್ತಿದ್ದರು. ಅದನ್ನು ನಾನು ತಲೆಗೆ ಮುಡಿದುಕೊಳ್ಳುತ್ತಿರಲಿಲ್ಲ. ಅದು ಒಣಗಿದ ಮೇಲೆ ಅದನ್ನು ಪುಸ್ತಕದಲ್ಲಿಡುತ್ತಿದ್ದೆ. ಅಂಧೇರಿ ಮಾರ್ಕೆಟ್ ನಲ್ಲಿ ಬೆಳಗಿನ ಹೊತ್ತು ,ಅದು ಕೆಲವೊಮ್ಮೆ ಮಾತ್ರ ಸಿಗುತ್ತಿತ್ತು. ಸಿಕ್ಕಿದಾಗಲೆಲ್ಲ ಅಮ್ಮ ತರುತ್ತಿದ್ದರು. ಶ್ರೀಕಾಂತ ಗೆ ಹೇಳಿದೆ’ಎಷ್ಟು ವರ್ಷ ಆಗಿ ಹೋಯ್ತು ನಾನು ಕೆಂಡಸಂಪಿಗೆ ಸುವಾಸನೆ ನೋಡದೆ’ ಅಂತ ಅಷ್ಟರೊಳಗೆ ನನಗೆ ಆ ಹೆಂಗಸು ಕಂಡರು. ರಿಕ್ಷಾ, ಸ್ಕೂಟರ್ ರಶನಲ್ಲಿ , ಅಷ್ಟು ದೂರದಿಂದ ದಾರಿ ಮಾಡಿಕೊಂಡು ನನ್ನ ಬಳಿಗೆ ಬಂದು ಅವರ ಬಳಿಯಿದ್ದ ಡಬ್ಬಿ ಮುಚ್ಚಳ ತೆರೆದು, ’ತೆಗೊಳಮ್ಮ ಸ್ವಲ್ಪ ಹೂ’ ಅಂದು ಬಿಟ್ಟರು. ನಾನು ಎರಡು ಹೂ ತೆಗೊಂಡೆ. ಮತ್ತು ಅವರೇ ಮುಂದುವರೆಸಿದರು ’ನಮ್ಮ ಮನೆ ಮುಂದೆ ಕೆಂಡಸಂಪಿಗೆ ಮರ ಇದೆ. ಇವತ್ತು ಮಗನಿಗೆ ರಜೆ, ಅದಕ್ಕೆ ಅವನಿಂದ ಹೂ ಕೊಯ್ಯಿಸಿಕೊಂಡೆ. ಈಗ ಶಿವ ಮಂದಿರಕ್ಕೆ ಹೋಗುತ್ತಿದ್ದೇವೆ. ಪೆಟ್ರೋಲ್ ತುಂಬಿಸಲು ನಿಂತಿದ್ದಾನೆ ಅವನು.ಯಾಕೋ ನಿಮಗೆ ಹೂ ಕೊಡಬೇಕು ಅನ್ನಿಸಿತು’

ಶ್ರೀಕಾಂತ ರಾಯರು ಫುಲ್ tense. ಸ್ವಲ್ಪ ಹೊತ್ತು ಬಿಟ್ಟು ’ಈಗ ನಡೆದಿದ್ದು ನಿಜಾನಾ’? ಅಂತ ಕೇಳಿದರು. ನಾನು ಉತ್ತರವಾಗಿ ಹೂ ಗಳನ್ನು ಅವರ ಮೂಗಿಗೆ ಹಿಡಿದೆ.

ಮಜಾ ಅಲ್ಲವಾ??ನೀವು ಇದನ್ನು ಓದುವಷ್ಟರಲ್ಲಿ ನಾವೆಲ್ಲ ladies only ಗಳು wonder la ಗೆ ಹೋಗಿ ಗಮ್ಮತ್ತು ಮಾಡಿ ಬರ್ತೇವೆ!!!ಏನಂತೀರಾ?????

ನನ್ನ ತಂಗಿ ಅಮೇರಿಕದಿಂದ ಬಂದಿಳಿದಿದ್ದಾಳೆ. ಅವಳಿಗೆ ಇದನ್ನೆಲ್ಲ ಹೇಳ್ತಾ ಇದ್ದೆ. ಹಾಗೆ ನಿಮ್ಮ ಜತೆನೂ ಹಂಚಿ ಕೊಳ್ಳೋಣ ಅನಿಸಿತು. ಅದಕ್ಕೆ.........

:-)

11 comments:

ವಿ.ರಾ.ಹೆ. said...

ಉಂ... ನಂಗೂ ಹಿಂಗೆಲ್ಲಾ ಸುಮಾರು ಬಾರಿ ಆಗೈತೆ. ಆಗೆಲ್ಲಾ ದೊಡ್ಡ ಆಶ್ಚರ್ಯ, ಖುಷಿ ಬಿಟ್ಟರೆ ಬೇರೆ ಏನೂ ತೋಚುವುದಿಲ್ಲ!

nenapina sanchy inda said...

Thank you Vikas Hegde!!
Its thrilling and scary at the same time alwaa?
thanks for reading
:-)
malathi S

Sushrutha Dodderi said...

ಮಜಾ ಇದೆಯಲ್ಲಾ!

Manjunatha Kollegala said...

"ಹಿಂದಿನ ಬೈಕಿನವನು ಜೋರಾಗ ಹಾರನ್ ಬಜಾಯಿಸ್ತಾ "ಮುಂದೆ ಹೋಗಿ ಮೇಡಮ್, ಎಷ್ಟೋಂದ್ ಜನ ಕಾಯ್ತಾ ಇದೀವಿ" ಅಂದಾಗಲೇ ಎಚ್ಚರ..." - ಇಂಥಾ ಒಂದು sentence ಎದುರು ನೋಡ್ತಾ ಇದ್ದೆ. ಅದು ಕೊನೆಗೂ ಬರಲಿಲ್ಲ. ಈಗ ಅಚ್ಚರಿಪಡೋ ಸರತಿ ನನ್ನದು. ಹೀಗೆ ನನಗಂತೂ ಖಂಡಿತಾ ಆಗಿಲ್ಲ!

umesh desai said...

yes its very scary and strange too

nenapina sanchy inda said...

thank you Sushrutha!!!for commenting :-)
@ Manjunatha Kollegala: for coming reading and commenting: Thank you
dhanyavadagaLu Umesh avare
:-)
malathi S

Badarinath Palavalli said...

ಕೆಲವು ಬಾರಿ ಹೀಗಾಗುತ್ತಿರುತ್ತವೆ ಮಾಲತಿಯವರೇ!

nenapina sanchy inda said...

badari!!
neevu bareyiri nimma anubhavagaLanna
:-)
malathi S

Raghu said...

ಆಗೋದೆಲ್ಲ ಒಳ್ಳೆದಿಕ್ಕೆ ಅಂತ ಮುಂದೆ ಸಾಗ್ತಾ ಇರಬೇಕು..

ನಿಮ್ಮವ,
ರಾಘು.

Anonymous said...

Howdu nangu ondheradu bari heegagidhe a 2ralli Malthi achanakkagi friend agiddu saha seridhe!! what do you say.!!

Veda

Anonymous said...

ಮಾಲತೀ ಆನಂದಮಯೀ ಅಮ್ಮಾ,

ಸಾಷ್ಟಾಂಗ ಪ್ರಣಾಮ!

ಮೂರ್ಖನಂತೆ ವಾಕ್ಸಿದ್ಧಿಯ ಒಣವಿವರಣೆ ಕೊಡಹೋದರೆ,
ತಾವಾಗಲೇ ಸಿದ್ದಿಯನ್ನೂ ಮೀರಿ ಸಾಧಿಸಿದ್ದೀರಿ!

-- ಶ್ರೀ ಕಾರ್