ಇದು ನನ್ನ 100 ನೇ ಪೋಸ್ಟ್. ಇಷ್ಟು ಬರೀತಿನಿ ಅಂತ ನಾನು ಅಂದುಕೊಳ್ಳಲೆ ಇರಲಿಲ್ಲ. ನಾನಂತೂ ಓದುವುದರಲ್ಲೇ ತೃಪ್ತಳಾಗಿದ್ದೆ. ಶ್ರೀಕಾಂತ ಅವರದು ಒಂದೆ ವರಾತ ಅದು ಎಷ್ಟಂತ ಓದುತ್ತೀಯೇ?? ಏನಾದ್ರು ಬರೀ ಬರೀ ಅಂತ. ಆಗ ರಂಗಶಂಕರಕ್ಕೆ ಹೋದಾಗಲೆಲ್ಲ ಅವರ ಪೋಸ್ಟರ್ ’ಬರೀರಿ’ ನೋಡಿ ನನಗೆ ನಗು ಬರುತ್ತಿತ್ತು.
ಮೊದಲ ಬರಹದ ಶ್ರೇಯ ನನ್ನ ಆಪ್ತ ಮಿತ್ರ ಅಪಾರರಿಗೆ ಸೇರುತ್ತೆ. ನಾನು ತೀರ್ಥಹಳ್ಳಿಗೆ ಚೌತಿಗೆ ಹೋಗಿ ಬಂದ ಮೇಲೆ ನನಗೆ ಅಟ್ಟದಲ್ಲಿ ಸಿಕ್ಕಕಬ್ಬಿಣದ ಟ್ರಂಕ್ ತುಂಬ ಪುಸ್ತಕ ಗಳ ಬಗ್ಗೆ animatedly -ವಿವರಿಸುತ್ತಿದ್ದಾಗ. ಎಷ್ಟು ಸೊಗಸಾಗಿ ಹೇಳಿದ್ರಿ. ಈಗ ನನ್ನ ಜತೆ ಮಾತಾಡಿದ ಹಾಗೇ ಬರೆದು ಕಳಿಸಿದ್ರೆ ನಮ್ಮ ವಿಜಯಕರ್ನಾಟಕದ ಭಾನುವಾರದ ಸಾಪ್ತಾಹಿಕ ಪುರವಣಿ’ಮನಸಿಗೆ ಬಂದಿದ್ದು’ ಸೆಕ್ಷನ್ ನಲ್ಲಿ ಹಾಕ್ತೀನಿ ಅಂದಿದ್ದರು. ಅವರು ಹಾಗೆ ಅಂದರು ಬರೆಯುವುದು ಯಾಕೋ ಬೇಜಾರು ಅನ್ನಿಸ್ತು. ಅಂತೂ ಅವರು ಎರಡು ಮೂರು ಸಲ ನೆನಪಿಸಿದ ಮೇಲೆ ಅದನ್ನು ಬರೆದು ಕಳುಹಿಸಿ ಮರೆತೂ ಬಿಟ್ಟೆ. ಪೇಪರ್ ನಲ್ಲಿ ಸುಧನ್ವಾ ದೇರಾಜೆಯವರು ಕೊಟ್ಟ ’ಅಟ್ಟದಲ್ಲಿ ಕೆಂಪು ಇಲಿ’ ಅನ್ನುವ ಮುದ್ದಾದ title ನಲ್ಲಿ ಬಂದ ಮೇಲೆ ಶ್ರೀಕಾಂತ ಅದನ್ನು ಓದಿ ’ನನಗೆ ಹೇಳೆ ಇಲ್ಲ, ಎಷ್ಟು ಚೆನ್ನಾಗಿ ಬರೆದಿದ್ದೀಯ’ ಅಂದಾಗ ಅದೇ ನನಗೆ ಸಿಕ್ಕಿದ ಬಹು ದೊಡ್ಡ ಶಹಭಾಸಗಿರಿ.ನಮ್ಮ ಅಫಿಸ್ ನವರು, ಆತ್ಮೀಯ ಮಿತ್ರರೆಲ್ಲ ಫೋನ್ ಮಾಡಿ ಅಭಿನಂದಿಸಿದರು. ನನ್ನ ಮುದ್ದು ಸೊಸೆಯಂದಿರು ತೀರ್ಥಹಳ್ಳಿ, ಹಾಸನ ದಿಂದ ಫೋನ್ ಮಾಡಿದಾಗ ಇನ್ನಷ್ಟು ಗಾಳಿಯಲ್ಲಿ ತೇಲಾಡಿದ್ದು ನಿಜ. ಈ ಪ್ರಸಂಗದ ನಂತರ ಅಪಾರ ರಘು ನನಗೆ ಬ್ಲಾಗ್ ಆರಂಭಿಸಲು ಹೇಳಿದರು. ಮೊದಲು ಬ್ಲಾಗ್ ಗೆ ಹೆಸರು ಸೂಚಿಸಿ ಅಂದೆ!!
ನಾನು ಮಕ್ಕಳು ಕೆಲವೊಮ್ಮೆ ಪಗಡೆಯಾಡ್ತೀವಿ. ಆ ಪಗಡೆ ಕಾಯಿಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿತ್ತು. ಅದು ಹರಿದು ಹೋಯ್ತು. ಕಾಯಿಗಳು ಚಿಲ್ಲಾಪಿಲ್ಲಿಯಾಗಿ ಎಲ್ಲ್ಲೆಂದರಲ್ಲಿ ಹರಡುತ್ತದೆಂದು ಮಾಲವಿಕ ಒಂದು ಪುಟ್ಟದಾದ ಸಂಚಿ ಚೀಲವನ್ನು ಹೊಲೆದಳು. ಅದನ್ನು ನೋಡಿದ ತಕ್ಷಣ, ನನಗೆ ನಮ್ಮ ಮನೆಗೆ ’ನಾನಿ’ ಗೆ ಸಹಾಯಕಳಾದ ರಾಜೀವಿಯ ಎಲೆ ಅಡಿಕೆ ಸಂಚಿ ನೆನಪು ಬಂದು, ನನ್ನ ಬಾಲ್ಯದ ದಿನಗಳೆಲ್ಲ ನೆನಪು ಬರಲು ಶುರು ಆಯಿತು. ಅರೇ ಸಿಕ್ಕೆ ಬಿಡ್ತಲ್ಲ ನನ್ನ ಬ್ಲಾಗ್ ಗೆ ಒಂದು ಹೆಸರು ಅಂತ ಕೂಡಲೆ ಒಂದು ಬ್ಲಾಗ್ ಶುರು ಮಾಡಿದ್ದು ಅಲ್ಲದೇ ಇವತ್ತು ಅದರ 100 ನೇ ಪೋಸ್ಟ್.
ಹಿಂದಿನ ವರ್ಷ ಜುಲೈನಲ್ಲಿ ಶ್ರೀಕಾಂತ ಗೆ dengue ಆಗಿ ಅವರು ಪುನಃ ಚೇತರಿಸಿಕೊಳ್ಳುವಾಗ ನನ್ನ ಬ್ಲಾಗ್ ಬರವಣಿಗೆ almost ನಿಂತೇ ಬಿಡ್ತಿತ್ತು. ಇ-ಮೈಲ್ ನಲ್ಲಿ ಬಹಳಷ್ಟು ಓದುಗರು ಯಾಕೆ ಬರೀತಿಲ್ಲ ಅಂತೆಲ್ಲ ಕೇಳ್ತಿದ್ದರು. ಅದರಲ್ಲಿ ಮಂಗಳೂರಿನ ಬಳಿಯ ಬಂಟ್ವಾಳದ ಓದುಗರು. ಅಪಘಾತದಲ್ಲಿ ಹೆಂಡತಿ ಮಕ್ಕಳನ್ನು ಕಳೆದುಕೊಂಡದ್ದಲ್ಲದೆ, ಅವರಿಗೆ ಸೊಂಟದಿಂದ ಕೆಳಗಿನ ಭಾಗ ಪೂರ್ತಿ immobile ಆಗಿದ್ದು ತಿಳಿಸಿದ್ದರು. ಅವರಿಗೆ ನನ್ನ ಬ್ಲಾಗ್ ತುಂಬಾ ಇಷ್ಟವಾಗುತ್ತಿತಂತೆ. ದಯವಿಟ್ಟು ಬರೆಯಿರಿ, ನನ್ನ ನೋವನ್ನು ಸ್ವಲ್ಪ ಮಟ್ಟಿಗೆ ಮರೆಯಲು ಸಹಾಯವಾಗುತ್ತೆ ಅಂದಾಗ ನಾನು ಪುನ: ಬರೆಯಲು ಶುರು ಮಾಡಿದ್ದು. ಇಲ್ಲದಿದ್ದರೆ ಸುಮ್ಮನಿದ್ದು ಬಿಡುತ್ತಿದ್ದೆ. ಯಾಕೋ ಸ್ವಲ್ಪ ಸಮಯ ತುಂಬ distressed/depressed ಆಗಿದ್ದೆ, silent ಆಗಿದ್ದೆ. ಅಲ್ಲಿವರೆಗೆ ನಾನು ಜೀವನವನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲೇ ಇಲ್ಲ ಅನ್ನಿಸುತ್ತೆ. ಈಗ of course i am the same old ಮಲ್ಲಿ, ಮಲ್ಲು, ಮಾಲ್ತಿ ಅಕ್ಕ etc.. :-)
ಇವತ್ತು ರಾಷ್ಟ್ರಕವಿ ರಬೀಂದ್ರನಾಥ ಠಾಕೂರರ 150 ಜಯಂತಿ ಕೂಡ. ಅವರ ಕಥೆ(ಗೀತಾಂಜಲಿ,ಕಾಬುಲಿವಾಲ, ಗೋರಾ, ಚಾರುಲತ, ಕವನಗಳ (where the mind is without fear and the head is held high ಈಗಲೂ ನನಗೆ ಬಾಯಿಪಾಠ ಇದೆ), ನಾಟಕಗಳ ಮತ್ತು ನಮ್ಮ ರಾಷ್ಟ್ರಗೀತೆ ’ಜನ ಗಣ ಮನ’ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಚಿತ್ರಕಾರರೂ ಹೌದು ಎಂದು ಸುಮಾರು ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು ಸುಮಾರು 3000 ದಷ್ಟು ಚಿತ್ರಗಳನ್ನು ಬರೆದಿದ್ದಾರಂತೆ. ನಮ್ಮ ಸಂಸ್ಥೆ synergy to solutions (S2S, Bangalore) ಒಡಿಶಾ (Orissa) ದಲ್ಲಿರುವ ಟಾಟಾ ರಿಫ್ರಾಕ್ಟರಿಸ್ ಗೆ consultants. ಈ ವರ್ಷದ ಅವರ ಡೆಸ್ಕ್ ಟಾಪ್ ಕಾಲೆಂಡರ್ ಪೂರ್ತಿ ಟಾಗೋರರು ರಚಿಸಿದ ಚಿತ್ರ ಹಾಗೂ ಕೆಲವು ಹಳೆಯ ಫೋಟೊಗಳಿವೆ.ನನಗಿಷ್ಟವಾದ ಕೆಲವನ್ನು ನಾನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. enjoy
@ ಸುಶ್ರುತ ದೊಡ್ಡೇರಿ: ಅವಧಿಯಲ್ಲಿ ಮಾಲ್ತ್ಯಕ್ಕ ಪದೇ ಪದೇ setting ಬದಲಾಯಿಸಿ ತೊಂದರೆ ಕೊಡುತ್ತಾರೆ ಎಂದು ಬರೆದಿದ್ದೀರಿ. ಈ ಸಲ ಸುಮಾರು ದಿನಗಳಾದ ಮೇಲೆ ಹೊಸ mast head ಹಾಕ್ತಾ ಇದ್ದೀನಿ.:-)
A veiled Woman Ink & Brush
Dancing Girl pen & Ink
The Flying Dove - Ink and Brush
Five Friends - Pen & Ink
Landscape - pen& Ink
Mother & Child -Pen Ink
self potrait -Ink & Brush
The couple -Pen & Ink
Photos scanned from Desk top calender of TATA Refractories Limited, Belpar, Jharsguda Distirct, Orissa
:-)











11 comments:
ಟಾಗೂರ್ ರವರು ಚಿತ್ರಕಾರರೂ ಆಗಿದ್ದರು ಅನ್ನುವುದು ತಿಳಿದಿರಲಿಲ್ಲ.ಅಪರೂಪದ,ಅಮೂಲ್ಯವಾದ ಚಿತ್ರಗಳನ್ನು ಪರಿಚಯಿಸಿದ್ದೀರಾ..ಅಭಿನಂದನೆಗಳು.
ನಿಮ್ಮ ಬರವಣಿಗೆಯ ಬ್ಲಾಗ್ ಯಾತ್ರೆ ಮುಂದುವರೆಯಲಿ.
ಆಪ್ತವಾಗುವ ಭಾವಪೂರ್ಣ ನೂರಾರು ಬರೆಹಗಳು ಇನ್ನೂ ಮೂಡಿಬರಲಿ....
ಧನ್ಯವಾದಗಳು ವೆಂಕಟಕೃಷ್ಣ ಕೆ. ಕೆ. ಅವರೆ!!
:-)
ಮಾಲತಿ ಎಸ್.
maalatiyavare nimma blog pravesha mattu ravidranaath ra kalanaipunyateyannu pradarshisiruvudakke dhanyavaadagalu.
Congrats for 100, century,
tumbaa sogasaagide ravindrara bagegina baraha
100 ಬರಹಗಳನ್ನು ಪೂರೈಸಿದ್ದಕ್ಕಾಗಿ ಅಭಿನ೦ದನೆಗಳು.ಟಾಗೂರ್ ರವರ .ಅಪರೂಪದ ಮತ್ತು ಅತ್ಯಮೂಲ್ಯವಾದ ಚಿತ್ರಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
ಮಾಲತಿ ಅವರೆ- ವೈವಿಧ್ಯಮಯ (hits)ಬರಹಗಳನ್ನೊಳಗೊ೦ಡ ನಿಮ್ಮ ಸೆ೦ಚುರಿಗೆ ಶುಭಾಶಯಗಳು. ಡಬಲ್ ಸೆ೦ಚುರಿಯತ್ತ.. ಇನ್ನು ನಿಮ್ಮ ಗಮನ.. :) ಅಭಿನ೦ದನೆಗಳು.
ಅನ೦ತ್
ಅನಂತರಾಜ್, ಪ್ರಭಾಮಣಿ, ಗುರು ಮತ್ತು ಕಲಾವತಿಯವರೆ!!
ನಿಮ್ಮ ಶುಭಹಾರೈಕೆಗಳಿಗೆ ಧನ್ಯವಾದಗಳು
:-)
ಮಾಲತಿ ಎಸ್.
Congratulations.
Keep writing :-)
Swarna
Anthu century barisebitralla Malathi congrats. Rabindrara photogalu nijakku apoorvavagidhe.Heege bareyuttiri nimma sanchiyinda mattashtu, magadashtu nenapugalu hora barali, nammannella hhege ranjisuttirali. All the best.
Veda
Veda and Swarna
thank you
:-)
malathi S
I just love your blog. It's full of life :-)
Post a Comment