November 5, 2026

ಮಧುರೈ - ಕೊಡೈಕನಾಲ್

 ಸ್ವಲ್ಪ ವಿಸ್ತಾರವಾಗಿ ಬರೆಯುವಾ ಅನ್ನಿಸ್ತು.

ಮಕ್ಕಳು ನನ್ನ ಹುಟ್ಟು ಹಬ್ಬ ಕೊಡೈಕನಾಲ್ - ನನಗೆ ಚಳಿ ಪ್ರದೇಶ ತುಂಬಾ ಇಷ್ಟ - ಆಚರಿಸುವಾ ಅಂದರು. ನಾನು ಈ ವರ್ಷ ಬೇಡಾ, ಮುಂದಿನ ವರ್ಷ 60 ನೆ ಹುಟ್ಟು ಹಬ್ಬ ಆವಾಗ ಎಲ್ಲಾದರೂ ಹೋಗುವಾ ಅಂತಂದೆ...ಯಾಕಂದ್ರೆ ನಿಹಾ ತುಂಬಾ ಬಿಸಿ ಮತ್ತು ಅಕ್ಕನಿಗೆ ದೀಪಾವಳಿ ಆರ್ಡರ್ ಪೂರೈಸುವ ಭರಾಟೆ...ನಿಜ ಹೇಳ ಬೇಕಂದ್ರೆ ನಾನು ಪುನಃ home body ಆಗಿದ್ದೇನೆ. ದಿನ ನಿತ್ಯದ ಸಾಮಾನು, ನನ್ನ ವಾಕಿಂಗ್ , ಬ್ಯಾಂಕ್ ಬಿಟ್ಟರೆ ಎಲ್ಲೂ ಹೋಗಿರಲಿಲ್ಲ. ನಿಹಾ 'ಅಮ್ಮ, ನನಗೂ ಬ್ರೇಕ್ ಬೇಕು...ಮೂರೇ ಮೂರು ದಿನ ಅಂದು, ಎಲ್ಲಾ ಬುಕ್ಕಿಂಗ್ ಗಿಕ್ಕಿಂಗ್ ಎಲ್ಲ ಮಾಡಿದ್ಲು. ನಾನು ಅಜಯ್ ಗೆ ಹೇಳಿಟ್ಟೆ....

ಕೊನೆಗೂ ಹೊರಟ್ವಿ...ಹೋಗುವ ತನಕ ಅಕ್ಕ ಚಾಕೊಲೇಟ್ ತಯಾರಿಸಿ ಫ್ರಿಜ್ ನಲ್ಲಿಡ್ತಾ ಇದ್ಲು...🙂














ಇಲ್ಲಿಂದ ಮೊದಲು ಮಧುರೈ ಗೆ ಹೋಗಿ ಅಲ್ಲಿ ಹಾಲ್ಟ್. ರಸ್ತೆ ಎಷ್ಟು ಚೆನ್ನಾಗಿದೆ ಅಂದ್ರೆ ನಾವು ಬ್ರೆಕ್ಫಾಸ್ಟ್ ಗೆ ನಿಲ್ಲಿಸಿದರೂ ಮಧ್ತಾಹ್ನ 2 ಕ್ಕೆ ಅಲ್ಲಿದ್ದೆವು. ಇನ್ನೂ ಬೇಗ ತಲುಪುತ್ತಿದ್ದೆವೋ ಏನೋ ಆದರೆ ನಿಹಾ ಗೆ ಡಿಂಡಿಗಲ್ ತಲಪ್ಪಾಕಟ್ಟಿ ಬಿರಿಯಾನಿ  ತಿನ್ನಬೇಕಿತ್ತು.. ಸಾಧ್ಯ ಅಕ್ಕನಿಗೆ ಖುಷ್ಕಾ ರೈಸ್ ಸಿಕ್ಕಿತು. ತುಂಬಾ ದುಡ್ಡು ತೆತ್ತು ಅರ್ಧಬರ್ದ ಊಟ.....ಉಳಿದದ್ದು ನಾವು ಕಟ್ಟಿಕೊಂಡು ಹಿದ ಸ್ನ್ಯಾಕ್ಸ್, ಸಿಹಿ ತಿಂಡಿಗಳೇ ನಮ್ಮ ಹಸಿವು ನೀಗಿಸಿದ್ದು 😁😁🤔

TTDC ನಲ್ಲಿ ರೂಮ್ ಬುಕ್ ಆಗಿದ್ಫು...ನಾವು ಬುಕ್ ಮಾಡುವ ಡ್ರೈವರ್ ಗೆ ಏನು facility ಅಂತ ಕೇಳಿದ್ದೆವು...ದೊಡ್ಡ ಹಾಲ್ ಇದೆ, ಎಲ್ಲ ಸೌಕರ್ಯ ಇದೆ ಅಂತ ಹೇಳಿದ್ದರು. ಅಲ್ಲಿ ತಲುಪಿದ ಮೇಲೆ...10 ಗಂಟೆ ನಂತರ ಅವರಿಗೆ ಹಾಲ್ ನಲ್ಲಿ ಪ್ರವೇಶ ಅಂದ್ರು...ನಾವು ದೇವಸ್ಥಾನ, kalainaar palace museum ಎಲ್ಲ ನೋಡಿ...ರಾತ್ರಿ ನಮಗೆ ಬುಕ್ಕಿಂಗ್ ನಲ್ಲೇ ಒಂದು ಊಟ, ಒಂದು breakfast ನ್ನು ಒಡಗಿಸಲಾಗಿತ್ತು. ಡ್ರೈವರ್ ಊಟ, ತಿಂದುಗೆ ನಾವು ದುಡ್ಡು ಕಟ್ಟಬೇಕು...ಆದರೆ ಮರುದಿನ ಬೆಳಿಗ್ಗೆ  ಅಜಯ್ ಗೆ ಕೇಳಿದ್ರೆ 'ಇಲ್ಲ ಅಮ್ಮ, ಯಾರದ್ದೋ ಮದುವೆ, ಹಾಲ್ ಎರಡು ಗಂಟೆಗೆ ಖಾಲಿ ಆಗುತ್ತೆ ಅಂದ್ರು, ನಾನು ಕಾರ್ ನಲ್ಲೇ ಎ.ಸಿ

ಹಾಕೊಂಡು ಆರಾಮ್ ಮಲಗಿದೆ..ನೀವು ಬೇಜಾರು ಮಾಡಿಕೋ ಬೇಡಿ ಅಂದ...ಅವರು ದಿನ ವೆಲ್ಲ ಡ್ರೈವ್ ಮಾಡುವಾಗ ಅವರಿಗೆ ಒಂದು ಬೇಸಿಕ್ ಸೌಲಭ್ಯ ವಾದರೂ ನಾವು ಕೊಡಿಸ  ಬೇಕೆಂಬುದು ನನ್ನ ಅಭಿಪ್ರಾಯ... ನಿಮ್ಮ ಅಭಿಪ್ರಾಯ ಏನು ಇದರ ಬಗ್ಗೆ?

ಮತ್ತು ರಾತ್ರಿ ಹಲವಾರು ರಾಜಕೀಯ ದವರು ಆ ಹೋಟಲ್ ಗೆ ತಂಗಲು ಬಂದು...ಕಾರ್, ಪೊಲೀಸ್, ಗಳ ಗಲಾಟೆ. ಏನೋ current governance ಬಗ್ಗೆ ಪ್ರೊಟೆಸ್ಟ್ ಅಂತೆ...ಅದರ ಜತೆಗೆ ಆ ದಿನ thevar ಜಯಂತಿ ಕೂಡ ಇದ್ದು, ನಿಹಾ ಗೆ ಹೋಗ ಬೇಕಾದ ಆರ್ಟ್ಸ್ & culture museum ಗಳಿಗೆ ರಜೆ ಘೋಷಿಸಲಾಗಿತ್ತು...

ಅಜಯ್ ನ ಐಡಿಯಾ ದಂತೆ ಧನುಷ್ಕೋಟಿಗೆ ಪ್ರಯಾಣ ನಡೆಸಿದೆವು. ತುಂಬಾ ಚೆನ್ನಾಗಿತ್ತು..ವಾತಾವರಣ, ಡ್ರೈವ್ ಹಾಗೂ scenery. ಅಜಯ್ ಗೆ ಒಂದು thanks 🙏🙏

- ಸಶೇಷ....😁😁

November 3, 2026

Dhanushkodi - land's end

From Bangalore, we halted at Madurai, enroute to kodaikanal.We visited the temple in the evening. It was very crowded and darshan was slowed down because an ex-minister was visiting. We could not see the deity, but we did see the face of the minister — they had put a light in the car that reflected only on his face, like a halo. I was quite amused by the scene and the throng of paparazzi around him. His vehicle had nine escort vehicles.
Many tourist places in Madurai were closed the following day to celebrate Thevar Jayanthi, so we had to quickly change plans and visit Dhanushkodi instead, thanks to Ajay.








what a beautiful blue  colour. They say Srilanka is just 23 minutes away by sea.  was imagining a evening ride on the train on pamban bridge.

ಚಿಕ್ಕವರಿದ್ದಾಗ ನಾವು ಹಲವಾರು ಬಾರಿ ರಾಮೇಶ್ವರ, ಪಳನಿ ಎಲ್ಲಾ ಹೋಗಿದ್ದಿದ್ದೆ. ರಾಮೇಶ್ವರಮ್ ನಿಂದ ಧನುಷಕೊಡಿ ವರೆಗೆ ಎರಡೂ ಬದಿ ಸಮುದ್ರ...ನಮಗೆಲ್ಲೂ ಮಳೆ ಸಿಗಲಿಲ್ಲ...

Madurai : stay at TTDC...

November 1, 2026

ಹೀಗೊಂದು birthday

 ನಿದ್ದೆ ಬರದೆ ಬಾಲ್ಕನಿಯಲ್ಲಿ ಕೂತು ನಮ್ಮ ಆಪಾರ್ಟ್ಮೆಂಟ್ ಎದುರಿನ ಸರ್ವಿಸ್ ರೋಡ್ ನಲ್ಲಿ ಜನರು ಪುಟ್ಟ ದೊಡ್ಡ ಮಕ್ಕಳು ಸೇರಿ  ರಾತ್ರಿ ಹನ್ನೆರಡಕ್ಕೆ ಕಾರಿನ ಬೊನೆಟ್ ಮೇಲೆ ಕೇಕ್ ಇಟ್ಟು ಕತ್ತರಿಸುವುದನ್ನು ನೋಡಿದ್ದೆ. ನಾನೇ ಹಾಗೆ ಮಾಡುತ್ತೇನೆಂದು ಭಾವಿಸಿರಲಿಲ್ಲ.




ಎಷ್ಟು ನೀಲಿ ಆಕಾಶ!!


ಮಕ್ಕಳಿಬ್ಬರೂ ಸೇರಿ ನನ್ನ ಹುಟ್ಟು ಹಬ್ಬವನ್ನು ಕೊಡೈಕನಾಲ್ ನಲ್ಲಿ ಆಚರಿಸುವುದೆಂದು ಪ್ಲಾನ್ ಮಾಡಿದ್ದರು. ಅಕ್ಕನಿಗೆ ದೀಪಾವಳಿಯ ಉಡುಗೊರೆ ತರಾರಿಸುವ ಗಡಿಬಿಡಿಯ ಮಧ್ಯೆ ಸುಂಂಯ್ಯ ಅಂತ ಗಾಡಿಯಲ್ಲಿ ಕೊಡೈಕನಾಲ್ ಗೆ ಹೋಗಿ ಬಂದ್ವಿ. ಚೆನ್ನಾಗಿತ್ತು ಚಳಿ. ನನಗೆ ಚಳಿ ಪ್ರದೇಶ ಅಂದರೆ ಇಷ್ಟ. ಹಿಮಾಚಲ ಪ್ರದೇಶ, ಉತ್ತರಾಖಂಡಕ್ಕೆ ಹೋಲಿಸಿದರೆ ಈ ಚಳಿ ಏನೂ ಇಲ್ಲ ❤️🙏

ಕೇಕ್ ಕತ್ತರಿಸುವಾಗ ಮಾತ್ರ ಛೆ ನನಾಗಿನ್ನೂ 60 ಆಗಿಲ್ಲ...ನನ್ನ 60 ನೆ ಹುಟ್ಟುಹಬ್ಬಕ್ಕೆ ಶ್ರೀಕಾಂತ್ ಇಲ್ಲವಲ್ಲ ಅಂತ ಸಿಕ್ಕಾಪಟ್ಟೆ ಗಲಿಬಿಲಿ ಆಯ್ತು...ಆದ್ರೆ ಮಕ್ಕಳ ಹುಮ್ಮಸ್ಸಿಗೆ ಬೇಜಾರು ಮಾಡಲು ಮನಸ್ಸು ಬರಲಿಲ್ಲ

Happy Birthday 59 years

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಾರಥಿ ಅಜಯ್ ಬೆಂಗಳೂರು ತಲುಪಿವ ತನಕ ರಾಜ್ಯೋತ್ಸವ ದ ಹಾಡುಗಳು ಹಾಕಿ ನಮಗೆಲ್ಲ ಕೇಳಿಸಿದರು. ಅವರು ತಕ್ಕ ಮಟ್ಟಿಗೆ ಹಾಡುತ್ತಾರೆ...🙏🙏 ನನಗೆ ನೆನಪಾಗೋದು ಒಂದು ಕವಿತೆ : 4 ಸಾಲು ಅಷ್ಟೇ ಗೊತ್ತು 🤔

 ಕನ್ನಡಕೆ ಹೋರಾಡು ಕನ್ನಡದ ಕಂದ

ಕನ್ನಡವ ಕಾಪಾಡು, ನನ್ನ ಆನಂದ

Song by my cute nieces ❤️❤️👇👇




October 28, 2026

ಡಾಲ್ಡಾ/ ಸುಮ್ನೆ ಒಂದು ಲಹರಿ

 ಮೊನ್ನೆ ನವಮಿಯ ಒಂದು ದಿನ ಮಸಾಲೆ ದೋಸೆ ಪೋಸ್ಟ್ ಹಾಕಿದ್ದೆ. ಯಾಕೋ ಡಾಲ್ಡಾ ದು ಸಿಕ್ಕಾಪಟ್ಟೆ ನೆನಪಾಗಿ ಅಳು ಬಂತು. ನಮ್ಮ ಮನೆಯಲ್ಲಿ ಎಣ್ಣೆ + ಡಾಲ್ಡಾ ಮಿಕ್ಸ್ ಹಾಕ್ತಿದ್ರು ಅಮ್ಮ ಮಸಾಲೆ ದೋಸೆಗೆ ಮಾತ್ರ. ಏನು ರುಚಿ ಅಂತೀರಾ? ಮತ್ತು ದೀಪಾವಳಿಗೆ ಸ್ವೀಟ್ಸ್ ಗೆ ಡಾಲ್ಡಾ+ತುಪ್ಪ, ಮತ್ತು ಖಾರದ ಐಟಂಸ್ ಗೆ ಪಾಮ್ ಆಯಿಲ್. ನಮ್ಮ ಬಿಲ್ಡಿಂಗ್ ನ ಹಲವಾರು ಜನ ನಾವು ಪಾಮ್ ಆಯಿಲ್ ಯುಸ್ ಮಾಡ್ತೇವೆ ಅಂತ ನಗ್ತಿದ್ರು. ಅದರಿಂದ ಮಾಡಿದ ಖಾರದ ವಸ್ತು ರುಚಿ ಮಾತ್ರ ಅಲ್ಲ ಹಲವಾರು ದಿನ ಬಾಳಿಕೆ ಬರುತ್ತಿತ್ತು. ಈಗಿನ ಎಣ್ಣೆಗಳಿಂದ ಮಾಡಿದ ಪದಾರ್ಥ ಎಷ್ಟು ದಿನ ಬಾಳಿಕೆ ಬರುತ್ತೆ ನಿಜವಾಗಿ ಹೇಳಿ.

ದೀಪಾವಳಿಗೆ ಅಮ್ಮ ಮೂರು ಬಗೆಯ ಸಿಹಿ ಎರಡು ಖಾರದ ಐಟಂ ಮಾಡುತ್ತಿದ್ದರು. ಅಲ್ಲಿ ತುಂಬಾ ಪರುಚಯವಿರುವವರು ಫರಾಳ್ ಥಾಲಿ exchange ಮಾಡುವ ಕ್ರಮ ಇತ್ತು. ಅಮ್ಮನ ಐಟಂ ಎಲ್ಲರೂ ಹೋಗಳುವವರೆ....❤️🙂

ಮತ್ತೆ ಯು.ಎಸ್ ನಲ್ಲಿರುವ ನನ್ನ ತಂಗಿ ಮಕ್ಕಳಿಗೆ ಹಾಲಿನ / ಹಾಲಿನ ಪದಾರ್ಥದ ಎಲರ್ಜಿ. ಅವರಿಗೆ ಸ್ವೀಟ್ಸ್ ಎಲ್ಲ  ಅಮ್ಮ ಡಾಲ್ಡಾ ದಲ್ಲೇ ಮಾಡಿ ಕೊಡ್ತಿದ್ರು..ಪಾಪ ರುಚಿಯಿಂದ ತಿನ್ನುತ್ತಿದ್ರು.ಡಾಲ್ಡಾ ಬಗ್ಗೆ ಓದಿ ಅವರಿಗೆ ತೆಂಗಿನ ಎಣ್ಣೆ/olive oil ಅಥವಾ ಪಾಪ (ನನ್ನ ತಂಗಿ margarine ಅಂತ ಏನೋ ತರುತ್ತಾಳೆ.) stock ಇಟ್ಕೊಂತಿದ್ದೆವು. ಬ್ರೆಡ್ ಎಲ್ಲ ಮಾಡಿದ್ರೆ (ಅದೂ ಮನೆಯಲ್ಲಿ ಮಾಡಿದ್ದು) ಅದಕ್ಕೆ ಈ margarine ಹಚ್ಚಿ ತಿನ್ನುತ್ತಾರೆ. ಈಗ ದೊಡ್ಡವರಾಗಿದ್ದರೆ, ಇಬ್ಬರೂ ಯು ಎಸ್ ನಲ್ಲಿ ಕೆಲಸಕ್ಕೂ ಸೇರಿಯಾಗಿದೆ. ಅಲ್ಲಿ ಎಲರ್ಜಿ ಯವರಿಗೆ ಹಲವಾರು ತಿಂಡಿ options ಗಳಿದ್ದಾವೆ.  oat milk, almond milk, ಏನೇನೋ ಮಿಲ್ಕ್ ಗಳಿಂದ ಕಾಪಿ /ಐಸ್ಕ್ರೀಮ್ ಎಲ್ಲ ಅವರಿಗಾಗಿ ಲಭ್ಯ...ಎಲರ್ಜಿ ಗೋಸ್ಕರ epipen ಯಾವಾಗಲೂ ಅವರ ಬಳಿ ಇರಬೇಕು. ಇಲ್ಲದಿದ್ದರೆ ಕೂಡಲೇ ವಾಂತಿ, ಲೂಸ್ motion, ಮೈಮೇಲೆ ದದ್ದು, ಗಂಟಲು ಹಿಚುಕಿದಂತಾಗಿ ಉಸಿರಾಡಲು ತೊಂದರೆ ಉಂಟಾಗಿ ಜೀವಕ್ಕೆ ಹಾನಿ ಸಭಾವಿಸುವ ಸಾಧ್ಯತೆ ಇದೆ. ನೋಡಕ್ಕೆ ಆಗಲ್ಲ. 

ಆಮೇಲೆ ತಂದೆಯ ಹೃದಯ ಸಂಬಂಧಿ ಕಾಯಿಲೆಗೆ  ಕುಸುಬಿ ಎಣ್ಣೆ ಒಳ್ಳೆಯದು ಅಂತ ಅದಕ್ಕೆ ಶಿಫ್ಟ್ ಆದ್ವಿ....ಆದರೆ ತಿಂಡಿಗಳಿಗೆ ಆ ರುಚಿ ಇರಲಿಲ್ಲ. ಮತ್ತು ಗ್ಯಾಸ್ ಕಟ್ಟೆ ಜಿಡ್ಡು...ಎಷ್ಟು ಕ್ಲೀನ್ ಮಾಡಿದ್ರೂ ಹೋಗುತ್ತಿರಲಿಲ್ಲ. ಅಮ್ಮನಿಗೆ ಒಂದು ಸಲ ಹೇಳಿದ್ದೆ 'ಅಮ್ಮ, ನಿಜವಾಗಿ ಹೃದಯಕ್ಕೆ ಒಳ್ಳೆಯದಾ? ಕಟ್ಟೆ ಗೆ ತಾಗಿದ ಜಿಡ್ಡಿ ನ ತರಹಾ ನಮ್ಮ ದೇಹದಲ್ಲೂ ಆದ್ರೆ ಅಂದಾಗ...ಒಗ್ಗರಣೆ ಹಾಕುತ್ತಿದ್ದ ಅಮ್ಮ ಬಿಟ್ಟ ಬಾಯಿ ಬಿಟ್ಟಹಾಗೆಯೇ freeze ಆಗಿ ಬಿಟ್ಟರು 😁

ಸುಮ್ಮನೆ ಬೇರೆ ಎಣ್ಣೆ ಕಂಪೆನ್8ಗಳ propaganda ಅನ್ನಿಸುತ್ತೆ ನನಗೆ. ನಮಗೇನೂ proove ಮಾಡಲು ಆಗಲ್ಲ ಹೇಗೂ..

October 25, 2026

Monetization

thank youಓದುಗರಿಗೆ ನನ್ನ ಬ್ಲಾಗ್ ಗೆ ಭೇಟಿ ನೀಡಿದ ಸಂಖ್ಯೆ 11 ಲಕ್ಷ ದಾಟಿದೆ....


ಈಗೀಗ instagram ಯು tube ಓಪನ್ ಮಾಡಿದ್ರೆ ಮೊದಲ ಪೋಸ್ಟ್ ಸಾವಿನದ್ದೇ ಇರುತ್ತದೆ...ಅದರಲ್ಲೂ ಹೆಚ್ಚು followers/ monetize ಆದ ಅಕೌಂಟ್ಗಳೇ. ಅಕ್ಕನಿಗೆ ಹೇಳಿದ್ರೆ 'ಹೋಗೆ ಅಮ್ಮ, ನೀನು ಅಂತಹ ರೀಲ್ ಅಥವಾ shorts ಅನ್ನು ಪೂರ್ತಿಯಾಗಿ ನೋಡುತ್ತಿ ಅದಕ್ಕೆ ಅಲಗೋರಿತಮ್ ಅದನ್ನೇ ತೋರಿಸುತ್ತೆ ಅಂತಾಳೆ...ಇರಬಹುದಾ? ಗೊತ್ತಿಲ್ಲ. ನೀವೇನಾದ್ರೂ notice ಮಾಡಿದ್ರಾ?

ನನ್ನ ಬ್ಲಾಗ್ ಫೆಬ್ 2024 ನಲ್ಲಿ monetize ಆಗಲು ರೆಡಿ ಆಯ್ತು. 9 ಡಾಲರ್ ಆಗಿತ್ತು. ಆದರೆ ಇಬ್ಬರು ಓದುಗರು advertise ನಿಂದ ಓದಲು ಕಿರಿ ಕಿರಿ ಆಗುತ್ತೆ ಅಂದರು. ಸರಿ ಪಡಿಸಲು
 ಟ್ರೈ ಮಾಡಿದೆ., ಆಗಲಿಲ್ಲ.  adsense ತೆಗೆದೆ ಬಿಟ್ಟೆ. ಏನು ಮಹಾ ಬರಹಗಳಿದ್ದಾವೆ ಅಂತ ದುಡ್ಡು ಪಡೀ ಬೇಕು ಅನ್ನಿಸ್ತು.

ನನ್ನ family ಗ್ರೂಪ್ ನಲ್ಲಿ ನಿನ್ನೆ 11 ಲಕ್ಷ ದಾಟಿದ್ದು  ಶೇರ್ ಮಾಡಿದಾಗ  ಒಬ್ಬರು ದುಡ್ಡು ಬರುತ್ತಾ ಅಂತ ಕೇಳಿದ್ರು...ಅದಕ್ಕೆ

ಹಾಗೆ ನನ್ನ DP ನೋಡಿ.. ಶ್ರೀಕಾಂತ್ ಕಸಿನ್ ಒಬ್ಬರು ಯಾರ ಕೆಟ್ಟ ದೃಷ್ಟಿ ಬಿತ್ತೋ ಅಂದ್ರು...ಇರಬಹುದಾ? ಏನೇನೂ ಸುಳಿವು ಕೊಡದೆ ಶ್ರೀಕಾಂತ್ ಹೋಗಿ ಬಿಟ್ರಲ್ಲ?? 😢 ನನ್ನ ಪೋಸ್ಟ್ ಓದುದವರಿಗೆಲ್ಲ ಗೊತ್ತಿರುತ್ತೆ ನಾನು intutive person ಅಂತ. ಡಾಕ್ಟರ್ ಹೋಪ್ಸ್ ಇಲ್ಲ ಅಂದಾಗ ನನ್ನ ಬೆಸ್ಟ್ friend ಜತೆ...i believe in miracles ಅಂತ ಸ್ಮೈಲಿ face ಎಮೋಜಿ ಕೂಡ ಕಳಿಸಿದ್ದೆ...ಒಂದೇ ದಿನ ಏನೆಲ್ಲ ಆಗಿ ಹೋಯ್ತು...ಹೇಗೆ react ಮಾಡಬೇಕು ಅಂತ ಗೊತ್ತಾಗಲಿಲ್ಲ...😭😭

ಹಾಗೆ ಇನ್ನೊಂದು ಆತಂಕದ ವಿಷಯ....ಶ್ರೀಕಾಂತ್ ಗೆ ಹೆಲ್ಪ್ /hopeful ಆಗಲಿ ಅಂತ ನಮಗೆ 5 ಜನ ಲೀವರ್ transplant ಆದ ಜನರ ನಂಬರ್ ಇತ್ತು. ಶ್ರೀಕಾಂತ್ ಅವರ ಜತೆ ಮಾತಾಡಲಿ ಅಂತ. ಅವರಲ್ಲಿ ಮೂವರು ಹೋಗಿ ಬಿಟ್ರು. ಇಬ್ಬರು ಕ್ರಿಟಿಕಲ್ 🤔🤔. scary ಅಲ್ವಾ? 
ಲೀವರ್ ಬಗ್ಗೆ ಎಷ್ಟು ಓದಿದೆ ಅಂದ್ರೆ ನಾನು  ಥೀಸಿಸ್ ಬರೀ ಬಹುದು. ಶ್ರೀಕಾಂತ್ cadaver transplant ಗೆ ಒಪ್ಪಿಗೆ ಕೊಟ್ಟಿದ್ರು. ನಮ್ಮ ಮನೆಯಲ್ಲಿ ಯಾರೂ match ಇರಲಿಲ್ಲ. ಆದ್ರೂ ಲೀವರ್ swap ಬಗ್ಗೆ ಓದಿ.. ಡಾಕ್ಟರ್ ಬಳಿ ಹೆದರಿ ಹೆದರಿ ' ಪ್ಲೀಸ್ ಏನೂ ತಿಳ್ಕೋಬೇಡಿ, ನಾನು ಗೂಗಲ್ ನಲ್ಲಿ swap ಬಗ್ಗೆ, ಲೀವರ್ dialysis, options ಬಗ್ಗೆ ಓದಿದೆ... ನನ್ನದು B ಪಾಸಿಟಿವ್...ಐ ಆಮ್ ರೆಡಿ ಟು swap ಅಂದಾಗ ಡಾಕ್ಟರ್ ಸಂಡೂರ್ ಅವರು...'ಯಾಕೆ ವರಿ ಮಾಡ್ತೀರಾ, ಐ ಯಾಂ ಪಾಸಿಟಿವ್....ಲೀವರ್ ಸಿಕ್ಕೇ ಸಿಗುತ್ತೆ. ಮತ್ತು ನಾವು ಯಾಕೆ ಅದರ ಬಗ್ಗೆ ಹೇಳುವುದಿಲ್ಲ ಅಂದ್ರೆ ಇಂಡಿಯಾ ದಲ್ಲಿ ಅವೆಲ್ಲ ಇನ್ನೂ ಚಾಲ್ತಿಯಲಿಲ್ಲ...ಆದ್ರೂ ಯು ಕ್ಯಾನ್ register, ನೋಡುವಾ ಅಂದ್ರು. 🙏..ಆ ದಿನ ಲೀವರ್ ಲಭ್ಯವಿದೆ ಸಂತ admit ಆಗಿದ್ದು,   ಆದರೆ ಏನೇನೋ ಆಗಿ ಬಿಡ್ತು...ನನ್ನ ಹಳೆ ಪೋಸ್ಟ್ ಗಳನ್ನು ಓದಿ.
ಅಷ್ಟೇ
🙏🙏
ನರಾತ್ರಿಯ #noonionnogarlic ಅಡುಗೆಗಳಿಗೆ ಸಿಕ್ಕಾಪಟ್ಟೆ tractiion ಸಿಕ್ಕಿದೆ. ಪುನಃ ಧನ್ಯವಾದಗಳು ಎಲ್ಲರಿಗೂ


October 23, 2026

ಒಂದು ಟೇಸ್ಟಿ ಸ್ನಾಕ್

 ನವರಾತ್ರಿಯಕ್ಕೆ ಒಂದು ದಿನ ಏನಾದರೂ ಮಜೆದಾರ್ ತಿನ್ನಬೇಕು ಅನ್ನಿಸ್ತು.

ಶ್ರೀಕಾಂತ್ ಬ್ರದರ್ ತೀರ್ಥಹಳ್ಳಿಯಿಂದ ಬರುವಾಗ ಪುಟ್ಟ ಪುಟ್ಟ ನಿಪ್ಪಟ್ಟು ಮಾಡಿಸಿ ತಂದಿದ್ದರು..ಮಾಡಿಸಿ ಅಂದ್ರೆ ಅಲ್ಲಿ ಒಬ್ಬರಿಗೆ ಹೇಳಿ ಮಾಡಿಸೋದು...ಪ್ರತಿ ಸಲ ಬರುವಾಗ ಏನಾದರೊಂದು ರುಚಿಕರ ತಿಂಡಿ ತೆಗೊಂಡು ಬರುತ್ತಾರೆ. of course ಅದರ ಜತೆ ತೋಟದಲ್ಲಿ ಬೆಳೆದ ಹಲಸನ ಕಾಯಿ, ಹಣ್ಣು, ಚಿಕ್ಕು, ದೀವಿ ಹಲಸು, ಪತ್ರೊಡೆ ಎಲೆ, ಬಸಳೆ ಸೊಪ್ಪು, ಕಳಲೇ ಹೀಗೆ ಸೀಸನ್ ನಲ್ಲಿ ಏನು ಬೆಳೆಯುತ್ತೋ ಅದು... ಒಂದು ಸಲ ಒಂದು ಬುಟ್ಟಿ ತುಂಬಾ butterfruit /ಅವೊಕಾಡೊ /avocado ತಂದಿದ್ರು. ನನಗಂತೂ ಹಬ್ಬ. ತರಹೇವಾರಿ ತಿನಿಸು ಮಾಡಿ ತಿಂದಿದ್ದೇ...🙂

ಹಾಂ ನಿಪ್ಪಟ್ಟು ಅಂದೇನಲ್ಲ? ಆ ನಿಪ್ಪಟ್ಟಿ ನಲ್ಲಿ sounf ಬಡಿಸೆಪ್ ಹಾಕಿತ್ತು. ಜೀರಿಗೆ ಬದಲಾಗಿ ತಪ್ಪಾಗಿ ಹಾಕಿದ್ರಾ ಅಥವಾ ಹೊಸ ಟೇಸ್ಟ್ ಅಂತ ಹಾಕಿದ್ರಾ ಗೊತ್ತಿಲ್ಲ. ಒಂದು ತರಹ ಮಜವಾಗಿತ್ತು.

ಈ ನಿಪ್ಪತ್ತುಗಳನ್ನು. ಚೂರು ಮಾಡಿದೆ. ಅದಕ್ಕೆ ಖರ್ಜೂರದ ಪೇಸ್ಟ್, ಕಾಲಾನಾಮಕ್, ಮೊಸರು, ಶೇವು, ಟೊಮ್ಯಾಟೋ ಮತ್ತು ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು.   ಹಾಕಿ ತಿಂದೆ. ಚೆನ್ನಾಗಿತ್ತು. believe me.  ನಿಪ್ಪಟ್ಟು.ಚಾಟ್..👍❤️🙏










October 21, 2026

ವಿಜಯದಶಮಿ : ನಿನ್ನೆ & ಇವತ್ತು

 ಪೋಹಾ ಚಟ್ನಿ & ಚನಾ ಉಸ್ಲಿ




ಸಿಂಪಲ್ ಆದ್ರೂ ಒಳ್ಳೆ ಗಟ್ಟಿ ಆಹಾರ. ಶ್ರೀಕಾಂತ್ ದು favorite.
ಒಗ್ಗರಣೆಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು. ಇದಕ್ಕೆ ಉಪ್ಪು ಬೆಲ್ಲ ಹಾಕಿ ಕೈಯಿಂದ ಚೆನ್ನಾಗಿ ನುರಿಯಿರಿ. ತಾಜಾ ತೆಂಗಿನಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತೆಳು ಅವಲಕ್ಕಿ ಬೆರೆಸಿ ಕೈನಿಂದ ಚೆನ್ನಾಗಿ ಮಿಕ್ಸ್ ಮಾಡಿ
ಚನಾ ಉಸ್ಲಿ...6-8 ಗಂಟೆ ನೆನೆಸಿದ ಕೆಂಪು ಕಡಲೆ. ಉಪ್ಪು ಹಾಕಿ ಬೇಯಿಸಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು, ಹಸಿ ಮೆಣಸು ಇಂಗು....ಇದಕೆ ಬೇಯಿಸಿದ ಕಡಲೆ ಕಾಳು ಹಾಕಿ..ಸ್ವಲ್ಪ ಬೆಲ್ಲ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸ್ವಲ್ಪ ಕಾಯಿ ತುರಿ
ಅಷ್ಟೇ...
ಅವಲಕ್ಕಿ ಚನಾ ಮಿಕ್ಸ್ ಮಾಡಿ ತಿನ್ನೋದು. ಬೇಕಿದ್ರೆ ಮೆಣಸಿನ ಕಾಯಿ ಬೋಂಡ, ಸೇವು sides ಜತೆ ಸರ್ವ್ ಮಾಡಿ
ಇದಕ್ಕೆಲ್ಲ ತೆಂಗಿನ ಎಣ್ಣೆ ಕಿ ಜೈ 🙂👌👍❤️

October 20, 2026

day 10...masale dose

 ಇವತ್ತಿಗೆ ಶ್ರೀಕಾಂತ್ ಹೋಗಿ 10 ತಿಂಗಳು. ಹಿಂದಿನ ವರ್ಷ ಸಡನ್ ಆಗಿ ನಮ್ಮ ಮಠದಲ್ಲಿ ಫಲಾಹಾರ ತಿನ್ನಬೇಕೆಂದು ಶ್ರೀಕಾಂತ್ ಗೆ  ಆಸೆ ಆಯ್ತು ಅಂತ ಸಂಜೆ ಗಾಡಿ ಬುಕ್ ಹೋದ್ವಿ. ನಾವು ತಲುಪಿದಾಗ ಅಲ್ಲಿ ದುರ್ಗಾ ನಮಸ್ಕಾರ ಹಮ್ಮಿಕೊಂಡಿದ್ದರು. ಅದು ಮುಗಿಯುವುದೇ ರಾತ್ರಿ 8 ಗಂಟೆ ಅಂದರು...ಅಷ್ಟೆಲ್ಲ ಕಾಯಲಿಕ್ಕೆ ಆಗ್ತಿರಲಿಲ್ಲ..ಯಾಕೆಂದರೆ ಹಲವಾರು ಔಷಧ ತೆಗೆದುಕೊಳ್ಳುವುದಿತ್ತು..ಹಾಗಾಗಿ ನಿರಾಸೆಯಿಂದ ವಾಪಸ್ಸು ಬಂದ್ವಿ. ಮನೆಯಲ್ಲಿ ಮಧ್ಯಾಹ್ನದ ಅಡಿಗೆ ಇತ್ತು. 😭😭.

ಇವತ್ತು ಮಸಾಲೆ ದೋಸೆ. ಆಲೂ ಭಾಜಿ ಹೀಗೆ ಮಾಡೋದು

ಎಣ್ಣೆಯಲ್ಲಿ ಸಾಸಿವೆ, ಸ್ವಲ್ಪ ಹೆಚ್ಛೇ ಜೀರಿಗೆ, ಎರಡು ಕಾಳು ಮೆಂತೆ ಕರಿಬೇವು, ಹಿಂಗು ಅರಿಸಿನ ಪುಡಿ.....ಒಗ್ಗರಣೆ ರೇಡಿಯಾದ ಮೇಲೆ ಬೇಯಿಸಿ ಪುಡಿ ಮಾಡಿಟ್ಟ ಆಲೂಗಡ್ಡೆ....ಮೇಲಿಂದ ಕೊತ್ತಂಬರಿ ಸೊಪ್ಪು. ಶುಂಠಿ ಚಟ್ನಿ....ನಿಹಾ 'ಮೋಮಿ ಯಮ್ಮಿ dosas ಅಂದ್ಲು...🙏❤️👍



ಹಿಂದಿನ ವರ್ಷ ಇದೆ ಸಮಯ ತೆಗೆದ ಫೋಟೋ 🌷🌷




October 19, 2026

Day 9 - Navami

 ನಿನ್ನೆ ಮಕ್ಕಳಿಬ್ಬರೂ ದಾಂಡಿಯಾ ಆಡುವ ಅವರ ಹಲವು ವರ್ಷದ ಆಸೆ ಪೂರೈಸಿದರು. ನಾನು ಹೋದರೆ ಫೋಟೋ ತೆಗೀತಿದ್ದೆ..

ನನ್ನ ತಮ್ಮ ಆಯುಧ ಪೂಜೆ ಇವತ್ತು ಅಂದ...ನಾನು ಬೇಗನೆ ಕಾರ್, ಸ್ಕೂಟರ್ ಎಲ್ಲ ಕ್ಲೀನಮಾಡಿ ಬಂದೆ, ಆದರೆ ನಮ್ಮ building ನವರು ನಾಳೆ ಮಾಡ್ತಾರೆ..ಹಾಗಾಗಿ ಗಾಡಿ ಪೂಜೆ ನಾಳೆಗೆ.

ಬೆಳಿಗ್ಗೆ ದೋಸೆ & ಚಟ್ನಿs

ಇವತ್ತು ಒಂದು ಸಿಂಪಲ್ ಜೀರಿಗೆ-ಕಾಳು ಮೆಣಸಿನ ಕಡಿ...ಬ್ಲಾಗ್ ನಲ್ಲಿ ಆಗಲೇ ಹಾಕಿದ್ದೀನಿ. ಬೆಳ್ಳುಳ್ಳಿ ಬದಲಿಗೆ ಜೀರಿಗೆ, ಕರಿಬೇವು ಹಿಂಗು -ತುಪ್ಪದಲ್ಲಿ ಒಗ್ಗರಣೆ ಮತ್ತು ಬೆಂಡೆಕಾಯಿ ಪಲ್ಯ. ಅಷ್ಟೇ








October 18, 2026

Day 8

 ಇವತ್ತು ಭಾನುವಾರ. ಮೇಕ್ your own breakfast ದಿನ.

ನಾನು sandwich ಮಾಡಿದೆ. ಅದರ ಜತೆ orange nuice, pomegranate juice

 ಅಕ್ಕ plain jane ಉಪ್ಪಿಟ್ಟು. ಅದಕ್ಕೆ ಕಾಳು ಮೆಣಸಿನ ಪುಡಿ ಹಾಕಿದ್ಲು.

ನಿಹಾ ಚಟ್ನಿ ಚೀಸ್ plain sandwich... ಮಧ್ಯಾನ್ಹ ದಾಲ್ ಮತ್ತು tofu... ಪೆರುಮಾಳ್ ಮುರುಗನ್ Pyre ಪುಸ್ತಕ ಓದುತ್ತಿದ್ದೇನೆ. 



ನನ್ನ ಬಾಲ್ಕನಿ 👇👇 ಕ್ಲಿಕ್ ಮಾಡಿ

breakfast on the balcony

October 17, 2026

Day 6 & 7

 sorry friends. got into a bit of cleaning my balcony mode and then watched The trap' a sries on netflix and a movie 'brother' on you tube

ಹಾಗಾಗಿ ನಿನ್ನೆ ಏನೂ ಬರೆದಿಲ್ಲ. ನಿನ್ನೆ ನಾನು ಸಿಹಿ ಕುಂಬಳಕಾಯಿ ,ಹುಳಿ ಮಾಡಿದ್ದೆ. ಈ ರೆಸಿಪಿ ನನ್ನ ಕೊಪ್ಪ friend ಉಮಾ ಅವರದ್ದು. 



ಬೇಳೆ ಬೇಯಿಸೋದು. ಕುಂಬಳಕಾಯಿ ಹೋಳು + ನುಗ್ಗೆಕಾಯಿ ಉಪ್ಪು ಹಾಕಿ ಬೇಯಿಸಿ , ಬೇಳೆ ಹೋಳು ಮಿಕ್ಸ್ ಮಾಡಿ. ಸ್ವಲ್ಪ ಕಾಯಿ ತುರಿ, ಸಾಂಬಾರ್ ಪುಡಿ, ಹುಣಸೆ ಹುಳಿ ಹಾಕಿ ರುಬ್ಬಿ. ಬೆಂದ ಪದಾರ್ಥಕ್ಕೆ ಸೇರಿಸಿ ಕುದಿ ಬರಲು ಇಡಿ. ಕರಿಬೇವು ಬೆಲ್ಲ ಹಾಕಿ ಇನ್ನಷ್ಟು ಕುದಿಸಿ , ತುಪ್ಪದಲ್ಲಿ ಜೀರಿಗೆ, ಒಣ ಮೆಣಸು ಮತ್ತು ಹಿಂಗು ಒಗ್ಗರಣೆಗೆ ಹಾಕಿ...ಒಂದು ತುತ್ತು ಹೆಚ್ಛೇ ತಿನ್ನಿ ❤️👍 no pictures

star ingredient : drumstick , curry leaves and hing






ಇವತ್ತು ಸಾಬುದಾನಾ/ಸಬ್ಬಕ್ಕಿ ಖಿಚಡಿ.

ನಾನು ಮಾಡುವ ರೀತಿ 

ಎರಡು ಗಂಟೆ ಸಾಬುದಾನಾ ನೆನೆಸಿ ಬಸಿದು ಇಡಿ

ಶೇಂಗಾ ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಸ್ವಲ್ಪ ಜಜ್ಜಿ ಇಡಿ. (coarsely pounded)

ಒಗ್ಗರಣೆಗೆ ತುಪ್ಪ, ಜೀರಿಗೆ, ಹಸಿ ಮೆಣಸಿನ ಕಾಯಿ, ಹಿಂಗು, ಶುಂಠಿ, ಉಪ್ಪು ಸಕ್ಕರೆ, ನೆನೆಸಿದ ಸಾಬುದಾನಾ. 

..ಈ ಆರ್ಡರ್...(ಕರಿಬೇವು optional, ನಾನು ಹಾಕ್ತೇನೆ.. ಚೆನ್ನಾಗಿ ಮಿಕ್ಸ್ ಮಾಡಿ

ಕೊನೆಗೆ ಶೇಂಗಾ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ. ಬೇಕಿದ್ದರೆ ಲಿಂಬೆ ರಸ ಹಾಕಬಹುದು 👍👍

ಅಷ್ಟೇ..

star ingredient : ghee, peanuts, ginger and hing


October 15, 2026

Day 5, tomato uppit/ ನಾಮಾವಳಿ

 ಇವತ್ತು ಸ್ವಲ್ಪ ಕ್ಲೀನಿಂಗ್ ಹಾಗಾಗಿ ಸಿಂಪಲ್ ಒಂದು ಟೊಮ್ಯಾಟೋ ಭಾತ್. ಏನಿಲ್ಲ ಮಾಮೂಲಿ ಬಂಸಿ ರವೆ ಉಪ್ಪಿಟ್ಟಿಗೆ ಟೊಮ್ಯಾಟೋ ಮತ್ತು ಸಾಂಬಾರ್ ಪುಡಿ ಹಾಕೋದು ಅಷ್ಟೇ




ಇಷ್ಟ ಇದ್ದಲ್ಲಿ ಇದನ್ನು ಓದಿ 👇👇

ನನ್ನ ಹೆಸರುಗಳು
ತೊಟ್ಟಿಲಿಗೆ ಹಾಕುವಾಗ ಅಂದರೆ ನಾಮಕರಣದ ದಿನ ನಮ್ಮಲ್ಲಿ ಐದು ಹೆಸರು ಇಡುವ ಸಂಪ್ರದಾಯ
ನನಗೆ ಇಟ್ಟ ಹೆಸರು

ಮಹಾಲಸಾ ನಾರಾಯಣಿ
ಮಾಲತಿ
ಮೋಹಿನಿ
ಅಂಬಾದೇವಿ
ಲಕ್ಷ್ಮಿಬಾಯಿ

birth certificate ನಲ್ಲಿ ಮಾಲತಿ
ನನ್ನ ಅಜ್ಜ malsthi -mohini,   ಪ್ರೀತಿ ಉಕ್ಕಿದಾಗ - ಮಾಲೋಟ್ಟಿ
ನನ್ನ ತಂದೆ -  ಫಾಂತ್ರಿ
ಅಮ್ಮ ಬೈದು , ಬುದ್ಫಿ ಹೇಳುವಾಗ.. ನಾನು ಹುಂ ಹುಂ ಅಂತಿದ್ದೆ ಸೋ - ಗುಗ್ಗುಮ...meaning ಗೂಬೆ 😁
ಮದುವೆ ಆದ ಮೇಲೆ ಶ್ರೀಕಾಂತ್ - QD.... ಪತ್ರಗಳಲ್ಲಿ ಇದೆ ಸಂಭೋಧನೆ ಮತ್ತು ಮೊಬೈಲ್ ಬಂದ ಮೇಲೆ ನನ್ನ ಹೆಸರನ್ನು QD ಅಂತ saveಇಸಿದ್ದರು. ಆಮೇಲೆ ಜಮದಗ್ನಿ, ದುರ್ವಾಸಮುನಿ, ಚಂದಿಚಾಮುಂಡಿ.....ಚಂದಿ ಅಂದ್ರೆ beautiful ಇನ್ ಕೊಂಕಣಿ 🤔🤔
ಶ್ರೀಕಾಂತ್ ಕಸಿನ್ ಅಣ್ಣ (who will be 100 soon) ಹಾಗೆ. ನನ್ನ best ಫ್ರೆಂಡ್ ನ ಅಮ್ಮ -  ಮಲ್ಲಮ್ಮ
ತಮ್ಮ ಪಾಂಡು - ಮಾಲ್ಡಿ, ಗಾರಿಬಾಳ್ಡಿ
ತಂಗಿ - ಮಾಲತಿ ಮಗ್ನದರ್ಶಿನಿ
ಆಫಿಸ್ ನವರು ಅಮ್ಮ, mom
ಒಂದು ಪುಟ್ಟ ಹುಡುಗ ಪ್ರೀತಮ್ ಅವನ ಹೆಸರು, ಮಾಲತಿ ಅಕ್ಕ ಅನ್ನಲಿಕ್ಕಾಗದೆ ಮಲ್ಲಿಕಾಕಾ, ಇನ್ನೊಬ್ಬ ಮಾಂಚು,
 ಸ್ಕೂಲ್ ನ ಫ್ರೆಂಡ್ - ಮಾಲಿ ಮಲ್ಲಿ, 
ಮಕ್ಕಳು - maalmomzee, ಮಾಲುಮಿ etc
ಸಾಕಾ ಇನ್ನೂ ಬೇಕಾ 😁😁
ಸುಮ್ನೆ  on a lighter note. ಯಾಕೆ ಶೇರ್ ಮಾಡಿದೆ ಅಂದ್ರೆ ಹುಲುಮಾನವರಾದ ನಮಗೆ ಇಷ್ಟೆಲ್ಲ ಹೆಸರಿರಬೇಕಾದ್ರೆ...ದೇವರಿಗೆ ಅಷ್ಟೆಲ್ಲ ಹೆಸರು ಏನು ಮಹಾ ಬಿಡಿ..ಅಲ್ವೇ??😊😊






October 14, 2026

Day - 4, ಮಸಾಲಾ ಭಾತ್





ಇವತ್ತು ನೀರುಳ್ಳಿ ಬೆಳ್ಳುಳ್ಳಿ ಇಲ್ಲದ ಪುಲಾವ್ ಅಥವಾ ರೈಸ್ ಭಾತ್ ರೆಸಿಪಿ. ಇದು ಬಾಂಬೆ / ಮುಂಬೈ ನ specialty.
ನಾನು ಮುಂಬೈ ನಲ್ಲಿ ಹುಟ್ಟಿ ಬೆಳೆದರೂ ನನಗೆ ಮರಾಠಿ ಅಡುಗೆ ವಿಧಾನಗಳು ಅಷ್ಟೊಂದು ಗೊತ್ತಿಲ್ಲ ಯಾಕೆಂದರೆ  ನಮ್ಮ ತಂದೆ ತುಂಬಾ strict... ಯಾರ ಮನೆಗೆ ಹೋಗುವಂತಿಲ್ಲ, ಯಾರನ್ನೂ ಮನೆಗೆ ಕರೆಯುವಂತಿಲ್ಲ. ಈ ಎಲ್ಲ ರೂಲ್ಸ್ ನಾನೊಬ್ಬಳೇ obey ಮಾಡೋದು....ನನ್ನ ತಮ್ಮ ತಂಗಿ ಎಲ್ಲ ಕೇಳುತ್ತಿರಲಿಲ್ಲ. ಅವರಿಗೆ ಸ್ಕೂಲ್ ನಲ್ಲೆಲ್ಲ ತುಂಬಾ ಗೆಳೆಯರು. ಮತ್ತು ನಮ್ಮದು canara bank ಆಫಿಸ್ quarters... ಆದ್ದರಿಂದ ಹೆಚ್ಚಿನವರು ಉಡುಪಿ-ಮಂಗಳೂರು ಮತ್ತು ಒಂದು ಕುಟುಂಬ ಕೇರಳದ ಕೊಂಕಣಿಯವರು ಮತ್ತು ಕೆಲ ಕನ್ನಡಿಗರು. ಒಂದೆರಡು ತಮಿಳ್ ಫಾಮಿಲಿ. ಆದ್ದರಿಂದ ಮರಾಠಿ cuisine ಗೊತ್ತಿಲ್ಲ. ಇದು ಅಮ್ಮನ ಕಸಿನ್ ಅಮ್ಮನಿಗೆ ಹೇಳಿಕೊಟ್ಟಿದ್ಫು...ಅಮ್ಮ ನನಗೆ.
ತುಂಬಾ ರುಚಿಕರವಾಗುತ್ತದೆ. ಭಾತ್ ಜತೆ ಹಾತ್ ಕೂಡ ತಿಂದು ನನ್ನನ್ನು blame ಮಾಡಬೇಡ
ಈಗ ಬೇಗ ಬೇಗ ರೆಸಿಪಿ ನೋಡುವನಾ?
ಪರಿಮಳದ ಅಕ್ಕಿ, ಕ್ಯಾರೆಟ್, ಹೂಕೋಸು, ಬೀನ್ಸ್, ಬಟಾಣಿ ತೊಂಡೆಕಾಯಿ....ಹಸಿ ರಾಜ್ಮಾ, ಲೈಮಾ ಬೀನ್ ಕೂಡ ಬಳಸಬಹುದು.
ಎಣ್ಣೆ+ತುಪ್ಪ, ಜೀರಿಗೆ,  tej patta/ದಾಲ್ಚಿನಿ ಎಲೆ(bay leaf), ಹಸಿ ಮೆಣಸಿನ ಕಾಯಿ,  ಶುಂಠಿ, ಉಪ್ಪು, ತಾಜಾ ತೆಂಗಿನ ತುರಿ, ಕೊತ್ತಂಬರಿ ಸೊಪ್ಪು...ಇಷ್ಟೇ ಬೇಕಾಗಿರೋದು
ಹಸಿ ಮೆಣಸಿನ ಕಾಯಿ + ಶುಂಠಿ ಚೆನ್ನಾಗಿ ಜಜ್ಜಿ ಇಡಿ
ಎಣ್ಣೆ ತುಪ್ಪ ಬಿಸಿ ಯಾದ ಮೇಲೆ ಜೀರಿಗೆ ಹಾಕಿ, ಪೇಸ್ಟ್ add ಮಾಡಿ, ಎಲೆ add ಮಾಡಿ,  saute.... ಹಸಿ ವಾಸನೆ ಹೋದ ಮೇಲೆ , ಹಚ್ಚಿಟ್ಟುಕೊಂಡ ತರಕಾರಿ ಬೆರೆಸಿ ಸ್ವಲ್ಪ ಉಪ್ಪು ಹಾಕಿ. ಎರಡು ನಿಮಿಷದ ಮೇಲೆ, ಎರಡು ಗಂಟೆ ನೆನೆಸಿ, ಸ್ವಚ್ಛವಾಗಿ ತೊಳೆದ ಪರಿಮಳದ ಅಕ್ಕಿ ಬೆರೆಸಿ. ಇನ್ನು ಸಲ್ಪ ಉಪ್ಪುಹಾಕಿ, ಐದು ನಿಮಿಷ ಕೈಯಾಡಿಸಿ. (ಬೇಕಾದರೆ ಅರಿಶ್ಅಇನ್ಯಆ ಪುಡಿ ಹಾಕಿ) ಡಬಲ್ ಕುದಿಯುವ ನೀರನ್ನು ಹಾಕಿ ಮುಚ್ಚಿಡಿ....ಮನೆಯೆಲ್ಲ ಘಮ ಘಮ...
ರೆಡಿಯಾದ  ಮೇಲೆ ಬಡಿಸುವ ಮುನ್ನ ಕಾಯಿತುರಿ, ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಿ
ಮೋಸರಿನೊಂದಿಗೆ ಸರ್ವ್ ಮಾಡಿ
star ingredient : bay leaf (from teerthahalli farm), cauliflower. ಶುಂಠಿ ಮತ್ತು ಹಸಿ ಮೆಣಸಿನಕಾಯಿ...ಶುಂಠಿ ತಾಜಾ ಪರಿಮಳಯುಕ್ತ ವಾಗಿರಬೇಕು
tip : if you do not like cauliflower substitute with knolkhol (ನವಿಲುಕೋಸು)
ಎಂಜಾಯ್ ❤️❤️🙏🙏




 

October 13, 2026

Day - 3 ಪೊಂಗಲ್ (ಪಾಂಡೆ)

 ಒಂದು ವರ್ಷ, ಶಾಯದ್ ಕೋವಿಡ್ ಟೈಮ್ ನ ನವರಾತ್ರಿ   ದಿನಕ್ಕೆ ಒಂದೊಂದು ಸ್ವೀಟ್ ಮಾಡಿದ್ದೆ, ಅದರಲ್ಲೂ instagram ನಲ್ಲಿ ಒಂದೆರಡು ಬೆಲ್ಲದ ಪುಡಿ/brown sugar ಬ್ರಾಂಡ್ ನವರ ಸ್ಪರ್ಧೆ ಕೂಡ ಇತ್ತು. ಅವೆಲ್ಲರ ಫೋಟೋ ತೆಗೆಯೋದೆ ಸಂಭ್ರಮ..ನನಗೆ ಕಲಾತ್ಮಕತೆ artistic abilities ಇಲ್ಲ...ಆದ್ರೂ..ಮಕ್ಕಳು ಶ್ರೀಕಾಂತ್ ಎಲ್ಲ ಮೀಸೆ ಅಡಿಯಲ್ಲೇ ನಗುತ್ತಿದ್ದರು 😁

ಇವತ್ತು ಮಿಲ್ಲೆಟ್ + whole moong ಪೊಂಗಲ್...ನನ್ನ ತಮ್ಮ ಪಾಂಡುರಂಗ...ಅಮ್ಮನಿಗೆ ಅವನ ಮೇಲೆ ಪ್ರೀತಿ ಉಕ್ಕಿದಾಗ 'ಪಾಂಡೆ'ssss ಅಂತ ಕೂಗುತ್ತಿದ್ದರು...ಹಾಗಾಗಿ ಪೊಂಗಲ್ ಮಾಡಿದಾಗಳೆಲ್ಲ ಅದು ಪೊಂಗಲ್ ಪಾಂಡೆ (ಮಂಗಲ್ ಪಾಂಡೆ ಎಲ್ಲರಿಗೂ ಗೊತ್ತಲ್ಲ?) food, fun & pun

ಬೆಳಿಗ್ಗೆ ತಿಂಡಿಗೆ ಮಾಡೋದಿದ್ರೆ...

ಹಿಂದಿನ ದಿನ ರಾತ್ರಿ

ಒಂದು ಹಿಡಿ ಇಡೀ ಹೆಸರು ಕಾಳು (whole moong)ನೀರಲ್ಲಿ ನೆನೆ ಹಾಕಿ, 2 ಹಿಡಿ  ಮಿಲ್ಲೆಟ್ ಅನ್ನು ಸ್ವಲ್ಪ ಹುರಿದು , ಅದು ತಣ್ಣಗಾದ ಮೇಲೆ ನೀರಲ್ಲಿ ನೆನೆಸಿಡಿ.

ಬೆಳಿಗ್ಗೆ ಅವನ್ನು ಚೆನ್ನಾಗಿ ತೊಳೆದು, ಮೂರು ಗ್ಲಾಸ್ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ



ಒಂದ್ರಾಶಿ ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಸ್ವಲ್ಪ ಜಜ್ಜಿದ ಕಾಳು ಮೆಣಸು,ಹಿಂಗು,  ಗೇರು ಬೀಜ ಹಾಕಿ. ಒಗ್ಗರಣೆ ರೆಡಿ ಯಾದ ಮೇಲೆ ಇದಕ್ಕೆ ಅರಿಶಿನ ಪುಡಿ ಹಾಕಿ, ಕೈಯಾಡಿಸಿ (ಅಂದರೆ bye ಅಲ್ಲ, ಬೈಬೇಡಿ ಪ್ಲೀಸ್) ಬೆಂದ ಕಾಳು ಮಿಲ್ಲೆಟ್ ಮಿಶ್ರಣ ಬೆರೆಸಿ. ಬೇಕಿದ್ದಲ್ಲಿ ನೀರು ಬೆರೆಸಿ...ಬೇಯುತ್ತಿದ್ದಾಗ ಕರಿಬೇವು ಹಾಕಿ. ಉಪ್ಪು, ಬೆಲ್ಲ ಹಾಕಿ. ಬಿಸಿ ಬಿಸಿ ಇದ್ದಾಗಲೇ ಗುಳುಂ ಮಾಡಿ. ಇದಕ್ಕೆ  ಮೊಸರು +ಟೊಮೆಟೊ + ಕೊತ್ತಂಬರಿ ಸೊಪ್ಪು +ಹುರಿದ ಜೀರಿಗೆ ಪುಡಿಯ ಸಲಾಡ್ ಮಾಡಬಹುದು. ಹಸಿ ಮೆಣಸಿನಕಾಯಿ ಯ ಅವಶ್ಯಕತೆ ಇಲ್ಲ. very comforting to the gut

star ingredient : cracked black pepper (ತೀರ್ಥಹಳ್ಳಿಯ ನನ್ನ ಮುದ್ದು ಸೊಸೆ ಕೊಟ್ಟಿದ್ದು), hing,  curry leaves಼

enjoy ❤️❤️🙏🙏


October 12, 2026

Day 2

 ಹಿಂದಿನ ವರ್ಷ ನವರಾತ್ರಿ ಸಮಯ ಹಲವಾರು ಬಾರಿ ಆಸ್ಪತ್ರೆಗೆ ಭೇಟಿ ನೀಡುವಂತಾಯ್ತು. I still feel a deep rooted regret, a restlessness....ಹೀಗಾಯ್ತಲ್ಲ ಅಂತ..ಸಮಯ ಉರಳುತ್ತಾ ಇದೆ

ಸ್ಟಫ್ಡ್ ಪರಾಠಾ

ಇವತ್ತು ರವೆ ರೊಟ್ಟಿ ಮಾಡಿದ್ದೆ. ಸದಕಾ ರವೆ ದು. ಬೆಳಿಗ್ಗೆ ಎದ್ದ ಕೂಡಲೇ ರವೆಗೆ  ನೀರು, ಮೊಸರು ಬೆರೆಸಿ, ವಾಕಿಂಗ್ ಹೋದೆ. ಬರುವಷ್ಟರಲ್ಲಿ ಅದು ಚೆನ್ನಾಗಿ ನೆನೆದಿತ್ತು. ಇದಕ್ಕೆ ಹಸಿ ಮೆಣಸು, ಹಸಿ ಶುಂಠಿ ಉಪು ಜಜ್ಜಿ ಹಾಕಿದೆ....ಉಪ್ಪು ಗೋಕರ್ಣದ ಕಲ್ಲುಪ್ಪು.. ಒಂದು ಟೇಬಲ್ ಚಮಚ ತಾಜಾ ತೆಂಗಿನ ತುರಿ, ಬೆಲ್ಲ...ಕಳಿತ ಬಾಳೆ ಹಣ್ಣು ಇದ್ದರೆ ಅದನ್ನು ಮ್ಯಾಶ್ ಮಾಡಿ ಹಿಟ್ಟಿಗೆ ಬೆರೆಸ ಬಹುದು...ಚೆನ್ನಾಗಿ  ಮಿಶ್ರ ಮಾಡಿ ಒಂದು ಹತ್ತು ನಿಮಿಷ ಪಕ್ಕಕ್ಕಿಡಿ. ಆಮೇಲೆ ಕಾವಲಿ ಮೇಲೆ ತಟ್ಟಿ. ನಾನು ಬೇಯಿಸಲು ಎಣ್ಣೆ+ತುಪ್ಪದ ಮಿಶ್ರಣ ಬಳಸುತ್ತೇನೆ. salted butter ನೊಂದಿಗೆ ಸೇವಿಸಿ..

ಅಷ್ಟೇ...ಸಿಂಪ್ ಸಿಂಪಲ್...

tip : ರವೆ, ನೀರು , ಮೊಸರು ಚೆನ್ನಾಗಿ ಕೂಡ ಬರದಿದ್ದಲ್ಲಿ ಸ್ವಲ್ಪ ಗೋದಿ ಹಿಟ್ಟು ಅಥವಾ ಅಕ್ಕಿ ಹಿಟ್ಟು ಬೆರೆಸಬಹುದು. ಹಾಗೆ ಇದಕ್ಕೆ ತುರಿದ ಕ್ಯಾರೆಟ್, ಸೌತೆ  ಕಾಯಿ ಕೂಡ ಬೆರೆಸಬಹುದು 🙏🙏❤️❤️👍👍




VIP flavoring agent : ginger

October 11, 2026

no onion no garlic -1 ಮಸಾಲಾ ಪೂರಿ

 The Magic of Cooking Without Onion and Garlic (series of food will be shared here...for want of something to do 🤔🙂)

poori recipe is already here...try 'search)


Our Indian spices are so aromatic that we can cook the tastiest dishes even without onion and garlic. Yes, it is Navratri and I see many people eating satvik food. My mom has been following it too for the past few years, and I find myself sharing a lot of recipes with her now.

Before my wedding, in Mumbai, our biggest food expense was — believe it or not — onions! And then my wedding into a household where there was no use of onion and garlic at all made me realise that food can be absolutely tasty without them. Amma was a bit concerned, saying "How can a Konkani live without onion and garlic?" 😁😁

Masala poori is one such recipe which really does not need any sides. 

Malavika had got a free pack of cold-pressed mustard oil and we just love it. I have used it in the bhaji — the side dish.

My quick no onion-garlic tomato bhaji:
Finely chop tomatoes, green chillies and coriander leaves. Heat mustard oil. Add jeera, curry leaves, hing, green chillies, tomatoes, salt, chilli powder... one by one, in the said order. Add finely mashed potatoes. garnish with coriander leavex Not much time required either — and the taste is so comforting.



Happy Navaratri days to all ❤️❤️🙏🙏

October 6, 2026

ಮಲಯಾಳಂ ಸಿನಿಮಾ

 ನಾನು ಇತ್ತೀಚೀಗೆ ನೋಡಿ ಇಷ್ಟ ಪಟ್ಟ ಸಿನಿಮಾ 'ತೊಡರುಮ್' ತುಡಕ್ಕುಮ್ ಮತ್ತು ಬಾಲನ್ - the boy

ತಂಗಿ ನನಗೆ ಒಳ್ಳೆಯ ಸಿನಿಮಾ ಆದ್ರೆ ನನಗೂ ಅದರ ಹೆಸರು ಕಳುಹಿಸು ಎನ್ನುತ್ತಾಳೆ. ನೋಡಿ ದ ಕೂಡಲೇ ಅದರ ಹೆಸರು text ಮಾಡಿ  ಕಳಿಸೋದು ರೂಢಿ. ನಿನ್ನೆ  ನಾನು ನೋಡಿದ ಬಾಲನ್ ಸಿನಿಮಾ ಹೆಸರು ತಪ್ಪಿ  meta ಗೆ ಹೋಯ್ತು...ಅದು ಕೂಡಲೇ ನಿನಗೆ 8ಷ್ಟವಾಗಿದೆ ಅನ್ನಿಸುತ್ತೆ ಅಂತ ಆ genre ನ ಇನ್ನಷ್ಟು ಸಿನಿಮಾ ಗಳ   ಪಟ್ಟಿ ಕಳಿಸಿ......👇👇 ಹೀಗಿತ್ತು ನಮ್ಮ ಆಂಗ್ಲೋಮಲಯಾಳಂ ಸಂಭಾಷಣೆ...😁😁

ಎಷ್ಟೋ ಹೊತ್ತು ನಗ್ತಾ ಇದ್ದೆ ❤️🙏

#funwithmeta

ಅಂದಾಗ ಹಾಗೆ ನಾನು ನೋಡಿ ಇಷ್ಟ್ಟಪಟ್ಟ ಸಿನಿಮಾಗಳ ಪಟ್ಟಿಯನ್ನೇ ಅದೂ suggest ಮಾಡಿದ್ದು 😁😁

October 1, 2026

watermelon

 ಇವತ್ತು ಕೆಲವು grocery shopping ಇತ್ತು. reliance smart bazaar ಗೆ ಹೋಗಿದ್ವಿ.

ಮೂರ್ನಾಲ್ಕು ಹೆಣ್ಣುಮಕ್ಕಳು.. young adults...

akka helping them choose a watermelon 

'excuse me, can you help us....ಅಂತ ನನಗೆ ಅಕ್ಕನಿಗೆ ಕೇಳಿದ್ರು...

ಪ್ರಶ್ನಾರ್ಥಕವಾಗಿ ನೋಡಿದೆ...

we need help in buying a watermelon ಅಂದ್ರು...ನಾನು ಅಕ್ಕ ಮುಖ ಮುಖ ನೋಡಿಕೊಂಡ್ವಿ... ಆ ಮೇಲೆ ಅಕ್ಕ ನನಗೆ 'do.you know how?  ಅಂತ ನನಗೆ ಕೇಳಿದ್ಲು

ನಾನು :  yes tap it and if it makes a hollow drum sound..you are good to go ಅಂದೆ 😁😁

ಹಿಂದಿನ ತಿಂಗಳು ನಿಹಾ ಜತೆಗೆ ಇದೆ ಕಡೆ  ಹೋಗಿದ್ವಿ...ಅವಳಿಗೆ ಏನೋ ಬೇಕಿತ್ತು....ಆಗ ಹಿಂದಿ ಮಾತನಾಡುವ ಎರಡು  ಹುಡುಗರು ಹೀಗೇ ಕೇಳಿದ್ರು...ಅವರಿಗೂ ಹಾಗೆ ಅಂದಿದ್ದೆ...ಅಂತ ಅಕ್ಕನಿಗೆ  ಹೇಳಿದೆ

ನಿಜ ಹೇಳಬೇಕಂದ್ರೆ ಈ tap ಮಾಡುವ technique  ಹಲಸಿನ ಹಣ್ಣು ಪಕ್ವವಾಗಿದೆಯಾ ಅಂತ ನೋಡಕ್ಕೆ... 😁😁ನನಗೆ ಇವೆಲ್ಲ ಗೊತ್ತಿಲ್ಲ....ತರಕಾರಿ ಹಣ್ಣುಗಳ department ಶ್ರೀಕಾಂತ್ ದ್ದು ಆಗಿತ್ತು...ಅದರಲ್ಲಿ ಪಪಾಯಾ,  ಅನಾನಸ್, ಮಾವಿನ ಹಣ್ಣು ಕಟ್ ಮಾಡುವ ಕೆಲಸ ಅವರದ್ದು....😭

cuttimg papaya after many years😭

ಅಕ್ಕ ಆ ಹುಡುಗಿಯರಿಗೆ ಒಂದು ಕಲ್ಲಂಗಡಿ ಹಣ್ಣು ಹುಡುಕಿ  ಕೊಟ್ಟಳು.. ಮುದ್ದು ಮುದ್ದಾಗಿ ನಕ್ಕು ಥಾಂಕ್ಸ್ ಹೇಳಿ ಹೋದರು 

September 24, 2026

ತೌಡು/ bran


 ನೆನಪಿನ ಸಂಚಿಯಿಂದ ತೆಗೆದ ಹಳೆ ನೆನಪು


ಮೊನ್ನೆ ಒಂದು ಜಾಹಿರಾತು ನೋಡಿದೆ. ರಾಹುಲ್ ದ್ರಾವಿಡ್ rice bran ಎಣ್ಣೆಯನ್ನು endorse ಮಾಡುತ್ತಿದ್ದರು.
ಅಜ್ಜ ಯಾವಾಗಲೋ ಹೇಳಿದ ನಾನು ಪುನಃ ಪುನಃ ಫರ್ಮಾಯಿಶ್ ಮಾಡುತ್ತಿದ್ದ ಕತೆ.
ಒಂದು ಸಲ ಒಬ್ಬ ರಾಜ ತನ್ನ ಸೈನಿಕ ತುಕಡಿಯಿಂದ ಬೇರ್ಪಡುತ್ತಾನೆ. ದಾರಿ ತಪ್ಪಿ ಅಲೆದಾಡಿ, ಸುಸ್ತಾದಾಗ ಆತನಿಗೆ ಒಂದು ಗುಡಿ ಕಾಣಿಸುತ್ತದೆ. ರಾತ್ರಿ ಅಲ್ಲೇ ವಿರಮಿಸುವುದು ಅಂತ ಅಲ್ಲಿ ಪವಡಿಸುತ್ತಾನೆ. ದೇವಸ್ಥಾನ ದ ಅರ್ಚಕರು ದೀಪ ಹಚ್ಚಿ ಇನ್ನೇನು ತೆರಳುವುದಿದ್ದರು. ರಾಜನಿಗೆ ರಾತ್ರಿ ಗೆ  ಅಲ್ಲಿರಲು ಗೋಣಿ ತಾಟು ಮುಂತಾದ್ದೆಲ್ಲ ಹಾಸಿ , ಮನೆಗೆ ತೆರಳಬೇಕು ಅನ್ನುವಷ್ಟರಲ್ಲಿ, ರಾಜ ತನಗೆ ಅಸಾಧ್ಯ ಹಸಿವು, ಏನಾದರೂ ತಿನ್ನಲು ಸಿಗುವುದೇ ಅಂತ ಕೇಳಿದ.  ಆ ಪುಟ್ಟ ಗುಡಿಯಲ್ಲಿ ದೀಪ ಹಚ್ಚಲು ಮಾತ್ರ ಅನುಕೂಲವಿತ್ತು.  ಪುರೋಹಿತ ಸ್ವಲ್ಪ ಆಲೋಚನೆ ಮಾಡಿ,  ಹೆದರುತ್ತಾ 'ಖಾವಂದರಿಗೆ ಆಕ್ಷೇಪಣೆ ಇಲ್ಲದಿದ್ದರೆ...ಕುದುರೆಗಳುಗೆ ತಿನ್ನಲು ಇಟ್ಟ ತೌಡು ಇದೆ...ದೇವರ ದೀಪದ ಎಣ್ಣೆ ಉಪಯೋಗಿಸಿ ರೊಟ್ಟಿ ಮಾಡ ಕೊಡಬಹುದು ಎಂದ...ರಾಜ ತನಗೇನೂ ಅಭ್ಯಂತರ ಇಲ್ಲವೆಂದ...ಪುರೋಹಿತ ಗುಡಿ ಪಕ್ಕದಲ್ಲಿ ಬೆಂಕಿ ಹಚ್ಚಿ ರೊಟ್ಟಿ ತಟ್ಟಿ ಕೊಟ್ಟ. ರಾಜ ಅದನ್ನು ಚಪ್ಪರಿಸಿ ತಿಂದ.. ಹಾಕಿಕೊಂಡ ಮುತ್ತಿನ ಸರದ ಭಕ್ಷೀಸ್ ಕೊಟ್ಟ. ಆಮೇಲೆ ನಾನು ತೌಡು ತಿಂದದ್ದು ಯಾರಿಗೂ ಗೊತ್ತಾಗಬಾರದು ಎಂದ...






ಇತ್ತ ಪುರೋಹಿತನಿಗೆ ಆ ಗುಟ್ಟು ಹೊಟ್ಟೆಯಲ್ಲಿಟ್ಟುಕೊಳ್ಳಲಾಗಲಿಲ್ಲ...ಬೇರೆ ಮನುಷ್ಯರಿಗೆ ಹೇಳಿದರೆ ಅದು ಗುಟ್ಟಾಗಿ ಇರಲೊಲ್ಲದು ಅಂತ...ಗುಡಿಯ ಬಳಿ ಒಂದು ಗುಂಡಿ ತೋಡಿ ಅದರಲ್ಲಿ 'ರಾಜಾನ್ ತೌಡು ತಿನ್ನನ್ (ಯಾವ ಭಾಷೆ ಅಂತ ಕೇಳಬೇಡಿ..ನಾನೂ ಅಜ್ಜನಿಗೆ ಕೇಳಿಲ್ಲ 😁😁) ಅಂತ ಉಸುರಿದ, ಅದರ ಮೇಲೆ ಮಣ್ಣು ಸುಮತಟ್ಟಾಗಿಸಿ ಅದರ ಮೇಲೆ ಒಂದು ಪುಟ್ಟ ಗಿಡ ನೆಟ್ಟು ಮನೆಗೆ ಹೋದ.
ಗಿಡ ದೊಡ್ಡದಾಗಿ ಮರವಾಯ್ತು....ಜೋರು ಗಾಳಿ ಬೀಸಿದಾಗಲೆಲ್ಲ ಅದು 'ರಾಜಾನ್ ತೌಡು ತಿನ್ನನ್- ರಾಜಾನ್ ತೌಡು ತಿನ್ನನ್' ಅನ್ನುವ ಸದ್ದು ಹೊರಡಿಸಲಾರಂಭಿಸಿತು.....ರಾಜನು ಪುನಃ ಒಂದು ಸಲ ಆ ಗುಡಿಗೆ ಒಬ್ಬನೇ ಭೇಟಿ ಇತ್ತ.....ಮರ ಅವನ ಗುಟ್ಟು ರಟ್ಟು ಮಾಡುವುದನ್ನು ಕೇಳಿ ಸಿಟ್ಟಿಗೆದ್ದ. ಅದನ್ನು ಕತ್ತರಿಸಿ ಹಾಕಿದ.
ಅದೇ ದಾರಿಯಾಗಿ ಹೋಗುತ್ತಿದ್ದ ವಾದ್ಯಗಳನ್ನು ತಯಾರಿಸುವವನು ಆ ಮರದ ತುಂಡುಗಳನ್ನು ನೋಡಿ, ಚೆನ್ನಾಗಿವೆ ಅಂದು ಕೊಂಡು ಅದರಿಂದ, ತಬಲಾ, ಮೃದಂಗ, ಕೊಳಲು ಮುಂತಾದವುಗಳನ್ನು ಮಾಡಿ ಮಾರಿದ. ಅದನ್ನು ಕೊಂಡು ಹೋದ ಜನರು, ಆ ವಾದ್ಯ ಉಪಯೋಗಿಸುವಾಗ ಅವು 'ರಾಜಾನ್ ತೌಡು ತಿನ್ನನ್' ಶಬ್ದ ಹೊರಡಿಸಿ ದೇಶವಾಸಿಗಳಿಗೆಲ್ಲ ರಾಜಾ ತೌಡು ತಿಂದದ್ದು ಗೊತ್ತಾಯ್ತು 😁😁
ಈಗ ಇದ್ದಿದ್ದರೆ rice bran ಒಳ್ಳೆಯದು ಅಂತ ಹೆಮ್ಮೆಯಿಂದ ಹೇಳುತ್ತಿದ್ದರೇನೋ...ಆವಾಗ ಅದು ದನ, ಕುದುರೆಗಳಿಗೆ ಮೇವಾಗಿತ್ತು
#ricebranoil 🙏🙏
ತೌಡು =  husk/bran superfood
AI generated picture from meta 🙏🙏

September 22, 2026

creativity

 ಒಂದು ತರಹ ಚೆನ್ನಾಗಿದೆ ಅಲ್ವಾ ಈ advertisement. 👍




ಆದ್ರೆ 1969 ನಲ್ಲಿ ಹುಟ್ಟಿದವರಿಗೆ AMUL ಎ ಬಟರ್ ಆಫ್ ಇಂಡಿಯಾ...😁.  ಪೇಟೆಯಲ್ಲಿ ಸಿಗುವ ಎಷ್ಟೆಲ್ಲ variety ಬೆಣ್ಣೆಗಳೇ ಇರಲಿ, ಮನೆಯಲ್ಲೇ ಮಜ್ಜಿಗೆ ಕಡೆದು ಮಾಡಿದ ಬೆಣ್ಣೆ ಬಿಟ್ಟರೆ...ಅದು ಬಿಟ್ಟರೆ ನನ್ನ ಆಯ್ಕೆ ಅಮುಲ್ ಬಟ್ಟರ್...

ನೀವೇನಂತೀರಾ?

ಆ day in my life

September 14, 2026

ಗಣೇಶ 2026

 ಹಿಂದಿನ ವರ್ಷ ಶ್ರೀಕಾಂತ್ ಇದ್ರು...ಈ ವರ್ಷ ಇಲ್ಲ 😭😭😧🙏

ಚಿತ್ರಗಳು ಲೋಡ್ ಆಗ್ತಿಲ್ಲ, ಹಾಗಾಗಿ ವಿಡಿಯೋ ನೋಡಿ

ganesh chaturthi 2026

ಶನಿವಾರ ಬೆಳ್ ಬೆಳಿಗ್ಗೆ ನಾವು kayak ಮಾಡಲು ಹೊಸಕೋಟೆಗೆ ಹೋಗಿದ್ದೆವು. ಎಷ್ಟು ಚೆನ್ನಾಗಿತ್ತು ಅಲ್ಲಿ ವಾತಾವರಣ..cool ಆಗಿತ್ತು. ಮಾಲವಿಕಾ ಮತ್ತು ಆಕೆಯ ಪರಿಚಯದ ಹುಡುಗಿ,  ಕಯಾಕಿಂಗ್ ಮಾಡ್ತಿದ್ರೆ, ನಾನು ನಿಹಾ- , ಹಿಂದಿನ ಸೋಮವಾರ ಆಫಿಸ್ ವತಿಯಿಂದ ಔಟಿಂಗ್ ಇತ್ತು, ಅಲ್ಲಿ team building activity ಮಾಡುತ್ತಿದ್ದಾಗ, ಯಾರದೋ ಕಾಲು ತಾಗಿ, trip ಆಗಿ ಬಿದ್ದು, ಕೈ fracture ಮಾಡಿಕೊಂಡಿದ್ದಾಳೆ- ಅಲ್ಲಿ ವಾಕ್ ಹೋದೆವು..ಅಲ್ಲಿ ಹಲವಾರು ಹೂ ಗಳ ತೋಟಗಳಿವೆ, harvest ಮಾಡ್ತಾ ಇದ್ರು...
ಅದರ ವಿಡಿಯೊ 👇👇

kayaking / sports. 



September 11, 2026

on a lighter note Meta AI

 ಸುಮ್ನೆ ಟೈಮ್ ಪಾಸ್...

ಪಾಸ್ ಮಾಡ್ಲಿಕ್ಕೆ ಟೈಮ್ ಇದೆಯಾ ಅಂದ್ರೆ ಖಂಡಿತ ಹೌದು! ನಿಹಾ ಊಟ ತೆಗೆದುಕೊಂಡು ಹೋಗ್ತಾಳೆ ಅಂದಿದ್ದೆ...7.45 ಗೆ ಅವಳು ಮನೆ ಬಿಡ ಬೇಕು...ಅಷ್ಟರಲ್ಲಿ ನನ್ನ ಬ್ರೆಕ್ಫಾಸ್ಟ್ ಲಂಚ್ ಎರಡೂ ರೆಡಿ...ಎಷ್ಟೇ ನಿಧಾನಕ್ಕೆ ಕೆಲಸ ಮಾಡಿದ್ರೂ 11.00 ಗಂಟೆಗೆಲ್ಲ ನಾನು ಫ್ರೀ 😁. ಉಪ್ಪಿಟ್ಟಿ ಅವಲಕ್ಕಿ ಮಾಡಿದಾಗ ಮನೆಯ ಹೆಚ್ಚುವರಿ ಕ್ಲೀನಿಂಗ...ಅಂದ್ರೆ ಫ್ಯಾನ್ ಒರೆಸೋದು, ಮನೆ ಇಡೀ ಧೂಳು ಹೊಡೆಯೋದು ಬೆಡ್ ಶೀಟ್ಸ್, ಪಿಲ್ಲೋ ಕವರ್ ತೆಗೆದು wash ಗೆ ಹಾಕೋದು.. etc etc. ಶ್ರೀಕಾಂತ ಆಫಿಸ್ ನವರು ನೋಡಿದ್ರೆ ಅಫಿಸ್ ಗೆ ಬಂದು ಬಿಡಿ ಅನ್ನುತ್ತಾರೆನೋ!! 🤫

ಸರಿ ಟೈಮ್.ಪಾಸ್ ಅಂದೇನಲ್ಲ...

ನನಗೆ ಚಿಕ್ಕವಳಿರುವಾಗ ಹೆಚ್ಚಿನ ಜನರು  ಸಿನಿಮಾ  ತಾರೆ ಸಾಯಿರಾ ಬಾನೋ ಅವರನ್ನು ಹೋಲುತ್ತೇನೆಂದು , ತೀರ್ಥಹಳ್ಳಿಯಲ್ಲಿ ಕೆಲವರು ಮೀನಾಕ್ಷಿ ಶೇಷಾದ್ರಿ ಯವರನ್ನು ಹೋಲುತ್ತೇನೆಂದು ಹೇಳುವರರು ಇದ್ದರು.

ಒಂದು selfie ತೆಗೆದು make me look like saira banu of yesteryears ಅಂತ ಕೊಟ್ಟೆ...ನಾನು ಧರಿಸಿದ ಚೂಡಿದಾರ್ ಟಾಪ್  ನ pattern ನ ಸೀರೆ ಮತ್ತು matching blouse ಮಾಡಿ ಕೊಟ್ಟಿತು....ತುಂಬಾ ಮಜಾ ಅನಿಸಿ ಫ್ಯಾಮಿಲಿ  ಗ್ರೂಪ್ ಗೆ ಕಳುಸಿದೆ...ನನ್ನ ತಮ್ಮ 'have you finished cooking" ಅಂತ ಕಳಿಸಿದ 😁😁

              ಈ ತರಹ ಬೆಳಬೆಳಿಗ್ಗೆ ಖರಾಬ್ selfie ತೆಗೆದಿದ್ಫು 😁


ಮಜಾ with meta

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಬ್ಲಾಗ್ ಗೆ ಭೇಟಿನೀಡಿದವರ ಸಂಖ್ಯೆ 10 ಲಕ್ಷ ದಾಟಿದೆ 🙏🙏🙏🙏❤️❤️