ಪೋಹಾ ಚಟ್ನಿ & ಚನಾ ಉಸ್ಲಿ
ಸಿಂಪಲ್ ಆದ್ರೂ ಒಳ್ಳೆ ಗಟ್ಟಿ ಆಹಾರ. ಶ್ರೀಕಾಂತ್ ದು favorite.
ಒಗ್ಗರಣೆಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು. ಇದಕ್ಕೆ ಉಪ್ಪು ಬೆಲ್ಲ ಹಾಕಿ ಕೈಯಿಂದ ಚೆನ್ನಾಗಿ ನುರಿಯಿರಿ. ತಾಜಾ ತೆಂಗಿನಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತೆಳು ಅವಲಕ್ಕಿ ಬೆರೆಸಿ ಕೈನಿಂದ ಚೆನ್ನಾಗಿ ಮಿಕ್ಸ್ ಮಾಡಿ
ಚನಾ ಉಸ್ಲಿ...6-8 ಗಂಟೆ ನೆನೆಸಿದ ಕೆಂಪು ಕಡಲೆ. ಉಪ್ಪು ಹಾಕಿ ಬೇಯಿಸಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು, ಹಾದಿ ಮೆಣಸು ಇಂಗು....ಇದಾಕೆ ಬೇಯಿಸಿದ ಕಡಲೆ ಕಾಳು ಹಾಕಿ..ಸ್ವಲ್ಪ ಬೆಲ್ಲ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸ್ವಲ್ಪ ಕಾಯಿ ತುರಿ
ಅಷ್ಟೇ...
ಅವಲಕ್ಕಿ ಚನಾ ಮಿಕ್ಸ್ ಮಾಡಿ ತಿನ್ನೋದು. ಬೇಕಿದ್ರೆ ಮೆಣಸಿನ ಕಾಯಿ ಬೋಂಡ, ಸೇವು sides ಜತೆ ಸರ್ವ್ ಮಾಡಿ
ಇದಕ್ಕೆಲ್ಲ ತೆಂಗಿನ ಎಣ್ಣೆ ಕಿ ಜೈ 🙂👌👍❤️

No comments:
Post a Comment