May 2, 2010

ಅನುಭವ- a strange Experience

ಸಂಜೆ walk ನಿಂದ ವಾಪಸ್ ಬರುವಾಗ ದಿನಾ ಬೇರೆ ಬೇರೆ ದಾರಿ ಬಳಸಿ ಕೊಂಡು ಮನೆಗೆ ಬರುವುದು ವಾಡಿಕೆ. ಈ ಸಲ ನಾವು ಒಂದು ಇಳಿಜಾರಾದ ಪ್ರದೇಶದಿಂದ ಕೆಳಗಿಳಿಯುತ್ತಾ ಇದ್ವಿ. ನಮ್ಮ ಎದುರಿಗೆ ಬಿಳಿ ಮುಂಡು ಹಾಕ್ಕೊಂಡ 4-5 ಮಧ್ಯವಯಸ್ಕ ಗಂಡಸರು , ಗಟ್ಟಿಯಾಗಿ ಮಾತಾಡ್ತಾ, ನಗ್ತಾ ಕೆಳಗಿಳಿಯುತ್ತ ಇದ್ದರು. ಅವರ ಮುಂದಿನಿಂದ ಕೆಲವು teenage ಹುಡುಗರು ಸಿಗರೇಟ್ ಸೇದುತ್ತ, ಹೋಗ್ತಾ ಇದ್ದರು. ಆ ಮೇಲೆ ಏನಾಯ್ತೋ ಏನೋ ಗಲಾಟೆ ಶುರು ಆಗಿ ಬಿಡ್ತು. ಆ ಹುಡುಗರು ಇವರ dress ಬಗ್ಗೆ ಏನೋ ಕುಹುಕ ಆಡಿದ್ದರು. ಗಲೀಜು ಬೈಗಳ ವಿನಿಮಯದ ನಂತರದ, ಜೋರು ಜೋರು ಗಂಟಲಿನ ಮಾತಿನ ಚಕಮಕಿ ನಡೆದು,ಕೆಲವೇ ಕ್ಷಣಗಳಲ್ಲಿ ಹೊಡೆದಾಟ ಶುರು ಆಗಿ ಬಿಡ್ತು. ಒಬ್ಬ ಹುಡುಗ, ರಸ್ತೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಗಂಡಸರ ಕಡೆಗೆ ಎಸೆದು ಬಿಟ್ಟ. ಇದನ್ನು ನೋಡಿ ಉಳಿದವರು ಕಲ್ಲು ಎಸೆಯಲಿಕ್ಕೆ ಶುರು ಮಾಡಿದರು. ಒಂದು ಕಲ್ಲು ನೇರವಾಗಿ ಒಬ್ಬರ ತಲೇಗೆ ಬಿತ್ತು. ನಾನು stop it stop it ಅಂತ ಕಿರುಚುತ್ತ ಓಡಿದೆ. ನಾನು ನಿಹಾರಿಕಾ ಅಲ್ಲಿದ್ದನ್ನು ನೋಡಿ ಗಾಯಗೊಂಡವರೊಬ್ಬರನ್ನು ಬಿಟ್ಟು ಎಲ್ಲರೂ ಚದುರಿಹೋದರು.ವಯಸ್ಕರ ಜತೆ ಇದ್ದವರೂ ಕೂಡ. ನಾವು ಅವರ ಬಳಿಗೆ ಹೋಗುವಷ್ಟರಲ್ಲಿ, ಅವರ ಬಿಳಿ ಮುಂಡು, ತುಂಬು ತೋಳಿನ ಬಿಳಿ shirt ರಕ್ತದಿಂದ ತೊಯ್ದು ತೊಪ್ಪೆಯಾಗಿದ್ದವು. ಇನ್ನೊಂದು ಕಲ್ಲು ಬಹುಶ: ಎದೆಗೆ ತಾಕಿರಬೇಕು, ಎದೆಯನ್ನೂ ಹಿಡಿದುಕೊಂಡು ಆ ವಯಸ್ಕರು ಕುಸಿದು ಬಿದ್ದರು. ನಿಹಾರಿಕಾಗೆ ’you wait here, i iwill get help' ಅಂತ ಹೇಳಿ ಆ ರಸ್ತೆ ಉದ್ದಕ್ಕೆ ಓಡಿದ್ದೆ ಓಡಿದ್ದು. ಡಾಕ್ಟರ್ sign ಇದ್ದ ಗೇಟ್ ಬಳಿ ನಿಂತು ಡಾಕ್ಟರ್, ಡಾಕ್ಟರ್ ಅಂತ ಕೂಗಿದ್ದೂ ಆಯಿತು, ಲೈಟು ಹಾಕಿರಲಿಲ್ಲ. ಯಾರೂ ಹೊರಗೆ ಬರಲಿಲ್ಲ. ನಾನು ಡಕ್ಟರ್ ಅಂತ ಕೂಗಿದ್ದು ಮಾತ್ರ , ಸಿನಿಮಾಗಳಲ್ಲಿ ತೋರಿಸುವ ಹಾಗೆ ಪ್ರತಿಧ್ವನಿಸುತ್ತ ಇತ್ತು. ಯಾರಾದರೂ ಪ್ಲೀಸ್ ಹೆಲ್ಪ್ ಮಾಡಿ ಅಂತ ಹಲುಬಿದ್ದೆ ಆಯ್ತು. ಯಾವ ಒಂದು ನರಪ್ರಾಣಿನೂ ನಮ್ಮ ಸಹಾಯಕ್ಕೆ ಬರಲಿಲ್ಲ. ಪುನ: ನಿಹಾರಿಕಳ ಬಳಿ ಬಂದು, ನನ್ನ ಬ್ಯಾಗ್ ನಿಂದ ನೀರಿನ ಬಾಟಲ್ ಹಾಗೂ ಟಿಶ್ಯೂ ಪೆಪರ ಗಳನ್ನು ಅವಳಿಗೆ ಕೊಟ್ಟು, staunch the flow (blood), will try to get help from some other place, keep him as comfortable as possible'' ಅಂತ ಹೇಳಿ ಮೈನ್ ರೋಡ ಕಡೆ ದಾವಿಸಿದೆ.

ಪುಣ್ಯಕ್ಕೆ ಗರಿಗರಿಯಾದ ಹೊಸ uniform, ಹೊಸ ಬೂಟು ಹಾಕ್ಕೊಂಡಿದ್ದ ಪೋಲಿಸಪ್ಪ ಸಿಕ್ಕಿದ. ಅವರ ಬಳಿ ಓಡಿ, ಹೀಗ್ ಹೀಗೆ ಆಗಿದೆ ಯಾರು ಸಹಯಕ್ಕೆ ಬರ್ತಾ ಇಲ್ಲ, ಅವರಿಗೆ ಪೆಟ್ಟಾಗಿದೆ ಅಂತ ನಾನು excite ಆಗಿ ಹೇಳ್ತಾ ಇದ್ದರೆ, ಅವರು ಕೂಲಾಗಿ;ನೀವು responsibility' ತೆಗೆದುಕೊಳ್ಳುವುದಾದರೆ ನಾನು complain lodge ಮಾಡ್ತೇನೆ ಅಂದ್ರು. ಅದಕ್ಕೆ ನಾನು, ಮೊದಲು ಪ್ಲೀಸ್ ಒಂದು ವೆಹಿಕಲ್ ತರಸಿ ಅವರಿಗೆ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿ ಅಂತಂದೆ. ಅವರು ಕೂಡಲೆ ಸೆಲ್ಲ್ ನಿಂದ ಪೋಲಿಸ್ ವೆಹಿಕಲ್ ಗೆ ಕರೆ ಮಾಡಿದ್ರು. ಅದು ಬರುವ ತನಕ ಅವರು ನನ್ನ details ಆದ ಹೆಸರು, ವಿಳಾಸ, ಫೋನ್ ನಂಬರ ಇತ್ಯಾದಿ ಕೇಳಿ, ನನ್ನ ಪರ್ಸ್ ನಲ್ಲಿ ಯಾವಾಗಲೂ ಇಟ್ಟುಕೊಳ್ಳುವ identity proof (voter id)ತೆಗೆಸಿಸಿ verify ಮಾಡಿಕೊಂಡ್ರು. ಅಷ್ಟರೊಳಗೆ ಪೋಲಿಸ್ ವ್ಯಾನ್ ನಲ್ಲಿ ಕೆಲವರು ಬಂದು ಆ ವಯಸ್ಕರನ್ನು ಕರೆದು ಕೊಂಡು ಹೋದರು.

ನೀವು ಪೋಲಿಸ್ ಸ್ಟೇಶನ್ ಗೆ ಬರಬೇಕಾಗುತ್ತೆ ಮ್ಯಾಡಂ ಅಂದಿದ್ದಕ್ಕೆ ಹೂಂ ಅಂತ ಹೇಳಿ ನಿಹಾಳನ್ನು ಕರೆದುಕೊಂಡು ಹೊರಟೆ. ನೋಡು ನೋಡುತ್ತಿದ್ದಂತೆ station ಬಂತು. ಅರೇ station ನಲ್ಲಿ ನೋಡಿದ್ರೆ ಯಾರೂ ಇಲ್ಲ. ’ನೀವೆ ಅವರ ಮನೆಗೆ ಹೋಗಿ ಅವರ ಮನೆಯವರಿಗೆ ತಿಳಿಸಿ ಬರುತ್ತೀರ” ಅಂತ request ಮಾಡಿದ್ರು. ಸರಿ ಅಂತ ನಾನು ನಿಹಾ ಹೊರಟ್ವಿ, ಬಸ್ಸ್ stop ನಲ್ಲಿ ಬಸ್ ಒಂದು ಬಂತು. ನಾನು ನಿಹಾ ಹತ್ತಿದ್ವಿ. conductor ಗೆ 500 ರೂ ನೋಟ್ ಕೊಟ್ಟೆ. ಅವನು ಬೈ ಲಿಕ್ಕೆ ಶುರು ಮಾಡಿದ. 10 ರೂ ಟಿಕೇಟ್ ಗೆ 500 ರೂ ಕೊಟ್ರೆ, ನಾನೆಲ್ಲಿಂದ ಚಿಲ್ಲರೆ ತರಲಿ ಅಂತ ಅವನ ದುಡ್ಡಿನ ಚೀಲ ಬಿಡಿಸಿ ತೋರಿಸಿದ. ಬಸ್ಸಿನ ಜನರೆಲ್ಲ ನನ್ನ ಕಡೆಗೆ ನೋಡ್ತಾ ಇದ್ದರಿಂದ ಮುಜುಗರ ಆಯ್ತು. ಪರ್ಸ್ ನಲ್ಲಿ ಒಂದು ರೂ coin ಬಿಟ್ಟರೆ 1000 ದ ಒಂದು ನೋಟ್, 500 ರ ಎರಡು ನೋಟ್ ಇದ್ವು. ನಿಹಾ ಅವಳ ಪರ್ಸ್ ತಂದಿರಲಿಲ್ಲ.

change ಇಲ್ಲ. ಇಳಿಯಿರಿ ಮ್ಯಾಡಂ ಅಂತ ನಮ್ಮನ್ನು ಇಳಿಸಿ ಬಿಟ್ಟ. ಬಸ್ಸ್ ನವರೆಲ್ಲ ಗಹ ಗಹಿಸಿ ನಗಲು ಪ್ರಾರಂಭಿಸಿದರು. ಅಷ್ಟರಲ್ಲಿ ಎಚ್ಚರ ಆಯ್ತು. ಮಕ್ಕಳು ಯಾವುದೋ ಸಿಡಿ ಹಾಕ್ಕೊಂಡು ಗಟ್ಟಿಯಾಗಿ ನಕ್ಕಾಗ ಎಚ್ಚರ ಆಯ್ತು. ಸಾಧಾರಾಣವಾಗಿ ನಾನು ಯಾವತ್ತೂ ಮಧ್ಯಾನ್ಹ ಮಲುಗುವುದಿಲ್ಲ. ಗೀರಡ್ಡಿ ಗೋವಿಂದರಾಜು- ಇವರು compile ಮಾಡಿದ ಸಣ್ಣ ಕಥೆಗಳ ಸಂಕಲನ ದಲ್ಲಿನ ಕತೆ ಆನಂದ ಎನ್ನುವವರು ಬರೆದ’ ರಾಧೆಯ ಕ್ಷಮೆ’ ಓದಿ ಮುಗಿಸಿ, ಆ ಕತೆಯ ಭಾಷೆಯನ್ನು , ಅದು ನನ್ನಲ್ಲಿ ಉದಯಿಸಿದ ಭಾವನೆಗಳನ್ನು,ಮೆಲುಕು ಹಾಕುತ್ತ ಒಂದು ಕ್ಷಣ ಕಣ್ಣು ಮುಚ್ಚಿದ್ದ ನೆನಪು. ಮತ್ತೆ ಈ ಕನಸು. ಎಚ್ಚರವಾದ ಮೇಲೆ ಮೈ ಮನಸ್ಸು ಎರಡು ಭಾರ. ಮಕ್ಕಳಿಗೆ ಗೋಳಿಬಜೆ ಮಾಡಿಕೊಡುತ್ತೇನೆ ಎಂದು promise ಮಾಡಿದ್ದರಿಂದ ಏಳಲೇ ಬೇಕಾಯಿತು.

ಕತೆ ತುಂಬಾ ಚೆನ್ನಾಗಿದೆ. ಕನಸಿಗೂ ಕತೆಗೂ ಯಾವುದೇ ಸಂಬಂಧವಿಲ್ಲ. ಕಥಾ ನಾಯಕ ಒಬ್ಬ ಕಲಾವಿದ. ಹಿಂದಿನ ಸಂಜೆ ಕೃಷ್ಣನಿಗೆ ಕಾದೂ ಕಾದೂ, ಸಿಟ್ಟುಕೊಂಡ ರಾಧೆಯ ಬಳಿ ಕೃಷ್ಣ ಕ್ಷಮೆ ಕೇಳುವ theme ಒಂದನ್ನು ಸುಮಾರು ದಿನದಿಂದ ಮಥಿಸಿ, ಒಂದು ಮುಂಜಾನೆ ನಾಯಕ ಚಿತ್ರ ಬರೆಯಲು studioಗೆ ಹೋಗುತ್ತಾನೆ. ಆರು ಗಂಟೆಯ ಸತತ ಪರಿಶ್ರಮದಿಂದ ನಾಯಕನಿಗೆ ಬೇಕಾದ ಹಾಗೆ ಚಿತ್ರ ಮೂಡಿ ಬರುತ್ತದೆ. ಇನ್ನೆನೂ finishing touches apply ಮಾಡುತ್ತಿದ್ದ ಹಾಗೆ, ದೇವರ ಮನೆ ಹೊಕ್ಕು ಅಲ್ಲಿದ್ದ ಅರಿಸಿನ-ಕುಂಕುಮವನ್ನು ಮೈಗೆ ಮೆತ್ತಿಕೊಂಡಂತಹ ಅವರ 2 ವರ್ಷದ ಮಗನ colourful ಅವತಾರವನ್ನು ಗಂಡನಿಗೆ, ತುಸು ಹೆಮ್ಮೆಯಿಂದಲೇ ’ನೋಡಿ, ನಿಮ್ಮನ್ನು ಮೀರಿಸುವ ಕಲಾವಿದನಾಗುತ್ತಾನೆ ಇಂವ’ ಅಂತ ತೋರಿಸಿಕೊಳ್ಳಲು ಹೆಂಡತಿ studio ಗೆ ಬರುತ್ತಾಳೆ. ಮಗನ ಪರಾಕ್ರಮ ಹೇಳಿ ಮುಗಿಸುವುದರಲ್ಲಿ, ಪುಟ್ಟ ಮಗನ ಕಾಲು , ಅಪ್ಪನ ಕೈಲ್ಲಿದ್ದ ಕುಂಚಕ್ಕೆ ತಾಗಿ, ಕುಂಚ ಅವರ ಕೈನಿಂದ ಹಾರಿ, ಅವರ ಇಡಿ ಕಲಾಕೃತಿ ಹಾಳಾಗಿ ಬಿಡುತ್ತೆ. ಕೋಪದಿಂದ ನಾಯಕ ಹೆಂಡತಿಯನ್ನು ಕೊಂಚ ಖಾರವಾಗಿಯೇ ಬೈಯುತ್ತಾನೆ, ಆಮೇಲೆ ಪಶ್ಚಾತ್ತಾಪ ಪಟ್ಟು , ಅಳುತ್ತಿದ ಅವಳನ್ನು ರಮಿಸುತ್ತ, ಅವಳ ಮುಖಭಾವಗಳನ್ನು ನೆನಪಲ್ಲಿಟ್ಟುಕೊಂಡು ಇನ್ನೊಂದು masterpiece ರಚಿಸುತ್ತಾನೆ. ಇದರಲ್ಲಿ ರಾಧೆಯ ಮುಖ ಅವನ ಹೆಂಡತಿಯ ಮುಖವನ್ನು ಹೋಲುತ್ತೆ. ಇದು ಕಥೆಯ ಸಾರಾಂಶ ಅಷ್ಟೆ. ಆ ಭಾಷೆಯ ಸೌಂದರ್ಯ ಅರಿಯಲು ಅದನ್ನು ಓದಿಯೇ ತೀರಬೇಕು.

ಕಥೆ ತುಂಬ ಸುಂದರವಾಗಿ ಮೂಡಿ ಬಂದಿದೆ.ಗಂಡ ಹೆಂಡಿರ ತುಂಟ ಸಂಭಾಷಣೆ ಯಲ್ಲಿ -ಲಾಲಿತ್ಯವಿದೆ, ಒಂದು ಆಹ್ಲಾದವಿದೆ.

ಪುಸ್ತಕದ ವಿವರ ಹೀಗಿದೆ

ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಮಾಲೆ
ವಿಚಾರ ಸಾಹಿತ್ಯ
ಸಣ್ಣ ಕಥೆಗಳ ಸಂಕಲನ- ಗಿರಡ್ಡಿ ಗೋವಿಂದರಾಜ
(ಕರ್ನಾಟಕ ಸರ್ಕಾರ 1983)
ಬೆಲೆ - Rs. 4.50- ನಾಲ್ಕು ರೂಪಾಯಿ ಐವತ್ತು ಪೈಸೆ

ಅಂದ ಹಾಗೆ ಗೋಳಿಬಜೆ - was very tasty :-) ಟೀ ಹೀರುತ್ತ ಇದನ್ನು ಬರೆದೆ. ತಲೆ ಬುಡ ಇಲ್ಲದ್ದು. ಬೈ ಬೇಡಿ please!!
thats all folks!!!!!
:-)

13 comments:

apara said...

chennagide. innu swalpa dinakke kathe bareyabahudu neevu...
~apara

nithesh said...

kanasa kathe chennaagide...

ಮನಸು said...

nanello nija andukondu bitte hahaha chennagide kanasu....aa taste tindina haage ee kade kaLsi hahah

ಸೀತಾರಾಮ. ಕೆ. / SITARAM.K said...

nice!!!!

Sushrutha Dodderi said...

enree neevu.. baree nammunna fool madlikkE nodtheera.. :x :(

ದಿವ್ಯಾ ಮಲ್ಯ ಕಾಮತ್ said...

ಬರಹ ಚೆನ್ನಾಗಿದೆ :) ಕಥೆಯ ಸಾರ ಇಷ್ಟವಾಯ್ತು... ವಿಷಯಾಂತರ ಮಾಡುವಾಗ ಹಾಗೂ ಪ್ಯಾರಾಗ್ರಾಫ್ ಗಳ ಸಂರಚನೆಯಲ್ಲಿ ಸ್ವಲ್ಪ ಜಾಗರೂಕರಾಗಿದ್ದರೆ, ನಿಮ್ಮ ಬರಹ ಇನ್ನೂ ರಸವತ್ತಾಗಿ ಮೂಡಿ ಬರುತ್ತದೆ ಎಂದು ನನ್ನ ಅನಿಸಿಕೆ.

>>.............ಜನರೆಲ್ಲ ನನ್ನ ಕಡೆಗೆ ನೋಡ್ತಾ ಇದ್ದರಿಂದ ಮುಜುಗರ ಆಯ್ತು. ಪರ್ಸ್ ನಲ್ಲಿ ಒಂದು ರೂ coin ಬಿಟ್ಟರೆ 1000 ದ ಒಂದು ನೋಟ್, 500 ರ ಎರಡು ನೋಟ್ ಇದ್ವು. ನಿಹಾ ಅವಳ ಪರ್ಸ್ ತಂದಿರಲಿಲ್ಲ.
change ಇಲ್ಲ. ಇಳಿಯಿರಿ ಮ್ಯಾಡಂ ಅಂತ ನಮ್ಮನ್ನು ಇಳಿಸಿ ಬಿಟ್ಟ. ಬಸ್ಸ್ ನವರೆಲ್ಲ ಗಹ ಗಹಿಸಿ ನಗಲು ಪ್ರಾರಂಭಿಸಿದರು. ಅಷ್ಟರಲ್ಲಿ ಎಚ್ಚರ ಆಯ್ತು.......<<

ಇಲ್ಲಿ, ಸ್ವಲ್ಪ ಗೋಜಲಾಗುತ್ತದೆ. ಹೊಸ ಪ್ಯಾರಾಗ್ರಾಫ್ ಅನ್ನು "ಅಷ್ಟರಲ್ಲಿ ಎಚ್ಚರ ಆಯ್ತು !!!" ಇಲ್ಲಿಂದ ಪ್ರಾರಂಭಿಸಬಹುದಿತ್ತು.

nenapina sanchy inda said...

Dear Divya
I appreciate your candor. Input like yours will definitely help me better my language.
I went through this once more and admit your are right. thank you
:-)
malathi S

ಜಲನಯನ said...

ನಮಸ್ಕಾರ ಮಾಲತಿ ಮೇಡಮ್ಮನವರೇ....ನಿಮ್ಮನ್ನು ಭೇಟಿಮಾದಬೇಕು..ನಮ್ಮ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಬಂದು ನಿಮ್ಮ ಅಮೂಲ್ಯ ಭಾಷಣದಿಂದ ಕಾಲೇಜು ಫಂಕ್ಷನ್ ಗೆ ಕಳೆ ಬರುತ್ತೆ,,,,ಯಾವಾಗ ಬರಲಿ ಮೇಡಂ ನಿಮ್ಮ ಭೇಟಿಗೆ....
ಹೀಗೆ ನಾನು ಕೇಳುವ ಕಾಲ ಬ್ರುತ್ತೇನೋ ಅನ್ನೋಹಾಗಿದೆ ನಿಮ್ಮ ಕಥೆಯ ಸಸ್ಪೆನ್ಸ್ ಶೈಲಿ....ಹಹಹ...
ಬೇಸ್ತು ಬಿದ್ದೆ ನಾನು...ಇದೇನಪ್ಪಾ ಶ್ರೀಕಾಂತ್ ಈ ಇಬ್ಬರನ್ನ ಎಲ್ಲಿಗೆ ಕಳುಹಿಸಿದ್ದು..ಗಲಾಟೆ ನಡೆಯೋ ಜಾಗಕ್ಕೆ...!!!
ಗಿರೆಡ್ಡಿ ಕಥೆ ಇರಲಿ..ನಿಮ್ಮ ಕಥೆ ಗಿರ್ಕಿ ಹೊಡಸ್ತು...ಸುಸ್ತು...

ಸಂದೀಪ್ ಕಾಮತ್ said...

ರಾಮ್ ಗೋಪಾಲ್ ವರ್ಮಾ ಹುಡುಕ್ತಿದ್ರು ನಿಮ್ಮನ್ನು :)

Badarinath Palavalli said...

ಮಾಲತಿಯವರೇ,

ಗಿರಡ್ಡಿ ಗೋವಿಂದರಾಜ ಒಳ್ಳೆಯ ಕಥೆಗಾರ. ಈ ಹಿಂದೆಯೂ ಇವರ ಹಲವು ಕಥೆಗಳನ್ನು ಓದಿದ್ದೇನೆ. ನೀವು ಸೂಚಿಸಿದ ಕಥಾ ಸಂಕಲನವನ್ನು ನಾನು ಖಂಡಿತ ಕೊಂಡು ಓದುತ್ತೇನೆ.

ಕನಸ್ಸನ್ನು ಬಿಡಿಸಿಟ್ಟ ನಿಮ್ಮ ಕಥನದ ಶೈಲಿ ಮನೋಜ್ಞವಾಗಿತ್ತು.

ಇನ್ನೂ ಹೆಚ್ಚಿನ ಬರವಣಿಗೆಗಳು, ನಮ್ಮನ್ನು ಓದುವಿಕೆಗೆ ಪ್ರಚೋದಿಸಲಿ.

ಅಂದಹಾಗೆ, ಸುಮ್ಮನೇ ಗೋಳಿಬಜೆ ನೀವು ಮಾತ್ರ ತಿಂದರೆ ಏನು ಚೆನ್ನ ಮೇಡಂ? ಅದನ್ನೂ ಬ್ಲಾಗಿನಲ್ಲೇ ಪಾರ್ಸಲ್ ಮಾಡ್ಬಿಡಿ.

- ಬದರಿನಾಥ ಪಲವಳ್ಳಿ

nenapina sanchy inda said...

@ Raghu (apara)
sure. thank you

@ Nitesh shenoy
dhanyavaadagaLu

@Suguna
when u come to India i will treat u to my special gOLi baje!

@Sitaram
thankyou

@Sushrutha
:-)

@Divya
already responded :-)

@Dr. Azad
hahaha. thankyou

@Sandeep kamath
tugelyaa migele cell number aashillnhave, divkaa aashille RGV ka. thanks for coming to my blog!!


@badari Bhaiyya
just type gOLibaje in google search and you will hundreds of recipes. thankyou. Giraddi story in the compilation- 'nammoorina taLavaaTi' was very nice.
take care everybody
:-)
malathi S

ಗೌತಮ್ ಹೆಗಡೆ said...

ಮಜ ಇದೆ.ತಲೆಗೆ ಹುಳ ಬಿಡೋದು ಅಂದ್ರೆ ಇದೇನಾ? :)

Anonymous said...

ಕತೆ ಕುತೂಹಲದಿಂದ ಓದಿಸಿಕೊಂಡು ಹೋಯಿತು.

ಈಗ ಟೈಪಿಸಬೇಕಾದರೆ ಓದಿಸಿಕೊಂಡು ಹೋಯಿತು ಅನ್ನುವ ಬದಲು ಓಡಿಸಿಕೊಂಡು ಹೋಯಿತು ಎಂದು ನನ್ನ ಗೂಗಲ್ ಲಿಪ್ಯಂತರ ಸಾಫ್ಟವೇರ್ ತಪ್ಪಾಗಿ ಟೈಪಿಸಿತ್ತು!

:-)

-- ಶ್ರೀ ಕಾರ್